ಭಾಗ್ಯಳ ದುಡಿಮೆಯನ್ನೇ ಕಿತ್ತುಕೊಳ್ಳಲು ಶ್ರೇಷ್ಠಾ ಯಶಸ್ವಿಯಾಗಿದ್ದಾಳೆ. ಕೆಲಸ ಕಳೆದುಕೊಂಡು, ಗಂಡನಿಂದ ದೂರವಾಗಿ, ಅತ್ತೆ-ಮಾವಂದಿರ ಬದಲಾದ ನಡವಳಿಕೆಯಿಂದ ಭಾಗ್ಯ ಸಂಕಷ್ಟದಲ್ಲಿದ್ದಾಳೆ. ತಂದೆ ತನ್ವಿಗೆ ದುಬಾರಿ ಉಡುಗೊರೆಗಳನ್ನ ನೀಡಿ ಹತ್ತಿರವಾಗುತ್ತಿದ್ದಾನೆ. ಭಾಗ್ಯ ಜೋಕರ್ ವೇಷದಲ್ಲಿ ದುಡಿದು ಮಗಳಿಗಾಗಿ ಮೊಬೈಲ್ ತರಲು ಹೋದಾಗ, ತಂದೆ ಈಗಾಗಲೇ ಕೊಟ್ಟ ವಿಷಯ ತಿಳಿದು ದುಃಖಿತಳಾಗುತ್ತಾಳೆ. ನಟಿ ಸುಷ್ಮಾ ಕೆ. ರಾವ್ ಅವರ ಜೀವನದ ಬಗ್ಗೆಯೂ ಮಾಹಿತಿ ಇದೆ.
ಭಾಗ್ಯಳ ಶಕ್ತಿಯೇ ಅವಳ ದುಡಿಮೆಯಾಗಿತ್ತು. ಅದನ್ನೇ ಕಿತ್ತುಕೊಳ್ಳಲು ಪ್ಲ್ಯಾನ್ ಹಾಕಿದ್ದ ಶ್ರೇಷ್ಠಾ ಸಕ್ಸಸ್ ಕಂಡಿದ್ದಾಳೆ. ಭಾಗ್ಯಳ ಕೆಲಸವೂ ಹೋಗಿದೆ. ಗಂಡನೂ ಇಲ್ಲ. ಮಾವ ಸೊಸೆಯ ಪರವಾಗಿಯೇ ಇದ್ದರೂ, ಭಾಗ್ಯಳ ಅಮ್ಮ ಮತ್ತು ಅತ್ತೆ ವರಸೆ ಬದಲಾಯಿಸುತ್ತಿದ್ದಾರೆ. ಇತ್ತ ಮಗಳು ತನ್ವಿ ಅಪ್ಪನಿಗೆ ಹತ್ತಿವಾಗ್ತಿದ್ದಾಳೆ. ಮಕ್ಕಳನ್ನು ಅಮ್ಮನಿಂದ ದೂರ ಮಾಡುವ ಏಕೈಕ ಗುರಿ ಹೊಂದಿರುವ ತಾಂಡವ್ ಇದೀಗ ತನ್ವಿಗೆ ಹೊಸ ಮೊಬೈಲ್ ಕೊಡಿಸಿ, ಅದ್ಧೂರಿ ಹುಟ್ಟುಹಬ್ಬ ಆಚರಿಸಿ, 80 ಸಾವಿರ ಫೀಸ್ ಕಟ್ಟೆ ಒಲಿಸಿಕೊಂಡಿದ್ದಾನೆ. ಒಳ್ಳೆಯ ಪತ್ನಿ, ಸೊಸೆ, ಕೆಲಸಗಾರ್ತಿ ಆಗುವ ಹಂಬಲದಿಂದ ಬದುಕುಪೂರ್ತಿ ಸವೆಸಿದ ಭಾಗ್ಯಳ ಬಾಳಲ್ಲಿ ಈಗ ಅಂಧಕಾರ. ಆದರೆ ಛಲ ಬಿಟ್ಟಿಲ್ಲ ಭಾಗ್ಯ. ಜೋಕರ್ ವೇಷ ಹಾಕಿಕೊಂಡು ದುಡ್ಡು ಸಂಪಾದಿಸುತ್ತಿದ್ದಾಳೆ. ಏಕೆಂದರೆ, ಈಕೆಗೆ ಎಲ್ಲಿಯೂ ಕೆಲಸ ಸಿಗದಂತೆ ಶ್ರೇಷ್ಠಾ ನೋಡಿಕೊಳ್ಳುತ್ತಿದ್ದಾಳೆ.
