ನಿಮ್ಮ ಮಾತು ಕೇಳಿ ರೈಟರ್ಸ್ ಕಥೆಯನ್ನೇ ಬದಲಿಸ್ತಿದ್ದಾರೆ ಎಂದ ಭಾಗ್ಯಲಕ್ಷ್ಮಿ ಭಾಗ್ಯ: ಮುಂದೇನಾಗತ್ತೆ ಕೇಳಿ
ಭಾಗ್ಯಲಕ್ಷ್ಮಿ ಸೀರಿಯಲ್ಗೆ ಟ್ವಿಸ್ಟ್ ಸಿಕ್ಕಿದೆ. ಈ ಬಗ್ಗೆ ಭಾಗ್ಯ ಪಾತ್ರಧಾರಿ ಸುಷ್ಮಾ ಕೆ. ರಾವ್ ಬಂದು ಹೇಳಿದ್ದೇನು ಕೇಳಿ...

ಭಾಗ್ಯಲಕ್ಷ್ಮಿ ಸೀರಿಯಲ್ ಮತ್ತೆ ತಿರುವು ಪಡೆದುಕೊಳ್ಳುತ್ತಿದೆ. ಒಳ್ಳೆಯ ಪತ್ನಿಯಾಗಿ, ಒಳ್ಳೆಯ ಸೊಸೆಯಾಗಿ, ಒಳ್ಳೆಯ ಕೆಲಸಗಾರ್ತಿಯಾಗಿ ಇರಬೇಕು ಎಂದು ಬಯಸಿದ ಭಾಗ್ಯ ತನ್ನ ಜೀವನಪೂರ್ತಿ ಕುಟುಂಬ, ಮಕ್ಕಳು ಎಂದೇ ಕಳೆದವಳು. ಗಂಡ ಬೇರೊಬ್ಬಳ ಜೊತೆ ಸಂಬಂಧ ಇರಿಸಿಕೊಂಡ ಎಂದು ಗೊತ್ತಾದ ಮೇಲೂ, ತನ್ನ ಸ್ವಾಭಿಮಾನಕ್ಕೆ ಆತ ಪದೇ ಪದೇ ಪೆಟ್ಟು ಕೊಡುತ್ತಿದ್ದರೂ ಮಕ್ಕಳಿಗಾಗಿ ಸಂಸಾರ ಒಡೆಯಬಾರದು ಎಂದು ಬಯಸಿದವಳು ಆಕೆ. ಸ್ವಂತ ಮಗಳಂತೆ ನೋಡಿಕೊಳ್ಳುವ ಅತ್ತೆ-ಮಾವನೇ ಆಕೆಗೆ ಆಧಾರವೂ ಆಗಿ, ನಮಗೆ ಇಂಥ ಅತ್ತೆ-ಮಾವ ಸಿಗಬಾರದೇ ಎಂದುಕೊಂಡವರು ಹಲವರು. ಆದರೆ, ಈಗ ಭಾಗ್ಯಳಿಗೆ ಮತ್ತೆ ಕೇಡುಗಾಲ ಬಂದಿದೆ. ಇದ್ದ ಕೆಲಸವನ್ನೂ ಶ್ರೇಷ್ಠಾ ಕಳೆದು ಹಾಕಿದ್ದಾಳೆ.
ಭಾಗ್ಯಳ ಶಕ್ತಿಯೇ ಅವಳ ದುಡಿಮೆ. ಅದನ್ನೇ ಕಿತ್ತುಕೊಳ್ಳಲು ಪ್ಲ್ಯಾನ್ ಹಾಕಿದ್ದ ಶ್ರೇಷ್ಠಾ ಸಕ್ಸಸ್ ಕಂಡಿದ್ದಾಳೆ. ಭಾಗ್ಯಳ ಕೆಲಸವೂ ಹೋಗಿದೆ. ಗಂಡನೂ ಇಲ್ಲ. ಮಾವ ಸೊಸೆಯ ಪರವಾಗಿಯೇ ಇದ್ದರೂ, ಭಾಗ್ಯಳ ಅಮ್ಮ ಮತ್ತು ಅತ್ತೆ ವರಸೆ ಬದಲಾಯಿಸುತ್ತಿದ್ದಾರೆ. ಇತ್ತ ಮಗಳಿಗೆ ಅಮ್ಮನ ಕಷ್ಟ ಗೊತ್ತಿಲ್ಲದೇ ಯಾವುದೋ ಕೋರ್ಸ್ಗೆ 80 ಸಾವಿರ ಬೇಕು ಅಂತ ಅಳುತ್ತಾ ಕೂತಿದ್ದಾಳೆ. ಕೆಲಸ ಕಳೆದುಕೊಂಡು ಮನೆಗೆ ಬಂದ ಭಾಗ್ಯಳಿಗೆ ಈ ವಿಷಯ ಗೊತ್ತಾಗಿದೆ. ಅಷ್ಟು ಹಣ ಹೊಂದಿಸುವ ಜವಾಬ್ದಾರಿ ಅವಳ ಮೇಲಿದೆ. ಒಳ್ಳೆಯ ಪತ್ನಿ, ಸೊಸೆ, ಕೆಲಸಗಾರ್ತಿ ಆಗುವ ಹಂಬಲದಿಂದ ಬದುಕುಪೂರ್ತಿ ಸವೆಸಿದ ಭಾಗ್ಯಳ ಬಾಳಲ್ಲಿ ಈಗ ಅಂಧಕಾರ. ಆದರೆ ಛಲ ಬಿಟ್ಟಿಲ್ಲ ಭಾಗ್ಯ. ಅವಳ ಮುಂದಿನ ನಡೆಯೇನು ಎನ್ನುವುದು ಈಗಿರುವ ಕುತೂಹಲ. ಪಾರ್ಟಿಯೊಂದರಲ್ಲಿ ಜೋಕರ್ ವೇಷತೊಟ್ಟು ಭಾಗ್ಯ ಕುಣಿದಾಡುತ್ತಿರುವುದನ್ನು ಪ್ರೊಮೋದಲ್ಲಿ ನೋಡಬಹುದು. ಮುಂದೇನಾಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.
