ಕನ್ನಡ ಕಿರುತೆರೆಯ ಜನಪ್ರಿಯ ನಟರಾದ ಐಶ್ವರ್ಯ ಸಾಲಿಮಠ ಮತ್ತು ವಿಜಯ್ ಜು ತಮ್ಮ ಮುದ್ದಾದ ಅವಳಿ ಮಕ್ಕಳಿಗೆ ಅದ್ಧೂರಿಯಾಗಿ ನಾಮಕರಣ ಮಾಡಿದ್ದು, ನಾಮಕರಣದ ವಿಡಿಯೋ ಗ್ಲಿಮ್ಸ್ ಹಂಚಿಕೊಂಡು ಮಕ್ಕಳ ಹೆಸರನ್ನು ರಿವೀಲ್ ಮಾಡಿದ್ದಾರೆ. ಮಕ್ಕಳಿಗೆ ತುಂಬಾನೆ ವಿಶಿಷ್ಟವಾದ ಹೆಸರನ್ನಿಟ್ಟಿದ್ದಾರೆ ಜೋಡಿ. 

ಐಶ್ವರ್ಯ ಸಾಲಿಮಠ್-ವಿನಯ್ ಮಕ್ಕಳ ನಾಮಕರಣ

ಕನ್ನಡ ಕಿರುತೆರೆಯ ಜನಪ್ರಿಯ ಜೋಡಿಗಳಾದ ಐಶ್ವರ್ಯ ಸಾಲಿಮಠ್ ಮತ್ತು ವಿನಯ್ ಜು ಜೋಡಿ , ಕಳೆದ ಡಿಸೆಂಬರ್ ತಿಂಗಳಲ್ಲಿ ಪೋಷಕರಾಗಿ ಭಡ್ತಿ ಪಡೆದಿದ್ದರು. ಇದೀಗ ಜೋಡಿ ಮೂರು ತಿಂಗಳ ಬಳಿಕ ತಮ್ಮ ಮುದ್ದಾದ ಅವಳಿ ಮಕ್ಕಳಿಗೆ ನಾಮಕರಣ ಮಾಡಿದ್ದು, ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಕ್ಕಳ ಯಾವುದೇ ಫೋಟೊಗಳನ್ನು ಹಂಚಿಕೊಳ್ಳದೇ, ಕೇವಲ ಮಕ್ಕಳ ಹೆಸರನ್ನ ತಮ್ಮ ಅಭಿಮಾನಿಗಳಿಗಾಗಿ ರಿವಿಲ್ ಮಾಡಿದ್ದಾರೆ. ಜೊತೆಗೆ ಮಕ್ಕಳ ಹೆಸರು ಹೇಗಿದೆ ಎಂದು ಕಾಮೆಂಟ್ ಮಾಡಿ ಎಂದು ಈ ಜೋಡಿ ಅಭಿಮಾನಿಗಳನ್ನು ಕೇಳಿಕೊಂಡಿದಾರೆ.

Add Asianetnews Kannada as a Preferred SourcegooglePreferred

ನಟಿ ಐಶ್ವರ್ಯ ಸಾಲಿಮಠ ಹಲವಾರು ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡ ನಟಿ, ‘ಅಗ್ನಿಸಾಕ್ಷಿ’, ‘ರಾಮಾಚಾರಿ’ , ‘ಸೇವಂತಿ’ ಸೇರಿ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅವರ ಪತಿ ವಿನಯ್ ಜು ಕೂಡ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಮಿಂಚಿದ್ದಾರೆ. ಈ ಜೋಡಿ ನವಂಬರ್ ತಿಂಗಳಲ್ಲಿ ಅದ್ಧೂರಿಯಾಗಿ ಸೀಮಂತ ಶಾಸ್ತ್ರ ಮಾಡಿಕೊಂಡಿದ್ದರು. ಇದಾಗಿ ಡಿಸೆಂಬರ್ ತಿಂಗಳಲ್ಲಿ ಐಶ್ವರ್ಯ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಕೆಲವು ಸಮಯದ ಹಿಂದೆ ವಿಡೀಯೋ ಮಾಡಿ ತಮಗೆ ಒಂದು ಗಂಡು ಮತ್ತು ಮತ್ತೊಂದು ಹೆಣ್ಣು ಮಗು ಹುಟ್ಟಿರುವುದಾಗಿ ರಿವೀಲ್ ಮಾಡಿದ್ದರು. ಇದೀಗ ತಮ್ಮ ಇನ್’ಸ್ಟಾಗ್ರಾಂನಲ್ಲಿ ಮಕ್ಕಳ ನಾಮಕರಣದ ವಿಡಿಯೋ ರಿಲೀವ್ ಮಾಡಿದ್ದಾರೆ.

