ಭೂಮಿಕಾ ಗೌತಮ್​ಗೆ ಕೊಟ್ಟ ಕಿಸ್​ ಸೆಲ್ಫಿ ಆನಂದ್​ ಕೈ ಸೇರಿದೆ. ಇದನ್ನು ನೋಡಿ ಗೌತಮ್​ಗೆ ಆನಂದ್​ ಬ್ಲ್ಯಾಕ್​ಮೇಲ್​ ಮಾಡುವ ಜೊತೆ ಚಾಲೆಂಜ್​ ಹಾಕಿದ್ದಾನೆ. ಏನದು? 

ಇದ್ದರೆ ಇರಬೇಕು ಇಂಥ ಸ್ನೇಹಿತರು ಎನ್ನುವಂಥ ಸ್ನೇಹ ಅಮೃತಧಾರೆ ಸೀರಿಯಲ್​ ಗೌತಮ್​ ಮತ್ತು ಆನಂದ್​ ಅವರದ್ದು. ಇದು ಧಾರಾವಾಹಿಯಾದರೂ ನಿಜ ಜೀವನದಲ್ಲಿ ಇಂಥ ಸ್ನೇಹಿತರು ಸಿಕ್ಕರೆ ಅವರೆಷ್ಟು ಪುಣ್ಯವಂತರು ಎನ್ನುತ್ತಿದ್ದಾರೆ ಪ್ರೇಕ್ಷಕರು. ಯಾರೇ ಕೈಬಿಟ್ಟರೂ ಕೊನೆಯವರೆಗೆ ಇರುವವರು, ನೋವಿನ ಕಾಲಕ್ಕೆ ಆಗುವವರು ಸ್ನೇಹಿತರೇ ಎನ್ನುವ ಮಾತಿದೆ. ಆದರೆ ಇದು ಬದಲಾಗುತ್ತಿರುವ ಕಾಲಘಟ್ಟದಲ್ಲಿ ಬಹುತೇಕ ಮಂದಿ ಬೆನ್ನಿಗೆ ಚೂರಿ ಹಾಕುವವರೇ ಇರುವ ಸಮಯದಲ್ಲಿ ಗೌತಮ್​ ಮತ್ತು ಆನಂದ್​ ಸ್ನೇಹ ಮಾತ್ರ ಸೀರಿಯಲ್​ ವೀಕ್ಷಕರಿಗೆ ಖುಷಿ ಕೊಡುವುದಂತೂ ಸುಳ್ಳಲ್ಲ. ರೊಮ್ಯಾನ್ಸ್​, ಪ್ರೀತಿ, ಪ್ರಣಯದ ಗಂಧ ಗಾಳಿಯೇ ಇಲ್ಲದ ಗೌತಮ್​ಗೆ ಇವೆಲ್ಲವನ್ನೂ ಹೇಳಿಕೊಡುವ ಆನಂದ್​ನ ಸ್ನೇಹದ ಪರಿಯೇ ಕುತೂಹಲವಾದದ್ದು. ತಮಾಷೆಯ ಧಾಟಿಯಲ್ಲಿ ಪತ್ನಿಯ ಮೇಲೆ ಮೋಹ ಹುಟ್ಟುವಂತೆ ಮಾಡುವಲ್ಲಿ ಆನಂದ್​ ಪಾಲು ಬಹುದೊಡ್ಡದಿದೆ.

ಇದೀಗ ಇದೇ ಆನಂದ್​, ಗೌತಮ್​ಗೆ ಬ್ಲ್ಯಾಕ್​ಮೇಲ್​ ಮಾಡಿದ್ದಾನೆ! ಹೌದು. ಹಾಗಂತ ಇದು ಸೀರಿಯಸ್​ ಬ್ಲ್ಯಾಕ್​ಮೇಲ್​ ಅಲ್ಲ, ಬದಲಿಗೆ ಕ್ಯೂಟ್​ ಬ್ಲ್ಯಾಕ್​ಮೇಲ್​. ಕುಡಿದ ಮತ್ತಲ್ಲಿ ಪಾರ್ಟಿಯ ಸಂದರ್ಭದಲ್ಲಿ ಭೂಮಿಕಾ ಗೌತಮ್​ ಜೊತೆ ಸೆಲ್ಫಿ ತೆಗೆದುಕೊಂಡು ಕಿಸ್ ಕೊಟ್ಟಿದ್ದಳು. ಪತ್ನಿಯ ಮೇಲೆ ಕುಚ್​ ಕುಚ್​ ಶುರುವಾಗಿರುವ ಗೌತಮ್​ ಕಚೇರಿಯ ಸಮಯದಲ್ಲಿ ಅದನ್ನೇ ನೋಡುತ್ತಾ ಕುಳಿತಿದ್ದ. ಆ ಸಮಯಕ್ಕೆ ಸರಿಯಾಗಿ ಆನಂದ್​ ಅಲ್ಲಿಗೆ ಬಂದಿದ್ದಾನೆ. ಕೂಡಲೇ ಫೋನ್​ ಅನ್ನು ಉಲ್ಟಾ ಇಟ್ಟಿದ್ದಾನೆ ಗೌತಮ್​. ಕಚೇರಿಯ ವಿಷಯ ಮಾತನಾಡಿದರೂ ಗೌತಮ್​ ಗಮನ ಬೇರೆ ಕಡೆ ಇರುವುದು ನೋಡಿ ಈ ಆನಂದ್​ಗೋ ಡೌಟ್​ ಬಂದಿದೆ.

