ಜಯದೇವ್‌ ಲೇಆಫ್‌ ನೆಪದಲ್ಲಿ ಆನಂದ್‌ನನ್ನು ಕಂಪೆನಿಯಿಂದ ಹೊರಹಾಕಿದ್ದಾನೆ. ಗೆಳೆಯ ಗೌತಮ್‌ಗೆ ವಿದೇಶಿ ಕಂಪೆನಿಯ ಆಫರ್‌ ನೆಪ ಹೇಳಿ ಆನಂದ್‌ ಬೇರೆ ಕೆಲಸಕ್ಕೆ ಹೋಗುತ್ತಿದ್ದಾನೆ. ಇದರಿಂದ ಗೌತಮ್‌ ಬೇಸರಗೊಂಡಿದ್ದಾನೆ. ಆನಂದ್‌ ಪಾತ್ರ ಮುಕ್ತಾಯವಾಗುತ್ತಿದೆಯೇ ಅಥವಾ ಹೊಸ ತಿರುವು ಇದೆಯೇ ಎಂಬುದು ತಿಳಿದಿಲ್ಲ. ಗೌತಮ್‌ ಸತ್ಯ ತಿಳಿದು ಜಯದೇವ್‌ಗೆ ತಕ್ಕ ಪಾಠ ಕಲಿಸಬಹುದು.

ʼಅಮೃತಧಾರೆʼ ಧಾರಾವಾಹಿಯಲ್ಲಿ ಲೇಆಫ್‌ ಮಾಡಿ ಆನಂದ್‌ನನ್ನು ಕಂಪೆನಿಯಿಂದ ಹೊರಹಾಕೋದು ಜಯದೇವ್‌ ಪ್ಲ್ಯಾನ್‌ ಆಗಿತ್ತು. ಅದನ್ನು ಅವನು ಯಶಸ್ವಿಯಾಗಿ ನಿರ್ವಹಿಸಿದ್ದಾನೆ. ಜಯದೇವ್‌ ಪ್ಲ್ಯಾನ್‌ ಏನು ಎನ್ನೋದು ಆನಂದ್‌ಗೆ ಗೊತ್ತಿತ್ತು. ಆದರೂ ಕೂಡ ಅವನು ತನ್ನ ಗೆಳೆಯ ಗೌತಮ್‌ಗೆ ಹೇಳದೆ, ಹೊಸ ಕಂಪೆನಿಗೆ ಜಂಪ್‌ ಮಾಡಲು ನಿರ್ಧಾರ ಮಾಡಿದ್ದಾನೆ.

ವೀಕ್ಷಕರಿಗೆ ಬೇಸರ! 
ಆನಂದ್‌ಗೆ ಒಳ್ಳೆಯ ಸಂಬಳ ಇದೆ ಎನ್ನೋದು ಜಯದೇವ್‌ಗೆ ಗೊತ್ತಿತ್ತು. ಇದನ್ನೇ ಬಂಡವಾಳವಾಗಿಟ್ಟುಕೊಂಡ ಜಯದೇವ್‌ ಲೇಆಫ್‌ ಹೆಸರಿನಲ್ಲಿ ಆನಂದ್‌ನನ್ನು ಮನೆಗೆ ಕಳಿಸಿದ್ದಾನೆ. ಇನ್ನು ಗೌತಮ್‌ ಬಳಿ ಬಂದ ಆನಂದ್‌, “ನನಗೆ ವಿದೇಶಿ ಕಂಪೆನಿಯಿಂದ ಆಫರ್‌ ಇದೆ, ನಿನ್ನ ಕಂಪೆನಿಯಿಂದ ಬೇರೆ ಕಂಪೆನಿಗೆ ಹೋಗ್ತೀನಿ” ಅಂತ ಹೇಳಿದ್ದಾನೆ. ತನ್ನ ಗೆಳೆಯ ನನ್ನನ್ನು ಬಿಟ್ಟು ಬೇರೆ ಕಡೆಗೆ ಹೋಗ್ತಿದ್ದಾನೆ ಅಂತ ಗೌತಮ್‌ ಬೇಸರ ಮಾಡಿಕೊಂಡಿದ್ದಾನೆ. ಗೆಳೆಯರಿಬ್ಬರು ದೂರ ಆಗ್ತಿರೋದು ನಿಜಕ್ಕೂ ವೀಕ್ಷಕರಿಗೆ ಬೇಸರ ಆಗ್ತಿದೆ.

ನಿಜಕ್ಕೂ ಈ ಧಾರಾವಾಹಿಯಲ್ಲಿ ಏನಾಗಲಿದೆ? 
ಧಾರಾವಾಹಿಯಲ್ಲಿ ನಿಜಕ್ಕೂ ಸಹಜವಾಗಿ ಈ ರೀತಿ ಟ್ವಿಸ್ಟ್‌ ಬಂದಿದೆಯಾ ಅಥವಾ ಆನಂದ್‌ ಪಾತ್ರ ಮುಕ್ತಾಯ ಆಗ್ತಿದೆ ಎಂದು ಈ ರೀತಿ ಮಾಡಲಾಗ್ತಿದೆಯಾ ಎಂಬ ಅನುಮಾನ ಶುರು ಆಗಿದೆ. ಸಹಜವಾಗಿ ಪಾತ್ರ ಮುಗಿಸುವಾಗ ಅಥವಾ ಪಾತ್ರಧಾರಿಯೇ ಧಾರಾವಾಹಿಯಿಂದ ಹೊರಗಡೆ ಬರ್ತೀನಿ ಎಂದಾಗ ಈ ರೀತಿ ಮಾಡಿ ಪಾತ್ರಕ್ಕೆ ಅಂತ್ಯ ಹೇಳಲಾಗುತ್ತದೆ. ಈಗ ಆನಂದ್‌ ಪಾತ್ರಕ್ಕೂ ಇದೇ ರೀತಿ ವಿದಾಯ ಹೇಳಲಾಗುವುದೇ ಎಂಬ ಅನುಮಾನ ಶುರುವಾಗಿದೆ. ಮುಂದಿನ ದಿನಗಳಲ್ಲಿ ಆನಂದ್‌ ಅವರು ಈ ಧಾರಾವಾಹಿಯಿಂದ ಹೊರಗಡೆ ಬರುತ್ತಾರಾ? ಅಥವಾ ಇನ್ನೇನಾದರೂ ಟ್ವಿಸ್ಟ್‌ ಕಾದಿದೆಯಾ ಎಂಬ ಅನುಮಾನ ಶುರು ಆಗಿದೆ. 

