Amruthadhaare & Brahmagantu: ಎರಡು ಸೀರಿಯಲ್ಗಳು ಒಟ್ಟಿಗೇ ಫಿನಿಷ್? ಏನಿದು ಅಂತೀರಾ?
ಅಮೃತಧಾರೆ ಮತ್ತು ಬ್ರಹ್ಮಗಂಟು ಸೀರಿಯಲ್ ಕಥೆ ಸುಮಾರಾಗಿ ಒಂದೇ ರೀತಿಯ ಹೋಲಿಕೆ ಇದ್ದು, ಇವೆರಡೂ ಸೀರಿಯಲ್ಗಳನ್ನು ಒಂದೇ ಎಪಿಸೋಡ್ನಲ್ಲಿ ಮುಗಿಸೋ ಪ್ಲ್ಯಾನ್ ಇದು. ಏನಿದು ವಿಷ್ಯ?

ಅಮೃತಧಾರೆ ಮತ್ತು ಬ್ರಹ್ಮಗಂಟು ಒಟ್ಟಿಗೇ ಮುಗಿಸೋ ಪ್ಲ್ಯಾನ್?
ಅಮೃತಧಾರೆ ಸೀರಿಯಲ್ ಈಚೆಗಷ್ಟೆ 700 ಕಂತುಗಳನ್ನು ಪೂರೈಸಿದೆ. ಅದೇ ಇನ್ನೊಂದೆಡೆ ಬ್ರಹ್ಮಗಂಟು ಸೀರಿಯಲ್ ಕೂಡ ಶರವೇಗದಿಂದ ಟಿಆರ್ಪಿಯಲ್ಲಿ ಮುನ್ನುಗ್ಗುತ್ತಾ ಸಾಗಿದೆ. ಇವೆರಡು ಸೀರಿಯಲ್ಗಳಲ್ಲಿ ಕೆಲವೊಂದು ಕಾಮನ್ ಕಥೆ ಇದೆ. ಅಮೃತಧಾರೆಯಲ್ಲಿ ಚಿಕ್ಕಮ್ಮ ವಿಲನ್ ಶಕುಂತಲಾಳನ್ನು ಗೌತಮ್ ಕುರುಡಾಗಿ ನಂಬಿದ್ದರೆ, ಬ್ರಹ್ಮಗಂಟುವಿನಲ್ಲಿ ಅತ್ತಿಗೆ ವಿಲನ್ ಸೌಂದರ್ಯಳನ್ನು ನಾಯಕ ಚಿರು ನಂಬಿದ್ದಾನೆ. ಎರಡೂ ಸೀರಿಯಲ್ಗಳಲ್ಲಿ ನಾಯಕಿಯರಿಗೆ ತಮ್ಮ ಗಂಡನ ಬಳಿ ಈ ವಿಲನ್ಗಳ ನಿಜ ಗುಣವನ್ನು ಬಯಲು ಮಾಡುವುದೇ ದೊಡ್ಡ ಸವಾಲಾಗಿದೆ. ಇದಕ್ಕಾಗಿ 2-3 ವರ್ಷ ಸೀರಿಯಲ್ ನಡೆಯುತ್ತಾ ಇದೆ. ಆದರೆ ಇವೆರಡೂ ಸೀರಿಯಲ್ ಒಂದೇ ಎಪಿಸೋಡ್ನಲ್ಲಿ ಅಂತಿಮಗೊಳಿಸಿದ್ರೆ?
ಎರಡೂ ಸೀರಿಯಲ್ ಒಂದೇ ದಿನ ಫಿನಿಷ್?
