Asianet Suvarna News Asianet Suvarna News

ನಿಮ್​ ಬಣ್ಣ ಬಯಲಾಗೈತಿ, ಇಲ್ಲಿ ನಮ್​ ತಲಿ ಕೆಡಿಸ್​ಬ್ಯಾಡಿ: ಹಿಟ್ಲರ್​ ಕಲ್ಯಾಣದ 'ಪ್ರಾರ್ಥನಾ'ಗೆ ಕ್ಲಾಸ್​!

ಹಿಟ್ಲರ್​ ಕಲ್ಯಾಣದ ಪ್ರಾರ್ಥನಾ ಮತ್ತು ಅಂತರಾ ಪಾತ್ರದ ಮೂಲಕ ಜೀವ ತುಂಬ್ತಿರೋ ನಟಿ ರಜಿನಿಯ ಹಾಟ್​ ಡ್ಯಾನ್ಸ್​ಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಏನೇನು ಹೇಳ್ತಿದ್ದಾರೆ ಕೇಳಿ. 
 

Actress Rajini of Hitler Kalyans hot dance goes viral neteizens react suc
Author
First Published Oct 9, 2023, 1:24 PM IST

ಒಬ್ಬರೇ ವ್ಯಕ್ತಿ ಒಮ್ಮೆ ಅತಿ ಒಳ್ಳೆಯವರಂತೆ, ಇನ್ನೊಮ್ಮೆ ಅತಿ ಕೆಟ್ಟವರಂತೆ ಆ್ಯಕ್ಟಿಂಗ್​ ಮಾಡುವುದು ತುಸು ಕಷ್ಟವೇ. ಇಂಥ ಕಲೆ ಕೆಲವರಿಗೆ ಮಾತ್ರ ಕರಗತವಾಗಿರುತ್ತದೆ. ಅಂಥವರಲ್ಲಿ ಒಬ್ಬರು ಹಿಟ್ಲರ್​ ಕಲ್ಯಾಣ ಸೀರಿಯಲ್​ನ ಅಂತರಾ ಉರ್ಫ್​ ಪ್ರಾರ್ಥನಾ. ಮೊದಲಿಗೆ ಸೌಮ್ಯ ರೂಪದ ಅಂತರಾಳ ರೂಪವನ್ನೇ ಪಡೆದಿರುವ ವಿಲನ್​ ಪ್ರಾರ್ಥನಾ ತಾನೇ ಅಂತರಾ ಎಂದುಕೊಂಡು ಮನೆಯವರನ್ನು ನಂಬಿಸುತ್ತಿದ್ದಾಳೆ. ಈಕೆಯ ಬಂಡವಾಳ ಕಥಾನಾಯಕಿ ಲೀಲಾಗೆ ಗೊತ್ತಾಗಿದೆ. ಆದರೆ ಆಕೆ ಅವಕಾಶಕ್ಕಾಗಿ ಎಲ್ಲರ ಮುಂದೆ ಹೇಳಲು ಕಾಯುತ್ತಿದ್ದಾಳೆ. ಕುಟುಂಬಸ್ಥರು ಮುಂದೆ ನಕಲಿ ಅಂತರಾಳ ಬಣ್ಣ ಬಯಲಾಗುವುದೇ ಎನ್ನುವುದು ಈಗಿರುವ ಕುತೂಹಲ. ಅದೇನೆ ಇದ್ದರೂ ಅಂತರಾ ಹಾಗೂ ಪ್ರಾರ್ಥನಾ ಪಾತ್ರಕ್ಕೆ ಜೀವ ತುಂಬಿರುವ ನಟಿ ರಜನಿ. ಪ್ರತಿಬಾರಿಯೂ ವಿಭಿನ್ನ ಪಾತ್ರಗಳ ಮೂಲಕ ಜನರನ್ನು ರಂಜಿಸಿದ್ದ ರಜನಿ, ಇದೀಗ ವಿಲನ್ ಆಗಿ ನಟಿಸುತ್ತಿದ್ದು, ಉತ್ತಮವಾಗಿ ನಟಿಸುತ್ತಿದ್ದಾರೆ. ಹೆಚ್ಚಿನ ಜನರು ರಜನಿ ಪಾತ್ರವನ್ನು ಮೆಚ್ಚಿಕೊಂಡಿದ್ದಾರೆ.  

