Aase Kannada Serial Episode: ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಆಸೆ ʼ ಧಾರಾವಾಹಿಗೆ ರಮೇಶ್ ಅರವಿಂದ್ ಅವರು ಹಣ ಹೂಡುತ್ತಿದ್ದರು. ಈಗ ಅವರು ಈ ಹಿಂದೆ ಸೀರಿಯಲ್‌ನಿಂದ ಹೊರಗಡೆ ಬಂದಿದ್ದಾರೆ.
ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ‘ಆಸೆʼ ಧಾರಾವಾಹಿಯನ್ನು ನಟ ರಮೇಶ್ ಅರವಿಂದ್ ಅವರು ನಿರ್ಮಾಣ ಮಾಡಿದ್ದರು. ʼಆಸೆʼ ಧಾರಾವಾಹಿಗೆ ಒಳ್ಳೆಯ ಜನಪ್ರಿಯತೆ ಸಿಕ್ಕಿತ್ತು. ಈಗ ʼಆಸೆʼ ಧಾರಾವಾಹಿಯಿಂದ ರಮೇಶ್ ಅರವಿಂದ್ ಅವರು ಹಿಂದೆ ಸರಿದಿದ್ದಾರೆ.
ಹೊಸ ನಿರ್ಮಾಣ ಸಂಸ್ಥೆ ಯಾವುದು?
ಹೌದು, ರಮೇಶ್ ಅವರು ʼವಂದನಾ ಮೀಡಿಯಾ ಸಂಸ್ಥೆʼ ಮೂಲಕ ಈ ಧಾರಾವಾಹಿಗೆ ಹಣ ಹೂಡಿದ್ದರು. ಈಗ ʼಸ್ಲಿಂಗ್ ಶಾಟ್ ಪ್ರೊಡಕ್ಷನ್ʼ ಸಂಸ್ಥಯು ಈ ಧಾರಾವಾಹಿಗೆ ಹಣ ಹೂಡಿದೆ. ರಮೇಶ್ ಅರವಿಂದ್ ಅವರ ಈ ನಿರ್ಧಾರಕ್ಕೆ ಕಾರಣ ಏನು ಎನ್ನೋದು ರಿವೀಲ್ ಆಗಿಲ್ಲ.
ರಮೇಶ್ ಅರವಿಂದ್ ನಿರ್ಧಾರದ ಹಿಂದಿನ ಕಾರಣ?
ಈ ಹಿಂದೆ ʼನಂದಿನಿʼ ಸೇರಿದಂತೆ ಕೆಲ ಧಾರಾವಾಹಿಗಳಿಗೆ ಅವರು ಹಣ ಹೂಡುತ್ತಲೇ ಬಂದಿದ್ದರು. ಅಂತೆಯೇ ʼಆಸೆʼಗೂ ಕೂಡ ಹಣ ಹಾಕಿದ್ದರು. ಈಗ ರಮೇಶ್ ಅರವಿಂದ್ ಅವರ ನಿರ್ಧಾರ ಸಾಕಷ್ಟು ಕುತೂಹಲ ಮೂಡಿಸಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ʼಆಸೆʼ ಧಾರಾವಾಹಿಯು ಟಾಪ್ 2 ಸ್ಥಾನದಲ್ಲಿದೆ. ಹೀಗಾಗಿ ರಮೇಶ್ ಅವರು ಯಾಕೆ ಹಿಂದೆ ಸರಿದರು ಎನ್ನುವ ಪ್ರಶ್ನೆ ಎದ್ದು ಕಾಡುತ್ತಿದೆ.
ಈಗಾಗಲೇ ʼಆಸೆʼ ಧಾರಾವಾಹಿಯು 558 ಎಪಿಸೋಡ್‌ಗಳನ್ನು ಪೂರೈಸಿದೆ. ಅಂದಹಾಗೆ ಪ್ರತಿ ವಾರವೂ ಈ ಸೀರಿಯಲ್‌ಗೆ ಟಿಆರ್‌ಪಿ ರೇಟಿಂಗ್ 4 ಕ್ಕೂ ಮೀರಿದೆ. ಅಂದಹಾಗೆ ಈ ಧಾರಾವಾಹಿ ಕಲಾವಿದರ ನಟನೆ, ಸಂಭಾಷಣೆ ಎಲ್ಲವೂ ವೀಕ್ಷಕರಿಗೆ ತುಂಬ ಇಷ್ಟ ಆಗಿದೆ.
ಈ ಧಾರಾವಾಹಿ ಕಥೆ ಏನು?
