Amruthadhaare Serial: ʼಅಮೃತಧಾರೆʼ ಧಾರಾವಾಹಿಯಲ್ಲಿ ತನ್ನ ಮಗಳೆಲ್ಲಿ ಎಂದು ಗೌತಮ್‌ ಹುಡುಕಾಟದಲ್ಲಿದ್ದಾನೆ. ಹಾಗಾದರೆ ಅವನಿಗೆ ಮಗಳು ಸಿಗುತ್ತಾಳಾ? 

Amruthadhaare Kannada Tv Serial: ‘ಅಮೃತಧಾರೆʼ ಧಾರಾವಾಹಿಯಲ್ಲಿ ಅಂತೂ ಇಂತೂ ಗೌತಮ್‌ ದಿವಾನ್-ಭೂಮಿಕಾ ಪಾಲಕರಾಗಿ ಬಡ್ತಿ ಪಡೆದಿದ್ದಾರೆ. ನನಗೆ ಹೆಣ್ಣು ಮಗು ಬೇಕು ಅಂತ ಗೌತಮ್‌, ನನಗೆ ಗಂಡು ಮಗು ಬೇಕು ಅಂತ ಭೂಮಿ ಪಟ್ಟುಹಿಡಿದಿದ್ದಳು. ಇವರ ಜಗಳಕ್ಕೆ ಇನ್ನೊಂದಿಷ್ಟು ತುಪ್ಪ ಸುರಿಯಬಾರದು ಅಂತ ಧಾರಾವಾಹಿ ತಂಡವೇ ಇವರಿಗೆ ಅವಳಿ ಮಕ್ಕಳನ್ನು ( ಓರ್ವ ಗಂಡು- ಓರ್ವ ಹೆಣ್ಣು) ದಯಪಾಲಿಸಿದರು.

ಗೌತಮ್‌-ಭೂಮಿಕಾ ಮೇಲೆ ಅಟ್ಯಾಕ್!

ಭೂಮಿಗೆ ಮಗು ಹುಟ್ಟಬಾರದು ಅಂತ ಶಕುಂತಲಾ ಸಿಕ್ಕಾಪಟ್ಟೆ ಕುತಂತ್ರ ಮಾಡಿಸಿದ್ದಳು. ಭೂಮಿಗೆ ಜಾಯಿಂಡೀಸ್‌ ಬರೋ ಹಾಗೆ ಮಾಡಿದ್ದಳು, ಆಮೇಲೆ ಇದಕ್ಕೆ ನಾಟಿ ಔಷಧಿಯಿಂದ ಪರಿಹಾರ ಸಾಧ್ಯ ಅಂತ ಅಜ್ಜಿ ಹೇಳಿದ್ದಳು. ನಾಟಿ ಔಷಧಿಗೋಸ್ಕರ ಗೌತಮ್‌, ಭೂಮಿ ಕಾಡಿಗೆ ಹೋಗಬೇಕಿತ್ತು. ಆ ದಾರಿಯಲ್ಲಿ ಅವರನ್ನು ಮುಗಿಸಲು ಶಕುಂತಲಾ ಸಂಚು ಹೂಡಿದ್ದಳು. ಈ ರೌಡಿಗಳಿಂದ ಗೌತಮ್‌ ತನ್ನನ್ನು, ಭೂಮಿಕಾರನ್ನು, ಹುಟ್ಟದೆ ಇರೋ ಮಗುವನ್ನು ಕಾಪಾಡೋದು ದೊಡ್ದ ಟಾಸ್ಕ್‌ ಆಗಿತ್ತು.

ಗೌತಮ್‌ ಮಗು ಕದ್ದೊಯ್ದೋರು ಯಾರು?

ಹೀಗಿರುವಾಗ ʼಅಣ್ಣಯ್ಯʼ ಧಾರಾವಾಹಿ ಶಿವು ಎಂಟ್ರಿ ಕೊಟ್ಟಿದ್ದಾನೆ. ಗೌತಮ್‌ಗೆ ಶಿವು ನೆರವಾಗಿದ್ದಾನೆ. ಅಷ್ಟೇ ಅಲ್ಲದೆ ಅಲ್ಲೇ ಹತ್ತಿರದಲ್ಲಿದ್ದ ಆಸ್ಪತ್ರೆಗೆ ಮೆಡಿಕಲ್‌ ಕ್ಯಾಂಪ್‌ನಲ್ಲಿದ್ದ ತನ್ನ ಪತ್ನಿಯನ್ನು ಕರೆಸಿಕೊಂಡು ಭೂಮಿ ಹೆರಿಗೆ ಮಾಡಿಸಿದ್ದಾನೆ. ಇದಕ್ಕೆ ಡಾಕ್ಟರ್‌ ಕರ್ಣನ ಸಹಾಯ ದೊಡ್ಡದಿದೆ. ಆರಂಭದಲ್ಲಿ ಗೌತಮ್‌ಗೆ ಹೆಣ್ಣು ಮಗು ಜನಿಸಿತು. ಮಗಳು ಹುಟ್ಟಿದಳು ಅಂತ ಗೌತಮ್‌ ಖುಷಿಯಲ್ಲಿ ಹಿರಿ ಹಿರಿ ಹಿಗ್ಗುತ್ತಿದ್ದ. ಅದೇ ಸಮಯಕ್ಕೆ ಅಲ್ಲಿಗೆ ಜಯದೇವ್‌ ಎಂಟ್ರಿಯಾಗಿದೆ. ಅವನಂತೂ ಆ ಪುಟ್ಟ ಮಗುವನ್ನು ಕದ್ದೊಯ್ದನು. ಗೌತಮ್‌ಗೆ ತನ್ನ ಮಗುವನ್ನು ಯಾರು ಕದ್ದೊಯ್ದರು ಎನ್ನೋದು ಗೊತ್ತಾಗಲೇ ಇಲ್ಲ. ಎಷ್ಟೇ ಹುಡುಕಿದರೂ ಕೂಡ ಅವನಿಗೆ ಮಗಳು ಸಿಗಲಿಲ್ಲ.

