ಕನ್ನಡದ ಖ್ಯಾತ ನಿರೂಪಕಿ, ನಟಿ ಸುಷ್ಮಾ ಕೆ ರಾವ್ ( Sushma K Rao) ಯಾರಿಗೆ ತಾನೆ ಗೊತ್ತಿಲ್ಲ. ಕನ್ನಡ ಕಿರುತೆರೆಯಲ್ಲಿ ಪ್ರಸಿದ್ಧಿ ಪಡೆದಿದ್ದ ಸುಷ್ಮಾ ಕೆಲವು ಸಮಯ ನಿರೂಪಣೆಯಿಂದ ಬ್ರೇಕ್ ಪಡೆದಿದ್ದರು. ಇದೀಗ ಮತ್ತೆ ವಾಪಾಸ್ ಆಗಿರುವ ಸುಷ್ಮಾ ಮತ್ತೆ ಕಿರುತೆರೆಯಲ್ಲಿ ಮಿಂಚುದ್ದಾರೆ. ಮತ್ತೆ ನಿರೂಪಣೆ (Anchor)  ಮೂಲಕ ಕಿರುತೆರೆ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಈ ನಡುವೆ ಸುಷ್ಮಾ ಮತ್ತೆ ಧಾರಾವಾಹಿಗೆ ಎಂಟ್ರಿ ಕೊಟ್ಟಿದ್ದಾರೆ. 

ಕನ್ನಡದ ಖ್ಯಾತ ನಿರೂಪಕಿ, ನಟಿ ಸುಷ್ಮಾ ಕೆ ರಾವ್ ( Sushma K Rao) ಯಾರಿಗೆ ತಾನೆ ಗೊತ್ತಿಲ್ಲ. ಕನ್ನಡ ಕಿರುತೆರೆಯಲ್ಲಿ ಪ್ರಸಿದ್ಧಿ ಪಡೆದಿದ್ದ ಸುಷ್ಮಾ ಕೆಲವು ಸಮಯ ನಿರೂಪಣೆಯಿಂದ ಬ್ರೇಕ್ ಪಡೆದಿದ್ದರು. ಇದೀಗ ಮತ್ತೆ ವಾಪಾಸ್ ಆಗಿರುವ ಸುಷ್ಮಾ ಮತ್ತೆ ಕಿರುತೆರೆಯಲ್ಲಿ ಮಿಂಚುದ್ದಾರೆ. ಮತ್ತೆ ನಿರೂಪಣೆ (Anchor) ಮೂಲಕ ಕಿರುತೆರೆ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಈ ನಡುವೆ ಸುಷ್ಮಾ ಮತ್ತೆ ಧಾರಾವಾಹಿಗೆ ಎಂಟ್ರಿ ಕೊಟ್ಟಿದ್ದಾರೆ. ಅದು ಭಾವನಾ ಎನ್ನುವ ಹೆಸರಿನ ಮೂಲಕವೇ ಎನ್ನುವುದು ವಿಶೇಷ. 

ಹೌದು, ಸುಷ್ಮಾ ಮತ್ತೆ ಧಾರಾವಾಹಿಯಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಯಾವ ಧಾರಾವಾಹಿ ಅಂತ ಯೋಚಿಸುತ್ತಿದ್ದೀರಾ? ಸ್ಟಾರ್ ಸುವರ್ಣ (Star Suvarna) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬೆಟ್ಟದ ಹೂ (Bettada Hoovu) ಸೀರಿಯಲ್ ಮೂಲಕ ಕಿರುತೆರೆ ಪ್ರೇಕ್ಷಕರನ್ನು ರಂಜಿಸಲು ರೆಡಿಯಾಗಿದ್ದಾರೆ. ಬೆಟ್ಟದ ಹೂ ಧಾರಾವಾಹಿ ಅನೇಕ ಟ್ವಿಸ್ಟ್ ಅಂಡ್ ಟರ್ನ್ ಪಡೆದುಕೊಳ್ಳುತ್ತಾ ಮುನ್ನುಗ್ಗುತ್ತಿದೆ. ಇದೀಗ ಸುಷ್ಮಾ ಎಂಟ್ರಿ ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ಈ ಧಾರಾವಾಹಿಯಲ್ಲಿ ಸುಷ್ಮಾ ಭಾವನಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಅಂದಹಾಗೆ ಭಾವನಾ ಹೆಸರು ಸುಷ್ಮಾಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತ್ತು. ಹೌದು, ಗುಪ್ತಗಾಮಿನಿ ಧಾರಾವಾಹಿಯಲ್ಲಿ ಸುಷ್ಮಾ, ಭಾವನಾ ಪಾತ್ರದಲ್ಲಿ ಮಿಂಚಿದ್ದರು. ಈ ಧಾರಾವಾಹಿ ಜೊತೆಗೆ ಭಾವನಾ ಪಾತ್ರ ಕೂಡ ದೊಡ್ಡ ಮಟ್ಟದ ಖ್ಯಾತಿ ಗಳಿಸಿತ್ತು. ಈ ಧಾರಾವಾಹಿ ಮೂಲಕ ಭಾವನಾ ಕನ್ನಡ ಕಿರುತೆರೆ ಪ್ರೇಕ್ಷಕರ ಮನೆಮಾತಾಗಿದ್ದರು. ಸುಷ್ಮಾ ಎನ್ನುವುದಕ್ಕಿಂತ ಭಾವನಾ ಹೆಸರಿನ ಮೂಲಕವೇ ಪ್ರಸಿದ್ಧರಾಗಿದ್ದರು. ಇದೀಗ ಮತ್ತದೆ ಹೆಸರಿನ ಮೂಲಕ ಧಾರಾವಾಹಿಗೆ ಎಂಟ್ರಿ ಕೊಡುತ್ತಿರುವುದು ವಿಶೇಷ.

