400 ರೂಪಾಯಿ ಚಾಲೆಂಜ್ ತೆಗೆದುಕೊಂಡಿರೋ ಸೀತೆಯ ಈ ರಾಮನಿಗೆ ಸಹಾಯ ಮಾಡ್ತೀರಾ?
ಸೀತಾರಾಮ ಸೀರಿಯಲ್ ರಾಮ 400 ರೂಪಾಯಿ ಚಾಲೆಂಜ್ ತೆಗೆದುಕೊಂಡಿದ್ದಾನೆ. ಅವನಿಗೆ ವೀಕ್ಷಕರು ಸಹಾಯ ಮಾಡಬಲ್ಲರೆ?
ಅದೆಷ್ಟೋ ಮಂದಿ ಒಂದಿಷ್ಟು ಸಾವಿರ ಇದ್ದರೆ ಸಾಕು, ತಿಂಗಳು ಪೂರ್ತಿ ಜೀವನ ನಡೆಸಿಬಿಡುತ್ತಾರೆ. ಅದರಲ್ಲಿಯೂ ಚಿಕ್ಕಪುಟ್ಟ ಸಂಬಳ ಪಡೆಯುವವರು ದಿನದ ಲೆಕ್ಕಾಚಾರದ ಆಧಾರದ ಮೇಲೆ ಮುಂದಿನ ತಿಂಗಳು ಸಂಬಳ ಬರುವವರೆಗೆ ಈ ತಿಂಗಳ ಸಂಬಳವನ್ನು ಕಾಪಿಟ್ಟುಕೊಂಡು ಖರ್ಚು ಮಾಡುತ್ತಾರೆ. ಆದರೆ ಇನ್ನು ಕೆಲವರಿಗೆ ಸಾವಿರ ಏನು, ಕೋಟಿ ಎಂದರೂ ಲೆಕ್ಕವೇ ಇರುವುದಿಲ್ಲ. ಕೋಟಿ ಕೋಟಿ ಹಣವನ್ನು ನೀರಿನಂತೆ ಖರ್ಚು ಮಾಡುವವರೂ ನಮ್ಮ ಕಣ್ಣೆದುರೇ ಇದ್ದಾರೆ. ಇನ್ನು ಲಕ್ಷ ಅಂತೂ ಬಿಡಿ. ಅದು ಅದೆಷ್ಟೋ ಮಂದಿಗೆ ಅಲಕ್ಷವೇ. ಬಹುತೇಕ ಬಡವರು ಮತ್ತು ಮಿಡ್ಲ್ಕ್ಲಾಸ್ ಜನರಿಗೆ ತಾವೊಂದು ದಿನ ಶ್ರೀಮಂತರಾಗಬೇಕು ಎನ್ನುವ ಕನಸು ಇರುತ್ತದೆ. ಆದರೆ ಶ್ರೀಮಂತರಾದವರು ತಾವೊಂದು ದಿನ ಮಿಡ್ಲ್ಕ್ಲಾಸ್ ಜನರ ಜೀವನ ಸಾಗಿಸಬೇಕು ಎಂದು ಅನ್ನಿಸುವುದು ಉಂಟೆ?
ಆಗರ್ಭ ಶ್ರೀಮಂತರಾದವರು ಎಲ್ಲವನ್ನೂ ತ್ಯಜಿಸಿ ಹೋಗುವುದನ್ನು ಕೇಳಿದ್ದೇವೆ. ಸಿರಿವಂತಿಕೆಗೆ ಬೆಲೆಯೇ ಕೊಡದೇ ಸಾಮಾನ್ಯ ಜೀವನವನ್ನು ನಡೆಸುವವರೂ ನಮ್ಮ ಮಧ್ಯೆ ಇದ್ದಾರೆ. ಆದರೆ ಒಂದೋ ಎರಡೋ ದಿನಗಳ ಮಟ್ಟಿಗೆ ಮಿಡ್ಲ್ಕ್ಲಾಸ್ ಜನರ ಜೀವನ ಸಾಗಿಸಬೇಕು ಎಂದು ಅಂದುಕೊಳ್ಳುವವರು ಇದ್ದಾರೆಯೆ? ನಿಜ ಜೀವನದಲ್ಲಿ ಹೀಗೆಂದುಕೊಳ್ಳುವವರು ಇದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಸೀತಾರಾಮ ಸೀರಿಯಲ್ ರಾಮ್ಗೆ ಹಾಗೆ ಅನ್ನಿಸಿದೆ.
ಐಪಿಎಲ್ನಲ್ಲಿ ಶಾರುಖ್ಗಿಂತಲೂ ಹೆಚ್ಚಾಗಿ ಮಿಂಚಿದ್ದು ಅವರು ಧರಿಸಿದ್ದ ವಾಚ್! ಅಬ್ಬಬ್ಬಾ ಬೆಲೆ ಇಷ್ಟೊಂದಾ?