ಇದೇನು ಅಂತೀರಾ? ಮೊದಲಿಗೆ ಅಮೃತಧಾರೆ ಸೀರಿಯಲ್ ಕುರಿತು ಹೇಳುವುದಾದರೆ, ಮಧ್ಯವಯಸ್ಸಿನ ನಾಯಕ-ನಾಯಕಿ ಜಗಳವಾಡುತ್ತಲೆ ಮದುವೆಯಾಗಿ ಕೊನೆಗೆ ಪ್ರೀತಿಯಲ್ಲಿ ಬಿದ್ದು, ಈಗ ಅವಳಿ ಮಕ್ಕಳ ಅಪ್ಪ-ಅಮ್ಮ ಆಗಿದ್ದಾರೆ. ಸದ್ಯ ಅವಳಿ ಮಕ್ಕಳಲ್ಲಿ ಒಂದು ಮಗುವನ್ನು ಅತ್ತೆ ಶಕುಂತಲಾ ಕಿಡ್ನ್ಯಾಪ್ ಮಾಡಿಸಿದ್ದಾಳೆ. ಆ ಮಗು ಗೌತಮ್ ಕೈಸೇರುವ ಹೊತ್ತಿನಲ್ಲಿ, ಆ ಮಗು ಸಿಕ್ಕ ಬಗ್ಗೆ ಶಕುಂತಲಾಗೆ ಹೇಳಿ ಎಡವಟ್ಟು ಕೂಡ ಮಾಡಿಕೊಂಡಿದ್ದಾನೆ. ಈಗ ಆ ಮಗುವನ್ನು ಶಕುಂತಲಾ ಏನು ಮಾಡುತ್ತಾಳೋ ಎನ್ನುವ ಗಾಬರಿಯಲ್ಲಿ ವೀಕ್ಷಕರು ಇದ್ದಾರೆ.
ಮಗುವನ್ನು ಕೊಲ್ಲಿಸಲು ಶಕುಂತಲಾ ಪ್ಲ್ಯಾನ್
ಅದೇ ಇನ್ನೊಂದೆಡೆ, ತಮ್ಮನ್ನು ಕೊಲ್ಲಲು, ಮಗುವನ್ನು ಕೊಲ್ಲಿಸಲು ಶಕುಂತಲಾ ಮತ್ತು ಜೈದೇವ ಸೇರಿ ಪ್ಲ್ಯಾನ್ ಮಾಡಿರೋ ವಿಷ್ಯ ಭೂಮಿಕಾಗೆ ತಿಳಿದಿದೆ. ಭಾಗ್ಯಮ್ಮಾ ಇದನ್ನು ಹೇಳಿದ್ದಾಳೆ. ಈ ಬಗ್ಗೆ ಭೂಮಿಕಾ ಶಕುಂತಲಾ ಬಳಿ ಹೇಳಿದಾಗ, ಶಕುಂತಲಾ ಯಾವುದೇ ಅಂಜಿಕೆ ಇಲ್ಲದೇ ಎಲ್ಲವನ್ನೂ ಒಪ್ಪಿಕೊಂಡಿದ್ದಾಳೆ. ನಿನ್ನಿಂದ ಏನೂ ಮಾಡಲು ಆಗುವುದಿಲ್ಲ, ಗೌತಮ್ ನಾನು ಸಾಕಿದ ನಾಯಿ, ಅವನು ನಿನ್ನನ್ನು ನಂಬುವುದಿಲ್ಲ ಎಂದು ಹೇಳುವ ಮೂಲಕ ಭೂಮಿಕಾಳಿಂದ ಕಪಾಳಮೋಕ್ಷನೂ ಮಾಡಿಸಿಕೊಂಡು ಆಗಿದೆ.
ಶಕುಂತಲಾ ಮತ್ತು ಜೈದೇವನ ಫೋನ್ ಟ್ರ್ಯಾಪ್
ಮತ್ತೊಂದೆಡೆ ಭೂಮಿಕಾ ಮತ್ತು ಸೃಜನ್ ಸೇರಿ ಶಕುಂತಲಾ ಮತ್ತು ಜೈದೇವನ ಫೋನ್ ಟ್ರ್ಯಾಪ್ ಮಾಡಿದ್ದಾರೆ. ಅವರು ಮಗುವನ್ನು ಕೊಲ್ಲಲು ಮಾಡಿದ ಪ್ಲ್ಯಾನ್ ತಿಳಿದಿದೆ. ಆದರೆ ಅಷ್ಟೊತ್ತಿಗಾಗಲೇ ವಿಲನ್ಗಳಿಗೆ ಈ ವಿಷಯ ತಿಳಿದುಬಿಟ್ಟಿದೆ. ಅಲ್ಲಿಗೆ ಭೂಮಿಕಾ ಪ್ಲ್ಯಾನ್ ಫ್ಲಾಪ್ ಆಗಿದೆ. ಈಗ ಗೌತಮ್ಗೆ ಹೇಗೆ ಹೇಳುವುದು ಎನ್ನುವ ಚಿಂತೆಯಲ್ಲಿ ಇದ್ದಾಳೆ ಅವಳು. ಆದರೂ, ಮೊದಲು ಮಾಡಿದ ಟ್ರ್ಯಾಪ್ ಬಗ್ಗೆ ಗೌತಮ್ಗೆ ವಿಷಯ ತಿಳಿಸಿದ್ದಾಳೆ.
