Amruthadhaare Kannada Serial Update: ‘ಅಮೃತಧಾರೆʼ ಧಾರಾವಾಹಿಯಲ್ಲಿ ಕೊನೆಗೂ ಶಕುಂತಲಾ ಕೆನ್ನೆಗೆ ಭೂಮಿ ಬಾರಿಸಿದ್ದಾಳೆ. ಈ ಎಪಿಸೋಡ್ ವೀಕ್ಷಕರಿಗೆ ತುಂಬ ಇಷ್ಟ ಆಗಿದೆ.
ಅಮೃತಧಾರೆ ಧಾರಾವಾಹಿಯಲ್ಲಿ ( Amruthadhaare Serial ) ಮನೆ ಬಿಟ್ಟು ಹೋದೆ ಅಂತ ಶಕುಂತಲಾ ನಾಟಕ ಮಾಡಿಕೊಂಡು ಜಯದೇವ್ ಮನೆಗೆ ಹೋಗಿದ್ದಳು. ಗೌತಮ್ ಅವಳಿಗೆ ಸಮಾಧಾನ ಮಾಡಿ ಕರೆದುಕೊಂಡು ಬಂದಿದ್ದನು. ಆಮೇಲೆ ಇದೇ ವಿಚಾರಕ್ಕೆ ಶಕುಂತಲಾ, ಭೂಮಿಯನ್ನು ವ್ಯಂಗ್ಯ ಮಾಡಿದ್ದಳು. ಆಗ ಭೂಮಿಕಾ ಮಾತ್ರ ಸಾಕಾ? ಬೇಕಾ ಎನ್ನೋ ಥರ ಕಪಾಳಮೋಕ್ಷ ಮಾಡಿದ್ದಾಳೆ.
ಭೂಮಿ ಕುಟುಂಬವನ್ನು ಹೀಯಾಳಿಸಿದ ಶಕುಂತಲಾ!
“ನೀವು ಭಿಕ್ಷುಕರು, ನನ್ನ ಮಗಳು ನಿಮ್ಮ ಮನೆ ಸೊಸೆಯಾದಳು. ನಿಮ್ಮ ತಾಯಿ ಯಾವಾಗಲೂ ವಟ ವಟ ಅಂತ ಮಾತಾಡ್ತಾ ಬಿಲ್ಡ್‌ಅಪ್ ಕೊಡ್ತಾ ಇರ್ತಾಳೆ, ನಿಮ್ಮ ಅಪ್ಪನೂ ಅಷ್ಟೇ. ನಾನು ಸಾಕಿರೋ ನಾಯಿ ಗೌತಮ್. ಅವನಿಗೆ ತಲೆಯಲ್ಲಿ ಮಿದುಳು ಇದ್ದರೂ ಕೂಡ ಅದು ವರ್ಕ್ ಆಗೋದಿಲ್ಲ. ಅವನು ನನ್ನ ಮಾತನ್ನೇ ಕೇಳೋದು, ನಾನು ಹೇಳಿದ್ದನ್ನೇ ಕೇಳ್ತಾನೆ. ಮೇಷ್ಟ್ರು ಮಗಳು ನೀನು ಪಾಪದವಳಲ್ಲ, ನೀನು ಗೌತಮ್‌ಗೆ ಸರಿಯಾದ ಜೋಡಿ ಅಲ್ಲ. ಸುಮ್ಮನಿರೋದು ಬಿಟ್ಟು ನನ್ನ ಮೇಲೆ ಎಗರುತ್ತೀಯಾ. ಶ್ರೀಮಂತಿಕೆ ಸೊಕ್ಕು ನಿನ್ನ ತಲೆಗೇರಿದೆ. ಮದುವೆಗೂ ಮುನ್ನ ನೀವು ಗತಿಗೆಟ್ಟೋರು. ಆರಕ್ಕೆ ಏರಲ್ಲ, ಮೂರಕ್ಕೆ ಇಳಿಯಲ್ಲ ಎನ್ನೋ ಥರ ಇದ್ರಿ. ಹೆಂಡ್ತಿ ಮಕ್ಕಳನ್ನು ಸಾಕೋ ಯೋಗ್ಯತೆ ನಿಮ್ಮ ಅಪ್ಪನಿಗೆ ಇಲ್ಲ. ನಿನ್ನ ತಮ್ಮನಿಗೆ ಬ್ಯುಸಿನೆಸ್ ಮಾಡೋಕೆ ಗೌತಮ್ ಸಹಾಯ ಬೇಕು. ನಿಮ್ಮನೆ ಕೊಚ್ಚೆಗುಂಡಿ. ನಾನು ಹಾಕೋ ಬಿಸ್ಕತ್ ತಿಂದು ಕಾಲು ಕೆಳಗಡೆ ಬಿದ್ದಿರಬೇಕು, ಅಷ್ಟೇ ಅವನ ಯೋಗ್ಯತೆ” ಎಂದು ಶಕುಂತಲಾ ಭೂಮಿಕಾಗೆ ಹೇಳಿದ್ದಾಳೆ.