ಕೊನೆಗೆ ತನ್ನ ಗಂಡ ಮಗಳಿಗಾಗಿ ಮಾಡಿದ ಭರ್ಜರಿ ಬರ್ತ್ಡೇ ಪಾರ್ಟಿಯಲ್ಲಿ, ಸತ್ಯದ ಅರಿವು ಇಲ್ಲದೇ ಭಾಗ್ಯ ಜೋಕರ್ ಆಗಿ ಬಂದು ಕುಣಿದಿದ್ದಾಳೆ. ಬಂದ ಹಣದಿಂದ ಮಗಳಿಗಾಗಿ ಮೊಬೈಲ್ ತಗೊಂಡು ಬಂದ್ರೆ, ಅದಾಗಲೇ ಒಳ್ಳೆಯ ದುಬಾರಿ ಮೊಬೈಲ್ ಅಪ್ಪ ಕೊಡಿಸಿದ್ದಾನೆ ಎಂದು ತನ್ವಿ ತೋರಿಸಿದ್ದಾಳೆ. ಆದರೆ ಈ ಜೋಕರ್ ಕ್ಯಾರೆಕ್ಟರ್ಗೆ ಭಾಗ್ಯ ಅರ್ಥಾತ್ ನಟಿ ಸುಷ್ಮಾ ಕೆ.ರಾವ್ ಅವರು ಹೇಗೆಲ್ಲಾ ರೆಡಿಯಾದರು ಎಂಬ ಬಗ್ಗೆ ಅವರೇ ಖುದ್ದು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಮೇಕಪ್ ಮಾಡಿರುವ ವಿಡಿಯೋ ಅನ್ನು ಅವರು ಶೇರ್ ಮಾಡಿಕೊಂಡಿದ್ದಾರೆ.
ನಿಮ್ಮ ಮಾತು ಕೇಳಿ ರೈಟರ್ಸ್ ಕಥೆಯನ್ನೇ ಬದಲಿಸ್ತಿದ್ದಾರೆ ಎಂದ ಭಾಗ್ಯಲಕ್ಷ್ಮಿ ಭಾಗ್ಯ: ಮುಂದೇನಾಗತ್ತೆ ಕೇಳಿ
ಅಷ್ಟಕ್ಕೂ, ಒಳ್ಳೆಯ ಪತ್ನಿಯಾಗಿ, ಒಳ್ಳೆಯ ಸೊಸೆಯಾಗಿ, ಒಳ್ಳೆಯ ಕೆಲಸಗಾರ್ತಿಯಾಗಿ ಇರಬೇಕು ಎಂದು ಬಯಸಿದ ಭಾಗ್ಯ ತನ್ನ ಜೀವನಪೂರ್ತಿ ಕುಟುಂಬ, ಮಕ್ಕಳು ಎಂದೇ ಕಳೆದವಳು. ಗಂಡ ಬೇರೊಬ್ಬಳ ಜೊತೆ ಸಂಬಂಧ ಇರಿಸಿಕೊಂಡ ಎಂದು ಗೊತ್ತಾದ ಮೇಲೂ, ತನ್ನ ಸ್ವಾಭಿಮಾನಕ್ಕೆ ಆತ ಪದೇ ಪದೇ ಪೆಟ್ಟು ಕೊಡುತ್ತಿದ್ದರೂ ಮಕ್ಕಳಿಗಾಗಿ ಸಂಸಾರ ಒಡೆಯಬಾರದು ಎಂದು ಬಯಸಿದವಳು ಆಕೆ. ಸ್ವಂತ ಮಗಳಂತೆ ನೋಡಿಕೊಳ್ಳುವ ಅತ್ತೆ-ಮಾವನೇ ಆಕೆಗೆ ಆಧಾರವೂ ಆಗಿ, ನಮಗೆ ಇಂಥ ಅತ್ತೆ-ಮಾವ ಸಿಗಬಾರದೇ ಎಂದುಕೊಂಡವರು ಹಲವರು. ಆದರೆ, ಈಗ ಭಾಗ್ಯಳಿಗೆ ಮತ್ತೆ ಕೇಡುಗಾಲ ಬಂದಿದೆ.
ಇನ್ನು ಸುಷ್ಮಾ ಕೆ. ರಾವ್ ಕುರಿತು ಹೇಳುವುದಾದರೆ, ಇವರು ಚಿಕ್ಕಮಗಳೂರಿನ ಕೊಪ್ಪದವರು. ಬೆಂಗಳೂರುಲ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ಹಿಂದಿಯಲ್ಲಿ ಪದವಿ ಪಡೆದಿದ್ದಾರೆ. ಭರತನಾಟ್ಯ ಮತ್ತು ಕೂಚುಪುಡಿ ಕಲಾವಿದೆ. ನೃತ್ಯಕ್ಕಾಗಿ 1997ರಲ್ಲಿ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. 2005ರಲ್ಲಿ ನಟನೆಗಾಗಿಯೂ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. ಇವರಿಗೆ ಈಗ 38 ವರ್ಷ ವಯಸ್ಸು. ಸುಷ್ಮಾ ರಾವ್ ಎಸ್.ನಾರಾಯಣ್ ನಿರ್ದೇಶನದ ಭಾಗಗೀರಥಿ ಧಾರಾವಾಹಿಯಲ್ಲಿ ಹೇಮಾ ಪ್ರಭಾತ್ ಅವರ ತಂಗಿಯ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ಯಾವ ಜನ್ಮದ ಮೈತ್ರಿ, ಗುಪ್ತಗಾಮಿನಿ, ಸೊಸೆ ತಂದ ಭಾಗ್ಯ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ಭಾಗ್ಯಲಕ್ಷ್ಮಿ ಅಮ್ಮ-ಮಕ್ಕಳ ಭರ್ಜರಿ ರೀಲ್ಸ್: ಯಾರ ಕಣ್ಣೂ ಬೀಳದಿರಲಪ್ಪ ಎಂದು ದೃಷ್ಟಿ ತೆಗೆದ ನೆಟ್ಟಿಗರು!