ಶಕುಂತಲಾ ವಿರುದ್ಧ ಸಾಕ್ಷಿ ಬೇಕಿದೆ
ಅಲ್ಲಿ ಜೈದೇವನ ದನಿ ಮಾತ್ರ ಇರೋದ್ರಿಂದ ಶಕುಂತಲಾ ವಿರುದ್ಧ ಸಾಕ್ಷಿ ಇನ್ನೂ ಭೂಮಿಕಾಗಿ ಸಿಕ್ಕಿಲ್ಲ, ಗೌತಮ್ ಕೂಡ ನಂಬುವ ಸ್ಥಿತಿಯಲ್ಲಿ ಇದೆ. ಆದರೆ ಈಗಿರೋ ವಿಷ್ಯ ಏನೆಂದರೆ, ಇನ್ನು ಶಕುಂತಲಾಗೆ ವಿಷ್ಯ ಗೊತ್ತಾಗಲು ಸೀರಿಯಲ್ ಎಷ್ಟು ವರ್ಷ ಎಳೆಯುತ್ತಾರೋ ಗೊತ್ತಿಲ್ಲ.
ಅತ್ತಿಗೆ ವಿರುದ್ಧ ತಿರುಗಿಬಿದ್ದ ದೀಪಾ
ಅದೇ ಇನ್ನೊಂದೆಡೆ, ಬ್ರಹ್ಮಗಂಟು ಸೀರಿಯಲ್ನಲ್ಲಿ ಚಿರುಗೆ ಅತ್ತಿಗೆ ನಿಜ ಗುಣವನ್ನು ಬಯಲು ಮಾಡುವುದು ನಾಯಕಿ ದೀಪಾಗೆ ಕಷ್ಟವಾಗಿದೆ. ಅವಳು ಎಲ್ಲರನ್ನೂ ಕೊಲ್ಲಿಸಲು ಮಾಡಿರುವ ಸಂಚು ದೀಪಾಗೆ ತಿಳಿದಿದ್ದರೂ ಅದಕ್ಕೆ ಸಾಕ್ಷಿ ಇಲ್ಲ. ಇದೀಗ ಮೋಸದಿಂದ ಅರ್ಚನಾಳ ಮದುವೆಯನ್ನು ಯಾವನದ್ದೋ ಜೊತೆ ಮಾಡಿಸಲು ಹೊರಟಿದ್ದಾಳೆ ಸೌಂದರ್ಯ. ಅರ್ಚನಾ ಮದುವೆಯಾಗಬೇಕು ಎಂದಿರೋ ರಾಹುಲ್ಗೆ ಅಪಘಾತ ಮಾಡಿಸಿದ್ದಾಳೆ. ಆದರೆ ಇದಕ್ಕೆ ಸಾಕ್ಷಿ ಇಲ್ಲ.
