Amruthadhaare Serial: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ಗೆ ಕೊನೆಗೂ ಮಗಳು ಸಿಕ್ಕಿದ್ದಾಳೆ. ಈ ಸೀರಿಯಲ್‌ನಲ್ಲಿ ಇದು ನಿಜಕ್ಕೂ ರೋಚಕ ಗಳಿಗೆ ಎನ್ನಬಹುದು. ಹಾಗಾದರೆ ಮುಂದೆ ಏನಾಗಬಹುದು?
ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ ( Amruthadhaare Serial ) ಕಳೆದು ವರ್ಷದಿಂದ ಗೌತಮ್ ಮಗಳು ಏನಾದಳು ಎನ್ನೋ ಸತ್ಯವನ್ನು ರಿವೀಲ್ ಮಾಡಿಲ್ಲ. ಈಗ ಗೌತಮ್‌ಗೆ ಮಗಳು ಸಿಕ್ಕಿದ್ದಾಳೆ, ಹೌದು, ವಾಹಿನಿಯು ಹೊಸ ಪ್ರೋಮೋವನ್ನು ರಿವೀಲ್ ಮಾಡಿ, ವೀಕ್ಷಕರ ಕುತೂಹಲವನ್ನು ಹೆಚ್ಚು ಮಾಡಿದೆ.
ಮಗಳು ಇದ್ದಳು…
ಗೌತಮ್ ಓರ್ವ ದಂಪತಿಯನ್ನು ಏರ್‌ಪೋರ್ಟ್‌ಗೆ ಡ್ರಾಪ್ ಮಾಡಿದ್ದಾನೆ. ಆಗ ಅವನ ಕಾರ್‌ನಲ್ಲಿ ಬ್ಯಾಗ್ ಬಿಟ್ಟು ಹೋಗಿದ್ದರು. ಬ್ಯಾಗ್‌ನ್ನು ಅವರ ಮನೆಯವರಿಗೆ ಕೊಟ್ಟು ಹೋಗೋಣ ಎಂದು ಮನೆಗೆ ಹೋಗಿದ್ದಾನೆ. ಆಗ ಅಲ್ಲಿ ಅವರ ಮಗಳು ಇದ್ದಳು.
ನಿಜಕ್ಕೂ ಮಗಳು ಸಿಕ್ಕಿದ್ದು ಹೇಗೆ?
ವಿದೇಶಕ್ಕೆ ಹೋಗಬೇಕು ಎಂದು ಓರ್ವ ದಂಪತಿ ಮಗುವನ್ನು ಮನೆಯಲ್ಲಿ ಬಿಟ್ಟು ಹೋಗಿದ್ದರು. ಪತ್ನಿ, “ಇಷ್ಟುದಿನ ನಮ್ಮ ಜೊತೆ ಆ ಮಗು ಇತ್ತು, ಕರೆದುಕೊಂಡು ಹೋಗೋಣ” ಎಂದು ಹೇಳಿದರೂ ಕೂಡ, ಅವಳ ಗಂಡ ಮಾತ್ರ ಒಪ್ಪಲೇ ಇಲ್ಲ. ಆ ದಂಪತಿಯನ್ನು ಏರ್‌ಪೋರ್ಟ್‌ಗೆ ಬಿಟ್ಟಿದ್ದು ಗೌತಮ್. ಆ ಮಗುವನ್ನು ಮನೆಯಲ್ಲಿಯೇ ಬಿಟ್ಟು ಹೋದರು ಅಂತ ಎಲ್ಲರೂ ನೋಡಿಕೊಳ್ಳುತ್ತ ನಿಂತಿದ್ದರು.
ಗೌತಮ್ ಏನು ಮಾಡಬಹುದು?
ಆ ಹೆಣ್ಣು ಮಗುವನ್ನು ಗೌತಮ್ ನೋಡಿದ್ದಾನೆ. ಆ ಮಗು ಯಾರೆಂದು ಇನ್ನೂ ರಿವೀಲ್ ಮಾಡಿಲ್ಲ. ಆ ಮಗುವೇ ಗೌತಮ್ ಮಗಳಾಗಿರಬಹುದು. ಇನ್ನು ಮುಂದಿನ ದಿನಗಳಲ್ಲಿ ಗೌತಮ್ ಆ ಮಗಳನ್ನು ತನ್ನ ಮಗಳು ಎಂದು ಸಾಕಿ ಬೆಳೆಸಿದರೂ ಕೂಡ ಆಶ್ಚರ್ಯವಿಲ್ಲ.
ಕಾವೇರಿ ದತ್ತು ತಗೊಂಡ ಮಗು ಯಾರದ್ದು?
