Zee kannada amruthadhaare serial episode: ʼಅಮೃತಧಾರೆʼ ಧಾರಾವಾಹಿಯಲ್ಲಿ ಗೌತಮ್‌ ಹಾಗೂ ಭೂಮಿಕಾ ಹಾಲು-ಜೇನಿನ ಥರ ಬೆರೆತಿದ್ದರು. ಇವರಿಬ್ಬರಿಗೂ ಮಗು ಆಗದಿರೋದು ಸಮಸ್ಯೆ ಆಗಿರಲಿಲ್ಲ. ಆದರೆ ಶಕುಂತಲಾ ಇದನ್ನೇ ಬಂಡವಾಳವಾಗಿಟ್ಟುಕೊಂಡು ಗೌತಮ್‌ ಸಂಸಾರವನ್ನು ಒಡೆಯುವ ಪ್ಲ್ಯಾನ್‌ ಮಾಡಿದ್ದಳು. ಈಗ ಈ ಪ್ಲ್ಯಾನ್‌ಗೆ ರೋಚಕ ತಿರುವು ಸಿಕ್ಕಿದೆ.  

ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ‘ಅಮೃತಧಾರೆ’ ಧಾರಾವಾಹಿಯಲ್ಲಿ ಭೂಮಿಕಾಗೆ ಮಗು ಆಗೋದಿಲ್ಲ ಅಂತ ಬಿಂಬಿಸಿ, ಅವಳಿಂದಲೇ ಗೌತಮ್‌ಗೆ ಇನ್ನೊಂದು ಮದುವೆ ಮಾಡಿಸೋದು ಶಕುಂತಲಾ ಪ್ಲ್ಯಾನ್‌ ಆಗಿತ್ತು. ಈ ಪ್ಲ್ಯಾನ್‌ ಈಗ ಹಳ್ಳ ಹಿಡಿದಿದೆ. ಜೀ ಕನ್ನಡ ವಾಹಿನಿಯು ಹೊಸ ಪ್ರೋಮೋ ರಿಲೀಸ್‌ ಮಾಡಿ ವೀಕ್ಷಕರ ಕುತೂಹಲಿನ್ನು ಇನ್ನಷ್ಟು ಹೆಚ್ಚಿಸಿದೆ. ಹಾಗಾದರೆ ಏನಾಗಿರಬಹುದು? 

ಅತ್ತೆ ಬಗ್ಗೆ ಭೂಮಿಗೆ ಗೊತ್ತೇ ಇಲ್ಲ
ಗೌತಮ್‌ ಮದುವೆಯಾಗಿ ಸಂಸಾರ ಮಾಡೋದು ಶಕುಂತಲಾಗೆ ಇಷ್ಟವೇ ಇರಲಿಲ್ಲ. ಗೌತಮ್‌ಗೆ ಮಕ್ಕಳಾದರೆ ಆಸ್ತಿ ಎಲ್ಲ ಅವನ ಮಗು ಪಾಲಾಗತ್ತೆ ಅಂತ ಮಲತಾಯಿ ಶಕುಂತಲಾ ಚಿಂತೆ ಮಾಡಿದ್ದಳು. ಆದರೆ ವಿಧಿ ಗೌತಮ್-ಭೂಮಿ ಒಂದಾಗುವ ಹಾಗೆ ಮಾಡಿತು. ಭೂಮಿಕಾಗೆ ತನ್ನ ಅತ್ತೆ ಅಷ್ಟು ಒಳ್ಳೆಯವರಲ್ಲ ಎನ್ನೋದು ಗೊತ್ತಿದೆ. ಆದರೆ ಇನ್ನೂ ಪೂರ್ತಿ ಮುಖದ ಪರಿಚಯ ಆಗಿಲ್ಲ.

Shrirasthu Shubhamasthu Serial: ಹೊಸ ಪಾತ್ರದ ಎಂಟ್ರಿಯಾಯ್ತು, ಯಾರವರು?