ಛಡಿಏಟು ಕೊಟ್ಟ ಭೂಮಿಕಾ!
“ಶಕುಂತಲಾ ಮಾತು ಕೇಳಿ ಭೂಮಿಕಾ ಸಿಟ್ಟಾಗಿದ್ದಾಳೆ. ಆಗ ಅವಳು ಕಪಾಳಕ್ಕೆ ಬಾರಿಸಿದ್ದಾಳೆ. “ಸುಮ್ನೆ ಇದ್ರೆ ಸರಿ, ಇಲ್ಲ ಅಂದ್ರೆ ಇನ್ನೂ ಒಂದು ಬೀಳತ್ತೆ. ನನ್ನ ಹೂವು ಅಂತ ಅಂದುಕೊಂಡಿದ್ದೀರಾ. ನಾನು ಫೈಯರ್. ನನ್ನ ಗಂಡ ಏನೇ ಹೇಳಿದ್ರು ನಂಬ್ತಾರೆ ಅಲ್ವಾ? ಈಗ ಹೋಗಿ ಭೂಮಿಕಾ ಹೊಡೆದಳು ಅಂತ ಹೇಳಿ ಹೋಗಿ, ನಾನು ಪುಣ್ಯಕೋಟಿ ಗೋವು ಹೌದು, ತಲೆಕೆಟ್ಟರೆ ಗುಮ್ಮೋ ಗೂಳಿ ಆಗ್ತೀನಿ. ಭೂಕಂಪನೂ ಆಗತ್ತೆ, ಜ್ವಾಲಾಮುಖಿಯೂ ಸಿಡಿಯತ್ತೆ. ಒಳ್ಳೆಯದು ಮಾಡೋಕೆ ಆಗಲ್ಲ ಅಂದ್ರೆ ಕೆಟ್ಟದನ್ನು ಮಾಡೋಕೆ ಬರಬೇಡಿ. ನನ್ನ ಹಾಗೂ ನನ್ನ ಕುಟುಂಬದವರ ಬಗ್ಗೆ ಏನೇ ಮಾತಾಡಿದ್ರೂ ಸುಮ್ಮನೆ ಇರೋದಿಲ್ಲ. ಕ್ಲಾಸ್ ಗೊತ್ತು, ಮಾಸ್ ಗೊತ್ತು” ಎಂದು ಭೂಮಿ ಎಚ್ಚರಿಕೆ ಕೊಟ್ಟಿದ್ದಾಳೆ. ಈ ಎಪಿಸೋಡ್ ಅನೇಕರಿಗೆ ಇಷ್ಟ ಆಗಿದೆ.
