ಕಿರುತೆರೆಯ ಜನಪ್ರಿಯ ಧಾರಾವಾಹಿ 'ಅಗ್ನಿಸಾಕ್ಷಿ' ಯಾರಿಗೆ ತಾನೆ ಗೊತ್ತಿಲ್ಲ ಹೇಳಿ?  ಹೆಸರು ಕೇಳಿದ ತಕ್ಷಣ ಕಣ್ಣೆದುರು ಬರುವುದು ಸಿದ್ಧಾರ್ಥ್‌ ಅಲಿಯಾಸ್‌ ವಿಜಯ್ ಸೂರ್ಯ್ ಹಾಗೂ ಸನ್ನಿಧಿ ಅಲಿಯಾಸ್‌ ವೈಷ್ಣವಿ ಗೌಡ. ರಾತ್ರಿ 8 ಗಂಟೆ ಆದರೆ ಸಾಕು ಈ ಜೋಡಿ ಆನ್ ಸ್ಕ್ರೀನ್‌ ರೋಮ್ಯಾನ್ಸ್ ನೋಡಲು ವೀಕ್ಷಕರು ಕಾತುರದಿಂದ ಕಾಯುತ್ತಿದ್ದರು. ಕಥೆ ಕೊಂಚ ವಿಭಿನ್ನವಾಗಿರಬೇಕೆಂದು ಸಾಕಷ್ಟು ಬದಲಾವನೇ ಮಾಡಲಾಗಿತ್ತು. 

ಧಾರಾವಾಹಿಯಲ್ಲಿ ಇನ್ನೇನು ಇವರಿಬ್ಬರು ಒಂದಾಗುತ್ತಿದಂತೆ ಸಿದ್ಧಾರ್ಥ್ ವಿದೇಶಕ್ಕೆ ಹಾರುತ್ತಾರೆ, ಮನೆಯ ಎಲ್ಲಾ ಕಷ್ಟಗಳನ್ನು ಸನ್ನಿಧಿ ಒಬ್ಬಂಟಿಯಾಗಿ ಎದುರಿಸುತ್ತಾಳೆ. 1500 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿ ಧಾರಾವಾಹಿ ಮುಕ್ತಾಯಗೊಂಡಿದೆ. 'ಅಗ್ನಿಸಾಕ್ಷಿ' ಧಾರಾವಾಹಿಯಿಂದ ಹೊರ ಬಂದ ನಂತರ ವಿಜಯ್ ಸೂರ್ಯ 'ಪ್ರೇಮಲೋಕ' ಸೀರಿಯಲ್‌ಗೆ ಕಾಲಿಟ್ಟು ಲವರ್‌ ಬಾಯ್‌ ಪಾತ್ರದಲ್ಲಿ ಮಿಂಚುತ್ತಿದ್ದಾರೆ.

ಗಂಡು ಮಗುವಿಗೆ ತಂದೆಯಾದ 'ಅಗ್ನಿಸಾಕ್ಷಿ' ವಿಜಯ್ ಸೂರ್ಯ! .

ಧಾರಾವಾಹಿಗಳಷ್ಟೇಯಲ್ಲದೆ ಸಿನಿಮಾದಲ್ಲೂ ವಿಜಯ್ ಸೂರ್ಯ ಅಭಿನಯಿಸಿದ್ದಾರೆ . ನಾಗತಿಹಳ್ಳಿ ಚಂದ್ರಶೇಖರ್ ಅವರ ನಿರ್ದೇಶನದ , ಅಶ್ವಿನಿ ನಕ್ಷತ್ರ ಖ್ಯಾತಿಯ ಮಯೂರಿ ನಾಯಕಿಯಾಗಿದ್ದ ಇಷ್ಟಕಾಮ್ಯ ಚಿತ್ರದಲ್ಲಿ ತಮ್ಮ ಅದ್ಭುತ ನಟನೆಯ ಮೂಲಕ ಕನ್ನಡ ಸಿನಿಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದರು . 

ಇತ್ತೀಚಿಗೆ ತಮ್ಮ ಮಗುವಿನ ಫೋಟೋ ರಿವೀಲ್ ಮಾಡಿ ಸುದ್ದಿಯಾಗಿದ್ದ ವಿಜಯ್ ಅವರು ಇದೀಗ ಲಾಕ್ ಡೌನ್ ಸಮಯದಲ್ಲಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ . 

ಎಲ್ಲೇಡೆ ಕೊರೋನಾ ಲಾಕ್‌ಡೌನ್‌ ಘೋಷಣೆ ಆದ ದಿನದಿಂದಲ್ಲೂ ಸಿನಿಮಾ ಹಾಗೂ ಧಾರಾವಾಹಿ ಚಿತ್ರೀಕರಣ ನಡೆಯುತ್ತಿಲ್ಲ. ಹೀಗಾಗಿ ನಟ-ನಟಿಯರು ಮನೆಯಲ್ಲಿಗೆ ಟೈಂ ಪಾಸ್‌ ಮಾಡುತ್ತಿದ್ದಾರೆ. ಮನೆಯಲ್ಲಿದ್ದೀವಿ ಅಂತಾ ಬ್ಯೂಟಿ ಬಗ್ಗೆ ಮರೆಯೋಕೆ ಆಗುತ್ತಾ? ಅದಿಕ್ಕೆ ಎಲ್ಲರೂ ಮನೆಯಲ್ಲಿಯೇ ಸೆಲ್ಫ್‌ ಗ್ರೂಮಿಂಗ್ ಮಾಡುವುದನ್ನು ಕಲಿತುಕೊಂಡಿದ್ದಾರೆ. 

