ಅಲ್ಲೇ ಡ್ರಾ ಅಲ್ಲೇ ಬಹುಮಾನ: ಅತ್ತೆ ಚಾಪೆ ಕೆಳಗೆ ನುಸುಳಿದ್ರೆ ಈ ಸೊಸೆಗೆ ರಂಗೋಲಿ ಕೆಳಗೆ ನುಸುಳೋದು ಗೊತ್ತಿಲ್ವಾ?

ಗಂಡ-ಹೆಂಡತಿಯನ್ನು ದೂರ ಮಾಡಲು  ಶಕುಂತಲಾ ದೇವಿ ಚಾಪೆ ಕೆಳಗೆ ನುಸುಳಿದ್ರೆ, ಸೊಸೆ ಭೂಮಿಕಾಗೆ ರಂಗೋಲಿ ಕೆಳಗೆ ತೂರುವುದು ಗೊತ್ತಿಲ್ವಾ?
 

Amrutdhare fans showered with praises for Bhoomikas plan to realize Shakuntala Devis tricks suc

ಅಮೃತಧಾರೆ ಸೀರಿಯಲ್​ ಇದೀಗ ಕುತೂಹಲ ಘಟ್ಟಕ್ಕೆ ಬಂದು ತಲುಪಿದೆ.   ಐ ಲವ್​ ಯೂ ಎಂದು ಹೇಳಲು, ಪ್ರೀತಿಯ ನಿವೇದನೆ ಮಾಡಿಕೊಳ್ಳಲು ಹಿಂಜರಿಯುತ್ತಿದ್ದ ಗೌತಮ್​ ಮತ್ತು ಭೂಮಿಕಾ ಜೋಡಿ ಕೊನೆಗೂ ಪ್ರೀತಿಯನ್ನು ಪರಸ್ಪರ ಹಂಚಿಕೊಂಡೇ ಬಿಟ್ಟಿದ್ದಾರೆ. ಇವರನ್ನು ಬೇರೆ ಬೇರೆ ಮಾಡಲು ಅತ್ತೆ ಶಕುಂತಲಾ ದೇವಿ ಹೂಡುತ್ತಿರುವ ಪ್ಲ್ಯಾನೇ ಗಂಡ-ಹೆಂಡತಿಯನ್ನು ಮತ್ತಷ್ಟು, ಇನ್ನಷ್ಟು ಹತ್ತಿರ ಮಾಡುತ್ತಿದೆ. ಶಕುಂತಲಾದೇವಿ ಏನೇ ಪ್ಲ್ಯಾನ್​ ಮಾಡಿದ್ರೂ ಅದು ಉಲ್ಟಾ ಹೊಡೆಯುತ್ತಲೇ ಇದೆ. ಹನಿಮೂನ್​ಗೆ ಕಳುಹಿಸಿ ಭೂಮಿಕಾಳನ್ನು ಕೊಲೆ ಮಾಡಿಸುವ ಪ್ಲ್ಯಾನ್​ ಮಾಡಿದ್ದಳು ಶಕುಂತಲಾದೇವಿ. ಆದರೆ ಅದು ಕೂಡ ಉಲ್ಟಾ ಹೊಡೆದಿದೆ. ಅದರ ಬದಲು, ಪ್ರೀತಿಯ ನಿವೇದನೆ ಮಾಡಿಕೊಳ್ಳಲು ಒದ್ದಾಡುತ್ತಿದ್ದ ಈ ಎರಡು ಜೀವಗಳು ಇನ್ನಷ್ಟು ಹತ್ತಿರವಾಗಲು ಕುತಂತ್ರದ ಈ ಪ್ಲ್ಯಾನ್​ ಸಹಾಯ ಮಾಡಿದೆ.

ಒಟ್ಟಿನಲ್ಲಿ ತಾನೊಂದು ಬಗೆದರೆ ದೈವವೊಂದು ಬಗೆಯುತ್ತದೆ ಎನ್ನುವ ಹಾಗೆ, ಶಕುಂತಲಾ ದೇವಿ ಸ್ಥಿತಿಯಾಗಿದೆ. ಆದರೂ ಆಕೆ ಗಂಡ-ಹೆಂಡತಿಯನ್ನು ದೂರ ಮಾಡಲು ಸಂಚು ರೂಪಿಸುತ್ತಳೇ ಇದ್ದಾಳೆ. ಪತಿ-ಪತ್ನಿ ಇಬ್ಬರೂ ಒಟ್ಟಾಗಿ ಆನಂದದಿಂದ ಕಾಲ ಕಳೆಯುತ್ತಿರುವ ಸಂದರ್ಭದಲ್ಲಿ ತನಗೆ ಹುಷಾರಿಲ್ಲ ಎಂದು ಸಹೋದರನ ಬಳಿ ಹೇಳಿಸಿ ಗೌತಮ್​ನನ್ನು ವಾವಪ್​ ಕರೆಸಿಕೊಂಡಿದ್ದಾಳೆ ಶಕುಂತಲಾ. ಈ ದಡ್ಡ ಗೌತಮ್​ಗೋ ಈ ಕುತಂತ್ರಿ ಚಿಕ್ಕಮ್ಮನ ಪ್ಲ್ಯಾನ್​ ತಿಳಿಯುತ್ತಲೇ ಇಲ್ಲ. ಬಹುತೇಕ ಸೀರಿಯಲ್​ಗಳಂತೆಯೇ ಈ ವಿಷಯದಲ್ಲಿ ಇಲ್ಲಿಯೂ ನಾಯಕನನ್ನು ದಡ್ಡನನ್ನಾಗಿಯೇ ಬಿಂಬಿಸಲಾಗಿದೆ. ಅಮ್ಮನ ಸ್ಥಾನದಲ್ಲಿರೋ ಚಿಕ್ಕಮ್ಮ ತುಂಬಾ ಒಳ್ಳೆಯವಳು ಎಂದೇ ಅಂದುಕೊಂಡಿದ್ದಾನೆ. ಅಮ್ಮನಿಗೆ ಹುಷಾರಿಲ್ಲ ಎಂದು ತಿಳಿಯುತ್ತಿದ್ದಂತೆಯೇ ಓಡೋಡಿ ಬಂದಿದ್ದಾನೆ.