ಈ ಎಪಿಸೋಡ್ ನೋಡಿ ವೀಕ್ಷಕರಿಗೆ ತುಂಬ ಇಷ್ಟ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
- ಯಪ್ಪಾ ಇವತ್ತ್ ಸಮಾಧಾನ ಆಯ್ತು ನೋಡಿ, ಭೂಮಿ…
- ಬಾದಾಮಿ ಕೇಸರಿ ಹಾಲು ಕುಡಿದಷ್ಷು ಸಂತೋಷವಾಯಿತು. ಇಂದು ಭೂಮಿಕಾಗೇ ಪ್ರಶಸ್ತಿಗಳ ಸುರಿಮಳೆಯೇ ಹರಿದು ಬರಲಿ..
- ಭೂಮಿ ಕಜ್ಜಾಯ ಕೊಟ್ಟಿದ್ದು ಎಷ್ಟು ಜನರಿಗೆ ಖುಷಿಯಾಯಿತು?
- ಭೂಮಿ ರೋಷಾವೇಷದಿಂದ ಶಾಕುಂತಲಾಳನ್ನು ಹೊಡೆದಿದ್ದು ಯಾರಿಗೆಲ್ಲಾ ಇಷ್ಟ ಆಯ್ತು?
- ಅಮೃತಧಾರೆಯ, ಮರೆಯಲಾಗದ ಅಧ್ಬುತ ಸುಂದರ ಸಂಚಿಕೆ ಇದೆ ಇರಬೇಕು
- ಸುಮ್ನೆ ಇಲ್ಲ ಅಂದ್ರೆ ಇನ್ನೊಂದ್ 4 ಬೀಳುತ್ತೆ. ಇದು ಚೆನ್ನಾಗಿದೆ
- ಡೈರೆಕ್ಟರ್ ಸರ್. ನಮ್ ಭೂಮಿಕಾಗೆ ಏನೂ ತೊಂದರೆ ಕೊಡಬೇಡಿ ಪ್ಲೀಸ್
- ಭೂಮಿಕಾ ಮುಖದ ಎಕ್ಸಪ್ರೆಷನ್, ಕಣ್ಣೋಟ, ವಾಯ್ಸ್ ಎಲ್ಲವೂ ಬೆಂಕಿ
- ನಮ್ಮ ಭೂಮಿ ಅಂದ್ರೆ ಸುಮ್ನೇನಾ ಭೈರತಿ ರಣಗಲ್ ತಂಗಿ…
- ಮೇಡಂ ನಿಮ್ಮ ಡೈಲಾಗ್ ಅಂತೂ ಬೆಂಕಿ
- ಸೀರಿಯಲ್ ಹೀಟ್ ಹೆಚ್ಚಿಸಿದ ಡೈಲಾಗ್ ವಾವ್ ಇದೇ ಎಪಿಸೋಡ್‌ಗೆ ಇಷ್ಟು ದಿನ ಕಾಯುತ್ತಿದ್ದೆವು
- ಭೂಮಿ ಮೇಡಂ ಚಾಮುಂಡೇಶ್ವರಿ ಆಗಿಬಿಟ್ಟಿದ್ದಾರೆ.
- ಶಾಕುಂತಲಾ ಮನೆಯವರ ಬಗ್ಗೆ ಕೆಟ್ಟದಾಗಿ ಮಾತಾಡ್ಬೇಕಾದ್ರೆ ನನಗೆ ಉರಿತಿತ್ತು. ಪಾಪ ಅಪ್ಪ ಅಮ್ಮ, ಅವರ ಪ್ರೊಪೆಷನಲ್ ಬಗ್ಗೆ ಮಾತಾಡೋ ಅರ್ಹತೆಯೂ ಇಲ್ಲ . ಸರಿಯಾಗಿ ಬಾರಿಸಿದ್ರಲ್ವಾ?
- ಅಬ್ಬಬ್ಬಾ ಭೂಮಿ ಟೀಚರ್ ಈ ಲೆವೆಲ್‌ಗಾ...ಮಸ್ತ್ ರೆ ಮಸ್ತು
- ಹೌದೋ ಏನ್ ಡೈಲಾಗ್ಸ್. ರಪ್ಪ್ ರಪ್ಪ ಪಾಸ್ ಆತು..ನಮ್ಮ ಭೂಮಿ ನಮ್ಮ ಹೆಮ್ಮೆ