ಈಗ ಕಿರುತೆರೆ ಜನರಿಗೆ ಅದರಲ್ಲಿಯೂ ಮಹಿಳೆಯರಿಗೆ ಸಿಕ್ಕಾಪಟ್ಟೆ ಹತ್ತಿರವಾಗುತ್ತಿದೆ. ಇದೇ ಕಾರಣಕ್ಕೆ ಬಹುತೇಕ ಎಲ್ಲಾ ಧಾರಾವಾಹಿಗಳಲ್ಲಿ ಮಹಿಳೆಯರೇ ನಾಯಕಿ, ಮಹಿಳೆಯೇ ವಿಲನ್​. ಒಂದು ಕುಟುಂಬದ ಸುತ್ತಲೂ ನಡೆಯುವ ಕಥೆಯೇ ಎಲ್ಲಾ ಧಾರಾವಾಹಿಗಳ ಕಥಾವಸ್ತುವಾಗಿರುತ್ತದೆ. ಒಬ್ಬಾಕೆ ಅತಿ ಎನ್ನುವಷ್ಟು ಮುಗ್ಧೆಯಾಗಿದ್ದರೆ ಇನ್ನೊಬ್ಬಳು ಅತಿ ಎನ್ನುವಷ್ಟು ಕ್ರೂರಿ. ಪ್ರತಿಯೊಂದು ಪಾತ್ರದಲ್ಲಿಯೂ ತಮ್ಮನ್ನೇ ಮಹಿಳೆಯರು ಆಹ್ವಾನಿಸಿಕೊಳ್ಳುವ ಕಾರಣ, ಧಾರಾವಾಹಿಗಳು ಇಂದು ಇಷ್ಟರಮಟ್ಟಿಗೆ ಜನಪ್ರಿಯವಾಗುತ್ತಿದೆ. ಇದೀಗ ಟಿಆರ್​ಪಿಗಾಗಿ ವಿಭಿನ್ನ ಕಥಾವಸ್ತು ಇರುವ ಧಾರಾವಾಹಿಗಳತ್ತ ನಿರ್ಮಾಪಕರು ಮುಂದಾಗುತ್ತಿದ್ದಾರೆ. ಕಥಾವಸ್ತುಗಳಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್​ ಕೊಡುತ್ತಾ ಧಾರಾವಾಹಿ ಪ್ರಿಯರನ್ನು ಹಿಡಿದಿಟ್ಟುಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಒಂದು ಧಾರಾವಾಹಿ ಕೆಲ ದಿನ ಚೆನ್ನಾಗಿ ಓಡಿಲ್ಲ ಎಂದರೆ ಅದನ್ನು ಬಿಟ್ಟು ಬೇರೆ ಧಾರಾವಾಹಿಗಳತ್ತ (TV Serials) ಗಮನ ಹರಿಸುವುದು ಮಾಮೂಲು.  ಆದ್ದರಿಂದ ಚ್ಯೂಯಿಂಗ್​ ಗಮ್​ನಂತೆ ಧಾರಾವಾಹಿಗಳನ್ನು ಎಳೆಯುವುದರ ಜೊತೆಜೊತೆಗೇ ಪ್ರತಿಯೊಂದು ಕಂತಿನಲ್ಲಿಯೂ ಕುತೂಹಲ ತಣಿಸುವಂತೆ  ಮಾಡಲೇಬೇಕಾದ ಅನಿವಾರ್ಯತೆಯೂ ಇದೆ.

ಒಂಥರಾ ಹಿಡಿಸಿದೆ ಹಾಡಿಗೆ 'ಗಟ್ಟಿಮೇಳ'ದ ಅಮೂಲ್ಯಾ- ಆದ್ಯಾ ಸೂಪರ್ ಸ್ಟೆಪ್​: ಷರ್ಟ್​ ಯಾರದ್ದು ಕೇಳಿದ ಫ್ಯಾನ್ಸ್​

ಅಂಥದ್ದೇ ಒಂದು ಕುತೂಹಲ ಕೆರಳಿಸುತ್ತಿರುವ ಧಾರಾವಾಹಿಗಳಲ್ಲಿ ಒಂದು ಝೀ ಕನ್ನಡದಲ್ಲಿ ಪ್ರಸಾರ ಆಗುತ್ತಿರೋ ಹಿಟ್ಲರ್​ ಕಲ್ಯಾಣ (Hitler Kalyana).  ಇದರಲ್ಲಿ ಅಂತರಾ ಹಾಗೂ ಪ್ರಾರ್ಥನಾ ಪಾತ್ರಕ್ಕೆ ಜೀವ ತುಂಬಿರುವ ನಟಿ ರಜಿನಿ. ಪ್ರತಿಬಾರಿಯೂ ವಿಭಿನ್ನ ಪಾತ್ರಗಳ ಮೂಲಕ ಜನರನ್ನು ರಂಜಿಸಿದ್ದ ರಂಜಿನಿ, ಇದೀಗ ವಿಲನ್ ಆಗಿ ನಟಿಸುತ್ತಿದ್ದು, ಉತ್ತಮವಾಗಿ ನಟಿಸುತ್ತಿದ್ದಾರೆ. ಹೆಚ್ಚಿನ ಜನರು ರಜನಿ ಪಾತ್ರವನ್ನು ಮೆಚ್ಚಿಕೊಂಡಿದ್ದಾರೆ. ಸದಾ ಸೀರೆಯಲ್ಲಿಯೇ ಹಿಟ್ಲರ್​ ಕಲ್ಯಾಣದಲ್ಲಿ ಮಿಂಚುತ್ತಿರೋ ನಟಿ, ಇದೀಗ ಸ್ವಾತಿ ಮುತ್ತಿನ ಮಳೆಹನಿಯೇ ಹಾಡಿಗೆ ಸಕತ್​ ಸ್ಟೆಪ್​ ಹಾಕಿದ್ದಾರೆ. ಅಮೃತವರ್ಷಿಣಿ ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ನಟಿಸಿದ್ದ ರಂಜಿನಿ, ನಂತರ ವಿಭಿನ್ನ ಪಾತ್ರಗಳ ಮೂಲಕ ಕಿರುತೆರೆಯಲ್ಲಿ ಮತ್ತು ಹಿರಿತೆರೆಯಲ್ಲಿ ಮಿಂಚಿದ್ದರು. ಸೋಶಿಯಲ್ ಮೀಡಿಯಾದಲ್ಲೂ ನಟಿ ಸದಾ ಆಕ್ಟೀವ್ ಆಗಿರುತ್ತಾರೆ. ಯಾವಾಗಲೂ ರೀಲ್ಸ್ ಮಾಡುತ್ತಾ, ಅಥವಾ ಫೋಟೋ ಶೂಟ್ ಮಾಡಿಸಿ  ಶೇರ್ ಮಾಡುತ್ತಿರುತ್ತಾರೆ.