ಸೀರಿಯಲ್​ ಫ್ಯಾನ್ಸ್​ಗೆ ನಿರಾಸೆ: ಈ ವಾರದಲ್ಲೇ ಮುಗಿಯಲಿವೆ ಎರಡು ಪ್ರಸಿದ್ಧ ಧಾರಾವಾಹಿಗಳು!

View post on Instagram

ಆಮೇಲೆ ನೇರವಾಗಿ ಫೋನ್​ ಕಡೆ ಗಮನ ಹೋಗಿದೆ. ಅದರಲ್ಲಿರುವ ಮುತ್ತಿನ ಸೆಲ್ಫಿ ನೋಡಿದ್ಮೇಲೆ ಸುಮ್ಮನಿರ್ತಾನಾ ತರ್ಲೆ ಗೆಳೆಯ? ಗೌತಮ್​ನ ಕಾಲೆಳೆದಿದ್ದಾನೆ. ನಂತರ ಇಬ್ಬರ ನಡುವೆ ಕೆಲವು ಮಾತುಕತೆಯಾಗಿದೆ. ಹಾಗೇನಿಲ್ಲ ಎಂದು ಎಷ್ಟು ಗೌತಮ್​ ಹೇಳಿದ್ರೂ ಆನಂದ್​ ಬಿಡುತ್ತಿಲ್ಲ. ಕೊನೆಗೆ ಗೌತಮ್​ಗೇ ಬ್ಲ್ಯಾಕ್​ಮೇಲ್​ ಮಾಡಿದ್ದಾನೆ. ಅತ್ತಿಗೆ ನಿನಗೆ ಮುತ್ತು ಕೊಟ್ಟ ಹಾಗೆ ನೀನೂ ಅತ್ತಿಗೆಗೆ ಮುತ್ತುಕೊಡಬೇಕು ಎಂದಿದ್ದಾನೆ. ಇದೆಲ್ಲಾ ಸಾಧ್ಯವೇ ಇಲ್ಲ ಎಂದು ಗೌತಮ್​ ಹೇಳಿದ್ರೂ, ಒಂದು ವೇಳೆ ಹಾಗೆ ಮಾಡದಿದ್ದರೆ ಇಲ್ಲಿಯವರೆಗೆ ನಾವು ಮಾತನಾಡಿದ್ದನ್ನೆಲ್ಲಾ ಜಗಜ್ಜಾಹೀರ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಇದನ್ನು ಒಪ್ಪಿಕೊಳ್ಳದೇ ಗೌತಮ್​ಗೆ ಬೇರೆ ವಿಧಿ ಇಲ್ಲ.

ಭೂಮಿಕಾ ಮಲಗಿರುವ ಸಮಯದಲ್ಲಿ ಸದ್ದಿಲ್ಲದೇ ಎಂಟ್ರಿ ಕೊಟ್ಟಿದ್ದಾನೆ ಗೌತಮ್​. ಪತ್ನಿಗೆ ಮುತ್ತಿನ ಮಳೆ ಹರಿಸುವಲ್ಲಿ ಗೌತಮ್​ ಯಶಸ್ವಿಯಾಗ್ತಾನಾ? ಭೂಮಿಕಾ-ಗೌತಮ್​ ಲವ್​ ಸ್ಟೋರಿ ಶುರುವಾಗುತ್ತಾ? ಮದ್ಯದ ಅಮಲಿನಲ್ಲಿ ಪ್ರೀತಿಯ ಧಾರೆಯನ್ನೇ ಹರಿಸಿದ ಭೂಮಿಕಾ ಈಗ ಹೇಗೆ ರಿಯಾಕ್ಟ್​ ಮಾಡುತ್ತಾಳೆ ಎಂಬೆಲ್ಲಾ ಪ್ರಶ್ನೆಗೆ ಸೀರಿಯಲ್​ನಲ್ಲಿ ಉತ್ತರ ಸಿಗಲಿದೆ. ಇದರ ಪ್ರೊಮೋಗಳನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿದ್ದು, ಗೌತಮ್​ ಮತ್ತು ಆನಂದ್​ ಸ್ನೇಹಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಹಾಗೆನೇ ಭೂಮಿಕಾ ಮತ್ತು ಗೌತಮ್​ ಲವ್​ಸ್ಟೋರಿ ಹೀಗೆಯೇ ಮುಂದುವರೆಯಲಿ ಎಂದು ಹಾರೈಸುತ್ತಿದ್ದಾರೆ. 

ಅಬ್ಬಬ್ಬಾ ರಿಹರ್ಸಲ್​ನಲ್ಲೇ ಈ ಪರಿ ಟ್ಯಾಲೆಂಟ್​! ಇನ್ನೇನಾದ್ರೂ ನಟಿಯಾದ್ರೆ? 'ಮಹಾನಟಿ'ಗೆ ನೆಟ್ಟಿಗರು ಫಿದಾ

View post on Instagram