ಗೂಬೆ ಅನ್ನೋಕೆ ಭಯ ಆಗುತ್ತೆ, ಬೀಪ್ ಪದ ಬಳಸಿಲ್ಲ ನಂಗೂ ಫ್ಯಾಮಿಲಿ ಇದೆ: ರಕ್ಷಕ್ ಬುಲೆಟ್
ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಗೂಬೆ ಪದದ ಬಗ್ಗೆ ಚರ್ಚೆ ಮಾಡಿದ ರಕ್ಷಕ್ ಬುಲೆಟ್. ನಿಜಕ್ಕೂ ಎಲಿಮಿನೇಟ್ ಆಗಲು ಕಾರಣವೇನು?
ಕನ್ನಡ ಚಿತ್ರರಂಗದ ಅದ್ಭುತ ಹಾಸ್ಯನಟ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಬಿಗ್ ಬಾಸ್ ಸೀಸನ್ 10ರಲ್ಲಿ ಸ್ಪರ್ಧಿಸಿ ಕ್ಯಾಪ್ಟನ್ ಆಗಿ ಒಂದು ವಾರ ಎಂಜಾಯ್ ಮಾಡಿ ನಾಲ್ಕನೇ ವಾರಕ್ಕೆ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಈ ನಡುವೆ ರಕ್ಷಕ್ ಗೂಬೆ ಅನ್ನೋ ಪದ ಬಳಸಿದ್ದು ತಪ್ಪಾಯ್ತಾ ಅನ್ನೋದು ಜನರ ಪ್ರಶ್ನೆ. ಇದಕ್ಕೆ ಸ್ವತಃ ರಕ್ಷಕ್ ಸ್ಪಷ್ಟನೆ ನೀಡಿದ್ದಾರೆ.
'ಇನ್ನು ಮುಂದೆ ಗೂಬೆ ಅನ್ನೋ ಪದ ಬಳಸುವುದಕ್ಕೆ ಭಯ ಪಡಬೇಕು ನಾನು. ಗೂಬೆ ಅನ್ನೋ ಪದ ಇಷ್ಟು ದೊಡ್ಡದಾ? ನಾನು ಗೂಬೆ ಅನ್ನೋ ಪದ ಬಳಸಿದ್ದು ಪ್ರತಾಪ್‌ಗೆ ಬೇಸರ ಆಗಿದೆ ಅದಿಕ್ಕೆ ನಾನು ರಾತ್ರಿ ಅವರನ್ನು ಎಬ್ಬಿಸಿ ಕ್ಷಮೆ ಕೇಳುತ್ತೀನಿ. ಜಗಳಕ್ಕೆ ಸಾರಿ ಕೇಳಿಲ್ಲ. ಪಂಚಾಯಿತಿಯಲ್ಲೂ ಸುದೀಪ್ ಅಣ್ಣ ಅವರಿಗೆ ಹೇಳುತ್ತೀನಿ ಸ್ನೇಹಿತರ ಜೊತೆ ಇರುವಾಗ ಇದು ತುಂಬಾ ಕಾಮನ್ ಆಗಿ ಬರುವ ಪದ ಅಂತ ಅದು ಬಿಟ್ಟು ಬೇರೆ ಯಾವ ಪದಗಳನ್ನು ನಾನು ಮನೆಯಲ್ಲಿ ಬಳಸಿಲ್ಲ. ನಾನು ಎಲ್ಲಾ ರೀತಿಯ ಪದಗಳನ್ನು ಮಾತನಾಡುತ್ತೀನಿ ಆದರೆ ನನ್ನ ಬಾಯಲ್ಲಿ ಅವೆಲ್ಲಾ ಬಂದಿಲ್ಲ. ನನಗೂ ಬುದ್ಧಿ ಇದೆ ಅದಿಕ್ಕೆ ಬಿಗ್ ಬಾಸ್ ಮನೆಯೊಳಗೆ ಹೋಗಿರುವುದು ಚಿಕ್ಕ ಹುಡುಗ ಬುದ್ಧಿ ಇಲ್ಲ ಅಂದ್ರೆ ಕಳುಹಿಸುತ್ತಿರಲಿಲ್ಲ. ಕರ್ನಾಟಕದ ಜನರು ನೋಡುತ್ತಿರುತ್ತಾರೆ ಹೇಗೆ ಮಾತನಾಡಬೇಕು ಹೇಗೆ ವರ್ತಿಸಬೇಕು ಎಂದು ಚೆನ್ನಾಗಿ ಗೊತ್ತಿದೆ' ಎಂದು ಕನ್ನಡ ಖಾಸಗಿ ಯುಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ನಂಗೆ ಪಬ್ಲಿಸಿಟಿ ಬೇಕು ಅಷ್ಟೇ, ಕೋಪ ಬಂದ್ರೆ ಬೀಪ್ *** ಪದಗಳು ಬರುತ್ತೆ: ರಕ್ಷಕ್ ಬುಲೆಟ್
