Sa Re Ga Ma Pa: ಬ್ರಿಟನ್‌ ರಾಜನ ಜೊತೆ ಫಾರಿನ್ ಟೂರ್‌ ಕನಸು ಕಾಣ್ತಿರೋ ಆ್ಯಂಕರ್ ಅನುಶ್ರೀ!

ಆ್ಯಂಕರ್ ಅನುಶ್ರೀ ಅವರು  ಬ್ರಿಟನ್‌ ರಾಜನ ಜೊತೆ ಫಾರಿನ್ ಟೂರ್‌ ಕನಸು ಕಾಣ್ತಿದ್ದಾರೆ. ಅಸಲಿಗೆ ಏನಿದು ವಿಷ್ಯ? 
 

Anchor Anushree dreams of a foreign tour with the King of Britain suc

 ಜೀ ಕನ್ನಡ ಚಾನೆಲ್​ನಲ್ಲಿ  (Zee Kannad Channel) ವಾರಾಂತ್ಯದಲ್ಲಿ ಎಲ್ಲರ ಮೆಚ್ಚುಗೆ ಗಳಿಸುತ್ತಿರುವ ಸರಿಗಮಪ ಸಂಗೀತ ರಿಯಾಲಿಟಿ ಷೋ ಈಗ 20ನೇ ಕಂತಿಗೆ ಕಾಲಿಟ್ಟಿದೆ. ಅಪಾರ ಪ್ರಮಾಣದಲ್ಲಿ ಜನ ಮೆಚ್ಚುಗೆ ಗಳಿಸಿರುವ ಈ ಷೋದಲ್ಲಿ ರಾಜ್ಯಗಳ ವಿವಿಧ ಮೂಲೆಗಳ ಸಂಗೀತ ಪ್ರತಿಭೆಗಳನ್ನು ವಾಹಿನಿ ಪರಿಚಯಿಸಿದೆ. ಇದಾಗಲೇ 19 ಸರಣಿಗಳನ್ನು (season) ಪೂರೈಸಿದ್ದು, ಇದೀಗ 20ನೇ ಸೀಸನ್​ ಶುರುಗಲಿದೆ. ಈ ಬಾರಿ, ಹೊಸತನಕ್ಕೆ ಕೈಹಾಕಲಾಗಿದೆ. 20ನೇ ಸೀಸನ್​ ಅನ್ನು ವಿಶೇಷವಾಗಿ ಹೊರತರಲು ನಿರ್ಧರಿಸಿರುವ ತಂಡ, ವಿದೇಶಗಳ ಪ್ರತಿಭೆಗಳನ್ನು ಗುರುತಿಸುವ ಸಾಹಸಕ್ಕೆ ಕೈಹಾಕಿದೆ. ಇಲ್ಲಿಯವರೆಗೆ ಕರ್ನಾಟಕದಲ್ಲಿ ಆಡಿಷನ್​ ನಡೆದಿದೆ. ಇಲ್ಲಿ ಆಡಿಷನ್​ ನಡೆದಿರುವ ಸಂದರ್ಭದಲ್ಲಿ ಕರ್ನಾಟಕದ ಹೊರ ರಾಜ್ಯಗಳ ಪ್ರತಿಭೆಗಳೂ ಪಾಲ್ಗೊಂಡಿದ್ದು, ಹಲವರಿಗೆ ಈ ಕಾರ್ಯಕ್ರಮದಲ್ಲಿ ಹಾಡುವ ಅವಕಾಶ ದೊರಕಿದೆ. ಇದೀಗ ಹೊಸ ಪ್ರಯತ್ನಕ್ಕೆ ಕೈಹಾಕಿರುವ ತಂಡ, ಕನ್ನಡದ ಕಂಪನ್ನು ಹೊರ ದೇಶಗಳಿಗೂ ಬಿತ್ತರಿಸುವ ಪ್ರಯತ್ನಕ್ಕೆ ಮುಂದಾಗಿದೆ. 