ಇನ್ನು ಭೂಮಿಕಾ ಗೆಳತಿ ಕಾವೇರಿ ಕೂಡ ಓರ್ವ ಮಗುವನ್ನು ದತ್ತು ತಗೊಂಡಿದ್ದಳು. ಇಷ್ಟುದಿನಗಳಿಂದ ಕಾವೇರಿ ಮಗಳೇ ಭೂಮಿ ಮಗಳು ಎನ್ನುವ ಅನುಮಾನ ಬಂದಿತ್ತು. ಈಗ ಈ ಹೊಸ ದಂಪತಿ ನೋಡಿದರೆ, ಬಹುಶಃ ಗೌತಮ್-ಭೂಮಿಕಾ ಮಗಳು ಇವಳೇ ಇರಬೇಕು.
ಮತ್ತೆ ಮನೆ ಖಾಲಿ ಮಾಡಿದ ಭೂಮಿಕಾ
ಒಂದು ಕಡೆ ಭೂಮಿಕಾ ಕುಶಾಲನಗರದಲ್ಲಿನ ಮನೆ ಖಾಲಿ ಮಾಡಿಕೊಂಡು, ಬೆಂಗಳೂರಿಗೆ ಬಂದಿದ್ದಾಳೆ. ಅಲ್ಲಿ ಅವಳು ಸ್ಕೂಲ್‌ವೊಂದಕ್ಕೆ ಹೆಡ್ ಮಿಸ್ ಆಗಿದ್ದಾಳೆ. ಪತ್ನಿ ಎಲ್ಲಿ ಅಂತ ಗೌತಮ್ ಹುಡುಕಾಟ ಮಾಡುತ್ತಿದ್ದಾನೆ.
ಮುಂದೆ ಏನಾಗುವುದು?
ಒಟ್ಟಿನಲ್ಲಿ ಗೌತಮ್ ಹಾಗೂ ಭೂಮಿಕಾ ಹಾಗೂ ಅವರ ಇಬ್ಬರು ಮಕ್ಕಳು ಒಟ್ಟಿಗೆ ಇರಬೇಕು ಎಂದು ವೀಕ್ಷಕರು ಬಯಸುತ್ತಿದ್ದಾರೆ. ಆ ದಿನ ಯಾವಾಗ ಬರುವುದೋ ಏನೋ!
ಧಾರಾವಾಹಿ ಕಥೆ ಏನು?
ಗೌತಮ್ ಹಾಗೂ ಭೂಮಿಕಾಗೆ ಅವಳು ಮಕ್ಕಳು ಜನಿಸಿದ್ದಾರೆ. ಭೂಮಿಗೆ ತನ್ನ ಹೊಟ್ಟೆಯಲ್ಲಿ ಅವಳಿ ಮಗಳಿರೋದು ಗೊತ್ತೇ ಇರಲಿಲ್ಲ. ಭೂಮಿಗೆ ಮಗಳು ಹುಟ್ಟಿದಕೂಡಲೇ ಅದನ್ನು ಗೌತಮ್ ಮಲತಾಯಿ ಶಕುಂತಲಾ-ಜಯದೇವ್ ಸೇರಿಕೊಂಡು ಕಾಡಿನಲ್ಲಿ ಬಿಸಾಕಿದರು. ನೀನು ಮನೆಯಿಂದ ಹೊರಹೋದರೆ, ಗೌತಮ್‌ನಿಂದ ದೂರ ಇದ್ದರೆ ಮಾತ್ರ ಉಳಿದವರು ಬದುಕ್ತಾರೆ, ಇಲ್ಲ ಅಂದರೆ ಅವರನ್ನು ನಾನು ಸಾಯಿಸ್ತೀನಿ ಅಂತ ಶಕುಂತಲಾ ಧಮ್ಕಿ ಹಾಕಿದ್ದಕ್ಕೆ ಭೂಮಿ ಕೂಡ ಮನೆ ಬಿಟ್ಟು ಹೋಗಿದ್ದಳು. ಐದು ವರ್ಷದ ಬಳಿಕ ಗೌತಮ್-ಭೂಮಿಕಾ ಭೇಟಿಯಾಗಿದೆ. ತನ್ನ ಮಗ ಹೇಗಿದ್ದಾನೆ ಎಂದು ಗೌತಮ್ ಕೂಡ ನೋಡಿದ್ದನು. ಮಗಳ ವಿಷಯ ಮುಚ್ಚಿಟ್ಟಿದ್ದಕ್ಕೆ ಭೂಮಿಕಾ ಈ ರೀತಿ ದೂರವಿದ್ದಾಳೆ ಅಂತ ಗೌತಮ್ ಅಂದುಕೊಂಡಿದ್ದಾನೆ. ಶಕುಂತಲಾ ಬ್ಲ್ಯಾಕ್‌ಮೇಲ್ ವಿಚಾರ ಗೌತಮ್‌ಗೆ ಗೊತ್ತೇ ಇಲ್ಲ.
ಪಾತ್ರಧಾರಿಗಳು
ಗೌತಮ್- ರಾಜೇಶ್ ನಟರಂಗ
ಭೂಮಿಕಾ- ಛಾಯಾ ಸಿಂಗ್
ಆಕಾಶ್-ದುಷ್ಯಂತ್ ಚಕ್ರವರ್ತಿ
ಶಕುಂತಲಾ-ವನಿತಾ ವಾಸು