View post on Instagram

ನಾಮಕರಣದ ಸಂಭ್ರಮದಲ್ಲಿ ಐಶ್ವರ್ಯ ಕೆಂಫು ಬಣ್ಣದ ಸೀರೆ ನೀಲಿ ಬಣ್ಣದ ಬ್ಲೌಸಲ್ಲಿ ಮಿಂಚಿದರೆ, ವಿನಯ್, ಐವರಿ ಬಣ್ಣದ ಜುಬ್ಬಾ ಮೇಲೆ ನೀಲಿ ಬಣ್ಣದ ಕೋಟ್ ಧರಿಸಿ, ಐಶ್ವರ್ಯಗೆ ಮ್ಯಾಚ್ ಮಾಡಿದ್ದಾರೆ. ಇಬ್ಬರು ಸೇರಿ ಮಕ್ಕಳ ಹೆಸರು ‘ವಜ್ರ-ವೈಢೂರ್ಯ’ ಎಂದು ರಿವೀಲ್ ಮಾಡಿದ್ದಾರೆ. ಮಗನ ಹೆಸರು ವಜ್ರ ಹಾಗೂ ಮಗಳ ಹೆಸರು ವೈಢೂರ್ಯ ಎನ್ನುವುದಾಗಿದೆ. ಮಕ್ಕಳ ಮುದ್ದಾದ ಹೆಸರನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದು, ಹೆಸರು ತುಂಬಾನೆ ವಿಭಿನ್ನವಾಗಿದೆ, ತುಂಬಾನೆ ಚೆನ್ನಾಗಿದೆ ಎಂದಿದ್ದಾರೆ.

ಇನ್ನು ವಿನಯ್ ಮತ್ತು ಐಶ್ವರ್ಯ ಪ್ರೀತಿಯ ಬಗ್ಗೆ ಹೇಳೋದಾದರೆ 2016 ಜೂನ್‌ 7ರಂದು ‘ಮಹಾಸತಿ’ ಧಾರಾವಾಹಿ ಪ್ರೋಮೋ ಶೂಟಿಂಗ್‌ನಲ್ಲಿ ಇವರಿಬ್ಬರ ಭೇಟಿಯಾಗಿತ್ತು. ಆ ಧಾರಾವಾಹಿಯಲ್ಲಿ ವಿನಯ್‌ ಹೀರೋ ಆಗಿದ್ದರು. ಬಳಿಕ ವಿನಯ್‌ ಹಾಗೂ ಐಶ್ವರ್ಯಾ ಅವರು ಬೇರೆ ಬೇರೆ ಧಾರಾವಾಹಿಗಳಲ್ಲಿ ನಟಿಸಿದರು. ಆದರೆ ಅವರ ಸ್ನೇಹ ಗಟ್ಟಿಯಾಗಿ ಪ್ರೀತಿಗೆ ತಿರುಗಿತ್ತು. ಮೂಲತಃ ಉತ್ತರ ಕರ್ನಾಟಕದವರಾದ ಈ ಜೋಡಿ ಕುಟುಂಬದವರ ಒಪ್ಪಿಗೆ ಪಡೆದು 2022ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಐಶ್ವರ್ಯಾ ಅವರು ‘ಅಗ್ನಿಸಾಕ್ಷಿ’, ‘ಸೇವಂತಿ’, ‘ಸರಯೂ’, ‘ರಾಮಾಚಾರಿ’ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ವಿನಯ್‌ ಕೂಡ ಕೆಲ ಸೀರಿಯಲ್‌, ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಳಿಕ ‘ರಾಜಾ ರಾಣಿ’ ರಿಯಾಲಿಟಿ ಶೋನಲ್ಲಿ ಈ ಜೋಡಿ ಸ್ಪರ್ಧಿಸಿದ್ದರು. ಐಶ್ವರ್ಯ ‘ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋನಲ್ಲೂ ಭಾಗವಹಿಸಿದ್ದರು.