ಆನಂದ್‌ ತನ್ನ ಕಂಪೆನಿ ಬಿಟ್ಟು ಬೇರೆ ಕಡೆಗೆ ಹೋಗ್ತಿದ್ದಾನೆ ಅಂತ ತಿಳಿದ ಗೌತಮ್‌ ಇದಕ್ಕೆ ಹಿಂದಿನ ಕಾರಣ ಏನು ಎಂದು ಕಂಡುಹಿಡಿಯಬಹುದು. ಆಗ ಇದಕ್ಕೆಲ್ಲ ಹಿಂದಿನ ರೂವಾರಿ ಜಯದೇವ್‌ ಎನ್ನೋದು ಗೊತ್ತಾದರೆ ತಕ್ಕ ಶಾಸ್ತಿಯನ್ನು ಕೂಡ ಮಾಡಬಹುದು. ಇನ್ನು ಗಂಡ ಜಯದೇವ್‌ಗೆ ತಕ್ಕ ಬುದ್ಧಿ ಕಲಿಸಲು ಮಲ್ಲಿ ಕೂಡ ಕಾಯುತ್ತಿದ್ದಾಳೆ. ಒಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಏನೆಲ್ಲ ಆಗಲಿದೆ ಎಂದು ಕಾದು ನೋಡಬೇಕಾಗಿದೆ. 


ʼಸಿಲ್ಲಿ ಲಲ್ಲಿʼ ಧಾರಾವಾಹಿ ಮೂಲಕ ಜನರ ಮನಸ್ಸಿಗೆ ಹತ್ತಿರವಾಗಿದ್ದ ಆನಂದ್‌ ಅವರು ಬಹುಕಾಲದ ಬಳಿಕ ಈ ಧಾರಾವಾಹಿಯಲ್ಲಿ ನಟಿಸಿದ್ದರು. ಅಷ್ಟೇ ಅಲ್ಲದೆ ʼನನ್ನಮ್ಮ ಸೂಪರ್‌ ಸ್ಟಾರ್‌ʼ ಶೋನಲ್ಲಿ ಇವರ ಮಗ ದುಷ್ಯಂತ, ತನ್ನ ತಾಯಿ ಚೈತ್ರಾ ಜೊತೆ ಭಾಗವಹಿಸಿದ್ದರು. ಇನ್ನು ಜೋಡಿ ನಂ 1 ಸೀಸನ್‌ 2 ಶೋನಲ್ಲಿ ಚೈತ್ರಾ-ಆನಂದ್‌ ಅವರು ಭಾಗವಹಿಸಿದ್ದರು. ಈಗ ದುಷ್ಯಂತ ʼನಿನಗಾಗಿʼ, ʼಗೌರಿ ಶಂಕರʼ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಧಾರಾವಾಹಿ ಕಥೆ ಏನು?
ಗೌತಮ್-ಭೂಮಿಕಾ ಮದುವೆಯಾಗಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಗೌತಮ್‌ಗೆ ಶಕುಂತಲಾ ಎಂಬ ಮಲತಾಯಿ ಇದ್ದಾಳೆ. ಇವಳಿಗೆ ನಾಲ್ವರು ಮಕ್ಕಳಿದ್ದಾರೆ. ಇನ್ನೊಂದು ಕಡೆ ಗೌತಮ್‌ ಆಸ್ತಿ ಹೊಡೆಯಲು ಶಕುಂತಲಾ, ಜಯದೇವ್‌ ಪ್ಲ್ಯಾನ್‌ ಮಾಡುತ್ತಿದ್ದಾನೆ. ಇನ್ನು ಗೌತಮ್‌ಗೆ ಬಲಗೈ ಬಂಟನಾಗಿರೋ ಆನಂದ್‌ನನ್ನು ಮೊದಲು ಮುಗಿಸಬೇಕು ಅಂತ ಜಯದೇವ್‌ ಪ್ಲ್ಯಾನ್‌ ಮಾಡಿ ಸೋತಿದ್ದನು. ಈಗ ಕಂಪೆನಿಯಿಂದ ಅವನನ್ನು ಹೊರಗಡೆ ಇಟ್ಟಿದ್ದಾನೆ. ಆದರೆ ಆನಂದ್‌ ಮಾತ್ರ ಸುಮ್ಮನೆ ಇರೋದು ಡೌಟ್‌, ಅವನು ಏನಾದರೂ ಪ್ಲ್ಯಾನ್‌ ಮಾಡಬಹುದು.

ಪಾತ್ರಧಾರಿಗಳು
ಗೌತಮ್-‌ ರಾಜೇಶ್‌ ನಟರಂಗ
ಭೂಮಿಕಾ- ಛಾಯಾ ಸಿಂಗ್‌
ಶಕುಂತಲಾ- ವನಿತಾ ವಾಸು
ಜಯದೇವ್-‌ ರಾಣವ್‌