ಈ ಕುರಿತು ಕೆಲ ತಿಂಗಳ ಹಿಂದೆ ವಾಹಿನಿ ಪ್ರೋಮೋ   ಬಿಡುಗಡೆ ಮಾಡಿತ್ತು.  ವಿಶ್ವದ ಕನ್ನಡಿಗರಿಗಾಗಿ ಎಂಬ ಶೀರ್ಷಿಕೆಯೊಂದಿಗೆ ಪ್ರೋಮೋ ರಿಲೀಸ್‌ ಮಾಡಲಾಗಿತ್ತು.  ಕನ್ನಡದ ಸ್ವರ ಸಂಭ್ರಮ ಈಗ ವಿಶ್ವ ಸಂಭ್ರಮವಾಗಲಿದೆ, ಕನ್ನಡದ ಸರಿಗಮಪ ಈಗ ವಿಶ್ವಕ್ಕೆ ವಿಸ್ತರಿಸಲಿದೆ ಎನ್ನಲಾಗಿತ್ತು. ಇದೀಗ ಆಡಿಷನ್‌ ಸಂಪೂರ್ಣಗೊಂಡಿದೆ.  ಸರಿಗಮಪ ಸೀಸನ್ 19ರ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಜೀ ಕನ್ನಡ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣುಸೂರು (Raghavendra Hunusuru)   ಘೋಷಣೆ ಮಾಡಿದಂತೆ ಈಗ  ಇಂಗ್ಲೆಂಡ್​, ಅಮೆರಿಕ ಸೇರಿದಂತೆ  ಬೇರೆ ಬೇರೆ ದೇಶದಲ್ಲಿ ಇರೋ ಕನ್ನಡಿಗರಿಗೆ ಅವಕಾಶ ಕಲ್ಪಿಸಲಾಗಿದೆ. ವಿದೇಶಿ ಟ್ಯಾಲೆಂಟ್‌ಗಳನ್ನು ಹುಡುಕಿ ಅವರಿಂದ ಆನ್‌ಲೈನ್‌ ಮೂಲಕ ಆಡಿಷನ್‌ ಮಾಡಿಸಲಾಗಿದ್ದು, ಅಂತಿಮ ಹಂತ ತಲುಪಿದೆ. ಸೀಸನ್‌ 20ಗಾಗಿ ಜನರು ಕಾತರದಿಂದ ಕಾಯುತ್ತಿದ್ದಾರೆ. 

ಅಭಯಾರಣ್ಯದಲ್ಲಿ ಭಾಗ್ಯಲಕ್ಷ್ಮಿ ಸೀರಿಯಲ್‌ ಕಲಾವಿದರು ಫುಲ್‌ ಎಂಜಾಯ್‌: ಫೋಟೋ ವೈರಲ್‌

ಇದರ ನಡುವೆಯೇ, ಸೀಸನ್‌20 ಯ ಕುರಿತು ಇಂಟರೆಸ್ಟಿಂಗ್‌ ವಿಡಿಯೋ ಶೇರ್‌ ಮಾಡಲಾಗಿದೆ. ಎಂದಿನ ಹಾಸ್ಯದ ರೂಪದಲ್ಲಿ ಅನುಶ್ರೀ ಸೀಸನ್‌ 20ಯ ಪ್ರಮೋಷನ್‌ ಮಾಡಿದ್ದಾರೆ. ಇದರಲ್ಲಿ ಅನುಶ್ರೀ ಅವರು ಫಾರಿನ್‌ ಟೂರ್‌ ಕನಸು ಕಾಣುತ್ತಿರುವುದನ್ನು ನೋಡಬಹುದು. ವಿದೇಶ ಪ್ರವಾಸ ಮಾಡಲು ಬಟ್ಟೆ ಪ್ಯಾಕ್‌ ಮಾಡಿಕೊಳ್ತಿರೋ ಅನುಶ್ರೀ, ಸಿಂಗಪುರದಲ್ಲಿ ಹಾಕಿಕೊಳ್ಳಲು, ಅಮೆರಿಕದಲ್ಲಿ ಹಾಕಿಕೊಳ್ಳುವ ಡ್ರೆಸ್‌ಗಳನ್ನು ಪ್ಯಾಕ್‌ ಮಾಡಿದ್ದಾರೆ. ಇದರ ಜೊತೆಗೆ, ಬ್ರಿಟನ್‌ ಆಡಿಷನ್‌ನಲ್ಲಿ ಹಾಕಿಕೊಳ್ಳಲು ಡ್ರೆಸ್‌ ಒಂದನ್ನು ಆಯ್ಕೆ ಮಾಡಿಕೊಂಡ ನಟಿ, ಈ ಡ್ರೆಸ್‌ ಹಾಕಿಕೊಂಡ್ರೆ ಬ್ರಿಟನ್‌ ರಾಜ ಬಂದು ನನ್ನನ್ನು  ನೋಡುತ್ತಾನೆ, ಕರೆದುಕೊಂಡು ಹೋಗುತ್ತಾನೆ ಎಂದು ಅನುಶ್ರೀ ತಮಾಷೆ ಮಾಡಿದ್ದಾರೆ. 

