- Home
- Entertainment
- TV Talk
- Aase Serial Actress Priyanka: ಕಾಡು ಮಳೆಯಲಿ ಮೈ ಚಳಿ ಬಿಟ್ಟು ನೆನೆದ ಆಸೆ ಧಾರಾವಾಹಿ ಅಳುಮುಂಜಿ ಮೀನಮ್ಮ…
Aase Serial Actress Priyanka: ಕಾಡು ಮಳೆಯಲಿ ಮೈ ಚಳಿ ಬಿಟ್ಟು ನೆನೆದ ಆಸೆ ಧಾರಾವಾಹಿ ಅಳುಮುಂಜಿ ಮೀನಮ್ಮ…
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಆಸೆ ಸೀರಿಯಲ್ ಮೀನಾ ಖ್ಯಾತಿಯ ನಟಿ ಪ್ರಿಯಾಂಕಾ ಸ್ನೇಹಿತರ ಜೊತೆ ಟ್ರೆಕ್ಕಿಂಗ್, ಜಲಪಾತ, ಮಳೆಯನ್ನು ಎಂಜಾಯ್ ಮಾಡ್ತಿದ್ದಾರೆ.

ಸ್ಟಾರ್ ಸುವರ್ಣ (Star Suvarna) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಆಸೆಯಲ್ಲಿ ನಾಯಕಿ ಮೀನಾ ಪಾತ್ರದ ಮೂಲಕ ಜನಮನ ಗೆದ್ದಿರುವ ನಟಿ ಪ್ರಿಯಾಂಕಾ ಡಿಎಸ್ ಸದ್ಯ ಸೀರಿಯಲ್ ನಿಂದ ಬ್ರೇಕ್ ತೆಗೆದುಕೊಂಡು ತಮ್ಮ ಸ್ನೇಹಿತರ ಜೊತೆ ಮೋಜು ಮಸ್ತಿ ಮಾಡ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಬೆಡಗಿ ಪ್ರಿಯಾಂಕ (Priyanka DS) ತಮ್ಮ ಸ್ನೇಹಿತರ ಜೊತೆ, ಈ ಜೋರಾದ ಮಳೆಯಲ್ಲಿ, ಕೊರೆಯುವ ಚಳಿಯ ನಡುವೆ ಟ್ರೆಕ್ಕಿಂಗ್ ಮಾಡಿದ್ದು, ಜೊತೆಗೆ ಜಲಪಾತದಲ್ಲಿ ಸಖತ್ ಆಗಿ ಎಂಜಾಯ್ ಮಾಡಿರುವ ಫೋಟೊಗಳನ್ನು ಇನ್’ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅದರ ಜೊತೆಗೆ ಕಾಡು ಮಳೆಯನು, ಮಳೆಯ ನೆನಪಲಿ
ತಮ್ಮ ಬ್ಯುಸಿ ಶೆಡ್ಯೂಲ್ ಗೆ ಬ್ರೇಕ್ ಕೊಟ್ಟು, ನಟಿ ಪ್ರಿಯಾಂಕ ದಕ್ಷಿಣ ಕನ್ನಡದತ್ತ ಮುಖ ಮಾಡಿದ್ದು, ಇಲ್ಲಿನ ದಿಡುಪೆ ಫಾಲ್ಸ್, ಟ್ರೆಕ್ಕಿಂಗ್ ಮಾಡಿ ಎಂಜಾಯ್ ಮಾಡಿದ್ದಾರೆ. ಜಲಪಾತದಲ್ಲಿ, ನೀರಿನಲ್ಲಿ, ಮಳೆಯಲ್ಲಿ ಡ್ಯಾನ್ಸ್ ಮಾಡುತ್ತಾ ಮೋಜು ಮಾಡಿರೋ ಫೋಟೊ, ವಿಡಿಯೋಗಳನ್ನು ನಟಿ ಶೇರ್ ಮಾಡಿದ್ದಾರೆ.
