ಸ್ಟಾರ್‌ ಸುವರ್ಣ ವಾಹಿನಿಯು ತನ್ನ ವೀಕ್ಷಕರಿಗೆ ತುಂಬ ಖುಷಿಯಾದ ಸುದ್ದಿ ಕೊಟ್ಟಿದೆ. ಶನಿವಾರ-ರವಿವಾರ ಬಂತು ಅಂತ ವೀಕ್ಷಕರು ಬೇಸರ ಮಾಡಿಕೊಳ್ಳಬೇಕಿಲ್ಲ. 

ಈಗಾಗಲೇ ಕನ್ನಡ ಕಿರುತೆರೆಯಲ್ಲಿ ಭರ್ಜರಿ ಕಾರ್ಯಕ್ರಮಗಳು ಪ್ರಸಾರ ಆಗುತ್ತಿವೆ. ಇನ್ನು ಬಹುತೇಕ ಧಾರಾವಾಹಿಗಳು ವಾರದಲ್ಲಿ ಐದು ಅಥವಾ ಆರು ದಿನ ಪ್ರಸಾರ ಆಗುತ್ತವೆ. ಈಗ ಸ್ಟಾರ್‌ ಸುವರ್ಣ ವಾಹಿನಿಯ ಎಲ್ಲ ಧಾರಾವಾಹಿಗಳು ವಾರದ ಎಲ್ಲ ದಿನಗಳು ಪ್ರಸಾರ ಆಗಲಿವೆಯಂತೆ.

ಹೌದು, ಈ ಗುಡ್‌ನ್ಯೂಸ್‌ ನೀಡಲು ಸ್ಟಾರ್‌ ಸುವರ್ಣ ವಾಹಿನಿಯು ಹೊಸ ಪ್ರೋಮೋ ಶೇರ್‌ ಮಾಡಿದೆ. ಸ್ಟಾರ್‌ ಸುವರ್ಣದ ಎಲ್ಲ ಕಾರ್ಯಕ್ರಮಗಳು ಇನ್ಮುಂದೆ ವಾರದ ಏಳು ದಿನವೂ ಪ್ರಸಾರ ಆಗಲಿವೆಯಂತೆ. ಪ್ರತಿ ನಿತ್ಯ ಸಂಜೆ 6-10.30ರವರೆಗೆ ಎಲ್ಲ ಕಾರ್ಯಕ್ರಮಗಳು ಪ್ರಸಾರ ಆಗಲಿವೆ.

ʼಆಸೆʼ ಧಾರಾವಾಹಿ
ನಿನಾದ್‌ ಹರಿತ್ಸ, ಪ್ರಿಯಾಂಕಾ ಡಿ ಎಸ್‌, ಮಂಡ್ಯ ರಮೇಶ್‌, ಅಮೃತಾ ರಾಮಮೂರ್ತಿ, ಇಂಚರಾ ಜೋಶಿ ಅವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ಮೂವರು ಗಂಡು ಮಕ್ಕಳಿರುವ ಮನೆಯಲ್ಲಿ ಏನೆಲ್ಲ ಸಮಸ್ಯೆಗಳು ಬರಲಿವೆ? ಇನ್ನು ಮನೆಯ ಮೂವರು ಸೊಸೆಯರಲ್ಲಿ ಅತ್ತೆ ಬೇಧ-ಭಾವ ಮಾಡುವ ವಿಷಯವೂ ಇಲ್ಲಿದೆ. ಈ ಮೂಲಕ ಸಾಮಾನ್ಯ ಕುಟುಂಬದಲ್ಲಿ ನಡೆಯುವ ಜಟಾಪಟಿಗಳನ್ನು ಇಲ್ಲಿ ತೋರಿಸಲಾಗ್ತಿದೆ. 

ಭಾಗ್ಯಲಕ್ಷ್ಮಿ ಅಮ್ಮ-ಮಕ್ಕಳ ಭರ್ಜರಿ ರೀಲ್ಸ್​: ಯಾರ ಕಣ್ಣೂ ಬೀಳದಿರಲಪ್ಪ ಎಂದು ದೃಷ್ಟಿ ತೆಗೆದ ನೆಟ್ಟಿಗರು!

ʼಗೌರಿಶಂಕರʼ ಧಾರಾವಾಹಿ
ಯಶವಂತ್‌, ದಿವ್ಯಾ, ಭಾನುಪ್ರಕಾಶ್‌, ಸ್ಪಂದನಾ ಪ್ರಸಾದ್‌ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಸಂಜೆ 6.30ಕ್ಕೆ ಈ ಧಾರಾವಾಹಿ ಪ್ರಸಾರ ಆಗುವುದು. ಶಿಕ್ಷಣದ ಮಹತ್ವ ಗೊತ್ತಿಲ್ಲದ ಒಂದು ಕುಟುಂಬ, ಸಂಪ್ರದಾಯ, ನೈತಿಕತೆ ಹೊಂದಿರುವ ಇನ್ನೊಂದು ಕುಟುಂಬದ ಮಧ್ಯೆ ನಡೆಯುವ ಕದನ ಈ ಧಾರಾವಾಹಿಯಲ್ಲಿದೆ.

