Asianet Suvarna News Asianet Suvarna News

ನೈಜ ಕುಡುಕರೂ ನಾಚುವಂತಿದೆ ಛಾಯಾ ಸಿಂಗ್ ನಟನೆ: ಫ್ಯಾನ್ಸ್ ಸಿಟ್ಟು ಅಭಿಮಾನವಾಗಿ ಬದಲಾಯ್ತು!

'ಮನೆಗ್ ಬಂದ್ನೋ ಮಿಲಿಟ್ರಿ ಕ್ಯಾಂಪ್‌ಗೆ ಸೇರ್ಕೊಂಡ್ನೋ ಒಂದೂ ಅರ್ಥ ಆಗ್ತಿಲ್ಲ.. ' ಅಮೃತಧಾರೆ ಸೀರಿಯಲ್‌ನಲ್ಲಿ ಕುಡಿದು ತೂರಾಡುತ್ತಾ ಡೈಲಾಗ್ ಮೇಲೆ ಡೈಲಾಗ್ ಹೊಡೀತಿರೋ ಛಾಯಾ ಸಿಂಗ್ ಆಕ್ಟಿಂಗ್‌ ನೋಡಿ ಫ್ಯಾನ್ಸ್ ಸುಸ್ತಾಗಿದ್ದಾರೆ.

 

amruthadhare zee kannada serial raises up to viewers happiness by chaya singh acting as drunkard bni
Author
First Published Nov 22, 2023, 11:29 AM IST

ಸಿನಿಮಾ ಅಂತ ಬಂದರೆ ತುಂಟತನದ ಪಾತ್ರಗಳಿಂದಲೇ ಫೇಮಸ್ ಛಾಯಾ ಸಿಂಗ್. ಅವರ ಬಾಡಿ ಲ್ಯಾಂಗ್ವೇಜ್, ಧ್ವನಿ ಎಲ್ಲ ಆ ತುಂಟತನಕ್ಕೆ ಹೇಳಿ ಮಾಡಿಸಿದಂತಿದೆ. ಆದರೆ 'ಅಮೃತಧಾರೆ' ಸೀರಿಯಲ್ಲಿನಲ್ಲಿ ಅವರದು ಸಿಕ್ಕಾಪಟ್ಟೆ ಸೀರಿಯಸ್ ಪಾತ್ರ. ಸೈಲೆಂಟಾಗಿದ್ದೇ ಎಲ್ಲವನ್ನೂ ನಿಭಾಯಿಸೋ ಭೂಮಿ ಅನ್ನೋ ನಾಯಕಿ ಪಾತ್ರ. ಈ ಪಾತ್ರ ಅವರು ಈ ಹಿಂದೆ ಮಾಡಿರೋ ಪಾತ್ರಕ್ಕಿಂತ ಸಂಪೂರ್ಣ ಡಿಫರೆಂಟಾಗಿದ್ದರೂ ಛಾಯಾ ಸಿಂಗ್ ಭೂಮಿಕಾ ಆಗಿ ಯಾವ ಮಟ್ಟಿನ ಆಕ್ಟಿಂಗ್ ಮಾಡಿದ್ರು ಅಂದರೆ ಸೀರಿಯಲ್ ವೀಕ್ಷಕರ ಸಂಪೂರ್ಣ ಬೆಂಬಲ ಅವರಿಗೆ ಸಿಕ್ಕಿತು. ಸದ್ಯಕ್ಕೆ ಈಗ ಎಲ್ಲ ಕಡೆ ಅವರು ಗುಂಡು ಹೊಡೆದು ಬುಲೆಟ್‌ನಂತೆ ಹೊಡೆಯೋ ಡೈಲಾಗ್‌ನದೇ ಮಾತು. ಆ ಸೀನ್‌ಗಳ ಸೋಷಿಯಲ್ ಮೀಡಿಯಾದಲ್ಲಿ ಲಕ್ಷಾಂತರ ವೀಕ್ಷಣೆ ದಾಖಲಿಸಿವೆ. 