ಇನ್ನೊಂದು ಮದುವೆ ಪ್ಲ್ಯಾನ್
ತನ್ನ ತಂಗಿ ಮಹಿಮಾಗೋಸ್ಕರ ಗೌತಮ್‌ ಹಾಗೂ ತಮ್ಮ ಜೀವನ್‌ಗೋಸ್ಕರ ಭೂಮಿಕಾ ಮದುವೆಯಾದರು. ಮಹಿಮಾ, ಜೀವ ಪ್ರೀತಿಸಿದ್ದರು. ನನ್ನ ಮದುವೆಗೂ ಮುನ್ನ ಅಕ್ಕನ ಮದುವೆ ಆಗಬೇಕು ಅಂತ ಜೀವ ಬಯಸಿದ್ದನು. ಹೀಗಾಗಿ ಗೌತಮ್-ಭೂಮಿಕಾ ವಿವಾಹ ಆಗಬೇಕಾಗಿ ಬಂತು. ಮದುವೆಯಾದ ಬಳಿಕ ಈ ಜೋಡಿ ಮಧ್ಯೆ ಸ್ನೇಹ ಉಂಟಾಗಿ, ಪ್ರೀತಿ ಹುಟ್ಟಿದೆ. ಇವರಿಬ್ಬರು ಒಂದಾದರೂ ಕೂಡ ವಯಸ್ಸು ಹೆಚ್ಚಾಗಿರೋದಿಕ್ಕೆ ಮಗು ಆಗೋದರಲ್ಲಿ ಸಮಸ್ಯೆ ಆಗ್ತಿದೆ. ಇದನ್ನೇ ಬಂಡವಾಳವಾಗಿಟ್ಟುಕೊಂಡು ಶಕುಂತಲಾ ಗೌತಮ್‌ಗೆ ಇನ್ನೊಂದು ಮದುವೆ ಮಾಡುವ ಯೋಜನೆ ಹಾಕಿದ್ದಳು.

ಭೂಮಿಗೋಸ್ಕರ ಮದುವೆಗೆ ಒಪ್ಕೊಂಡಿದ್ದ ಗೌತಮ್‌ 
ಭೂಮಿಕಾಗೆ ಮಕ್ಕಳಾಗಲ್ಲ ಅಂತ ವೈದ್ಯರ ಬಳಿ ಅವಳು ಸುಳ್ಳು ಹೇಳಿದ್ದಳು. ತನಗೆ ಮಕ್ಕಳಾಗಲ್ಲ ಅಂತ ಗೊತ್ತಾದರೆ ಭೂಮಿ ಬೇಸರ ಮಾಡಿಕೊಳ್ತಾಳೆ ಎಂದು ಗೌತಮ್‌ ದೋಷವನ್ನು ತನ್ನ ಮೇಲೆ ಹಾಕಿಕೊಂಡನು. ಗೌತಮ್‌ ನಿನಗೋಸ್ಕರ ಸುಳ್ಳು ಹೇಳಿದ್ದಾನೆ, ನೀನು ಗೌತಮ್‌ಗೆ ಇನ್ನೊಂದು ಮದುವೆ ಮಾಡಿಸು ಅಂತ ಶಕುಂತಲಾ ಭೂಮಿ ತಲೆ ತುಂಬಿದ್ದಳು. ಈಗ ಭೂಮಿಕಾ ಗಂಡನ ಖುಷಿಗೋಸ್ಕರ ಮಧುರಾ ಎನ್ನುವ ಹುಡುಗಿ ಜೊತೆ ಮದುವೆ ಮಾಡಿಸಲು ಸಿದ್ಧತೆ ನಡೆಸಿದ್ದಳು. ಇನ್ನೊಂದು ಮದುವೆ ಆಗೋದು ಗೌತಮ್‌ಗೆ ಇಷ್ಟವೇ ಇರಲಿಲ್ಲ. ಆದರೆ ಭೂಮಿ ಖುಷಿಗೋಸ್ಕರ ಅವನು ಒಪ್ಪಿಕೊಂಡನು.

