ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಅಮೃತಧಾರೆʼ ಧಾರಾವಾಹಿಯಲ್ಲಿ ಗೌತಮ್‌ ಹಾಗೂ ಮಧುರಾ ಮದುವೆ ನಿಂತಿದೆ. ಕೊನೆಗೂ ಭೂಮಿಕಾ ಟೀಚರ್‌ಗೆ ಗೌತಮ್‌ ತಾಳಿ ಕಟ್ಟಿದ್ದಾನೆ. ಈಗ ಭೂಮಿಕಾ ಗುಡ್‌ನ್ಯೂಸ್‌

ʼಅಮೃತಧಾರೆʼ ಧಾರಾವಾಹಿಯಲ್ಲಿ ಭೂಮಿಕಾಗೆ ಮಗು ಆಗಲ್ಲ ಅಂತ ಮಧುರಾ ಜೊತೆ ಗೌತಮ್‌ ಮದುವೆ ಮಾಡಿಸಲು ಶಕುಂತಲಾ ಎಲ್ಲ ತಯಾರಿ ಮಾಡಿಕೊಂಡಿದ್ದರು. ಆದರೆ ಕೊನೆ ಗಳಿಗೆಯಲ್ಲಿ ಗೌತಮ್‌, ಮಧುರಾ ನಾಟಕ ಮಾಡಿ ಈ ಮದುವೆ ಮುರಿದಿದ್ದಾರೆ. ಆದರೆ ಗೌತಮ್‌ ಮಾತ್ರ ಮತ್ತೆ ಭೂಮಿಕಾಗೆ ತಾಳಿ ಕಟ್ಟಿದ್ದಾನೆ.

ಭೂಮಿಕಾಗೆ ತಾಳಿ ಕಟ್ಟಿದ ಗೌತಮ್!‌ 
ಪುರೋಹಿತರು ತಾಳಿ ಕಟ್ಟಿ ಅಂತ ಹೇಳಿದಾಗ ಗಂಡ ನನ್ನ ಕೈತಪ್ಪಿ ಹೋಗ್ತಿದ್ದಾನೆ, ನನ್ನಿಂದ ದೂರ ಆಗ್ತಿದ್ದಾನೆ ಅಂತ ಬೇಸರದಲ್ಲಿ ಭೂಮಿಕಾ ಕಣ್ಣು ಮುಚ್ಚಿಕೊಂಡು, ತಲೆ ತಗ್ಗಿಸಿ ನಿಂತಿದ್ದಳು. ಭೂಮಿಕಾ ತಂದೆ-ತಾಯಿ, ತಮ್ಮ-ತಮ್ಮನ ಹೆಂಡ್ತಿ, ಪಾರ್ಥ, ಅಜ್ಜಿ ಬಿಟ್ಟು ಎಲ್ಲರೂ ಈ ಮದುವೆ ಆಗಲಿ ಅಂತ ಆಶಯಪಡುತ್ತಿದ್ದರು. ಆದರೆ ಗೌತಮ್‌ ಮಾತ್ರ ತಾಳಿ ಕಟ್ಟುವ ಸಮಯದಲ್ಲಿ ಹಸೆಮಣೆಯಿಂದ ಎದ್ದು ಭೂಮಿಕಾ ಇದ್ದ ಜಾಗಕ್ಕೆ ಹೋಗಿ ಅವಳಿಗೆ ತಾಳಿ ಕಟ್ಟಿದ್ದಾನೆ. ಗೌತಮ್‌ ಈ ರೀತಿ ಮಾಡ್ತಾನೆ ಅಂತ ಯಾರೂ ಊಹಿಸಿರಲಿಲ್ಲ. ಶಕುಂತಲಾ, ಲಕ್ಷ್ಮೀಕಾಂತ್‌, ಜಯದೇವ್‌, ಅಪೇಕ್ಷಾಗೆ ಶಾಕ್‌ ಆದರೆ ಉಳಿದವರೆಲ್ಲ ಫುಲ್‌ ಖುಷಿಯಾಗಿದ್ದಾರೆ. 

ಅಮೃತಧಾರೆ ಧಾರಾವಾಹಿ: ಭೂಮಿಕಾಗೆ ಮೋಸಗಾತಿ ಎಂದ ಗೌತಮ್;‌ ತ್ಯಾಗಮಯಿ ಪತ್ನಿಗೆ ಇಂಥ ಮಾತು ಹೇಳೋದಾ?

ಗೌತಮ್‌ ಏನು ಹೇಳುತ್ತಾರೆ?
“ಈ ಜನ್ಮಕ್ಕಲ್ಲ, ಮುಂದಿನ ಏಳು ಜನ್ಮಕ್ಕೆ ನನಗೆ ಭೂಮಿಕಾರೇ ಪತ್ನಿ. ನನ್ನ ಪತ್ನಿ ಜಾಗವನ್ನು ನಾನು ಭೂಮಿಕಾಗೆ ಬಿಟ್ಟು ಬೇರೆ ಯಾರಿಗೂ ಬಿಟ್ಟುಕೊಡೋದಿಲ್ಲ. ಮಗು ಆಗೋದಿಲ್ಲ ಅಂತ ಬೇರೆ ಮದುವೆಯಾದರೆ ನಮ್ಮ ಸಂಬಂಧಕ್ಕೆ ಅರ್ಥ ಇರೋದಿಲ್ಲ. ನಮ್ಮದು ಗಂಡ-ಹೆಂಡತಿ ಸಂಬಂಧ. ಮಗು ಬೇಕು ಎನ್ನೋದು ನಾನು ಒಪ್ತೀನಿ, ಇಂದು ಇದಕ್ಕೆ ಸಾಕಷ್ಟು ದಾರಿಗಳಿವೆ. ತಂತ್ರಜ್ಞಾನ ಮುಂದುವರೆದಿದಿದೆ, ಹೀಗಾಗಿ ನಾವು ಸರೋಗಸಿ ಮೊರೆ ಹೋಗೋಣ” ಎಂದು ಗೌತಮ್‌ ಹೇಳಿದ್ದಾನೆ.