 

 
 
 
 
 
 
 
 
 
 
 
 
 
 
 

A post shared by Vijay Suriya (@vijaysuriya_07) on May 2, 2020 at 9:56pm PDT

ವಿಜಯ್ ಸೂರ್ಯಗೆ ಲುಕ್‌ ನೀಡುತ್ತಿದ್ದುದೇ ಹೇರ್‌ ಸ್ಟೈಲ್‌ ಹಾಗೂ ಗುಳಿ ಕೆನ್ನೆ. ಆದರೀಗೆ ಆ ಹೇರ್‌ ಸ್ಟೈಲ್‌ಗೆ ವಿಜಯ್ ತಾಯಿ ಕತ್ತರಿ ಹಾಕಿದ್ದಾರೆ. ಪತ್ನಿ ಚೈತ್ರಾ ಶ್ರೀನಿವಾಸ್‌ ಸೆರೆ ಹಿಡಿದಿರುವ ವಿಡಿಯೋವನ್ನು ವರಣ್‌ ಎಡಿಟ್‌ ಮಾಡಿದ್ದಾರೆ, ಈ ವಿಡಿಯೋ ಮೂಲಕ ತಮ್ಮ ಹೊಸ ಲುಕ್‌ ರಿವೀಲ್‌ ಮಾಡಿದ್ದಾರೆ. ಅಷ್ಟೇ ಅಲ್ಲದೆ ತಾಯಿ ಹೇರ್‌ ಕಟ್‌ ಮಾಡುತ್ತಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದರು.

ಅಗ್ನಿಸಾಕ್ಷಿ ವಿಜಯ್ ಸೂರ್ಯ 'ಡಿಂಪಲ್' ಪುತ್ರನ ಫೋಟೋ ನೋಡಿ!

ಫೆಬ್ರವರಿ 14,2019ರಂದು ಚೈತಾ ಶ್ರೀನಿವಾಸ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಜಯ್ ಸೂರ್ಯ ಜನವರಿ 1,2020ರಲ್ಲಿ ಕುಟುಂಬಕ್ಕೆ ಪುಟ್ಟ ಕೃಷ್ಣನನ್ನು ಬರ ಮಾಡಿಕೊಂಡಿದ್ದಾರೆ. ಹ್ಯಾಪಿ ವಿಚಾರವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡ ನಂತರ ಪುತ್ರನೊಟ್ಟಿಗೆ ಸಾಕಷ್ಟು ವಿಡಿಯೋ ಹಾಗೂ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ.

 

ಶ್ರೀರಾಮ ನವಮಿಯಂದು ಮಗನಿಗೆ ರಾಮ ಅವತಾರದಲ್ಲಿ ಅಲಂಕರಿಸಿ ಫೋಟೋ ಶೇರ್ ಮಾಡಿಕೊಂಡಿದ್ದರು. ವಿಶೇಷವೆಂದರೆ ಈ ಡಿಂಪಲ್ ಕಪಲ್‌ ಮಗನಿಗೂ ಡಿಂಪಲ್‌ ಬೀರುತ್ತದೆ. ಇಷ್ಟು ದಿನ ವಿಜಯ್ ಫ್ಯಾನ್‌ ಪೇಜ್‌ಗಳಲ್ಲಿ ದಂಪತಿಗಳ ಫೋಟೋ ಇತ್ತು ಈಗ ಪುತ್ರನ ಫೋಟೋಗಳಿ ತುಂಬಿದೆ.

ಒಟ್ಟಿನಲ್ಲಿ ಲಾಕ್‌ಡೌನ್‌ನಿಂದಾಗಿ ಎಲ್ಲರೂ ಮನೆಯಲ್ಲಿ ಏನಾದರೂ ವಿಭಿನ್ನವಾಗಿ ಪ್ರಯತ್ನ ಪಡುತ್ತಿದ್ದಾರೆ, ಯಾರ ಸಹಾಯವಿಲ್ಲ ತಮ್ಮ ಕೆಲಸವನ್ನು ತಾವೇ ಹೇಗೆ ಮಾಡಿಕೊಳ್ಳಬೇಕೆಂದು ಕಲಿತುಕೊಂಡಿದ್ದಾರೆ.

ಕೊರೋನಾ ಲಾಕ್‌ಡೌನ್‌ನಿಂದಾಗಿ ಜನರು ಮನೆಯಿಂದ ಹೊರಹೋಗಲಾರದೆ , ಮನೆಯಲ್ಲೇ ಕಾಲಕಳೆಯಲಾಗದೆ ಒದ್ದಾಡುತ್ತಿದ್ದಾರೆ ಇದಕ್ಕೆ ನಟ , ನಟಿಯರು ಕೂಡ ಹೊರತಾಗಿಲ್ಲ . ಎಲ್ಲಾ ಸೆಲೆಬ್ರೆಟಿಗಳು ತಮ್ಮದೇ ಆದ ವಿಶೇಷ ರೀತಿಯಲ್ಲಿ ಈ ಲಾಕ್ ಡೌನ್ ಜೀವನ ನಡೆಸುತ್ತಿದ್ದು ಕೆಲವರು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರೆ , ಇನ್ನೂ ಕೆಲವರು ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಮಾತನಾಡುತ್ತಿದ್ದಾರೆ ಜೊತೆಗೆ  ಕೊರೋನಾ ಜಾಗೃತಿ ಮೂಡಿಸುತ್ತಿದ್ದಾರೆ .