ಶುರುವಲ್ಲಿ ಛಾಯಾ ಸಿಂಗ್‌ ಅವರನ್ನು ಹೀಗೆ ಕುಡುಕಿಯಾಗಿ ತೋರಿಸಿದ್ದು ಅವರ ಅಭಿಮಾನಿಗಳಿಗೆ ಸಿಟ್ಟು ತರಿಸಿತ್ತು. ಅಮೃತಧಾರೆ ಸೀರಿಯಲ್‌ನಲ್ಲಿ ಭೂಮಿಕಾಳದ್ದು ಬಹಳ ಘನತೆ ಇರುವ ಪಾತ್ರ. ಅವಳನ್ನು ಕುಡುಕಿಯಾಗಿ ಬದಲಿಸಿರೋದು ಎಷ್ಟು ಸರಿ ಅಂತ ಒಂದಿಷ್ಟು ಮಂದಿ ವೀಕ್ಷಕರು ಪ್ರಶ್ನೆ ಮಾಡಿದರು. ಇದೀಗ ಛಾಯಾ ಸಿಂಗ್ ಕುಡುಕಿ ಪಾತ್ರದಲ್ಲಿ ಅದ್ಯಾವ ಲೆವೆಲ್ ಮೋಡಿ ಮಾಡ್ತಿದ್ದಾರೆ ಅಂದರೆ ಆರಂಭದಲ್ಲಿ ವಿರೋಧ ವ್ಯಕ್ತಪಡಿಸಿದವರೂ ಈಗ ಸೈಲೆಂಟಾಗಿ ಅವರ ಆಕ್ಟಿಂಗ್‌ ಅನ್ನು ಎಂಜಾಯ್ ಮಾಡ್ತಿದ್ದಾರೆ. 

'ಅಲ್ಲಾ ನೀವ್ ನಿಮ್ ಗೆಳಯನ ಜೊತೆಗೆ ಫ್ರೆಂಡ್‌ಶಿಪ್ ಮಾಡ್ಕೊಂಡಿದ್ದು ಕಷ್ಟ ಆಗಿಲ್ವಾ? ಅವ್ರು ತುಂಬ ಒಳ್ಳೇವ್ರು, ಆದ್ರೆ ಇವ್ರ ಗೊರಕೆ ತುಂಬಾ ಕೆಟ್ಟದ್ದು. ನಂಗೆ ಇಡೀ ರಾತ್ರಿ ನಿದ್ದೇನೆ ಬರಲ್ಲ ಗೊತ್ತಾ? ಮನೇಲಿ ಟ್ರಕ್ಕು, ರೈಲು, ಹೆಲಿಕಾಪ್ಟರ್ ಓಡಾಡ್ತಾನೇ ಇರುತ್ತೆ. ಡೈಲಿ ಕಿವಿಲಿ ಹತ್ತಿ ಇಟ್ಕೊಂಡು ಮಲಗಕ್ಕಾಗುತ್ತಾ? ಆದರೂ ನಾನು ಮಲಗ್ತೀನಿ. ನೋವಾಗುತ್ತೆ. ಅನುಭವಿಸ್ತೀನಿ. ಖಾಲಿ ಆಗುತ್ತೆ ಅಂತ ಒಂದಿನ ಮುಂಚೆನೇ ಹತ್ತಿ ತಂದು ಇಟ್ಕೋತೀನಿ..' ಅನ್ನೋ ಡೈಲಾಗ್ ಅದು. ತನ್ನ ಗಂಡ ಗ್ರೇಟ್ ಬ್ಯುಸಿನೆಸ್‌ಮ್ಯಾನ್ ಗೌತಮ್‌ ದಿವಾನ್ ಮರ್ಯಾದೆಯನ್ನ ಆತನ ಗೆಳೆಯನೆದುರಿಗೇ ಹರಾಜು ಹಾಕೋ ಥರದ ಸೀನ್. ಗೌತಮ್ ಗುಂಡು ಹಾಕಿದ ಪತ್ನಿಯನ್ನು ಸಂಭಾಳಿಸಲಾಗದೇ, 'ಇದೆಲ್ಲ ಈಗ ಯಾಕೆ ಬೇಕು?' ಅಂತ ಅಲವತ್ತುಗೊಂಡರೆ, 'ಈಗ್ಲೇ ಇದನ್ನೆಲ್ಲ ಹೇಳಬೇಕು. ಇಡೀ ಕರ್ನಾಟಕದ ಪ್ರಪಂಚಕ್ಕೆ ಗೊತ್ತಾಗಬೇಕು. ಮದ್ವೆ ಆದ್ಮೇಲೆ ಮನೆಗ್ ಬಂದ್ನೋ ಮಿಲಿಟ್ರಿ ಕ್ಯಾಂಪ್‌ ಸೇರ್ಕೊಂಡ್ನೋ ಒಂದೂ ಅರ್ಥ ಆಗ್ತಿಲ್ಲ' ಅಂತ ಡೈಲಾಗ್ ಹೇಳುತ್ತಲೇ, 'ಈ ಮನುಷ್ಯನಿಗೆ ಮನುಷ್ಯತ್ವನೇ ಇಲ್ಲ. ಗಡ್ಡ ಇಲ್ದೇ ಇರೋ ಗಬ್ಬರ್ ಸಿಂಗ್ ಅಂದ್ಕೊಂಡಿದ್ದೆ ನಾನು..' ಅನ್ನೋ ಡೈಲಾಗ್‌ಗಂತೂ ವೀಕ್ಷಕರು ಬಿದ್ದೂ ಬಿದ್ದೂ ನಕ್ಕಿದ್ದಾರೆ. 

