ಶೋಲೆಯ ಗಬ್ಬರ್‌ಸಿಂಗ್‌ಗೆ ನಿಜ ಜೀವನದಲ್ಲಿ ರಕ್ತ ಕೊಟ್ಟು ಪ್ರಾಣ ಉಳಿಸಿದ್ದ ಅಮಿತಾಬ್ ಬಚ್ಚನ್
ಕಿತ್ನೆ ಆದ್ಮಿ ಥೇ, ತೇರಾ ಕ್ಯಾ ಹೋಗಾ ಕಲಿಯಾ, ಸೋ ಜಾ ಬೇಟಾ ನಹೀ ತೋ ಗಬ್ಬರ್ ಆ ಜಾಯೇಗಾ ಮುಂತಾದ 'ಶೋಲೆ' (Sholay) ಚಿತ್ರದ ಡೈಲಾಗ್‌ಗಳು ಇಂದಿಗೂ ಜನಪ್ರಿಯ. ಅದೇ ಸಮಯದಲ್ಲಿ ಗಬ್ಬರ್ ಪಾತ್ರದಲ್ಲಿ ನಟಿಸಿದ್ದ ಅಮ್ಜದ್ ಖಾನ್ (Amjad Khan) ಕೂಡ ಈ ಪಾತ್ರದ ಮೂಲಕ ಜನರ ಮನಸ್ಸಿನಲ್ಲಿ ಅಮರರಾಗಿದ್ದಾರೆ. ಅಮ್ಜದ್ ಖಾನ್ ನಿಧನರಾಗಿ 30 ವರ್ಷ ಕಳೆದರೂ ಇಂದಿಗೂ ಗಬ್ಬರ್ ರೂಪದಲ್ಲಿ ಜನಮನದಲ್ಲಿ ಜೀವಂತವಾಗಿದ್ದಾರೆ. ಅವರು 27 ಜುಲೈ 1992 ರಂದು ಹೃದಯಾಘಾತದಿಂದ ನಿಧನರಾದರು. ನಿಜ ಜೀವನದಲ್ಲಿ ಅಮಿತಾಭ್ ಬಚ್ಚನ್ (Amita Bachchan) ಗಬ್ಬರ್ ಸಿಂಗ್ ಪ್ರಾಣ ಉಳಿಸಿದ್ದರು.
ಅಮ್ಜದ್ ಖಾನ್ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಆದರೆ ಇದಕ್ಕೆ ಒಂದು ಕಾರಣವೆಂದರೆ ಅವರಿಗೆ ಸಂಭವಿಸಿದ ಅಪಘಾತ. ಮುಂಬೈನಿಂದ ಗೋವಾಕ್ಕೆ ಹೋಗುತ್ತಿದ್ದಾಗ ಅಮ್ಜದ್ ಖಾನ್ ಅವರಿಗೆ ಗಂಭೀರ ಅಪಘಾತ ಸಂಭವಿಸಿತ್ತು.
ಈ ಅಪಘಾತ ನಡೆದಿದ್ದು 1986ರಲ್ಲಿ. ಅಮಿತಾಬ್ ಬಚ್ಚನ್ ಅವರು ಅಮ್ಜದ್ ಖಾನ್ ಅವರ ಜೀವ ಉಳಿಸಲು ತಮ್ಮ ರಕ್ತವನ್ನು ಸಹ ನೀಡಿದರು. ಚಿಕಿತ್ಸೆಯ ಸಮಯದಲ್ಲಿ ಅವರು ಆಸ್ಪತ್ರೆಯಲ್ಲಿಯೇ ಇದ್ದರು ಮತ್ತು ಅವರು ಎಲ್ಲಾ ದಾಖಲೆಗಳಿಗೆ ಸಹಿ ಹಾಕಿದ್ದರು.
ಈ ಅಪಘಾತದಲ್ಲಿ ಅಮ್ಜದ್ ಖಾನ್ ಗಂಭೀರವಾಗಿ ಗಾಯಗೊಂಡಿದ್ದರು ಮತ್ತು ಅವರು ಕೋಮಾಕ್ಕೆ ಹೋದರು. ಅವರು ಈ ಸ್ಥಿತಿಯಿಂದ ಬೇಗನೆ ಹೊರಬಂದರು. ಚಿಕಿತ್ಸೆಯ ಸಮಯದಲ್ಲಿ ನೀಡಿದ ಔಷಧಿಗಳಿಂದಾಗಿ ಅಮ್ಜದ್ ಅವರ ತೂಕವು ನಿರಂತರವಾಗಿ ಹೆಚ್ಚಾಯಿತು. ಅಪಘಾತದ ನಂತರ 6 ವರ್ಷಗಳಲ್ಲಿ, ಅವರ ತೂಕವು ಹಲವಾರು ಪಟ್ಟು ಹೆಚ್ಚಿತು. ಇದಕ್ಕೆ ಕಾರಣ ಅವರಿಗೆ ಚಿಕಿತ್ಸೆ ವೇಳೆ ನೀಡಿದ ಸ್ಟೆರಾಯ್ಡ್.
ಖಾನ್ ಅವರ ತೂಕ ಹೆಚ್ಚಳದಿಂದಾಗಿ, ಅನೇಕ ವೈದ್ಯರು ಅವರಿಗೆ ಹೃದಯಾಘಾತದ ಅಪಾಯವಿದೆ ಎಂದು ಅಂದಾಜಿಸಿದ್ದರು. ಈ ಅಪಘಾತದ 6 ವರ್ಷಗಳ ನಂತರ, ವೈದ್ಯರ ಮಾತು ನಿಜವಾಯಿತು.
ಅಮ್ಜದ್ ಖಾನ್ 27 ಜುಲೈ 1992 ರಂದು 52 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು. ಅವರು ನಿಧನರಾದಾಗ, 'ರುಡಾಲಿ' ರೆಸ್ಟ್‌ಲೆಸ್ ಮತ್ತು 'ಅನೋಖಿ ಚಾಲ್' ಸೇರಿದಂತೆ 10 ಚಿತ್ರಗಳು ಮೇಕಿಂಗ್ ಹಂತದಲ್ಲಿದ್ದವು. ಈ ಎಲ್ಲಾ ಸಿನಿಮಾಗಳು ಅವರ ಸಾವಿನ ನಂತರ ಬಿಡುಗಡೆಯಾದವು.