ಅಮೃತಧಾರೆಯಲ್ಲಿ ಭೂಮಿಕಾ ಸೀಮಂತದ ಸಂಭ್ರಮದ ನಡುವೆ ಅಪಾಯ ಕಾದಿದೆ. ಗೌತಮ್ ಆಸ್ತಿಯನ್ನು ಭೂಮಿಕಾ ಮತ್ತು ಮಗುವಿಗೆ ಬರೆದಿರುವುದು ಶಕುಂತಲಾಳ ಕೋಪಕ್ಕೆ ಕಾರಣವಾಗಿದೆ. ರೌಡಿಗಳನ್ನು ಕಳಿಸಿ ಭೂಮಿಕಾಳ ಮೇಲೆ ದಾಳಿ ಮಾಡಿಸಿದ್ದಾಳೆ.
ಅಮೃತಧಾರೆ ಧಾರಾವಾಹಿಯಲ್ಲಿ ಅದ್ದೂರಿಯಾಗಿ ಭೂಮಿಕಾ ಸೀಮಂತ ಮಾಡಲಾಗಿದೆ. ಮನೆಗೆ ಮಗು ಬರ್ತಿದೆ ಎಂದ ಎಲ್ಲರೂ ಖುಷಿಯಿಂದ ಇದ್ದರು. ಅಷ್ಟೇ ಅಲ್ಲದೆ ಭೂಮಿಕಾ ಹಾಗೂ ಗೌತಮ್ ದಿವಾನ್ ಹೊಸ ಫೋಟೋಶೂಟ್ ಕೂಡ ಮಾಡಿಸಿಕೊಂಡಿದ್ದಾರೆ. ವಾಹಿನಿಯು ಹೊಸ ಪ್ರೋಮೋ ರಿಲೀಸ್ ಮಾಡಿ ಭಾರೀ ಕುತೂಹಲವನ್ನು ಸೃಷ್ಟಿಸಿದೆ.
ಪ್ಲ್ಯಾನ್ ಹಾಕಿರೋ ಶಕುಂತಲಾ!
ತನಗೆ ರೌಡಿಗಳಿಂದ ಅಪಾಯ ಆಯ್ತು ಎಂದು ಗೌತಮ್ ದಿವಾನ್ ತನಗೆ ಸೇರಿದ ಎಲ್ಲ ಆಸ್ತಿಯನ್ನು ಭೂಮಿಕಾಗೆ ಹಾಗೂ ತನಗೆ ಹುಟ್ಟುವ ಮಗುಗೆ ವಿಲ್ ಬರೆದಿದ್ದಾನೆ. ಇದು ಶಕುಂತಲಾ ಹಾಗೂ ಅವನ ಮಗ ಜಯದೇವ್‌ಗೆ ಸಿಟ್ಟು ತರಿಸಿತ್ತು. ಹುಟ್ಟದೆ ಇರೋ ಮಗುವಿಗೆ ಇಷ್ಟೆಲ್ಲ ಸಿಕ್ರೆ ನಾವು ಏನು ಮಾಡಬೇಕು ಅಂತ ಜಯದೇವ್ ಕುದಿಯುತ್ತಿದ್ದನು. ಭೂಮಿಕಾ ಮಗುವಿಗೆ ಎಲ್ಲ ಆಸ್ತಿ ಸೇರಿದೆ ಎಂದು ಆ ಮಗುವನ್ನು ಮುಗಿಸಬೇಕು ಅಂತ ಶಾಕುಂತಲಾ ಪ್ಲ್ಯಾನ್ ಹಾಕಿದ್ದಳು. ಅದೀಗ ಕಾರ್ಯರೂಪಕ್ಕೆ ತರಲಾಗಿತ್ತು.
ರೌಡಿಗಳಿಗೆ ಹೊಡೆದಿರೋ ಗೌತಮ್!
ದೇವಸ್ಥಾನವೊಂದರಲ್ಲಿ ಭೂಮಿಕಾ ಸೀಮಂತ ಮಾಡಲಾಗಿತ್ತು. ಅಲ್ಲಿ ಶಕುಂತಲಾ ರೌಡಿಗಳನ್ನು ಕರೆಸಿದ್ದಳು. ಆಗ ಭೂಮಿಕಾ ತನ್ನ ಜೀವವನ್ನು ಕಾಪಾಡಿಕೊಳ್ಳಲು ಒದ್ದಾಡಿದ್ದಾಳೆ. ಅದೇ ಸಮಯಕ್ಕೆ ಅಪೇಕ್ಷಾ ಆಗಮನವಾಗಿದೆ. ತನ್ನ ಮದುವೆ ವಿಚಾರದಲ್ಲಿ ಅಕ್ಕ ತನಗೆ ಬೆಂಬಲ ಕೊಟ್ಟಿಲ್ಲ ಅಂತ ಭೂಮಿಯನ್ನು ಅವಳು ದ್ವೇಷಿಸಿದ್ದಳು. ಈಗ ಅವಳೇ ಅಕ್ಕನನ್ನು ಕಾಪಾಡಲು ಮುಂದಾಗಿದ್ದಾಳೆ. ಅದೇ ಸಮಯಕ್ಕೆ ಗೌತಮ್ ಕೂಡ ಎಂಟ್ರಿ ಕೊಟ್ಟು ರೌಡಿಗಳಿಗೆ ಹೊಡೆದಿದ್ದಾನೆ.
ನೀಚಬುದ್ಧಿ ತೋರಿಸಿದ ಶಕುಂತಲಾ!