ಅದೇ ಇನ್ನೊಂದೆಡೆ, ಸರಿಗಮಪದ ಜಡ್ಜ್‌ ಆಗಿರುವ  ಅರ್ಜುನ್‌ ಜನ್ಯ ಅವರು, ನಾನು ಮನೆಗೆ ಹೋಗೊಂಗಿಲ್ವಾ, ಸೀಸನ್‌ 20 ಶುರುವಾಯ್ತಲ್ಲಾ ಎನ್ನುತ್ತಾ ಹಾಡು ಗುನುಗುತ್ತಿದ್ದಾರೆ. ನಂತರ ಇಬ್ಬರೂ ಭೇಟಿಯಾಗಿ ಫಾರಿನ್‌ ಟೂರ್‌ ಬಗ್ಗೆ ಮಾತನಾಡುತ್ತಾರೆ. ನಾನು ಫಾರಿನ್‌ಗೆ ಹೋಗುತ್ತೇನೆ ಎಂದು ಅನುಶ್ರೀ ಹೇಳಿದ್ರೆ, ಎಲ್ಲಾ ಆಡಿಷನ್‌ ಆನ್‌ಲೈನ್‌ನಲ್ಲಿ ಮುಗಿದಿದೆ, ಯಾರೂ ಫಾರಿನ್‌ಗೆ ಹೋಗುವ ಹಾಗಿಲ್ಲ ಎಂದಿದ್ದಾರೆ ಅರ್ಜುನ್‌ ಜನ್ಯಾ. ನಂತರ ಅನುಶ್ರೀ ತಮ್ಮ ಎಂದಿನ ಹಾಸ್ಯದಂತೆ,  ಫಾರಿನ್‌ನಿಂದ ಬಂದಿರೋ ಸಿಂಗರ್ಸ್‌ ಜೊತೆ ಅರ್ಜುನ್‌ ಜನ್ಯಾ ಅವರ ಮೇಲೆ ಆಣೆ ಮಾಡಿ ಹೋಗಿಯೇ ಹೋಗುತ್ತೇನೆ ಎಂದಿದ್ದಾರೆ. ಒಟ್ಟಿನಲ್ಲಿ ಈಗ ವಿದೇಶಿ ಗಾಯಕ-ಗಾಯಕಿಯರ ಕಂಠ ಮಾಧುರ್ಯಕ್ಕಾಗಿ ಫ್ಯಾನ್ಸ್‌ ಕಾತರದಿಂದ ಕಾಯುತ್ತಿದ್ದಾರೆ. ಅಂದಹಾಗೆ, ಸರಿಗಮಪದಲ್ಲಿ ಹಾಡಿರುವ ಹಲವು ಗಾಯಕರು ಸಂಗೀತ ಆಲ್ಬಂಗಳಿಗೆ ಆಯ್ಕೆಯಾದವರಿದ್ದಾರೆ. ಹಿನ್ನೆಲೆ ಗಾಯಕರಾಗಿಯೂ ಅವರಿಗೆ ಅವಕಾಶ ಸಿಕ್ಕಿದೆ. ಇದೀಗ ಹೊರ ದೇಶಗಳ ಪ್ರತಿಭೆಗಳನ್ನು ಹುಡುಕಿ ಅವರಿಗೆ ಅವಕಾಶ ನೀಡಲಾಗುತ್ತಿದೆ. 


ಬಾಲಿವುಡ್‌ ಮಲೈಕಾಗೂ, ಹಿಟ್ಲರ್‌ ಕಲ್ಯಾಣದ ಎಡವಟ್ಟು ಲೀಲಾ ಮಲೈಕಾಗೂ ಇದೆಯಂತೆ ಭಾರಿ ನಂಟು!

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Latest Videos
Follow Us:
Download App:
  • android
  • ios