- Home
- Entertainment
- TV Talk
- Muddu Sose Serial: ಏಕಕಾಲಕ್ಕೆ ಮುದ್ದು ಸೊಸೆ ಧಾರಾವಾಹಿಯ ಎರಡು ಘಟಾನುಘಟಿ ಪಾತ್ರಗಳು ಮುಗಿದೋಯ್ತಾ?
Muddu Sose Serial: ಏಕಕಾಲಕ್ಕೆ ಮುದ್ದು ಸೊಸೆ ಧಾರಾವಾಹಿಯ ಎರಡು ಘಟಾನುಘಟಿ ಪಾತ್ರಗಳು ಮುಗಿದೋಯ್ತಾ?
Muddu Sose Serial: ಮುದ್ದು ಸೊಸೆ ಧಾರಾವಾಹಿಯಲ್ಲಿ ಈಗ ಎರಡು ಪಾತ್ರಗಳು ಅಂತ್ಯ ಆಗಲಿವೆಯಾ ಎಂಬ ಪ್ರಶ್ನೆ ಮೂಡಿದೆ. ಹೌದು, ಭದ್ರ ಹಾಗೂ ವಿನಂತಿ ಮದುವೆ ಆಗುತ್ತೋ ಇಲ್ಲವೋ ಎಂಬ ಪ್ರಶ್ನೆ ನಡುವೆ, ಇನ್ನೊಂದು ಕುತೂಹಲದ ವಿಷಯ ಇದೆ. ಹಾಗಾದರೆ ಏನದು?

ಮದುವೆ ನಿಲ್ಲಿಸಲು ಯೋಜನೆ
ಮುದ್ದು ಸೊಸೆ ಧಾರಾವಾಹಿಯಲ್ಲಿ ಭದ್ರೇಗೌಡ ಹಾಗೂ ವಿದ್ಯಾ ಮದುವೆ ನಿಶ್ಚಯ ಆಗಿತ್ತು. ಓದಬೇಕು ಎಂದು ಆಸೆ ಇಟ್ಟುಕೊಂಡಿದ್ದ ವಿದ್ಯಾಗೆ ಈ ಮದುವೆ ಇಷ್ಟ ಇರಲಿಲ್ಲ. ಪೊಲೀಸರಿಗೆ ಫೋನ್ ಮಾಡಿ, ಈ ಮದುವೆ ನಿಲ್ಲಿಸುವ ಪ್ಲಾನ್ ಮಾಡಿದ್ದಳು. ಆದರೆ ವಿದ್ಯಾ ಫೋನ್ ಮಾಡಿದ್ದಕ್ಕೆ ಪೊಲೀಸರು ಮದುವೆ ನಿಲ್ಲಿಸಲು ಬಂದಿರಲಿಲ್ಲ. ಬದಲಾಗಿ ವಿನಂತೆ ಫೋನ್ ಮಾಡಿದ್ದಕ್ಕೆ ಪೊಲೀಸರು ಬಂದಿದ್ದರು.
ವಿದ್ಯಾಗೆ ಶಿಕ್ಷೆ ಆಗಿತ್ತು
ಬಾಲ್ಯ ವಿವಾಹ ಮಾಡಲು ಮುಂದಾಗಿದ್ದಕ್ಕೆ ಭದ್ರೇಗೌಡನ ತಂದೆ ಶಿವರಾಮೇಗೌಡನನ್ನು ಜೈಲಿಗೆ ಹಾಕಿದ್ದರು. ನನ್ನ ಮನೆಗೆ ಬೆಳಕಾಗಲು ಬಂದ ಸೊಸೆ ವಿದ್ಯಾ ನನ್ನನ್ನು ಜೈಲಿಗೆ ಕಳಿಸಿದಳು ಎಂದು ಅವಳಿಗೆ ಶಿಕ್ಷೆ ಕೊಡಲಾಗಿತ್ತು.
ತಾಯಿಯೇ ಸಂಚು ಮಾಡಿದ್ಳು
ಭದ್ರೇಗೌಡನ ಜನ್ಮದಿನದಂದು ಕೇಕ್‌ನಲ್ಲಿ ಅಮಲು ಬರುವ ಔಷಧಿ ಮಿಕ್ಸ್ ಮಾಡಿದ್ದ ವಿನಂತಿ, ಅವನಿಂದಲೇ ಅತ್ಯಾ*ಚಾರ ಆಯ್ತು ಎಂದು ಹೇಳಿದ್ದಳು. ಮನೆಯವರ ಮುಂದೆ ನಾಟಕ ಮಾಡಿ ಭದ್ರನ ಜೊತೆ ಮದುವೆ ಆಗಲು ರೆಡಿಯಾಗಿದ್ದಳು. ಇದಕ್ಕೆ ಅವಳ ತಾಯಿಯೇ ಸಂಚು ರೂಪಿಸಿದ್ದಳು.
ಫೋನ್ ಮಾಡಿದ್ದ ವಿನಂತಿ
ಭದ್ರ ಹಾಗೂ ವಿನಂತಿ ಮದುವೆಯನ್ನು ತಡೆಯಲು ವಿದ್ಯಾ ತಂದೆ ರೆಡಿಯಾಗಿದ್ದನು. ಆ ಬಳಿಕ ವಿನಂತಿಯು ಲೋಕಿ ಸಹಾಯದಿಂದಲೇ ಪೊಲೀಸರಿಗೆ ಫೋನ್ ಮಾಡಿದ್ದಳು. ಇದನ್ನು ಮುಚ್ಚಿಡಲು ಹಣ ಕೊಡುತ್ತಿದ್ದಳು. ಈಗ ಎಲ್ಲರ ಮುಂದೆ ಈ ಸತ್ಯ ಹೊರಬಿದ್ದಿದೆ.
ಎರಡು ಪಾತ್ರಗಳು ಮುಗೀತಾ?
ಭದ್ರೇಗೌಡನನ್ನು ಮದುವೆ ಆಗಬೇಕು ಎಂದು ಅವನ ಅತ್ತೆ ಮಗಳು ವಿನಂತಿ ಪ್ಲ್ಯಾನ್ ಮಾಡಿ ವಿದ್ಯಾ-ಭದ್ರನ ಮದುವೆ ತಡೆದಿದ್ದಳು. ಇದು ಈಗ ರಿವೀಲ್ ಆಗಿದೆ. ಇದಕ್ಕೆ ಸರಿಯಾಗಿ ಶಿಕ್ಷೆ ಕೂಡ ಸಿಕ್ಕಿದೆ. ವಿನಂತಿ ಹಾಗೂ ಅವಳ ತಾಯಿಯನ್ನು ಮನೆಯಿಂದ ಹೊರಹಾಕಿದ್ದಾರೆ. ಈಗ ಈಗ ಎರಡೂ ಪಾತ್ರಗಳು ಮುಗಿದಂತಿವೆ ಅಥವಾ ಮುಂದಿನ ದಿನಗಳಲ್ಲಿ ಭದ್ರ-ವಿದ್ಯಾ ವಿರುದ್ಧ ಸೇಡು ತೀರಿಸಿಕೊಳ್ಳಲೂಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