ಅವಳಿ ಮಕ್ಕಳಿಗೆ ಜನನ!

ಅದೇ ಸಮಯಕ್ಕೆ ಭೂಮಿಕಾಗೆ ಮತ್ತೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಹೊಟ್ಟೆಯೊಳಗಡೆ ಇನ್ನೊಂದು ಮಗು ಇರೋದು ಗೊತ್ತಾಗಿದೆ. ಆರಂಭದಲ್ಲಿ ಸ್ಕ್ಯಾನಿಂಗ್‌ ಮಾಡಿಸಿದಾಗಲೂ ಕೂಡ ಅವಳಿ ಎನ್ನೋದು ಗೊತ್ತೇ ಆಗದಿರೋದು ಮೆಡಿಕಲ್‌ ಪವಾಡ ಎನ್ನಬಹುದು ಏನೋ! ಗೊತ್ತಿಲ್ಲ.

ಪೇಪರ್‌ ಎಸೆದ ಹಾಗೆ ಎಸೆದ ಪಾಪಿ!

ಹೀಗಿರುವಾಗ ಭೂಮಿ ಗಂಡು ಮಗುವಿಗೆ ಜನ್ಮ ನೀಡಿದಳು. ಯಾರಿಗೂ ಈ ವಿಷಯ ತಿಳಿಸದೆ ಗೌತಮ್‌ ಭೂಮಿ, ಮಗುವನ್ನು ಮನೆಗೆ ಕರೆದುಕೊಂಡು ಹೋದನು. ಆ ಪಾಪಿ ಜಯದೇವ್‌ ಪುಟ್ಟ ಮಗುವನ್ನು ಪೇಪರ್‌ ಎಸೆದ ಹಾಗೆ ಎಸೆದಿದ್ದಾನೆ. ಈ ದೃಶ್ಯ ನೋಡಿದರೆ ಎಂಥವರ ಕರುಳು ಕೂಡ ಚುರುಕ್‌ ಎನ್ನುತ್ತದೆ.

ಮಗು ಎಲ್ಲಿ?

ಇನ್ನೊಂದು ಕಡೆ ಆ ಮಗು ಎಲ್ಲಿದೆ ಅಂತ ಅರಣ್ಯಾಧಿಕಾರಿಗಳು, ಪೊಲೀಸ್‌ ಅಧಿಕಾರಿಗಳು ಹುಡುಕುತ್ತಿದ್ದಾರೆ. ಮಗಳು ಕಾಣೆಯಾಗಿರೋ ವಿಷಯವನ್ನು ಗೌತಮ್‌, ಮನೆಯಲ್ಲಿ ಹೇಳದೆ, ನೋವು ತೋರಿಸಿಕೊಳ್ಳದೆ ಒದ್ದಾಡುತ್ತಿದ್ದಾನೆ. ಯಾರು ಎಷ್ಟೇ ಹುಡುಕಿದರೂ ಕೂಡ ಗೌತಮ್‌ಗೆ ಮಗಳ ಸುಳಿವು ಸಿಗುತ್ತಿಲ್ಲ. ಇನ್ನು ಎಸೆದಿದ್ದ ಮಗು ಸಿಕ್ಕರೆ, ಬ್ಲ್ಯಾಕ್‌ಮೇಲೆ ಮಾಡಿ ಇನ್ನೊಂದಿಷ್ಟು ಪ್ರಯೋಜನ ಆಗಬಹುದು ಅಂತ ಶಕುಂತಲಾಳೇ ಮಗನಿಗೆ ಐಡಿಯಾ ಕೊಟ್ಟಿದ್ದಳು. ಹೀಗಾಗಿ ಜಯದೇವ್‌ ಕೂಡ ಮಗುವನ್ನು ಹುಡುಕುತ್ತಿದ್ದಾನೆ.

ಇನ್ನು ಒಂದಷ್ಟು ದಿನಗಳ ಬಳಿಕ ಮಗು ಪತ್ತೆ ಆಗಬಹುದು. ಮಗಳು ಹುಟ್ಟಿದ್ದಳು. ಆ ಮಗು ನಾಪತ್ತೆ ಆಗಿರೋ ವಿಷಯವನ್ನು ಹೇಳಿಲ್ಲ ಅಂತ ಭೂಮಿಗೆ ಗೊತ್ತಾದರೆ ಗೌತಮ್‌ ಮೇಲೆ ಬೇಸರ ಮಾಡಿಕೊಳ್ಳಲೂಬಹುದು. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ರೋಚಕತೆಯಿಂದ ಕೂಡಿದೆ.

ಪಾತ್ರಧಾರಿಗಳು

ಗೌತಮ್-‌ ರಾಜೇಶ್‌ ನಟರಂಗ

ಭೂಮಿ- ಛಾಯಾ ಸಿಂಗ್