ಸೀರಿಯಲ್​ನಲ್ಲಿ ಮೆಸ್​ ನಡೆಸ್ತಿರೋ ಪುಟ್ಟಕ್ಕನ ಮಕ್ಕಳು ನಿಜವಾಗ್ಲೂ ಹೇಗೆ ಅಡುಗೆ ಮಾಡ್ತಾರೆ ನೋಡಿ...

'ನಿಜವಾದ ಕುಡುಕರೂ ನಾಚುವಂತಿದೆ ಛಾಯಾ ಸಿಂಗ್ ನಟನೆ' ಅಂತ ವೀಕ್ಷಕರು ಕಮೆಂಟ್ ಮೇಲೆ ಕಮೆಂಟ್ ಮಾಡ್ತಿದ್ದಾರೆ. 'ಬೆಂಕಿ, ಸೂಪರ್ ಎಪಿಸೋಡ್‌' ಅಂತೆಲ್ಲ ಹೊಗಳ್ತಿದ್ದಾರೆ. 

ಅಂದಹಾಗೆ ಛಾಯಾಸಿಂಗ್ ರಜಪೂತ್‌ ಕುಟುಂಬಕ್ಕೆ ಸೇರಿದವರು. ಆದರೆ ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. 2000ರಲ್ಲಿ ತೆರೆ ಕಂಡ ಮುನ್ನುಡಿ ಚಿತ್ರದ ಉನ್ನಿಸಾ ಪಾತ್ರದ ಮೂಲಕ ಚಿತ್ರರಂಗಕ್ಕೆ ಬಂದ ಛಾಯಾಸಿಂಗ್‌ ನಂತರ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಿಟ್ಟೆ, ರಾಷ್ಟ್ರಗೀತೆ, ತುಂಟಾಟ ಕನ್ನಡ ಸಿನಿಮಾಗಳಲ್ಲಿ ನಟಿಸಿದ ನಂತರ ತಿರುಡ ತಿರುಡಿ ಚಿತ್ರದ ಮೂಲಕ ತಮಿಳು ಸಿನಿಮಾಗೆ ಹೋದರು. ಮಲಯಾಳಂ, ತೆಲುಗು ಸಿನಿಮಾಗಳಲ್ಲಿ ಕೂಡಾ ಛಾಯಾ ನಟಿಸಿದ್ದಾರೆ.

ಇದೀಗ 'ಅಮೃತಧಾರೆ' ಸೀರಿಯಲ್‌ನ ಭೂಮಿಕಾ ಪಾತ್ರದ ಮೂಲಕ ಭಲೇ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ರಾಜೇಶ್‌ ನಟರಂಗ ಈ ಸೀರಿಯಲ್ ನಾಯಕನಾಗಿ ನಟಿಸುತ್ತಿದ್ದಾರೆ. 

ಸೀರಿಯಲ್‌ನಲ್ಲಿ ಪಾಪು ಅಂತ ಕಣ್ಣೀರಾಕಿ ಈಗ ಸುತ್ತಾಡೋದು; ಪಾರು ಕಾಲೆಳೆದ ನೆಟ್ಟಿಗರು!
 

Latest Videos
Follow Us:
Download App:
  • android
  • ios