ಶಾಂತಿ ಹಾಗೂ ರಂಗನಾಥ್‌ಗೆ ಮೂವರು ಗಂಡು ಮಕ್ಕಳು. ಶಾಂತಿಗೆ ಎರಡನೇ ಮಗ ಸೂರ್ಯನನ್ನು ಕಂಡರೆ ಆಗೋದೇ ಇಲ್ಲ. ಇನ್ನು ಇವಳ ಮೊದಲ ಮಗ ಮನೋಜ್, ಮೀನಾಳನ್ನು ಮದುವೆ ಆಗಬೇಕಿತ್ತು. ಮದುವೆ ದಿನವೇ ಅವನು ಇನ್ನೊಂದು ಹುಡುಗಿ ಹಿಂದೆ ಓಡಿಹೋದನು. ಹೀಗಾಗಿ ಕುಡುಕ ಸೂರ್ಯ ಮೀನಾಳನ್ನು ಮದುವೆಯಾದನು. ಆಮೇಲೆ ಸೂರ್ಯ ಒಳ್ಳೆಯ ಗಂಡ ಆಗಿ ಬದಲಾಗಿದ್ದಾನೆ. ಆದರೆ ಶಾಂತಿ ಮಾತ್ರ ಸಮಯ ಸಿಕ್ಕಾಗೆಲ್ಲ ಮೀನಾಗೆ ಅವಮಾನ ಮಾಡುತ್ತಾಳೆ, ನಿಂದಿಸುತ್ತಾಳೆ, ಕೆನ್ನೆಗೆ ಬಾರಿಸೋದಿಕ್ಕೆ ಕೂಡ ಹಿಂದೆ ಮುಂದೆ ನೋಡೋದಿಲ್ಲ.
ಇನ್ನು ಮನೋಜ್‌ನ ಹೆಂಡ್ತಿ ರೋಹಿಣಿಗೆ ಈಗಾಗಲೇ ಮದುವೆಯಾಗಿ ಕ್ರಿಶ್ ಎಂಬ ಮಗನಿದ್ದಾನೆ. ಈ ವಿಷಯ ಶಾಂತಿ ಮನೆಯಲ್ಲಿ ಯಾರಿಗೂ ಗೊತ್ತಿಲ್ಲ. ರೋಹಿಣಿ ಸ್ವಾರ್ಥಿ. ಅವಕಾಶ ಸಿಕ್ಕಿದಾಗೆಲ್ಲ ಮೀನಾಗೆ ಬೈಯ್ಯುತ್ತ, ನಿಂದಿಸುತ್ತಿದ್ದ ಅವಳೀಗ ತನ್ನ ಮಾವನ ಹಣವನ್ನು ದುರುಪಯೋಗ ಮಾಡಿಕೊಂಡಿರೋದು ಎಲ್ಲರಿಗೂ ಗೊತ್ತಾಗಿದ್ದು, ಈಗ ಅವಳ ಗಂಡನ ಮನೆ ನರಕವಾಗಿದೆ.
ಸೂರ್ಯ-ಮೀನಾಗೆ ಬುದ್ಧಿ ಕಲಿಸಬೇಕು, ಅವರನ್ನು ತುಳಿಬೇಕು ಅಂತ ರೋಹಿಣಿ ಪಣ ತೊಟ್ಟಿದ್ದಾಳೆ. ಸೂರ್ಯ, ಮೀನಾಗೆ ಒಂದಲ್ಲ ಒಂದು ಕಷ್ಟ ಬರುತ್ತಲೇ ಇದೆ, ಅವರಿಗೆ ಕೊಟ್ಟ ಶಿಕ್ಷೆಯನ್ನು ಶಾಂತಿ ಮನೋಜ್‌ಗೆ ಕೊಡೋದಿಲ್ಲ.
ಪಾತ್ರಧಾರಿಗಳು
ರಂಗನಾಥ್ ಪಾತ್ರದಲ್ಲಿ ಮಂಡ್ಯ ರಮೇಶ್, ಶಾಂತಿ ಪಾತ್ರದಲ್ಲಿ ಸ್ನೇಹಾ, ಮೀನಾ ಪಾತ್ರದಲ್ಲಿ ಪ್ರಿಯಾಂಕಾ ಡಿಎಸ್, ಸೂರ್ಯ ಪಾತ್ರದಲ್ಲಿ ನಿನಾದ್ ಹರಿತ್ಸ ಅವರು ನಟಿಸುತ್ತಿದ್ದಾರೆ.
