- Home
- Entertainment
- TV Talk
- Amruthadhaare Serial: ಭೂಮಿಕಾಗೆ ಮಗಳು ಸಿಗೋ ಟೈಮ್ ಬಂದೇಬಿಡ್ತು, ಇನ್ನೊಂದೇ ಹೆಜ್ಜೆ ಬಾಕಿ ಇರೋದು!
Amruthadhaare Serial: ಭೂಮಿಕಾಗೆ ಮಗಳು ಸಿಗೋ ಟೈಮ್ ಬಂದೇಬಿಡ್ತು, ಇನ್ನೊಂದೇ ಹೆಜ್ಜೆ ಬಾಕಿ ಇರೋದು!
ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಅವಳಿ ಮಕ್ಕಳಿಗೆ ಜನ್ಮ ಕೊಟ್ಟಿದ್ದಳು. ಮಗಳು ಹುಟ್ಟಿರೋದು, ಆಮೇಲೆ ಕಿಡ್ನ್ಯಾಪ್ ಆಗಿರೋದು ಅವಳಿಗೆ ಗೊತ್ತೇ ಇರಲಿಲ್ಲ. ಆ ಬಳಿಕ ಶಕುಂತಲಾಳಿಂದ ಮಗಳ ವಿಷಯ ಗೊತ್ತಾಗಿತ್ತು. ಮಗಳು ಬದುಕಿಲ್ಲ ಅಂತ ಭೂಮಿ ಅಂದುಕೊಂಡಿರುವಾಗ, ಈಗ ಮಗಳು ಸಿಗೋ ಸಮಯ ಬಂದಿದೆ.

ಐದು ವರ್ಷದ ಬಳಿಕ ಭೇಟಿಯಾಗಿದ್ರು
ಗೌತಮ್ ಹಾಗೂ ಭೂಮಿಕಾ ದೂರ ಆಗಿ ಐದು ವರ್ಷಗಳಾಯ್ತು. ಇಷ್ಟು ವರ್ಷಗಳಿಂದ ಹೆಂಡ್ತಿ, ಮಗನನ್ನು ಹುಡುಕಿಕೊಂಡು ಗೌತಮ್ ಕುಶಾಲನಗರಕ್ಕೆ ಬಂದಿದ್ದನು. ಅಲ್ಲಿ ಅವನಿಗೆ ಭೂಮಿಕಾ, ಆಕಾಶ್ ಸಿಕ್ಕಿದ್ದರು.
ಆಕಾಶ್‌ನನ್ನು ಕಾಪಾಡಿದ್ದ ಗೌತಮ್
ವಿಧಿಯೇ ಆಕಾಶ್ ಹಾಗೂ ಗೌತಮ್‌ನನ್ನು ಹತ್ತಿರಕ್ಕೆ ಸೇರಿಸಿತ್ತು. ಅದಾದ ಬಳಿಕವೇ ಗೌತಮ್‌ಗೆ ಆಕಾಶ್ ತನ್ನ ಮಗ ಎನ್ನೋದು ಗೊತ್ತಾಯ್ತು. ಎಂಎಲ್‌ಎ ಕಡೆಯಿಂದ ಭೂಮಿಗೆ ತೊಂದರೆ ಆದಾಗ, ಆಕಾಶ್ ಕಿಡ್ನ್ಯಾಪ್ ಆದಾಗ ಅದನ್ನು ಗೌತಮ್ ಎದುರಿಸಿ ನಿಂತನು, ಆಕಾಶ್‌ನನ್ನು ಕಾಪಾಡಿದನು.
ಗೌತಮ್‌ನಿಂದ ಭೂಮಿ ದೂರ
“ನಾನು ಗೌತಮ್ ಜೊತೆಗಿದ್ದರೆ ಶಕುಂತಲಾ, ನನ್ನವರನ್ನು, ಗೌತಮ್ ಕಡೆಯವರನ್ನು ಯಾರನ್ನು ಸುಮ್ಮನೆ ಬಿಡೋದಿಲ್ಲ. ಈಗಾಗಲೇ ನಮ್ಮ ಮಗಳನ್ನು ಅವಳು ಬಲಿ ತೆಗೆದುಕೊಂಡಿದ್ದಾಳೆ” ಎಂದು ಭೂಮಿ ಎಲ್ಲರಿಂದ ದೂರ ಇದ್ದು ಬದುಕುತ್ತಿದ್ದಾಳೆ.
