ʼಅಮೃತಧಾರೆʼ ಧಾರಾವಾಹಿಯಲ್ಲಿ ಗೌತಮ್‌ಗೆ ಎರಡನೇ ಮದುವೆ ಮಾಡಲಾಗುತ್ತಂತೆ. ಭೂಮಿಕಾಳೇ ಮುಂದೆ ನಿಂತು ಈ ಮದುವೆ ಮಾಡ್ತಾಳಾ? ಒಟ್ಟಿನಲ್ಲಿ ಮುಂಬರುವ ಎಪಿಸೋಡ್ ಭರ್ಜರಿ ರೋಚಕತೆಯಿಂದ ಕೂಡಿರಲಿದೆ.
ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ‘ಅಮೃತಧಾರೆ’ ಧಾರಾವಾಹಿಯಲ್ಲಿ ಗೌತಮ್ ಹಾಗೂ ಭೂಮಿಕಾಗೆ ಮಗು ಆಗೋದು ಶಕುಂತಲಾಗೆ ಇಷ್ಟ ಇಲ್ಲ. ಹೀಗಾಗಿ ಅವಳು ಹೊಸ ಪ್ಲ್ಯಾನ್ ಮಾಡಿದ್ದಾಳೆ. ತಾನು ಹೇಳಿದಂತೆ ಕೇಳುವ ಡಾಕ್ಟರ್ ಬಳಿ ಅವಳು ಸುಳ್ಳು ಹೇಳಿಸಿದ್ದಾಳೆ. ಭೂಮಿಕಾಗೆ ಮಗು ಆಗೋಕೆ ಸಮಸ್ಯೆ ಇದೆ ಅಂತ ಅವಳು ವೈದ್ಯರ ಬಳಿ ಸುಳ್ಳು ಹೇಳಿಸಿದ್ದಳು.
ಸುಳ್ಳು ಹೇಳಿರೋ ಗೌತಮ್
ಮಗು ಆಗತ್ತೆ ಅಂತ ಗೌತಮ್, ಭೂಮಿಕಾ ತುಂಬ ನಿರೀಕ್ಷೆ ಇಟ್ಟುಕೊಂಡಿದ್ದರು. ಇಡೀ ಮನೆ ಖುಷಿಯಿಂದ ಇತ್ತು. ಆದರೆ ಶಕುಂತಲಾ ಮಾತ್ರ ಪ್ಲ್ಯಾನ್ ಮಾಡಿ ಡಾಕ್ಟರ್ ಬಳಿ ಸುಳ್ಳು ಹೇಳಿಸಿದಳು. ಇನ್ನೊಂದು ಕಡೆ ತನ್ನಿಂದ ಮಗು ಆಗೋದಿಲ್ಲ ಅಂತ ಗೊತ್ತಾದ್ರೆ ಭೂಮಿಕಾ ನೊಂದುಕೊಳ್ತಾಳೆ ಅಂತ ಗೌತಮ್ ತನಗೆ ಸಮಸ್ಯೆ ಇದೆ ಅಂತ ಸುಳ್ಳು ಹೇಳಿದ್ದನು. ಭೂಮಿಗೋಸ್ಕರ ಗೌತಮ್ ಇಂಥ ಸುಳ್ಳು ಹೇಳಿದ್ದಾನೆ, ಅವನಿಗೆ ಎಷ್ಟು ಧೈರ್ಯ ಇರಬೇಕು ಅಂತ ಲಕ್ಷ್ಮೀಕಾಂತ್ ಮಾವ, ಜಯದೇವ್ ಕೂಡ ಆಶ್ಚರ್ಯಪಟ್ಟಿದ್ದರು.
Kannada Serial TRP 2025; ಎಲ್ಲ ಧಾರಾವಾಹಿಗಳನ್ನು ಹಿಂದಿಕ್ಕಿ ನಂ 1 ಪಟ್ಟ ಪಡೆದ ಸೀರಿಯಲ್ ಯಾವುದು?
ಸಮಾಧಾನ ಮಾಡಿಕೊಂಡ ಭೂಮಿಕಾ
ಇನ್ನೊಂದು ಕಡೆ ಭೂಮಿಕಾ “ಗೌತಮ್‌ಗೆ ನಾನೇ ಮಗು. ನಮಗೆ ಅಪೇಕ್ಷಾ, ಜಯದೇವ್, ಮಲ್ಲಿ, ಪಾರ್ಥ, ಸುಧಾ, ಜೀವ, ಮಹಿಮಾ ಎಂಬ ಮಕ್ಕಳಿದ್ದಾರೆ. ನಮಗೆ ಇಷ್ಟೇ ಸಾಕು. ಗೌತಮ್‌ನಂಥ ಗಂಡ ನನಗೆ ಸಿಕ್ಕಿರೋದು ಪುಣ್ಯ” ಅಂತ ಅಂದುಕೊಂಡಿದ್ದಾಳೆ.
