ಪ್ರೇಮಿಗಳ ದಿನದಂದು ವಿಜಯ್ ಸೂರ್ಯ ತಮ್ಮ ಅಭಿಮಾನಿಗಳೊಟ್ಟಿಗೆ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ವಿಜಯ್ ಸೂರ್ಯ ಗಂಡು ಮಗುವಿನ ತಂದೆಯಾಗಿದ್ದಾರೆ.  

ಸೀರಿಯಲ್ ಲೋಕದಲ್ಲೇ ಇತಿಹಾಸ ಸೃಷ್ಟಿಸಿದ ಧಾರಾವಾಹಿ ಅಂದ್ರೆ 'ಅಗ್ನಿಸಾಕ್ಷಿ' . ದಿನೇ ದಿನೇ ಕುತೂಹಲ ಹೆಚ್ಚಿಸಿಕೊಂಡು ಕಡೆಯವರೆಗೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡ ಧಾರಾವಾಹಿ ಇದು. ಈ ಧಾರಾವಾಹಿಯ ಪ್ರಮುಖ ಪಾತ್ರಧಾರಿ ಸಿದ್ಧಾರ್ಥ್ ಅಲಿಯಾಸ್ ವಿಜಯ್ ಸೂರ್ಯ ಹೆಂಗಳೆಯರ ಡ್ರೀಮ್ ಬಾಯ್ ಆಗಿದ್ದರು!

ಗುಳಿಕೆನ್ನೆ ಚೆಲುವೆಯೊಂದಿಗೆ ಸಪ್ತಪದಿ ತುಳಿದ 'ಅಗ್ನಿಸಾಕ್ಷಿ'ಯ ಸಿದ್ಧಾರ್ಥ!

ಸಿದ್ದಾರ್ಥ್ ಅಲಿಯಾಸ್‌ ವಿಜಯ್ ಸೂರ್ಯ 2019, ಫೆಬ್ರವರಿ 14 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಬಾರಿಯ ವ್ಯಾಲಂಟೈನ್ಸ್‌ ಡೇಗೆ ತಂದೆಯಾಗಿದ್ದಾರೆ. ಈ ಸಂಭ್ರಮವನ್ನು ಅಭಿಮಾನಿಗಳ ಜೊತೆ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. 

‘ಅಗ್ನಿಸಾಕ್ಷಿ’ ವಿಜಯ್‌ ಸೂರ್ಯಗೆ ಇವರ ಮೇಲಿತ್ತು ಕ್ರಶ್!

ಡಿಂಪಲ್‌ ಜೋಡಿ ಮೊದಲನೇ ವಿವಾಹ ವಾರ್ಷಿಕೋತ್ಸವ ಸಂಭ್ರಮವನ್ನು ಮಗ ಇನ್ನಷ್ಟು ಹೆಚ್ಚಿಸಿದ್ದಾನೆ. 'ನಿಮ್ಮೆಲ್ಲರ ಶುಭ ಹಾರೈಕೆಗೆ ಧನ್ಯವಾದಗಳು. ಜನವರಿ 1 ರಂದು ನಮ್ಮ ಕುಟುಂಬಕ್ಕೆ ಹೊಸ ಅತಿಥಿ ಆಗಮನವಾಗಿದೆ. ಎಲ್ಲರಿಗೂ ಹ್ಯಾಪಿ ವ್ಯಾಲೆಂಟೈನ್ಸ್‌ ಡೇ ' ಎಂದು ಸಂತಸ ಹಂಚಿಕೊಂಡಿದ್ದಾರೆ.

View post on Instagram