'ವಿನಯ್ ಅವರಿಗೆ ಸಮಸ್ಯೆ ಆಗುತ್ತಿದೆ ಅಂದ್ರೆ ಪ್ರಶ್ನೆ ಮಾಡುವರು. ವಿನಯ್ ಧ್ವನಿ ಜೋರಾಗಿದೆ ಅದಿಕ್ಕೆ ಕೆಲವರಿಗೆ ಬೇಕು ಬೇಕು ಎಂದು ಜಗಳ ಮಾಡುತ್ತಿದ್ದಾರೆ ಅನಿಸುತ್ತಿರುತ್ತದೆ. ಏನೇ ಇದ್ದರೂ ವಿನಯ್ ಸ್ಟ್ಯಾಂಡ್ ತೆಗೆದುಕೊಳ್ಳುತ್ತಾರೆ. ಸಂಗೀತಾ, ತನಿಷಾ, ಕಾರ್ತಿಕ್ ಮತ್ತು ಪ್ರತಾಪ್ ಜೊತೆ ಜಗಳ ಮಾಡಿದ್ದಾರೆ. ವಿನಯ್ ಅನ್ನೋ ವ್ಯಕ್ತಿ ಇರೋದೇ ಹಾಗೆ ಅದನ್ನು ಜಗಳ ಜೋರು ಧ್ವನಿ ಅಂತ ಜಗಳ ಮಾಡುತ್ತಾರೆ. ಆ ಗೇಮ್ ಅಷ್ಟು ಅಗ್ರೆಸಿವ್ ಆಗಿತ್ತು. ವಿನಯ್ ಮೊದಲೇ ಹೇಳುತ್ತಾರೆ ನಮ್ಮ ಕಡೆಯಿಂದ ಇಬ್ಬರು ಹೆಣ್ಣು ಮಕ್ಕಳು ಬರುತ್ತಾರೆ ಎಂದು. ಆದರೆ ಅವರ ಕಡೆ ಸಮಸ್ಯೆ ಇದ್ದ ಕಾರಣ ಇಬ್ಬರು ಹುಡುಗರನ್ನು ಕಳುಹಿಸಿದ್ದರು. ಸಂಗೀತಾ ತಂಡದವರು ಜೋರು ಮಾಡುತ್ತಾರೆ...ಬಿಗ್ ಬಾಸ್ ಒಂದು ಲೈನ್ ದಾಟಬಾರದು ಎನ್ನುತ್ತಾರೆ ಆ ಲೈನ್ ಮೀರಿ ಮಾತುಗಳು ಬಂದು ಜಗಳ ಆಗುತ್ತೆ. ನಮ್ರತಾ ಕೈಗೆ ಪೆಟ್ಟು ಬಿದ್ದ ಮೇಲೆ ಜಗಳ ಜೋರಾಗುತ್ತಿದೆ. ಹೋಗಲೇ ಬಾರಲೇ ಎಂದು ಸಂಗೀತಾ ನಮ್ರತಾ ಜಗಳ ಮಾಡುತ್ತಾರೆ. ನೂರು ದಿನ ಆದ್ಮೇಲೆ ನಮಗೆ ಮತ್ತೆ ಜೀವನ ಇದೆ ಅಲ್ಲಿದ್ದೀನಿ ಅಂತ ಏನೋ ಮಾತನಾಡಿಕೊಂಡು ಬರೋಕೆ ಆಗಲ್ಲ. ಫ್ಯಾಮಿಲಿಗೆ ಪ್ರಾಮಿಸ್ ಕೊಟ್ಟಿದ್ದೆ ನಾನು ಜಗಳ ಮಾಡುವುದಿಲ್ಲ ಮನೆಯಲ್ಲಿ ಇರುವ ಹಾಗೆ ಇರುವೆ ಎಂದು ಹೇಳಿದ್ದೆ. ಆ ಒಂದು ದಿನ ವಿನಯ್ ತಪ್ಪು ಮಾಡಿದ್ದರು ಮುಂದಿನ ದಿನಗಳಲ್ಲಿ ಮತ್ತೆ ಆ ತಪ್ಪು ಮಾಡುವುದಿಲ್ಲ' ಎಂದು ವಿನಯ್ ಮಾತುಗಳ ಬಗ್ಗೆ ಹೇಳಿದ್ದಾರೆ.