ಬೆಂಗಳೂರಿಗೆ ಶಿಫ್ಟ್
ಗೌತಮ್‌ಗೆ ಕುಶಾಲನಗರದ ಮನೆಯ ಅಡ್ರೆಸ್ ಗೊತ್ತಾದ ಬಳಿಕ ಅವಳು ಬೆಂಗಳೂರಿಗೆ ಹೋಗಿದ್ದಾಳೆ, ಅಲ್ಲಿ ಮಲ್ಲಿ ಫೋನ್ ಕೂಡ ಸ್ವಿಚ್ ಆಫ್ ಆಗುವ ಹಾಗೆ ಮಾಡಿದ್ದಾಳೆ. ಬೆಂಗಳೂರಿನ ಶಾಲೆಯೊಂದರಲ್ಲಿ ಭೂಮಿಕಾ ಈಗ ಹೆಡ್ ಮಿಸ್ ಆಗಿ ಬಡ್ತಿ ಪಡೆದಿದ್ದಾಳೆ.
ಗೌತಮ್‌ಗೆ ಮೊದಲೇ ಗೊತ್ತಿತ್ತು
ಇತ್ತ ಗೌತಮ್‌ಗೆ ಪತ್ನಿ ಎಲ್ಲಿ ಹೋದಳು ಅಂತ ಗೊತ್ತಾಗ್ತಿಲ್ಲ. “ಮೊದಲೇ ನನ್ನನ್ನು ಹುಡುಕಬೇಡಿ, ನಮ್ಮಿಂದ ದೂರ ಇರಿ ಅಂತ ಭೂಮಿಕಾ ಎಚ್ಚರಿಕೆ ಕೊಟ್ಟಿದ್ದರು. ಅದರಂತೆ ಮಾಡಿದರು” ಎಂದು ಗೌತಮ್ ಅಂದುಕೊಂಡಿದ್ದಾನೆ.
ಭೂಮಿಗೆ ಗೆಳತಿ ಸಿಕ್ಕಳು
ಭೂಮಿಕಾ ಹೊಸ ಶಾಲೆಯಲ್ಲಿ ಅವಳ ಗೆಳತಿ ಗಂಗಾ ಕೂಡ ಸಿಕ್ಕಿದ್ದಾಳೆ. ಈ ಹಿಂದೆ ಗಂಗಾ ಪುಟ್ಟ ಮಗುವೊಂದನ್ನು ದತ್ತು ತಗೊಂಡಿದ್ದಳು. ಆ ಮಗು ಭೂಮಿಕಾಳದ್ದು ಎಂದು ವೀಕ್ಷಕರಿಗೆ ಡೌಟ್ ಇತ್ತು. ಬಹುಶಃ ಅನಾಥಾಶ್ರಮದಿಂದಲೇ ಆ ಮಗುವನ್ನು ದತ್ತು ಪಡೆದಿರಬಹುದು. ಅಂದಹಾಗೆ ಕಾಡಿನಲ್ಲಿ ಅಂದು ಜಯದೇವ್ ಬಿಸಾಡಿದ ಮಗು ಅನಾಥಾಶ್ರಮ ಸೇರಿರಬಹುದು, ಅಲ್ಲಿಂದ ಗಂಗಾಗೆ ಸೇರಿರಬಹುದು.
ವೀಕ್ಷಕರ ಆಸೆ ಈಡೇರತ್ತಾ?
ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಗಂಗಾಳೇ ಭೂಮಿ ಮಗಳಾಗಿದ್ದು, ಅವಳು ಕೂಡ ಭೂಮಿಗೆ ಸಿಕ್ಕಿದರೆ ವೀಕ್ಷಕರು ಸಿಕ್ಕಾಪಟ್ಟೆ ಖುಷಿ ಪಡುತ್ತಾರೆ. ಗೌತಮ್ ಹಾಗೂ ಭೂಮಿಕಾ ಒಂದಾಗಲಿ ಎಂದು ವೀಕ್ಷಕರು ಬಯಸುತ್ತಿದ್ದಾರೆ. ಮುಂದೆ ಏನಾಗುತ್ತೋ ಏನೋ