ಹೇಳಿ ಕೇಳಿ ರಾಮ್ ಆಗರ್ಭ ಶ್ರೀಮಂತ. ಆತನ ಬಾಳಲ್ಲಿ ಮಿಡ್ಲ್ಕ್ಲಾಸ್ ಸಿಂಪಲ್ ಸೀತಾ ಎಂಟ್ರಿ ಆಗಿದೆ. ರಾಮ್ಗೆ ಬಡತನವೇ ಗೊತ್ತಿಲ್ಲ. ಸೀತಾಳಿಗೆ ಶ್ರೀಮಂತಿಕೆ ಬೇಡ. ಹೀಗಿದೆ ಇವರ ಜೋಡಿ. ಇವರಿಬ್ಬರ ಮದುವೆಗೆ ರೆಡಿ ಆಗುತ್ತಿರುವ ಮಧ್ಯೆಯೇ ರಾಮ್ ಮನೆಗೆ ಶ್ರೀಮಂತಿಕೆ ಸೀತಾಳಿಗೆ ಚುಚ್ಚುತ್ತಲೂ ಇದೆ. ಇದೇ ವೇಳೆ ನಡೆದ ಮಾತುಕತೆಯಲ್ಲಿ ಮಿಡ್ಲ್ಕ್ಲಾಸ್ ಜೀವನ ಹೇಗಿರುತ್ತದೆ ಎಂಬುದನ್ನು ಸೀತಾ, ರಾಮನಿಗೆ ಹೇಳಿದ್ದಾಳೆ. ಪೈಸೆ ಪೈಸೆಗೂ ಲೆಕ್ಕ ಹಾಕಬೇಕಾಗುತ್ತದೆ. ಒಂದು ಸಂಬಳ ಬಂದಾಗ ಇನ್ನೊಂದು ಸಂಬಳ ಬರುವವರೆಗೂ ಮ್ಯಾನೇಜ್ ಮಾಡಬೇಕಾಗುತ್ತದೆ. ಕೆಲವೊಮ್ಮೆ ಕೆಲವೇ ನೂರು ರೂಪಾಯಿಗಳಲ್ಲಿ ಜೀವನ ಸಾಗಿಸಬೇಕಾಗುತ್ತದೆ ಎನ್ನುತ್ತಾಳೆ.
ಇದನ್ನು ಕೇಳಿ ರಾಮ್ಗೆ ಆಶ್ಚರ್ಯ ಆಗುತ್ತದೆ. ಹುಟ್ಟಿನಿಂದಲೇ ಆಗರ್ಭ ಶ್ರೀಮಂತಿಕೆಯಲ್ಲಿ ಬೆಳೆದ ನನಗೆ ಇವೆಲ್ಲಾ ಗೊತ್ತೇ ಇಲ್ಲ ನೋಡಿ ಎನ್ನುತ್ತಾನೆ. ಇದೇ ವೇಳೆ ಆತ ನಾಲ್ಕು ನೂರು ರೂಪಾಯಿಗಳ ಚಾಲೆಂಜ್ ತೆಗೆದುಕೊಂಡಿದ್ದಾನೆ. ಇದರ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ನಾಲ್ಕು ನೂರು ರೂಪಾಯಿ ಇದ್ದರೆ ಬಡವರು ಇಡೀ ತಿಂಗಳು ಬದುಕಬಹುದು ಎನ್ನಿ. ಆದರೆ ಕೋಟ್ಯಧಿಪತಿ ರಾಮ್ಗೆ ಈ ನಾಲ್ಕು ನೂರನ್ನು ಒಂದು ದಿನದಲ್ಲಿ ಖರ್ಚು ಮಾಡಬೇಕಿದೆ. ಆತನಿಗೆ ಅದು ಕಡಿಮೆ ಹಣ. ಇಷ್ಟು ಕಡಿಮೆ ಹಣದಲ್ಲಿ ದಿನಪೂರ್ತಿ ಇರುವುದು ಆತನಿಗೆ ಕಷ್ಟವಾಗಿರುವ ಮಾತು. ಹಾಗಿದ್ದರೆ ವೀಕ್ಷಕರು ಆತನಿಗೆ ನೆರವಾಗಬಲ್ಲರೆ ಎಂದು ವಾಹಿನಿ ಪ್ರಶ್ನಿಸಿದೆ.
ರೊಮ್ಯಾಂಟಿಕ್ ಮೂಡ್ನಲ್ಲಿ ಶ್ರೀರಸ್ತು ಶುಭಮಸ್ತು ಪೂರ್ಣಿ: ಹನಿಮೂನ್ ಮೂಡ್ ಮುಗಿದಿಲ್ವಾ ಕೇಳ್ತಿದ್ದಾರೆ ಫ್ಯಾನ್ಸ್