ʼನೀನಾದೇ ನಾʼ ಧಾರಾವಾಹಿ
ʼನೀನಾದೆ ನಾʼ ಧಾರಾವಾಹಿಯಲ್ಲಿ ದಿಲೀಪ್‌ ಶೆಟ್ಟಿ, ಖುಷಿ ಶಿವು ಅವರು ನಟಿಸುತ್ತಿದ್ದಾರೆ. ಈ ಧಾರಾವಾಹಿಯ ಎರಡನೇ ಭಾಗ ಇದಾಗಿದೆ. ವಿಕ್ರಮ್‌ ಹಾಗೂ ವೇದಾ ಈ ಧಾರಾವಾಹಿಯ ಕಥಾ ನಾಯಕ-ನಾಯಕಿ. ರೌಡಿ ವಿಕ್ರಮ್‌, ಬಟ್ಟೆ ವ್ಯಾಪಾರ ಮಾಡುವ ವೇದಾಗೆ ಲವ್‌ ಆಗುತ್ತದೆಯೇ? ಇವರಿಬ್ಬರನ್ನು ದೂರ ಮಾಡಲು ವಿಲನ್‌ಗಳು ಏನೆಲ್ಲ ಮಾಡುತ್ತಾರೆ ಎನ್ನೋದು ಈ ಧಾರಾವಾಹಿಯ ಒನ್‌ಲೈನ್‌ ಸ್ಟೋರಿ. 

Bigg Boss Kannada 11 ಮುಗಿಯುತ್ತಿದ್ದಂತೆ ವೀಕ್ಷಕರಿಗೆ ಎರಡು ಬಂಪರ್‌ ಉಡುಗೊರೆ ಕೊಟ್ಟ ಕಲರ್ಸ್‌ ವಾಹಿನಿ!

ʼನಿನ್ನ ಜೊತೆ ನನ್ನ ಕಥೆʼ ಧಾರಾವಾಹಿ
ʼನಿನ್ನ ಜೊತೆ ನನ್ನ ಕಥೆʼ ಧಾರಾವಾಹಿಯಲ್ಲಿ ಕಾಂಟ್ರ್ಯಾಕ್ಟ್‌ ಮದುವೆ ಕಥೆ ಇದೆ. ತನ್ನ ಅತ್ತೆ ಮಗಳನ್ನು ಮದುವೆಯಾಗಲು ಇಷ್ಟಪಡದ ಇನ್‌ಸ್ಪೆಕ್ಟರ್‌, ಒಂದು ಹುಡುಗಿಗೆ ತಾಳಿ ಕಟ್ಟುತ್ತಾನೆ. ಮದುವೆಯಾಗಿ ಒಂದು ವರ್ಷದ ಬಳಿಕ ಈ ಹುಡುಗಿ ಅವನ ಮನೆ ತೊರೆದು ಹೋಗಬೇಕು. ಕಾಂಟ್ರ್ಯಾಕ್ಟ್‌ ಮ್ಯಾರೇಜ್‌ ಮಾಡಿಕೊಂಡ ಈ ಜೋಡಿ ಸಾಯೋ ತನಕ ಒಂದಾಗಿರತ್ತಾ? ಎನ್ನೋದು ಈ ಧಾರಾವಾಹಿಯ ಒನ್‌ಲೈನ್‌ ಸ್ಟೋರಿ.

ʼಅವನು ಮತ್ತೆ ಶ್ರಾವಣಿʼ ಧಾರಾವಾಹಿ
ʼಅವನು ಮತ್ತೆ ಶ್ರಾವಣಿʼ ಧಾರಾವಾಹಿಯಲ್ಲಿ ಹಳೇ ದ್ವೇಷದ ಕಥೆಯಿದೆ. ಶ್ರಾವಣಿ ಹಾಗೂ ಅಭಿ ಒಮ್ಮೆ ಮದುವೆಯಾಗಿ ಡಿವೋರ್ಸ್‌ ಪಡೆದು, ಮತ್ತೆ ಮದುವೆ ಆಗುತ್ತಾರೆ. ಇವರಿಬ್ಬರ ಮಧ್ಯೆ ಮತ್ತೆ ಪ್ರೀತಿ ಹುಟ್ಟಿಕೊಳ್ಳುವುದು. ಅಭಿ ಮನೆಗೆ ಬಂದ ಶ್ರಾವಣಿ ಆದಷ್ಟು ಬೇಗ ಅವನ ಮನೆಯಲ್ಲಿ ಮುಖವಾಡ ಹಾಕಿಕೊಂಡು ಕೂತಿರುವ ಸಂಯುಕ್ತಾಳ ಬಂಡವಾಳ ಬಯಲು ಮಾಡ್ತಾನಾ ಅಂತ ಕಾದು ನೋಡಬೇಕಿದೆ. 

ಇನ್ನುಳಿದಂತೆ ʼಶ್ರೀದೇವಿ ಮಹಾತ್ಮೆʼ, ʼಕಾವೇರಿ ಕನ್ನಡ ಮೀಡಿಯಂʼ ಧಾರಾವಾಹಿಗಳು ಪ್ರಸಾರ ಆಗುತ್ತಿವೆ. ʼಅರಗಿಣಿ 2ʼ, ‘ಅನುಪಮ’, ʼಸುವರ್ಣ ಗೃಹಮಂತ್ರಿʼ, ʼಬೊಂಬಾಟ್‌ ಭೋಜನʼ, ʼಪ್ರೀತಿಗಾಗಿʼ, ʼಸುವರ್ಣ ಸಂಕಲ್ಪʼ, ʼಎಡೆಯೂರು ಸಿದ್ದಲಿಂಗೇಶ್ವರʼ ಧಾರಾವಾಹಿಗಳು ಪ್ರಸಾರ ಆಗುತ್ತಿವೆ. ಮಧ್ಯಾಹ್ನದ ನಂತರದಲ್ಲಿ ಡಬ್ಬಿಂಗ್‌ ಧಾರಾವಾಹಿಗಳು ಪ್ರಸಾರ ಆಗುತ್ತವೆ. ಸಂಜೆ ಆರು ಗಂಟೆಯಿಂದ ಸ್ವಮೇಕ್‌ ಧಾರಾವಾಹಿಗಳು ಪ್ರಸಾರ ಆಗಲಿವೆ.