ನಿಮ್ಮನ್ನು ಕಳಿಸಿದ್ದು ಯಾರು ಎಂದು ಗೌತಮ್ ಅವರಿಗೆ ಪ್ರಶ್ನೆ ಕೇಳಿದ್ದಾನೆ. ಆಗ ಆ ರೌಡಿ, ಶಕುಂತಲಾ ಎಂದು ಹೇಳಿದ್ದಾನೆ. ನನ್ನ ಮಲತಾಯಿಯೇ ನಿಜವಾದ ತಾಯಿ ಎನ್ನುವಷ್ಟರಮಟ್ಟಿಗೆ ಗೌತಮ್ ಅವಳನ್ನು ನಂಬಿದ್ದನು. ಈಗ ಅವನ ನಂಬಿಕೆಯ ಸೌಧ ಕುಸಿದಿದೆ. ಈಗ ಗೌತಮ್ ಏನು ಮಾಡ್ತಾನೆ ಎಂದು ಕಾದು ನೋಡಬೇಕಿದೆ. ಆಸ್ತಿಗೋಸ್ಕರ ಶಕುಂತಲಾ ಇಷ್ಟು ನೀಚಬುದ್ಧಿ ತೋರಿಸ್ತಾಳೆ ಅಂತ ಗೌತಮ್ ಅಂದುಕೊಂಡೇ ಇರಲಿಲ್ಲ.
ಗೌತಮ್‌ಗೆ ಸತ್ಯ ಗೊತ್ತಾಯ್ತು!
ಭೂಮಿಕಾ, ಆನಂದ್ ಬಳಿ ಬಂದು ಅವನು ಮಲತಾಯಿಯೇ ಇದೆಲ್ಲ ಮಾಡಿಸಿದ್ದು ಎಂದಿದ್ದಾನೆ. ಆಗ ಆನಂದ್, “ಇಷ್ಟು ದಿನ ನಡೆದಿದ್ದಕ್ಕೆಲ್ಲ ಶಕುಂತಲಾ ಕಾರಣ” ಎಂದು ಹೇಳಿದ್ದಾರೆ. “ನಿಮಗೆ ಇಷ್ಟೆಲ್ಲ ವಿಷ್ಯ ಗೊತ್ತಿದ್ರೂ ಯಾಕೆ ಹೇಳಿಲ್ಲ?” ಎಂದು ಅವನು ಮರು ಪ್ರಶ್ನೆ ಮಾಡಿದ್ದಾನೆ.
ವೀಕ್ಷಕರು ಏನು ಹೇಳಿದರು?
ಜೀ ಕನ್ನಡ ವಾಹಿನಿಯ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅನೇಕರು ಕಾಮೆಂಟ್ ಮಾಡಿ, ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಈ ವಾರದ ಚಪ್ಪಾಳೆ ನಮ್ಮ ಅಪ್ಪಿಗೆ, ಬೆಸ್ಟ್ ಎಪಿಸೋಡ್, ಕೊನೆಗೂ ಸತ್ಯ ಗೊತ್ತಾಯಿತು ನಮ್ಮ ಗುಂಡು ಸರ್‌ಗೆ. ಭೂಮಿಕಾ ಟೀಚರ್ ತುಂಬಾ ಚೆನ್ನಾಗಿ ಕಾಣ್ತಾ ಇದ್ದಾರೆ.
ಶಕುಂತಲಾ ಮುಖವಾಡ ಇಷ್ಟು ಬೇಗ ಬಯಲಾಗ್ತಿದೆ ಅಂದ್ರೆ, ಏನಾದ್ರೂ ನಮ್ ಅಮೃತಧಾರೆ ಮುಗುಸ್ತಾ ಇದಾರಾ?
ಇವ್ರು ಏನೇ ಮಾಡಿದ್ರು ಕೊನೆಗೆ ಒಳ್ಳೆಯವರಿಗೆ ಒಳ್ಳೇದೇ ಆಗುತ್ತೆ..ನಮ್ ಭೂಮಿಕಾಗೆ ಏನು ಆಗಲ್ಲ
ಕಥೆ ಏನು?
ಗೌತಮ್ ದಿವಾನ್ ಆಗರ್ಭ ಶ್ರೀಮಂತ. ಇವನಿಗೆ ಶಕುಂತಲಾ ಎಂಬ ಮಲತಾಯಿ ಇದ್ದಾಳೆ. ಇಷ್ಟು ವರ್ಷಗಳಿಂದಲೂ ಗೌತಮ್‌ಗೆ ತನ್ನ ಚಿಕ್ಕಮ್ಮ ತುಂಬ ಒಳ್ಳೆಯವಳು ಎಂದು ತಿಳಿದುಕೊಂಡಿದ್ದನು. ಅವನ ಆಸ್ತಿ ಹೊಡೆಯೋದು ಶಕುಂತಲಾ ಪ್ಲ್ಯಾನ್ ಆಗಿತ್ತು. ಇನ್ನು ಶಕುಂತಲಾ ಮಗ ಜಯದೇವ್ ಕೂಡ ದೊಡ್ಡ ಕುತಂತ್ರ ಮಾಡುತ್ತಾನೆ. ಮುಂದೆ ಏನಾಗುವುದು ಎಂದು ಕಾದು ನೋಡಬೇಕಿದೆ.
ಪಾತ್ರಧಾರಿಗಳು
ಗೌತಮ್- ರಾಜೇಶ್ ನಟರಂಗ
ಭೂಮಿಕಾ- ಛಾಯಾ ಸಿಂಗ್
ಶಕುಂತಲಾ-ವನಿತಾ ವಾಸು!