ʼಅಮೃತಧಾರೆʼ ಧಾರಾವಾಹಿಯಲ್ಲಿ ಗೌತಮ್‌ಗೆ ಮಹಾಸತ್ಯವೊಂದು ಗೊತ್ತಾಗಿದೆ. ಜಯದೇವ್ ಲಾಟರಿ ಹೊಡೆದ ಅಂತ ವೀಕ್ಷಕರು ಅಂದುಕೊಳ್ಳುತ್ತಿದ್ದಾರೆ.
ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ‘ಅಮೃತಧಾರೆ’ ಧಾರಾವಾಹಿಯಲ್ಲಿ ಗೌತಮ್ ದಿವಾನ್‌ರಿಂದಲೇ ನನ್ನ ಮಗಳನ್ನು ಕಳೆದುಕೊಂಡೆ ಅಂತ ರಾಜೇಂದ್ರ ಭೂಪತಿ ಕೆಂಡಕಾರುತ್ತಿದ್ದಾನೆ. ಈಗಾಗಲೇ ಗೌತಮ್ ಕುಟುಂಬಕ್ಕೆ ಅವನು ಸಿಕ್ಕಾಪಟ್ಟೆ ಹಿಂಸೆ ಕೊಟ್ಟಿದ್ದಾನೆ, ಜಯದೇವ್, ಜೀವನನ್ನು ತನ್ನತ್ತ ಸೆಳೆದು, ಈ ಮೂಲಕ ಇನ್ನೊಂದಿಷ್ಟು ತೊಂದರೆ ಕೊಡಲು ರೆಡಿಯಾಗಿದ್ದಾನೆ.
ತಲೆಕೆಡಿಸಿಕೊಂಡ ಗೌತಮ್ ದಿವಾನ್!
ಮಲ್ಲಿ ತನ್ನ ತಾತನ ಮನೆಯಲ್ಲಿದ್ದಾಳೆ. ಮಲ್ಲಿಯನ್ನು ನೋಡಲು ಗೌತಮ್ ದಿವಾನ್ ಬಂದಿದ್ದನು. ಆಗ ತಾತ ರಾಜೇಂದ್ರ ಭೂಪತಿ ಗಂಡ-ಹೆಂಡ್ತಿ ಫೋಟೋ ಜೊತೆಗೆ ಅವಳ ಮಗಳ ಫೋಟೋವನ್ನು ಕೂಡ ನೋಡುತ್ತಿದ್ದರು. ಅದೇ ಟೈಮ್‌ಗೆ ಗೌತಮ್ ಎಂಟ್ರಿಯಾಯ್ತು. ತಾತ ತಕ್ಷಣ ಆ ಫೋಟೋಗಳನ್ನು ಬಚ್ಚಿಟ್ಟಿದ್ದನು. ಗೌತಮ್ ಆ ಫೋಟೋಗಳನ್ನು ನೋಡಿ ಶಾಕ್ ಆಗಿದ್ದಾನೆ. ರಾಜೇಂದ್ರ ಭೂಪತಿ ಮನೆ ಫೋಟೋ ಇಲ್ಯಾಕೆ ಬಂತು ಅಂತ ಗೌತಮ್ ತಲೆಕೆಡಿಸಿಕೊಂಡಿದ್ದಾನೆ.
ಮತ್ತೆ ಪತ್ತೆದಾರಿಕೆ ಶುರು ಮಾಡಿದ ಭೂಮಿ... ಲೇಡಿ ಜೇಮ್ಸ್ ಬಾಂಡ್ ಬ್ಯಾಕ್... ಇನ್ನು ಶಕುಂತಲಾಗೆ ಉಳಿಗಾಲವಿಲ್ಲ!
ಮಲ್ಲಿ ಸತ್ಯ ಗೊತ್ತಾದರೆ ಏನು ಕಥೆ?