ಶಕುಂತಲಾ ಹೇಳಿದ ಸುಳ್ಳು ಏನು?
ಶಾಕುಂತಲಾ ಈ ವಿಷಯವನ್ನು ಇಟ್ಟುಕೊಂಡು ಹೊಸ ಆಟ ಶುರು ಮಾಡಿದ್ದಾಳೆ. ಭೂಮಿಕಾ ಬಳಿ ಬಂದು ಅವಳು, “ಗೌತಮ್‌ಗೆ ಯಾವುದೇ ಸಮಸ್ಯೆ ಇಲ್ಲ. ನಿನಗೆ ಸಮಸ್ಯೆ ಇದೆ. ನಿನಗೆ ಮಗು ಆಗೋದಿಲ್ಲ ಎನ್ನುವ ಸತ್ಯವನ್ನು ಅವನು ತನ್ನ ಮೇಲೆ ಹಾಕಿಕೊಂಡಿದ್ದಾನೆ. ಮನಸ್ಸಿನೊಳಗಡೆ ನೋವು ತಿಂತಿದ್ದಾನೆ” ಎಂದು ಹೇಳಿದ್ದಾಳೆ. ಅದನ್ನು ಕೇಳಿ ಭೂಮಿಕಾ, “ನನಗೋಸ್ಕರ ಗೌತಮ್ ಇಂಥ ದೊಡ್ಡ ಸುಳ್ಳು ಹೇಳಿದ್ರಾ? ನನಗೆ ನೋವು ಆಗತ್ತೆ ಅಂತ ಹೀಗೆ ಮಾಡಿದ್ರಾ? ನನ್ನಿಂದ ಎಲ್ಲರಿಗೂ ನೋವು” ಅಂತ ಕಣ್ಣೀರು ಹಾಕುತ್ತಿದ್ದಾಳೆ. ಮುಂದೆ ಅವಳು ಏನು ಮಾಡಲಿದ್ದಾಳೆ ಎಂದು ಕಾದು ನೋಡಬೇಕಿದೆ.
ಅಮೃತಧಾರೆ ಧಾರಾವಾಹಿಯಿಂದ ಮತ್ತೋರ್ವ ಪಾತ್ರಧಾರಿ ಹೊರಗಡೆ ಬಂದ್ರಾ? ಯಾಕೆ ಅವ್ರು ಕಾಣಿಸ್ತಿಲ್ಲ?
ಮುಂದೆ ಏನಾಗುವುದು?
ಇನ್ನೊಂದು ಕಡೆ ಶಾಕುಂತಲಾ ಈಗ ಗೌತಮ್‌ಗೆ ಇನ್ನೊಂದು ಮದುವೆ ಮಾಡುವ ಆಲೋಚನೆ ಹಾಕಿದ್ದಾಳೆ. ಭೂಮಿಗೆ ಮಕ್ಕಳು ಆಗೋದಿಲ್ಲ ಅಂತ ಅವಳು ಕಾರಣ ಹೇಳಿ ಗೌತಮ್‌ಗೆ ಇನ್ನೊಂದು ಮದುವೆ ಮಾಡಿಸುವ ಯೋಜನೆ ಹಾಕಿಕೊಂಡಿದ್ದಾಳೆ. ಇದು ನಿಜ ಆಗತ್ತಾ? ಇಲ್ಲವಾ ಎಂದು ಕಾದು ನೋಡಬೇಕಾಗಿದೆ. ಎರಡನೇ ಮದುವೆ ಆಗೋಕೆ ಗೌತಮ್ ರೆಡಿ ಇರೋದಿಲ್ಲ, ಆದರೆ ಭೂಮಿಕಾ ಏನಾದರೂ ಹೇಳಿ ಒಪ್ಪಿಸುತ್ತಾಳಾ ಅಂತ ನೋಡಬೇಕು.
ಪಾತ್ರಧಾರಿಗಳು
ಗೌತಮ್ ಪಾತ್ರದಲ್ಲಿ ರಾಜೇಶ್ ನಟರಂಗ, ಭೂಮಿಕಾ ಪಾತ್ರದಲ್ಲಿ ಛಾಯಾ ಸಿಂಗ್, ಶಾಕುಂತಲಾ ಪಾತ್ರದಲ್ಲಿ ವನಿತಾ ವಾಸು ಅವರು ನಟಿಸುತ್ತಿದ್ದಾರೆ. ಈ ಧಾರಾವಾಹಿಗೆ ಒಳ್ಳೆಯ ಪ್ರತಿಕ್ರಿಯೆ ಸಿಗ್ತಿದೆ.