ಬಲಗಾಲಿಟ್ಟು 'ಬ್ಯೂಟಿಫುಲ್​ ಸವತಿ' ಎಂಟ್ರಿ ಕೊಟ್ಟಾಯ್ತು! ಕಣ್ಣು-ಕಣ್ಣು ಬೆರೆತಾಯ್ತು: ಇನ್ನೇನಿದ್ರೂ ಮಗುವೊಂದೇ ಬಾಕಿ...


ಈಗ ಏನಾಯ್ತು? 
ಈಗ ಭೂಮಿಗೋಸ್ಕರ ಮನೆಯಲ್ಲಿಯೇ ಗೌತಮ್-ಮಧುರಾ ಮದುವೆ ತಯಾರಿ ನಡೆದಿದೆ. ಹಸೆಮಣೆ ಮೇಲೆ ಇವರಿಬ್ಬರು ಕೂತ್ಕೊಂಡು ಹಾರ ಬದಲಾಯಿಸಿಕೊಂಡಿದ್ದಾರೆ. ಪುರೋಹಿತರು ಮಾಂಗಲ್ಯಧಾರಣೆ ಮಾಡಿ ಎಂದಾಗ ಗೌತಮ್‌ ಎದ್ದುಹೋಗಿ ಅಲ್ಲೇ ನಿಂತಿದ್ದ ಭೂಮಿಕಾಗೆ ತಾಳಿ ಕಟ್ಟಿದ್ದಾನೆ. ಏನ್‌ ಮಾಡ್ತಿದ್ದೀಯಾ ಗೌತಮ್‌ ಅಂತ ಶಕುಂತಲಾ ಪ್ರಶ್ನೆ ಮಾಡಿದಳು. ಆಗ ಗೌತಮ್‌, “ಏಳೇಳು ಜನ್ಮಕ್ಕೂ ನನಗೆ ಭೂಮಿಕಾಳೇ ಪತ್ನಿ ಆಗಬೇಕು. ಪತ್ನಿ ಸ್ಥಾನವನ್ನು ಭೂಮಿಕಾ ಬಿಟ್ಟಿ ಇನ್ಯಾರೂ ತುಂಬೋಕೆ ಸಾಧ್ಯವೇ ಇಲ್ಲ” ಎಂದು ಹೇಳಿದ್ದಾನೆ. ಭೂಮಿಕಾ-ಗೌತಮ್‌ ಮದುವೆ ಆಗಿರೋದು ನೋಡಿ ಆನಂದ್‌, ಪಾರ್ಥ ಫುಲ್‌ ಖುಷಿಯಾಗಿದ್ದಾರೆ. ಅಪೇಕ್ಷಾ, ಜಯದೇವ್‌, ಶಕುಂತಲಾ, ಲಕ್ಷ್ಮೀಕಾಂತ್‌ ಮಾವ ಎಲ್ಲರೂ ಶಾಕ್‌ ಆಗಿದ್ದಾರೆ. ಇನ್ನು ಮಧುರಾ ಕೂಡ ಫುಲ್‌ ಶಾಕ್‌ನಲ್ಲಿದ್ದಾಳೆ.

ಗೌತಮ್‌ಗೆ ನನ್ನ ಮೇಲೆ ಇಷ್ಟೊಂದು ಪ್ರೀತಿ ಇದೆ ಅಂತ ತಿಳಿದು ಭೂಮಿಕಾ ಖುಷಿಗೆ ಪಾರವೇ ಇಲ್ಲದಂತಾಗಿದೆ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ರೋಚಕತೆಯಿಂದ ಕೂಡಿವೆ. 

ಪಾತ್ರಧಾರಿಗಳು 
ಗೌತಮ್-ರಾಜೇಶ್‌ ನಟರಂಗ
ಭೂಮಿಕಾ ಸದಾಶಿವ-ಛಾಯಾ ಸಿಂಗ್‌
ಶಕುಂತಲಾ-ವನಿತಾ ವಾಸು
ಮಧುರಾ- ಶ್ವೇತಾ ಆರ್‌ ಪ್ರಸಾದ್‌

View post on Instagram