- Home
- Entertainment
- TV Talk
- Amruthadhaare Serial: ಅಮೃತಧಾರೆಯಿಂದ ಮತ್ತೋರ್ವ ಕಲಾವಿದ ಹೊರಗಡೆ ಬಂದ್ರಾ? ಅಥವಾ ಮತ್ತೆ ಕಂಬ್ಯಾಕ್ ಆಗ್ತಾರಾ?
Amruthadhaare Serial: ಅಮೃತಧಾರೆಯಿಂದ ಮತ್ತೋರ್ವ ಕಲಾವಿದ ಹೊರಗಡೆ ಬಂದ್ರಾ? ಅಥವಾ ಮತ್ತೆ ಕಂಬ್ಯಾಕ್ ಆಗ್ತಾರಾ?
ಅಮೃತಧಾರೆ ಧಾರಾವಾಹಿಯಲ್ಲಿ ಲಕ್ಷ್ಮೀಕಾಂತ್ ಮಾವ ಜೈಲು ಸೇರಿದ್ದಾನೆ, ಅಲ್ಲಿಂದಲೇ ಅವನು ತನ್ನ ತಂಗಿ ಶಕುಂತಲಾಗೆ ಪ್ಲ್ಯಾನ್ ಹೇಳಿಕೊಡುತ್ತಿದ್ದನು. ಆದರೆ ಈಗ ಅವನ ಸುಳಿವೇ ಇಲ್ಲ.

ಹೌದು, ಲಕ್ಷ್ಮೀಕಾಂತ್ ಮಾವನ ಬಗ್ಗೆ ಎಲ್ಲಿಯೂ ತೋರಿಸಲಾಗ್ತಿಲ್ಲ. ಶಕುಂತಲಾ ಹಾಗೂ ಭೂಮಿಕಾ, ಗೌತಮ್ ನಡುವೆ ಎಪಿಸೋಡ್ ಸಾಗ್ತಿದೆ. ಅಂದಹಾಗೆ ಗೌತಮ್ ತಂಗಿ ಸುಧಾ ಬಗ್ಗೆಯೂ ಅಷ್ಟಾಗಿ ಎಪಿಸೋಡ್ ಪ್ರಸಾರ ಆಗ್ತಿಲ್ಲ.
ಲಕ್ಷ್ಮೀಕಾಂತ್ ಪಾತ್ರದಲ್ಲಿ ಕೃಷ್ಣಮೂರ್ತಿ ಕವತ್ತಾರ್ ಅವರು ನಟಿಸುತ್ತಿದ್ದಾರೆ. ರಂಗಭೂಮಿ ಕಲಾವಿದರಾಗಿರುವ ಇವರು ಸಾಕಷ್ಟು ನಾಟಕಗಳನ್ನು ರೂಪಿಸಿದ್ದಾರೆ, ಅಂದಹಾಗೆ ಅಪ್ಪು ಸಿನಿಮಾ ಆಗೋ ಮುನ್ನ ನಟಿ ರಕ್ಷಿತಾ ಪ್ರೇಮ್‌ಗೂ ಕೂಡ ಇವರೇ ನಟನೆಯ ಪಾಠ ಹೇಳಿದ್ದರು. ಇಂಡಸ್ಟ್ರಿಗೆ ಬರುವ ಅನೇಕ ಕಲಾವಿದರು ಕೃಷ್ಣಮೂರ್ತಿ ಕವತ್ತಾರ್ ಅವರಿಂದ ನಟನೆಯನ್ನು ಕಲಿತು ಬರುವುದುಂಟು.
ಈಗ ಧಾರಾವಾಹಿಯಲ್ಲಿ ಕೃಷ್ಣಮೂರ್ತಿ ಕವತ್ತಾರ್ ಇಲ್ಲದಿರೋದು ನಿಜಕ್ಕೂ ಏನೋ ಮಿಸ್ ಹೊಡೆದಂತೆ ಕಾಣಿಸ್ತಿದೆ. ಸಿಸ್ಟರ್ ಎನ್ನುವ ಕಂತ್ರಿ ಐಡಿಯಾ ಮಾಡುತ್ತಿದ್ದ ಕಲಾವಿದನನ್ನು ವೀಕ್ಷಕರು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ನಿಜಕ್ಕೂ ಕಲಾವಿದರಾಗಿ ಕೃಷ್ಣಮೂರ್ತಿ ಅವರು ಗೆದ್ದಿದ್ದಾರೆ.
ಅಮೃತಧಾರೆ ಧಾರಾವಾಹಿಯಲ್ಲಿ ಕೃಷ್ಣಮೂರ್ತಿ ಕವತ್ತಾರ್ ಅವರು ಯಾವಾಗ ಕಾಣಿಸ್ತಾರೆ ಎಂದು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಕುತೂಹಲದಿಂದ ಕೂಡಿದೆ. ಭೂಮಿ ವಿರುದ್ಧದ ಫೈಟ್‌ನಲ್ಲಿ ಶಕುಂತಲಾ, ಲಕ್ಷ್ಮೀಕಾಂತ್ ಜೋಡಿಯಾಗಿ ನಿಂತರೆ ಇನ್ನೂ ಚೆನ್ನ.
ಪಾತ್ರಧಾರಿಗಳು ಧಾರಾವಾಹಿ ಬಿಡುವ ಮುನ್ನ ಪಾತ್ರಗಳನ್ನು ಹೊರದೇಶಕ್ಕೆ ಕಳಿಸಲಾಗುತ್ತದೆ, ಜೈಲಿಗೆ ಕಳಿಸಲಾಗುತ್ತದೆ ಅಥವಾ ಸಾಯಿಸಲಾಗುತ್ತದೆ. ಲಕ್ಷ್ಮೀಕಾಂತ್ ಪಾತ್ರಕ್ಕೂ ಇದೇ ಗತಿ ಬರುವುದಾ ಎಂದು ಕಾದು ನೋಡಬೇಕಿದೆ.