ರ್ಚನಾ ಮತ್ತು ರಾಹುಲ್ನನ್ನು ಮದುವೆ
ಏನೇ ಆದರೂ ಅರ್ಚನಾ ಮತ್ತು ರಾಹುಲ್ನನ್ನು ಮದುವೆ ಮಾಡಿಸುವುದಾಗಿ ಸೌಂದರ್ಯಗೆ ದೀಪಾ ಸವಾಲು ಹಾಕಿದ್ರೆ, ಅತ್ತ ಸೌಂದರ್ಯ ಈ ಮದುವೆ ಆಗಲು ಬಿಡುವುದಿಲ್ಲ. ಅರ್ಚನಾ ಮದುವೆ ಬೇರೆಯವರ ಜೊತೆ ಮಾಡಿಸುವುದಾಗಿ ಹೇಳಿದ್ದಾಳೆ. ಒಟ್ಟಿನಲ್ಲಿ ಅಮೃತಧಾರೆ ಮತ್ತು ಬ್ರಹ್ಮಗಂಟುವಿನಲ್ಲಿ ವಿಲನ್ಗಳ ನಿಜ ರೂಪ ಬಯಲಾಗಬೇಕಿದೆ ಅಷ್ಟೇ.
ಒಟ್ಟಿಗೇ ಮುಗಿಸಲು ಪ್ಲ್ಯಾನ್ ಹೇಳಿದ್ದಾರೆ ನೆಟ್ಟಿಗರು
ಆದರೆ ಈ ಎರಡೂ ಸೀರಿಯಲ್ಗಳು ಒಟ್ಟಿಗೇ ಮುಗಿಸಲು ಪ್ಲ್ಯಾನ್ ಹೇಳಿದ್ದಾರೆ ನೆಟ್ಟಿಗರು. ಅಷ್ಟಕ್ಕೂ ಈ ಮೊಬೈಲ್ ಯುಗದಲ್ಲಿ ನಾಯಕಿಯರು ವಿಲನ್ಗಳ ಬಣ್ಣ ಬಯಲು ಮಾಡಲು ಸಾಕ್ಷಿ ಹುಡುಕುತ್ತಿರೋದಕ್ಕೆ ಸಾಕಷ್ಟು ಸೀರಿಯಲ್ಗಳು ಟ್ರೋಲ್ಗೆ ಒಳಗಾಗುತ್ತಲೇ ಇರುತ್ತವೆ. ಕೈಯಲ್ಲಿ ಸದಾ ಮೊಬೈಲ್ ಹಿಡಿದು ಸಾಗುವ ನಾಯಕಿಯರು, ವಿಲನ್ಗಳ ಜೊತೆ ಮಾತನಾಡುವುದನ್ನು ರೆಕಾರ್ಡ್ ಮಾಡಿಕೊಂಡು ಗಂಡನಿಗೆ ತೋರಿಸಿದ್ರೆ ಇನ್ಯಾವ ಸಾಕ್ಷಿಯೂ ಬೇಡ್ವೇ ಬೇಡ. ಅಲ್ಲಿಯೇ ವಿಲನ್ಗಳು ತಮ್ಮ ತಪ್ಪನ್ನು ಹೇಳಿಕೊಂಡಿರುತ್ತಾರೆ.
ಮೊಬೈಲ್ ಫೋನ್ ಇದೆಯಲ್ವಾ?
ತಾವು ಮಾಡ್ತಿರೋ ಕೆಟ್ಟ ಕೆಲಸಗಳ ಬಗ್ಗೆ ಹೇಳಿರ್ತಾರೆ. ಆದರೆ ನಾಯಕಿಯರು ಸಾಕ್ಷಿ ಹುಡುಕಿಕೊಂಡು ಏನೇನೋ ಸರ್ಕಸ್ ಮಾಡುವುದು ಮಾತ್ರ ಸ್ವಲ್ಪ ಸತ್ಯಕ್ಕೆ ದೂರವಾದ ವಿಷ್ಯವೇ ಆಗಿದೆ. ಇದೇ ಕಾರಣಕ್ಕೆ ಎರಡೂ ಸೀರಿಯಲ್ಗಳಲ್ಲಿ ವಿಲನ್ಗಳ ಮಾತನ್ನು ರಿಕಾರ್ಡ್ ಮಾಡಿಕೊಂಡು ಗಂಡಂದಿರಿಗೆ ತೋರಿಸಿ ಒಂದೇ ದಿನ ಮುಗಿಸೋ ಪ್ಲ್ಯಾನ್ ಹೇಳ್ತಿದ್ದಾರೆ ನೆಟ್ಟಿಗರು. ಹೇಗಿದೆ ಈ ಪ್ಲ್ಯಾನ್?