'ನಂಗೆ ಬ್ರೇಕಪ್‌ ಆಗಿರೋದು ಸತ್ಯ': ಅಣ್ಣಯ್ಯ ಧಾರಾವಾಹಿ ನಟ ವಿಕಾಶ್‌ ಉತ್ತಯ್ಯ

ಗೌತಮ್-ಮಧುರಾ ನಾಟಕ! 
ಗೌತಮ್‌ ಮಾತು ಕೇಳಿ ಶಕುಂತಲಾ ಟೀಂಗೆ ಬೇಸರ ಆಗಿದೆ. ನನ್ನ ಅಳಿಯ ಮಗಳನ್ನು ಇಷ್ಟು ಪ್ರೀತಿ ಮಾಡ್ತಾನೆ ಅಂತ ತಿಳಿದು ಭೂಮಿ ತಂದೆ-ತಾಯಿ ಖುಷಿಪಟ್ಟಿದ್ದಾರೆ. ಇನ್ನು ಮಧುರಾ ಕೂಡ ನಾನು ಗೌತಮ್‌ ಸೇರಿಕೊಂಡು ಈ ನಾಟಕ ಮಾಡಿರೋದಾಗಿ ಹೇಳಿದ್ದರು. ಇದಕ್ಕಾಗಿಯೇ ಗೌತಮ್‌ ಭೂಮಿಗೆ ಹಳದಿ ಬಣ್ಣದ ಸೀರೆ ಕೊಟ್ಟು, “ನನ್ನ ಮದುವೆಗೆ ಈ ಸೀರೆ ಇಟ್ಕೊಳ್ಳಿ” ಅಂತ ಸುಳ್ಳು ಹೇಳಿದ್ದನು. 


ಗುಡ್‌ನ್ಯೂಸ್‌ ಕೊಟ್ಟ ಭೂಮಿಕಾ! 
ಇನ್ನೇನು ಗೌತಮ್-ಭೂಮಿಕಾ ಮರು ಮದುವೆ ಆಯ್ತು. ಎಲ್ಲವೂ ಸರಿಹೋಯ್ತು, ಮಗು ಬಗ್ಗೆ ಆಲೋಚನೆ ಮಾಡಬೇಕು ಅಂತ ಅಂದುಕೊಳ್ಳುತ್ತಿರುವಾಗಲೇ ಭೂಮಿಕಾಗೆ ತಲೆ ಸುತ್ತು ಬಂದು ಬಿದ್ದಿದ್ದಾಳೆ. ಗೌತಮ್‌ ಅವಳನ್ನು ಕೂರಿಸಿ ಏನಾಯ್ತು ಎಂದು ತಲೆಕೆಡಿಸಿಕೊಂಡಿದ್ದಾನೆ. ಅಲ್ಲೇ ಇದ್ದ ಡಾಕ್ಟರ್‌ ಭೂಮಿಕಾರನ್ನು ಪರೀಕ್ಷಿಸಿ ಗುಡ್‌ನ್ಯೂಸ್‌ ಕೊಟ್ಟಿದ್ದಾರೆ. ಹೌದು, ಭೂಮಿಕಾ ಈಗ ತಾಯಿಯಾಗುತ್ತಿದ್ದಾಳೆ.

Amruthadhaare Serial: ಅಯ್ಯಯ್ಯೋ...! ಗೌತಮ್‌ ಮದುವೆ ಆಗೋಯ್ತು! ಭೂಮಿಕಾ ಕಥೆ ಏನು?

ಶಕುಂತಲಾ ಆಟಕ್ಕೆ ಬ್ರೇಕ್!‌ 
ಭೂಮಿಕಾಗೆ ತಾಯಿ ಆಗೋದು ಕಷ್ಟ ಅಂತ ಶಕುಂತಲಾಳೇ ವೈದ್ಯರ ಬಳಿ ಸುಳ್ಳು ಹೇಳಿಸಿದ್ದಳು. ಈಗ ಅವಳ ಆಟಕ್ಕೆ ಬ್ರೇಕ್‌ ಬಿದ್ದಿದೆ. ಭೂಮಿಕಾ-ಗೌತಮ್‌ ಒಂದಾಗೋದನ್ನು ಶಕುಂತಲಾ ಬಯಸಿರಲಿಲ್ಲ. ಈಗ ಮಗು ವಿಚಾರ ಅವಳನ್ನು ನಿಜಕ್ಕೂ ಶೇಕ್‌ ಮಾಡಿಸಲಿದೆ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ ಭಾರೀ ರೋಚಕತೆಯಿಂದ ಕೂಡಿದೆ.

ಪಾತ್ರಧಾರಿಗಳು
ಗೌತಮ್-‌ ರಾಜೇಶ್‌ ನಟರಂಗ
ಭೂಮಿಕಾ ಸದಾಶಿವ- ನಟಿ ಛಾಯಾ ಸಿಂಗ್‌
ಶಕುಂತಲಾ- ನಟಿ ವನಿತಾ ವಾಸು
ಮಧುರಾ- ಶ್ವೇತಾ ಪ್ರಸಾದ್‌