ಕೆಲ ದಿನಗಳ ಹಿಂದೆ ನಟಿ ಮೈಚಳಿ ಬಿಟ್ಟು ಇದೀಗ ಸ್ವಾತಿ ಮುತ್ತಿನ ಮಳೆ ಹನಿಯೇಗೆ ಡ್ಯಾನ್ಸ್​ ಮಾಡಿದ್ದು, ಅದನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದರು. ಇದೀಗ ನಟಿ ರಾಮಯ್ಯ ವಸ್ತಾವಯ್ಯಾ ಹಾಡಿಗೆ ರೀಲ್ಸ್​ ಮಾಡಿದ್ದಾರೆ. ಸ್ಲಿಟ್​ ಡ್ರೆಸ್​ನಲ್ಲಿ ಸುಂದರ ಕಾಲಿನಪ್ರದರ್ಶನ ಮಾಡುತ್ತಾ ಹಾಟ್​ ಆಗಿ ಕಾಣಿಸಿಕೊಂಡಿದ್ದಾರೆ ರಜಿನಿ. ಇದನ್ನು ನೋಡಿ ಫ್ಯಾನ್ಸ್​ ಹಾರ್ಟ್​ ಎಮೋಜಿ ಕಮೆಂಟ್​ ಬಾಕ್ಸ್​ನಲ್ಲಿ ತುಂಬಿಸಿದ್ದಾರೆ. ನಿಮ್ಮ ಕಾಲು ಸೂಪರ್​ ಎಂದಿದ್ದರೆ, ಇನ್ನು ಕೆಲವರು ನಿಜಕ್ಕೂ ನೀವು ಪ್ರಾರ್ಥನಾ ಪಾತ್ರಧಾರಿಯಾ ಎಂದು ಪ್ರಶ್ನಿಸಿದ್ದಾರೆ. ಅಲ್ಲಿ ಸೀರೆ, ಇಲ್ಲಿ ಹಾಟ್​ ಡ್ರೆಸ್​ ಗೊತ್ತೇ ಆಗಲ್ಲ ಎಂದು ಕೆಲವರು ಹೇಳಿದ್ದರೆ, ಹಿಟ್ಲರ್​ ಕಲ್ಯಾಣದಲ್ಲಿ ನಿಮ್ಮ ಬಣ್ಣ ಬಯಲಾಗಿದೆ, ಇಲ್ಲಿ ಹೀಗೆಲ್ಲಾ ಡ್ರೆಸ್​ ಹಾಕ್ಕೊಂಡು ನಮ್​ ತಲೆ ಕೆಡಿಸಬೇಡಿ ಎಂದು ಫ್ಯಾನ್ಸ್​ ನಟಿಯ ಕಾಲೆಳೆಯುತ್ತಿದ್ದಾರೆ. 

'ಅಂಕು ಡೊಂಕಿದೆ...' ಎನ್ನುತ್ತಾ ಕುಣಿದ 'ಶ್ರೀರಸ್ತು ಶುಭಮಸ್ತು' ಜೋಡಿ: ಪ್ರೆಗ್ನೆಂಟ್​ ಹುಷಾರಮ್ಮಾ ಅಂತ ಫ್ಯಾನ್ಸ್​

 
 
 
 
 
 
 
 
 
 
 
 
 
 
 

A post shared by Rajini (@rajiniiofficial)

Follow Us:
Download App:
  • android
  • ios