ಪೀರಿಯಡ್ಸ್‌ ಸಮಯದಲ್ಲಿ ಏನು ಬೆಸ್ಟ್‌ ಏನು ವರ್ಸ್ಟ್‌ ಎಂದು ಹಂಚಿಕೊಂಡ ಕಿರುತೆರೆ ನಟಿ ಆಶಿಕಾ ಪಡುಕೋಣೆ...

ತ್ರಿನಯನಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟ ನಟಿ ಆಶಿಕಾ ಪಡುಕೋಣೆ ಅಕ್ಟೋಬರ್ 18ರಂದು ಉದ್ಯಮಿ ಚೇತನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಪರ್ಸನಲ್‌ ಲೈಫ್‌ನಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಅಲ್ಲದೆ ಮದುವೆಯಾದ ಮೇಲೆ ಅಭಿಮಾನಿಗಳ ಜೊತೆ ಹೆಚ್ಚು ಹತ್ತಿರವಾಗಬೇಕೆಂದು ಯೂಟ್ಯೂಬ್ ಚಾನೆಲ್‌ ಕೂಡ ಆರಂಭಿಸಿದ್ದಾರೆ. ಡಯಟ್, ಹೆಲ್ತ್‌, ಬ್ಯೂಟಿ ಮತ್ತು ಸ್ಕಿನ್‌ ಕೇರ್‌ ಬಗ್ಗೆ ಟಿಪ್ಸ್‌ ಕೊಡುತ್ತಾರೆ. ಆದರೆ ಈ ಬಾರಿ ಡಿಫರೆಂಟ್ ಆಗಿರಲಿ ಎಂದು ಪೀರಿಯಡ್ಸ್‌ ಬಗ್ಗೆ ಮಾತನಾಡುತ್ತಿದ್ದಾರೆ.

'ಈ ವಿಡಿಯೋ ಹೆಣ್ಣು ಮಕ್ಕಳಿಗೆ ಮಾತ್ರ ಏಕೆಂದರೆ ಪೀರಿಯಡ್ಸ್‌ ಬಗ್ಗೆ ತಿಳಿದುಕೊಳ್ಳುವುದರಲ್ಲಿ ಯಾವ ತಪ್ಪಿಲ್ಲ. ಪೀರಿಯಡ್ಸ್‌ ಬಗ್ಗೆ ನಾನು ಈವರೆಗೂ ಮಾತನಾಡಿರಲಿಲ್ಲ ಆದರೆ ಈ ವಿಚಾರದಲ್ಲಿ ನನ್ನ ಅನುಭವ ಮತ್ತು ನೋವು ಆದಾಗ ಏನೆಲ್ಲಾ ಮಾಡಬೇಕು ಎಂದು ನಾನು ನಿಮ್ಮ ಜೊತೆ ಹಂಚಿಕೊಳ್ಳುವೆ. ಇದು ನನಗೆ ಮಾತ್ರ ವರ್ಕ್ ಆಗಿದೆ' ಎಂದು ಆಶಿಕಾ ಮಾತು ಆರಂಭಿಸಿದ್ದಾರೆ. 

ಫಸ್ಟ್‌ ಟೈಂ ಪೀರಿಯಡ್ಸ್‌ ಆಗಿದ್ದು ಯಾವಾಗ, ಆ 16 ದಿನಗಳ ಬಗ್ಗೆ ರಿವೀಲ್ ಮಾಡಿದ ಬಿಗ್ ಬಾಸ್ ವೈಷ್ಣವಿ!

'ಸ್ಕೂಲ್‌ನಲ್ಲಿ ನಾನು ಆಕ್ಟಿವ್ ಆಗಿರಲಿಲ್ಲ. ಹೀಗಾಗಿ ನನಗೆ ತುಂಬಾ ಬೇಗ ಪೀರಿಯಡ್ಸ್‌ ಆಯ್ತು. ಇದೆಲ್ಲಾ ಹೇಗೆ ಮ್ಯಾನೇಜ್ ಮಾಡಬೇಕು ಎಂದು ಗೊತ್ತಿರಲಿಲ್ಲ. ಲೀಕೇಜ್ ಹೆಚ್ಚಾದಾಗ ಎರಡು ಪ್ಯಾಡ್‌ ಬಳಸುತ್ತಿದ್ದೆ. ಏನೂ ಮ್ಯಾನೇಜ್ ಮಾಡಲು ಆಗುತ್ತಿರಲಿಲ್ಲ. ಈಗಿನ ಹೆಣ್ಣು ಮಕ್ಕಳಿಗೆ ನಾನು ಇದರ ಬಗ್ಗೆ ತಿಳಿಸಬೇಕು ಭಯ ಪಡದ ಇದೆಲ್ಲಾ ಅರ್ಥ ಮಾಡಿಕೊಂಡರೆ ಸುಲಭ ಆಗುತ್ತದೆ. ಮೊದಲ ನಾವು ಎಲ್ಲೇ ಹೋದರು ಒಂದು ಪ್ಯಾಡ್ ಕ್ಯಾರಿ ಮಾಡಬೇಕು. ಸ್ಕೂಲ್ ಶೂಟಿಂಗ್ ಏನೇ ಕೆಲಸ ಇರಲಿ ಜೊತೆಯಲ್ಲಿ ಒಂದು ಪ್ಯಾಡ್‌ ಇರಲಿ'