ಗೌತಮ್ ಸತ್ಯಾಂಶ ತಿಳಿದ ಬಳಿಕ ಏನು ಮಾಡ್ತಾನೆ ಅಂತ ಕಾದು ನೋಡಬೇಕಿದೆ. ಮನೆಕೆಲಸದವಳು ನನ್ನ ಸೊಸೆಯಾಗೋದು ನನಗೆ ಇಷ್ಟ ಇಲ್ಲ ಅಂತ ಶಕುಂತಲಾ ಹೇಳಿದರೂ ಕೂಡ ಯಾರೂ ಕೇಳಲು ರೆಡಿ ಇರಲಿಲ್ಲ. ಮದುವೆಗೆ ಮುನ್ನವೇ ಮಲ್ಲಿಯನ್ನು ಗರ್ಭಿಣಿಯನ್ನಾಗಿ ಮಾಡಿದ್ದಕ್ಕೆ ಮಲ್ಲಿ-ಜಯದೇವ್ ಮದುವೆ ಆಯ್ತು. ಮದುವೆ ಬಳಿಕವೂ ಮಲ್ಲಿಯನ್ನು ಜಯದೇವ್, ಶಕುಂತಲಾ ಚೆನ್ನಾಗಿ ನೋಡಿಕೊಳ್ಳಲಿಲ್ಲ, ಕೊನೆಗೂ ಮಲ್ಲಿ ಮಗು ಸತ್ತು ಹೋಯ್ತು. ಈಗ ರಾಜೇಂದ್ರ ಭೂಪತಿ ಮಗಳು ಮಲ್ಲಿ ಅಂತ ಗೊತ್ತಾದರೆ ಅವಳ ಸ್ಥಾನ ಸಿಗುವುದೋ ಏನೋ!
ವೀಕ್ಷಕರ ಕಾಮೆಂಟ್!
ಈ ಎಪಿಸೋಡ್ ಸಾಕಷ್ಟು ಕುತೂಹಲ ಮೂಡಿಸಿದ್ದು, ಅನೇಕರು ಸೋಶಿಯಲ್ ಮೀಡಿಯಾದಲ್ಲಿ ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. “ವಿಲನ್ ಅಂಕಲ್ ಅಳಿಯ ಆಗ್ಬಿಟ್ಟ ಜೈದೇವ್ , ಅಂತು ನಮ್ಮ ಜೆಡಿ ಭೂಪತಿ ಸಾಮ್ರಾಜ್ಯಕ್ಕೆ ಅಧಿಪತಿ ಆಗ್ತಾನೆ, ವಾವ್ ಟ್ವಿಸ್ಟ್ ಮಾತ್ರ ಸಖತ್, ಪರ್ವಾಗಿಲ್ಲವೇ ನಮ್ ಜೆಡಿ ಸರಿಯಾಗಿರೋದನ್ನೇ ಆಯ್ಕೆ ಮಾಡಿದ್ದಾನೆ” ಎಂದು ವೀಕ್ಷಕರು ಕಾಮೆಂಟ್ ಮಾಡಿದ್ದಾರೆ.
'ಅಮೃತಧಾರೆ' ಶೂಟಿಂಗ್ ವೇಳೆ ಭೂಮಿಕಾ ಸೀರೆಗೆ ಬೆಂಕಿ! ಸೆಟ್ನಲ್ಲಿ ಆಗಿದ್ದೇನು? ತೆರೆಮರೆ ಕಥೆ ಏನು?
ಕಥೆ ಏನು?
ಗೌತಮ್ ದಿವಾನ್‌ಗೆ ಶಕುಂತಲಾ ಎಂಬ ಮಲತಾಯಿ ಇದ್ದಾಳೆ. ಈ ಮಹಾತಾಯಿಗೆ ನಾಲ್ವರು ಮಕ್ಕಳು. ಗೌತಮ್ ಆಸ್ತಿ ಹೊಡೆಯಬೇಕು ಅಂತ ಶಕುಂತಲಾ ಪ್ಲ್ಯಾನ್ ಮಾಡುತ್ತಿದ್ದಾಳೆ. ಅವಳ ಯೋಚನೆಯ ವಿರುದ್ಧವಾಗಿ ಗೌತಮ್-ಭೂಮಿಕಾ ಮದುವೆ ಆಯ್ತು. ಈಗ ಶಕುಂತಲಾ ನಾಟಕವನ್ನು ಭೂಮಿಕಾ ಹೇಗೆ ಕಂಡುಹಿಡಿಯುತ್ತಾಳೆ ಅಂತ ಕಾದು ನೋಡಬೇಕಿದೆ.
ಪಾತ್ರಧಾರಿಗಳು
ಗೌತಮ್ ಪಾತ್ರದಲ್ಲಿ ರಾಜೇಶ್ ನಟರಂಗ, ಭೂಮಿಕಾ ಪಾತ್ರದಲ್ಲಿ ಛಾಯಾ ಸಿಂಗ್, ಶಕುಂತಲಾ ಪಾತ್ರದಲ್ಲಿ ವನಿತಾ ವಾಸು ಅವರು ನಟಿಸುತ್ತಿದ್ದಾರೆ.