400 ರೂಪಾಯಿ ಚಾಲೆಂಜ್​ ತೆಗೆದುಕೊಂಡಿರೋ ಸೀತೆಯ ಈ ರಾಮನಿಗೆ ಸಹಾಯ ಮಾಡ್ತೀರಾ?

ಭೂಮಿಕಾಗೆ ಡೌಟ್​ ಶುರುವಾಗಿದೆ. ಅವಳಿಗೆ ಅತ್ತೆಯ ಎಲ್ಲಾ ಸಂಚುಗಳು ಗೊತ್ತಲ್ಲ! ಅದಕ್ಕಾಗಿಯೇ ಅತ್ತೆ ಬೇಕಂತಲೇ ಮಾಡಿರಬೇಕು ಎನ್ನಿಸುತ್ತಿದೆ. ತಡ ಮಾಡದೇ ಆಕೆ ಮನೆಯಲ್ಲಿರುವ ಮಲ್ಲಿಗೆ ಕಾಲ್​  ಮಾಡಿ ಅತ್ತೆಗೆ ಏನಾಯಿತು ಎಂದು ವಿಚಾರಿಸಿದ್ದಾಳೆ. ಅವರಿಗೇನು ಆಗಿದೆ ಆರಾಮಾಗಿಯೇ ಓಡಾಡಿಕೊಂಡು ಇದ್ದಾರಲ್ಲ ಅಂದಿದ್ದಾಳೆ ಮಲ್ಲಿ. ಅಲ್ಲಿಗೆ ಇವೆಲ್ಲಾ ತಂತ್ರ ಎಂದು ಭೂಮಿಗೆ ತಿಳಿಯುತ್ತಿದ್ದಂತೆಯೇ ವೈದ್ಯರನ್ನು ಮನೆಗೆ ಕಳುಹಿಸಿದ್ದಾಳೆ. 

ಡಾಕ್ಟರ್​ ಅನ್ನು ನೋಡಿ ಶಕುಂತಲಾಗೆ ಶಾಕ್​ ಆಗಿದೆ. ಏನಿದು ಎಂದು ಕೇಳಿದ್ದಾಳೆ. ಅದಕ್ಕೆ ಡಾಕ್ಟರ್​ ನಿಮಗೆ ಹುಷಾರು ಇಲ್ವಲ್ಲಾ ಅದಕ್ಕಾಗಿಯೇ ಬಂದಿದ್ದು ಎನ್ನುತ್ತಾಳೆ. ಗಂಡ-ಹೆಂಡತಿಯನ್ನು ಬೇರೆ ಮಾಡಲು ಈ ಅತ್ತೆ ಚಾಪೆ ಕೆಳಗೆ ನುಸುಳಿದ್ರೆ, ಸೊಸೆ ಭೂಮಿಕಾ ರಂಗೋಲಿ ಕೆಳಗೆ ನುಸುಳಿದ್ದಾಳೆ. ಇದನ್ನು ನೋಡಿ ಅಲ್ಲೇ ಡ್ರಾ ಅಲ್ಲೇ ಬಹುಮಾನ ಅಂತಿದ್ದಾರೆ ಅಭಿಮಾನಿಗಳು. ಬಹುತೇಕ ಸೀರಿಯಲ್​ಗಳಲ್ಲಿ ಸೊಸೆಯನ್ನು ಅಳುಮುಂಜಿ ರೀತಿ ತೋರಿಸಲಾಗುತ್ತದೆ, ಆದರೆ ಇಲ್ಲಿ ಡಿಫರೆಂಟ್​ ಆಗಿ ತೋರಿಸಲಾಗುತ್ತಿದೆ, ಅದಕ್ಕಾಗಿಯೇ ಈ ಸೀರಿಯಲ್​ ಇಷ್ಟವಾಗುವುದು ಅಂತಿದ್ದಾರೆ ಅಭಿಮಾನಿಗಳು. 

ಪುಟ್ಟಕ್ಕನ ಮಕ್ಕಳಿಗೂ ಎಂಟ್ರಿ ಕೊಟ್ಟೇ ಬಿಟ್ಟಳು ಕೊರವಂಜಿ: ನಿಜಕ್ಕೂ ಇವರು ತ್ರಿಕಾಲ ಜ್ಞಾನಿಗಳಾ?

Latest Videos
Follow Us:
Download App:
  • android
  • ios