ಭಾಗ್ಯಲಕ್ಷ್ಮಿ ಅಮ್ಮ-ಮಕ್ಕಳ ಭರ್ಜರಿ ರೀಲ್ಸ್: ಯಾರ ಕಣ್ಣೂ ಬೀಳದಿರಲಪ್ಪ ಎಂದು ದೃಷ್ಟಿ ತೆಗೆದ ನೆಟ್ಟಿಗರು!
ಇದರ ಬಗ್ಗೆ ಭಾಗ್ಯ ಉರ್ಫ್ ಸುಷ್ಮಾ ಕೆ.ರಾವ್ ಇನ್ಸ್ಟಾಗ್ರಾಮ್ನಲ್ಲಿ ಮಾತನಾಡಿದ್ದಾರೆ. ನೀವು ಭಾಗ್ಯಲಕ್ಷ್ಮಿ ಸೀರಿಯಲ್ಗೆ ತೋರಿಸುತ್ತಿರುವ ಪ್ರೀತಿಯಿಂದ ನಮ್ಮ ರೈಟರ್ಸ್ ಕಥೆಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡುತ್ತಿದ್ದಾರೆ. ಕಥೆಗೆ ತಿರುವುಗಳನ್ನು ನೀಡುತ್ತಿದ್ದಾರೆ. ಇದೇ ರೀತಿ ಪ್ರೀತಿ ತೋರಿಸಿ. ಮುಂದೇನಾಗತ್ತೆ ನೋಡಿ ಎಂದಿದ್ದಾರೆ.
ಅಷ್ಟಕ್ಕೂ, ಒಬ್ಬ ಹೆಣ್ಣಿಗೆ ಅದೆಷ್ಟು ನೋವು, ಅದೆಷ್ಟು ಹಿಂಸೆ, ಅದೆಷ್ಟು ಗೋಳು ನೀಡಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ನಿಂತಿದೆ ಕಲರ್ಸ್ ಕನ್ನಡದ ಭಾಗ್ಯಲಕ್ಷ್ಮಿ. ಇದು ಸೀರಿಯಲ್ ಕಥೆ ಎನ್ನಿಸಿದರೂ ನಿಜ ಜೀವನದಲ್ಲಿ ಇಂಥದ್ದೇ ನೋವನ್ನು ಅನುಭವಿಸುತ್ತಿರುವ ಮಹಿಳೆಯರು ಅದೆಷ್ಟೋ ಮಂದಿ. ಸೀರಿಯಲ್ಗಳಲ್ಲಿ ನೋಡುವಾಗ ಅತಿರೇಕ ಸಾಕು, ಸೀರಿಯಲ್ ನಿಲ್ಲಿಸಿ, ಅವಳು ಹೀಗೆ ಮಾಡಬೇಕಿತ್ತು, ಇವನು ಹೀಗೆ ಮಾಡಬೇಕಿತ್ತು... ಎಂದೆಲ್ಲಾ ಒಂದಷ್ಟು ಕಮೆಂಟ್ಸ್ ಬರುವುದು ಸಹಜ. ಆದರೆ ಸೀರಿಯಲ್ಗಳು ಕೂಡ ನಿಜ ಜೀವನದ ಒಂದು ಅಂಗವೇ ಆಗಿದೆ ಎನ್ನುವುದಕ್ಕೆ ಧಾರಾವಾಹಿಗಳನ್ನು ನೋಡಿದವರು ತಮ್ಮ ಜೀವನದ ಘಟನೆಗಳನ್ನು ಹೇಳುವಾಗ ತಿಳಿದುಬರುತ್ತದೆ. ಕೆಲವೊಮ್ಮೆ ಸೀರಿಯಲ್ಗಳಲ್ಲಿ ಅತಿರಂಜನೀಯ ಎನ್ನುವಂತೆ, ಅತಿಶಯೋಕ್ತಿ ಎನ್ನುವಂತೆ ತೋರಿಸುವುದು ನಿಜವಾದರೂ ನೋವುಂಡ ಜೀವಗಳಿಗೆ ಇದು ತಮ್ಮದೇ ಕಥೆಯೇನೋ ಎಂದು ಎನ್ನಿಸದೇ ಇರಲಾರದು ಎನ್ನುವುದೂ ಅಷ್ಟೇ ಸತ್ಯ.
ಗರ್ಲ್ಫ್ರೆಂಡ್ಗೆ ತಾಳಿ ಕಟ್ಟೋ ಭರದಲ್ಲಿ ಭಾಗ್ಯಲಕ್ಷ್ಮಿ ನಟ ಕನ್ನಡ ಮರೆತುಬಿಟ್ರಾ? ಇನ್ನಿಲ್ಲದಂತೆ ಟ್ರೋಲ್!