ಚಿಕ್ಕಮಗಳೂರಿನ ಚಿಕ್ಕಮಲ್ಲಿಗೆ ; ಮನಸೋಲದವರಿಲ್ಲ ಇವರ ನಿರೂಪಣಾ ಶೈಲಿಗೆ

ಬೆಟ್ಟದ ಹೂ ಧಾರಾವಾಹಿಯಲ್ಲಿ ಸುಷ್ಮಾ ಎಂಟ್ರಿ ಪ್ರಮುಖವಾಗಿದೆ. ಭಾವನಾ , ಧಾರಾವಾಹಿಯ ನಾಯಕಿ 'ಹೂವಿ' ಪರವಾಗಿ ನಿಂತಿದೆ. ಹಾಗಾಗಿ ಈ ಧಾರಾವಾಹಿ ಮೇಲೆ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಈ ನಡುವೆ ಬೆಟ್ಟದ ಹೂವು ಇತ್ತೀಚೆಗೆ 100 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿದೆ. ಬೆಟ್ಟದ ಹೂವಿನ ಇಡೀ ತಂಡಕ್ಕೆ ಇದು ಸಂಭ್ರಮದ ಸಮಯವಾಗಿತ್ತು. ಕಾರ್ಯಕ್ರಮದ ಸೆಟ್‌ನಲ್ಲಿ ಕೇಕ್ ಕತ್ತರಿಸುವ ಮೂಲಕ ಇಡೀ ತಂಡದ ಸದಸ್ಯರು ಯಶಸ್ಸನ್ನು ಆಚರಿಸಿದರು.

ಸೆಲೆಬ್ರಿಟಿಗಳ ಜತೆ ಫ್ಲರ್ಟ್‌ ಮಾಡೋದು ಇಷ್ಟವಿಲ್ಲ: ಸುಷ್ಮಾ ರಾವ್‌

ಇದೀಗ ಸುಷ್ಮಾ ಎಂಟ್ರಿಯಿಂದ ಧಾರಾವಾಹಿ ಯಾವ ತಿರುವು ಪಡೆದುಕೊಳ್ಳಲಿದೆ ಎಂದು ಪ್ರೇಕ್ಷಕರು ಕಾರತರದಿಂದ ಕಾಯುತ್ತಿದ್ದಾರೆ. ಸುಷ್ಮಾ ಭಾಗೀರತಿ ಧಾರಾವಾಹಿ ಮೂಲಕ ಮೊದಲ ಬಾರಿಗೆ ಕಿರುತೆರೆ ಪ್ರೇಕ್ಷಕರು ಮುಂದೆ ಬಂದರು. ಬಳಿಕ ಸ್ವಾತಿ ಮುತ್ತು, ಯಾವ ಜನ್ಮದ ಮೈತ್ರಿ, ಗುಪ್ತಗಾಮಿನಿ ಧಾರಾವಾಹಿಗಳಲ್ಲಿ ನಟಿಸಿದ್ದರು. ಬಳಿಕ ನಟನೆ ಜೊತೆಗೆ ನಿರೂಪಕಿಯಾಗಿಯೂ ಖ್ಯಾತಿಗಳಿಸಿದ್ದರು. ಇದೀಗ ಮತ್ತೆ ಭಾವನಾ ಆಗಿ ಅಭಿಮಾನಿಗಳ ಮುಂದೆ ಬರ್ತಿದ್ದಾರೆ.