ಸೀರಿಯಲ್ ನಲ್ಲಿ ಯಾವಾಗ್ಲೂ ಸೀರೆಯುಟ್ಟು ಗೌರಮ್ಮನಾಗಿ ಕಾಣಿಸಿಕೊಳ್ಳುವ ಪ್ರಿಯಾಂಕ, ತಮ್ಮ ವೆಕೇಶನ್ ನಲ್ಲಿ ಬಿಂದಾಸ್ ಆಗಿ ಜೀನ್ಸ್ ಕ್ರಾಪ್ ಟಾಪ್ ತೊಟ್ಟು ಸಖತ್ ಸ್ಟೈಲಿಶ್ ಆಗಿ ಕಾಣಿಸುತ್ತಿದ್ದು, ಅಭಿಮಾನಿಗಳು ಸಹ ನಟಿ ಫೋಟೊಗಳನ್ನು ಮೆಚ್ಚಿಕೊಂಡಿದ್ದಾರೆ.
ಪ್ರಿಯಾಂಕಾ ಸಿಕ್ಕಾಪಟ್ಟೆ ಖುಷಿಯಾಗಿರೋದನ್ನು ನೋಡಿ ಫ್ಯಾನ್ಸ್, ಸೀರಿಯಲ್ ನಲ್ಲಿ ಯಾವಾಗ್ಲೂ ಅಳೋದೆ ಆಯ್ತು, ಈವಾಗಲಾದ್ರೂ ಖುಶಿಯಾಗಿರಲಿ ಎಂದಿದ್ದಾರೆ. ಅಲ್ಲದೇ ಇನ್ನೂ ಹಲವರು ಕ್ರಶ್ ಎನ್ನುತ್ತಾ, ಹಾರ್ಟ್ ಇಮೋಜಿಗಳಿಂದ ಕಾಮೆಂಟ್ ಸೆಕ್ಷನ್ ಭರ್ತಿ ಮಾಡಿದ್ದಾರೆ.
ಆಸೆ ಧಾರಾವಾಹಿ ಬಗ್ಗೆ ಹೇಳೋದಾದರೆ ಸದ್ಯಕ್ಕಂತೂ ರೋಹಿಣಿಯ ಪಿತೂರಿಯಿಂದ ಅತ್ತೆಯ ಬ್ಯಾಗ್ ಕದ್ದಿದ್ದು ಮೀನಾ ತಮ್ಮ ಅನ್ನೋದು ಗೊತ್ತಾಗಿದ್ದು, ಆತನನ್ನು ಜೈಲಿಗಟ್ಟಲು ಕಂಪ್ಲೈಂಟ್ ಕೊಟ್ಟಿದ್ದಾರೆ ಶಾಂತಿ, ತಮ್ಮ ಓಡಿ ಹೋಗಿದ್ದು, ಅಮ್ಮ ಪೊಲೀಸ್ ಸ್ಟೇಷನ್ ನಲ್ಲಿದ್ದು ಮೀನಾಳಿಗೆ ಗೋಳಾಡೊದೊಂದೆ ಸದ್ಯದ ಕೆಲಸವಾಗಿದೆ.
ಇನ್ನು ಪ್ರಿಯಾಂಕ ಬಗ್ಗೆ ಹೇಳೋದಾದರೆ ಕಲರ್ಸ್ ಕನ್ನಡದ ಪುಣ್ಯವತಿ (Punyavathi) ಸೀರಿಯಲ್ ಮೂಲಕ ನಟನೆಗೆ ಎಂಟ್ರಿ ಕೊಟ್ಟಿದ್ದರು. ಈ ಧಾರಾವಾಹಿಯಲ್ಲಿ ಡ್ಯಾನ್ಸರ್ ಆಗಿ ಇವರು ಕಾಣಿಸಿಕೊಂಡಿದ್ದರು. ಆ ಸೀರಿಯಲ್ ಮುಗಿದ ಬಳಿಕ ಪ್ರಿಯಾಂಕ ಆಸೆ ಧಾರಾವಾಹಿಗೆ ನಾಯಕಿಯಾಗಿ ಆಯ್ಕೆಯಾಗಿದ್ದರು.