- Home
- Entertainment
- TV Talk
- ಭಾಗ್ಯ ಮಗಳು ತನ್ವಿ ರಿಯಲ್ ಲೈಫಲ್ಲಿ ತುಂಬಾನೆ ಬುದ್ಧಿವಂತೆ… ಪಿಯುಸಿಯಲ್ಲಿ ಡಿಸ್ಟಿಂಕ್ಷನ್ನಲ್ಲಿ ಪಾಸ್!
ಭಾಗ್ಯ ಮಗಳು ತನ್ವಿ ರಿಯಲ್ ಲೈಫಲ್ಲಿ ತುಂಬಾನೆ ಬುದ್ಧಿವಂತೆ… ಪಿಯುಸಿಯಲ್ಲಿ ಡಿಸ್ಟಿಂಕ್ಷನ್ನಲ್ಲಿ ಪಾಸ್!
ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಭಾಗ್ಯ ಮಗಳು ತನ್ವಿ ಪಾತ್ರದಲ್ಲಿ ನಟಿಸುತ್ತಿರುವ ನಟಿ ಅಮೃತ ಗೌಡ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ಪಾಸ್ ಆಗಿದ್ದಾರೆ.

ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಭಾಗ್ಯಲಕ್ಷ್ಮಿ (Bhagyalakshmi). ಈ ಧಾರಾವಾಹಿಯಲ್ಲಿ ಭಾಗ್ಯ ಮತ್ತು ತಾಂಡವ್ ಮುದ್ದಿನ ಮಗಳು ತನ್ವಿ, ಸೀರಿಯಲ್ ನಲ್ಲಿ ಓದೋದಕ್ಕೆ ಸ್ವಲ್ಪ ಕಷ್ಟ ಪಡ್ತಾ ಇದ್ಲು. ಆದ್ರೆ ರಿಯಲ್ ಲೈಫಲ್ಲಿ ಆಕೆ ತುಂಬಾನೆ ಬುದ್ಧಿವಂತೆ.
ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಈಗಷ್ಟೇ ಅಮ್ಮನ ಜೊತೆ ಹತ್ತನೇ ತರಗತಿ ಓದಿ ಮುಗಿಸಿರುವ ತನ್ವಿ, ಸೀರಿಯಲ್ ನಲ್ಲಿ ಇದೀಗ ಪ್ರಥಮ ಪಿಯುಸಿ ವಿದ್ಯಾರ್ಥಿನಿ. ಆದರೆ ರಿಯಲ್ ಆಗಿ ತನ್ವಿ ಅಂದ್ರೆ ಅಮೃತ ಗೌಡ ದ್ವಿತೀಯ ಪಿಯುಸಿ ಓದುತ್ತಿದ್ದಾರೆ.
ಇದೀಗ ದ್ವಿತೀಯ ಪಿಯುಸಿ ರಿಸಲ್ಟ್ ಬಂದಿದ್ದು, ಪಿಯುಸಿಯಲ್ಲಿ ವಾಣಿಜ್ಯ ವಿದ್ಯಾರ್ಥಿನಿಯಾಗಿರುವ ಅಮೃತ ಗೌಡ (Amrutha Gowda) 600ಕ್ಕೆ 543 ಅಂಕ ಗಳಿಸಿ, ಡಿಸ್ಟಿಂಕ್ಷನ್ ನಲ್ಲಿ ಪಾಸ್ ಆಗಿದ್ದಾರೆ. ತಮ್ಮ ಮಾರ್ಕ್ ಲಿಸ್ಟನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಅಮೃತ ವರ್ಷಿಣಿ (Amrutha Varshini K) ಎಂದು ಇವರ ಪೂರ್ತಿ ಹೆಸರಾಗಿದ್ದು, ಕನ್ನಡದಲ್ಲಿ 97, ಇಂಗ್ಲಿಷ್ ನಲ್ಲಿ 81 ಮಾರ್ಕ್ಸ್ ಗಳನ್ನು ಪಡೆದಿದ್ದಾರೆ. ಅಲ್ಲದೇ ಎಕನಾಮಿಕ್ಸ್ 93, ಬ್ಯುಸಿನೆಸ್ ಸ್ಟಡೀಸ್ 83, ಅಕೌಂಟೆನ್ಸಿ 94, ಸ್ಟಾಟಿಸ್ಟಿಕ್ಸ್ 95 ಅಂಕಗಳನ್ನು ಪಡೆದಿದ್ದಾರೆ.
ಆ ಮೂಲಕ ಒಟು 543 ಅಂಕಗಳನ್ನು ಪಡೆದು 91ಶೇಕಡ ಪಡೆದು ಡಿಸ್ಟಿಂಕ್ಷನ್ ನಲ್ಲಿ (passed with distinction) ದ್ವಿತೀಯ ಪಿಯುಸಿ ಪಾಸ್ ಆಗಿದ್ದಾರೆ. ಶೂಟಿಂಗ್ ಬ್ಯುಸಿ ಶೆಡ್ಯೂಲ್ ಮಧ್ಯೆ, ಚೆನ್ನಾಗಿ ಓದಿ, ಡಿಸ್ಟಿಂಕ್ಷನ್ ಪಡೆದಿರುವ ತನ್ವಿ ಆಲಿಯಾಸ್ ಅಮೃತಾ ಗೌಡರನ್ನು ವೀಕ್ಷಕರು ಮೆಚ್ಚಿಕೊಂಡಿದ್ದು ಶುಭಾಶಯ ತಿಳಿಸಿದ್ದಾರೆ.
ಧಾರಾವಾಹಿ ವಿಷ್ಯಕ್ಕೆ ಬಂದ್ರೆ ಇತ್ತೀಚೆಗಷ್ಟೇ ತನ್ವಿ ಅಮ್ಮ, ಅಪ್ಪ ಹೇಳಿದ ಮಾತನ್ನು ತಿರಸ್ಕರಿಸಿ, ಫ್ರೆಂಡ್ಸ್ ಜೊತೆ ರೆಸಾರ್ಟ್ ಗೆ ತೆರಳಿ, ಅಲ್ಲಿ ಪೊಲೀಸರ ಕೈಗೆ ಸಿಕ್ಕಿ ಬಿದ್ದು, ಭಾಗ್ಯ ಪೊಲೀಸರ ಬಳಿ ಮಾತನಾಡಿ ಕರೆದುಕೊಂಡು ಬಂದಿದ್ದಳು. ಇನ್ನಾದರೂ ತನ್ವಿ ತನ್ನ ತಪ್ಪನ್ನು ತಿದ್ದಿ, ಶ್ರೇಷ್ಠಾ ಕುತಂತ್ರಕ್ಕೆ ಬಲಿಯಾಗದೆ, ಅಮ್ಮನ ಕಷ್ಟಕ್ಕೆ ಮರುಗುತ್ತಾಳ ಅನ್ನೋದನ್ನು ಕಾದು ನೋಡಬೇಕು.