ಹೋಟೆ ನೋವು: 

'ಹಲವರಿಗೆ ಹೋಟೆ ನೋವು ತಡೆದುಕೊಳ್ಳಲು ಅಗುವುದಿಲ್ಲ ಆದರೆ ಕೆಲವರು ಕೂಲ್ ಆಗಿ ಹ್ಯಾಂಡಲ್ ಮಾಡುತ್ತಾರೆ. ನನಗೆ ಏನೂ ಸಮಸ್ಯೆ ಇಲ್ಲ ಆದರೆ ಶೂಟಿಂಗ್ ದಿನ ಪೂರ್ತಿ ಕೆಲಸ ಇದ್ದರೆ ತುಂಬಾ ಸುಸ್ತಾಗುತ್ತದೆ. ಈ ಸಮಯದಲ್ಲಿ ನಾನು ಕ್ವಿಕ್‌ ಪರಿಹಾರ ಮಾಡಿಕೊಳ್ಳುವೆ. ಅದುವೇ ಬಟರ್‌ಫ್ಲೈ ಯೋಗ ಮಾಡುವುದು. ಮತ್ತೊಂದು ಅದೇ ರೀತಿ ಬೆನ್ನು ಮೇಲೆ ಮಲಗಿಕೊಳ್ಳುವುದು'

ಪ್ಯಾಡ್ ಆಯ್ಕೆ:

'ಹಳೆ ಕಾಲದಲ್ಲಿ ಕಾಟನ್ ಬಟ್ಟೆಯನ್ನು ಪ್ಯಾಡ್ ಆಗಿ ಬಳಸುತ್ತಿದ್ದರು. ಬ್ಯಾಕ್ಟೀರಿಯ ಹರಡುತ್ತಿತ್ತು ಹೀಗಾಗಿ ಅನೇಕ ಹೆಣ್ಣು ಮಕ್ಕಳ ಸಮಸ್ಯೆ ಎದುರಿಸುತ್ತಿದ್ದರು. ಈಗ ಸ್ಯಾನಿಟರಿ ನ್ಯಾಪ್ಕಿನ್‌ ಕೂಡ ಸುಲಭವಾಗಿ ಲಭ್ಯವಿದೆ ಅದೆಲ್ಲಾ ಸಮಸ್ಯೆ ಇಲ್ಲ. ಪ್ಯಾಡ್‌ಗಳಲ್ಲಿ ತುಂಬಾ ಬ್ರ್ಯಾಂಡ್‌ಗಳಿದೆ ನಮ್ಮ ಕಬೋರ್ಡ್‌ ತುಂಬಾ ಅದೇ ತುಂಬಿರುತ್ತದೆ. ಮಿನಿ ಮೆಡಿಕಲ್ ಸ್ಟೋರ್ ರೀತಿ ಇರುತ್ತದೆ' ಎಂದಿದ್ದಾರೆ ಆಶಿಕಾ.

ಹೊಟ್ಟೆ ಉಬ್ಬು: 

'ಪೀರಿಯಡ್ಸ್‌ ಸಮಯದಲ್ಲಿ ಏನೂ ತಿಂದಿಲ್ಲ ಅಂದ್ರೂ ಹೊಟ್ಟೆ ಉಬ್ಬುತ್ತದೆ. ಮೊದಲು ನೀವು ಕಾಫಿ ಕುಡಿಯುವುದನ್ನು ನಿಲ್ಲಿಸಬೇಕ. ಬೆಳಗ್ಗೆ ಬಾಳೆಹಣ್ಣು ಸೇವಿಸಬೇಕು. ನನ್ನ ತಾಯಿ ಸ್ಪೆಷಲ್ ಜ್ಯೂಸ್ ಮಾಡುತ್ತಾರೆ, ಅದೇ ABC ಜ್ಯೂಸ್‌. ಆಪಲ್, ಬೀಟ್‌ರೂಟ್‌ ಮತ್ತು ಕ್ಯಾರೇಟ್‌ ಮಿಕ್ಸ್‌ ಮಾಡಿ ಮಾಡುವ ಜ್ಯೂಸ್‌ ಇದು. ಬೆಳಗ್ಗೆ ಇದನ್ನು ಕುಡಿದರೆ ಆರೋಗ್ಯ ಸೂಪರ್ ಆಗಿರುತ್ತದೆ. ಇದರ ಜೊತೆಶ ಶುಂಠಿ ಟೀ ಕುಡಿದರೆ ಅದೂ ಸೂಪರ್ ಆಗಿರುತ್ತದೆ. ಸ್ವೀಟ್ ತಿನ್ನಬೇಕು ಅನಿಸಿದ್ದರೆ ನೀವು ಡಾರ್ಕ್‌ ಚಾಕೋಲೇಟ್‌ ಸೇವಿಸಬೇಕು. ಅದು ನನಗೆ ತುಂಬಾನೇ ಇಷ್ಟ. ಪೀರಿಯಡ್ಸ್‌ ಸಮಯದಲ್ಲಿ ಚಾಕೊಲೇಟ್‌ ತಿನ್ನೋದು ಸೂಪರ್ ಕೂಲ್. ಚೆನ್ನಾಗಿ ನೀರು ಕೂಡ ಸೇವಿಸಬೇಕು' ಎಂದು ಆಶಿಕಾ ಮಾತನಾಡಿದ್ದಾರೆ.

YouTube video player