Vaishnavi Gowda: ಕನ್ನಡ ಕಿರುತೆರೆಯ ಜನಪ್ರಿಯ ನಟಿ ವೈಷ್ಣವಿ ಗೌಡ, ಇತ್ತೀಚೆಗೆ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ದೊಡ್ಡದಾಗಿ ಪಾರ್ಟಿ ಮಾಡದೆ, ಕೇಕ್ ಕತ್ತರಿಸದೆ ಸಿಂಪಲ್ ಆಗಿ ಆದರೆ ಅರ್ಥಪೂರ್ಣವಾಗಿ ತಮ್ಮ ಪತಿ ಜೊತೆ ಸೆಲೆಬ್ರೇಟ್ ಮಾಡಿದ್ದಾರೆ ನಟಿ.
ವೈಷ್ಣವಿ ಗೌಡ ವೆಡ್ಡಿಂಗ್ ಆನಿವರ್ಸರಿ
ಅಗ್ನಿ ಸಾಕ್ಷಿ ಹಾಗೂ ಸೀತಾರಾಮ ಸೀರಿಯಲ್ ಮೂಲಕ ಕನ್ನಡಿಗರ ಮನೆ ಮನದಲ್ಲಿ ಭದ್ರವಾಗಿ ನೆಲೆಯಾಗಿರುವ ನಟಿ ವೈಷ್ಣವಿ ಗೌಡ. ಕಳೆದ ವರ್ಷ ಸೀತಾ ರಾಮ ಸೀರಿಯಲ್ ಮುಗಿದ ತಕ್ಷಣ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು ನಟಿ. ಹೌದು ವೈಷ್ಣವಿ ಕಳೆದ ವರ್ಷ ಅಂದರೆ 2025ರ ಜೂನ್ 4ರಂದುಅನುಕೂಲ್ ಮಿಶ್ರಾ ಜೊತೆ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರ ಮದುವೆ ಸಮಾರಂಭ ಭಾರಿ ಅದ್ದೂರಿಯಾಗಿ ಬೆಂಗಳೂರಿನ ರೆಸಾರ್ಟ್ ನಲ್ಲಿ ನಟಿದಿತ್ತು. ಚಿತ್ರರಂಗದ, ಕಿರುತೆರೆಯ ತಾರೆಯರು ಮದುವೆ ಸಮಾರಂಭಕ್ಕೆ ಆಗಮಿಸಿ ಹಾರೈಸಿದ್ದರು.
ವೈಷ್ಣವಿ ಅವರ ಪತಿ ಅನುಕೂಲ್ ಮಿಶ್ರಾ ಛತ್ತೀಸ್’ಗಡದವರಾಗಿದ್ದು, ಇವರು ಏರ್ ಫೋರ್ಸ್ ನಲ್ಲಿ (Air Force) ಕಾರ್ಯ ನಿರ್ವಹಿಸುತ್ತಿದ್ದಾರೆ. ಇದು ಅರೇಂಜ್ ಮ್ಯಾರೇಜ್ ಆಗಿದ್ದು, ವೈಷ್ಣವಿ ಅವರ ಮನೆಯವರು ಮ್ಯಾಟ್ರಿಮೋನಿಯಸ್ ಸೈಟ್ ನಲ್ಲಿ ನೋಡಿ, ಮತ್ತೆ ಮನೆ ಮಂದಿ ಮಾತನಾಡಿ, ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ವೈಷ್ಣವಿ ಗೌಡ, ಹೆಚ್ಚಾಗಿ ಗಂಡನ ಜೊತೆಗಿನ ಸುಂದರವಾದ ಫೋಟೊಗಳು ರೀಲ್ಸ್ ಗಳನ್ನು ಸಹ ಶೇರ್ ಮಾಡುತ್ತಿರುತ್ತಾರೆ. ಗಂಡ ಅನುಕೂಲ್ ಕೂಡ ವೈಷ್ಣವಿ ಕುರಿತಾದ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿ, ಹೆಚ್ಚಾಗಿ ಸೋಶಿಯಲ್ ಮೀಡಿಯಾ ಪೋಸ್ಟ್ ಮಾಡುತ್ತಿರುತ್ತಾರೆ.
ಮೊದಲನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ವೈಷ್ಣವಿ
ಇದೀಗ್ ವೈಷ್ಣವಿ ಗೌಡ, ತಮ್ಮ ಮದುವೆಯ ಮೊದಲನೇಯ ವರ್ಷದ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದು, ಇದಕ್ಕಾಗಿ ದೊಡ್ಡದಾಗಿ ಪಾರ್ಟಿ ಮಾಡದೆ, ಕೇಕ್ ಕತ್ತರಿಸದೆ ಸರಳವಾಗಿ ಆನಿವರ್ಸರಿ ಸೆಲೆಬ್ರೇಟ್ ಮಾಡಿದ್ದಾರೆ. ತಮ್ಮ ಆನಿವರ್ಸರಿ ಸೆಲೆಬ್ರೇಷನ್ ವಿಡೀಯೋ ಕೂಡ ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.ವೈಷ್ಣವಿ ಸುಂದರವಾದ ರೇಷ್ಮೆ ಸೀರೆ ಧರಿಸಿದ್ರೆ, ಅನುಕೂಲ್ ಮಿಶ್ರಾ ಪಂಚೆ ಮತ್ತು ಶರ್ಟ್ ಧರಿಸಿ, ಸಂಪ್ರಾದಾಯಿಕ ಉಡೂಗೊರೆ ಧರಿಸಿ ಜೋಡಿ ದೇವಸ್ಥಾನಕ್ಕೆ ತೆರಳಿ, ಪೂಜೆ ಸಲ್ಲಿಸಿ ಬಂದಿದ್ದಾರೆ. ಹಾಗೂ ಪತಿ ಅನುಕೂಲ್ ಅವರು ವೈಷ್ಣವಿ ಗೌಡ ಹಣೆ ಮೇಲೆ ಸಿಂಧೂರ ಹಚ್ಚುವ ಮೂಲಕ ದಾಂಪತ್ಯ ಜೀವನದ ಹೊಸ ವರ್ಷವನ್ನು ಸಂಭ್ರಮಿಸಿದ್ದಾರೆ. ಜೋಡಿಗೆ ನಟರು, ಸ್ನೇಹಿತರು ಹಾಗೂ ಅಭಿಮಾನಿಗಳು ಆನಿವರ್ಸರಿ ಶುಭಾಶಯ ಕೋರಿದ್ದಾರೆ.


