ಸೀರಿಯಲ್‌ನಲ್ಲಿ ಪಾಪು ಅಂತ ಕಣ್ಣೀರಾಕಿ ಈಗ ಸುತ್ತಾಡೋದು; ಪಾರು ಕಾಲೆಳೆದ ನೆಟ್ಟಿಗರು!
ಅಯ್ಯೋ ಪಾಪ ಪಾರು ಸದಾ ಪಾಪು ಅಂತಾಳೆ ಅಂತ ಬೇಸರ ಮಾಡಿಕೊಳ್ಳುತ್ತಿದ್ದವರು ಈಗ ಫುಲ್ ಶಾಕ್....ಯಾಕೆ?

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪಾರು ಧಾರಾವಾಹಿ ಟಿಆರ್‌ಪಿಯಲ್ಲಿ ಮೊದಲ ಸ್ಥಾನ ಪಡೆದು ಪ್ರತಿಯೊಬ್ಬ ಪಾತ್ರಧಾರಿಯನ್ನು ಅದ್ಭುತವಾಗಿ ತೋರಿಸಿದ್ದಾರೆ.
ಪಾರು ಪಾತ್ರದಲ್ಲಿ ಮಿಂಚುತ್ತಿರುವ ಮೋಕ್ಷಿತಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಡಿಫರೆಂಟ್ ಫೋಟೋ ಅಪ್ಲೋಡ್ ಮಾಡುತ್ತಾರೆ.
ಕೆಲವು ದಿನಗಳ ಹಿಂದೆ ಪಾರು ವಯನಾಡು ಕಡೆ ಪ್ರಯಾಣ ಮಾಡಿದ್ದು ಡಿಫರೆಂಟ್ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ.
ಜನರಿಂದ ಬರುವ ಕಹಿ ನಿಮ್ಮೊಳಗಿನ ಸೌಂದರ್ಯವನ್ನು ಹಾಳುಮಾಡಲು ಬಿಡಬೇಡಿ ಎಂದು ಪಾರು ಇನ್‌ಸ್ಟಾಗ್ರಾಂ ಕ್ಯಾಪ್ಶನ್ ಬರೆದುಕೊಂಡಿದ್ದಾರೆ.
ರೆಡ್ ಫ್ರಾಕ್‌ಗೆ 'ಆಂತರಿಕ ಶಾಂತಿಗೆ ಪ್ರಕೃತಿಯು ಶುದ್ಧ ಪೋರ್ಟಲ್ ಆಗಿದೆ' ಎಂದು ಮತ್ತೊಂದು ಫೋಟೋಗೆ ಬರೆದುಕೊಂಡಿದ್ದಾರೆ ಮೋಕ್ಷಿತಾ.
ಸೀರಿಯಲ್‌ನಲ್ಲಿ ಅಯ್ಯೋ ನನ್ನ ಪಾಪು ಅಂತ ಕಣ್ಣೀರು ಹಾಕ್ತಾನೆ ಇರ್ತೀರಾ ...ಈಗ ಎಷ್ಟು ಖುಷಿಯಿಂದ ಸುತ್ತಾಡುತ್ತಿದ್ದೀರಾ ಎಂದು ನೆಟ್ಟಿಗರು ಕಾಮೆಂಟ್ ಮಾಡಿ ಕಾಲೆಳೆದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.