Asianet Suvarna News Asianet Suvarna News

ಪ್ರಭಾಸ್-ಪ್ರಶಾಂತ್ ಜೋಡಿಯ ಸಲಾರ್ ಚಿತ್ರದ ವಿತರಣೆ ಹೊಣೆ ಹೊತ್ತಿದ್ಯಾರು; ಹೊರಬಿತ್ತು ಘೋಷಣೆ!

ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಸಲಾರ್ ಚಿತ್ರ ಅಗ್ನಿಪರೀಕ್ಷೆಯೇನೂ ಅಲ್ಲ. ಏಕೆಂದರೆ, ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ 1 & ಕೆಜಿಎಫ್ 2 ಚಿತ್ರಗಳು ಸೂಪರ್ ಹಿಟ್ ಆಗಿವೆ. ಇದೀಗ ಸಲಾರ್ ಚಿತ್ರಕ್ಕೆ ಸಹಜವಾಗಿಯೇ ಹೆಚ್ಚು ನಿರೀಕ್ಷೆಯಿದೆ. ಆದರೆ, ಈ ಚಿತ್ರ ಅವರ ಭವಿಷ್ಯದ ಹಣೆಬರಹ ನಿರ್ಧರಿಸುವಲ್ಲಿ ಅಷ್ಟೇನೂ ಪರಿಣಾಮಕಾರಿಯಲ್ಲ. 

Actor Prabhas lead Sallar movie distribution is from Hombale films only srb
Author
First Published Nov 12, 2023, 3:13 PM IST

ಹೊಂಬಾಳೆ ಫಿಲಂಸ್ ಅಡಿಯಲ್ಲಿ ವಿಜಯ್ ಕಿರಗಂದೂರ್ ನಿರ್ಮಾಣದ ಸಲಾರ್ ಚಿತ್ರವು ಡಿಸೆಂಬರ್ 22 ರಂದು ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಸ್ವತಃ ಹೊಂಬಾಳೆ ನಿರ್ಮಾಣ ಸಂಸ್ಥೆಯೇ ಮಾಡಲಿದ್ದು, ಈ ಬಗ್ಗೆ ತನ್ನ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಪ್ರಕಟಣೆ ಮಾಡಿದೆ. ಡಿಸೆಂಬರ್ 22, 2023 ರಂದು ಪ್ರಪಂಚದಾದ್ಯಂತೆ ಬಿಡುಗಡೆ ಕಾಣಲಿರುವ ಸಲಾರ್ ಸಿನಿಮಾ ಬಗ್ಗೆ ಎಲ್ಲ ಕಡೆ ತೀವ್ರ ಕುತೂಹಲ ಮೂಡಿದೆ. ಕಾರಣ ಒಂದು, ಇದು ಸೂಪರ್ ಹಿಟ್ 'ಕೆಜಿಎಫ್' ಸರಣಿ ಚಿತ್ರಗಳ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ. ಕಾರಣ ಎರಡು, ಸತತ ಸೋಲಿನಿಂದ ಕಂಗೆಟ್ಟಿರುವ ಪ್ರಭಾಸ್, ಈ ಸಿನಿಮಾ ಮೂಲಕವಾದರೂ ಸಕ್ಸಸ್ ನೋಡುತ್ತಾರೆಯೇ? ಎಂಬ ಪ್ರಶ್ನೆಗೆ ಉತ್ತರ!

ಹೌದು, ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಸಲಾರ್ ಚಿತ್ರ ಅಗ್ನಿಪರೀಕ್ಷೆಯೇನೂ ಅಲ್ಲ. ಏಕೆಂದರೆ, ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ 1 & ಕೆಜಿಎಫ್ 2 ಚಿತ್ರಗಳು ಸೂಪರ್ ಹಿಟ್ ಆಗಿವೆ. ಇದೀಗ ಸಲಾರ್ ಚಿತ್ರಕ್ಕೆ ಸಹಜವಾಗಿಯೇ ಹೆಚ್ಚು ನಿರೀಕ್ಷೆಯಿದೆ. ಆದರೆ, ಈ ಚಿತ್ರ ಅವರ ಭವಿಷ್ಯದ ಹಣೆಬರಹ ನಿರ್ಧರಿಸುವಲ್ಲಿ ಅಷ್ಟೇನೂ ಪರಿಣಾಮಕಾರಿಯಲ್ಲ. ಕಾರಣ, ಸತತ ಗೆಲುವಿನ ಬಳಿಕ ಬರುವ ಮತ್ತೊಂದೇ ಚಿತ್ರವಾದ ಸಲಾರ್ ಅವರನ್ನು ಮುಂದಕ್ಕೆ ಕೊಂಡಯ್ಯದೇ ಇದ್ದರೂ ಹಿಂದಕ್ಕಂತೂ ತರಲಾರದು. ಸಲಾರ್ ಗೆದ್ದರೆ ಅವರಿಗೆ ಪ್ರಮೋಶನ್, ಬೋನಸ್ ಇವೆಲ್ಲಾ ಪಕ್ಕಾ ಎನ್ನಬಬಹುದಷ್ಟೇ. 

ಸಂಗೀತಾ ಮುಖದಲ್ಲಿ ಮಾತ್ರ ನಗು ಕಾಣ್ತಾ ಇದೆ, ಪ್ರತಾಪ್‌ಗೆ ಒಳ್ಳೇದಾಗಲಿ; ನೆಟ್ಟಿಗರ ಮಾತಿನ ಮರ್ಮವೇನು?

ಆದರೆ ನಟ ಪ್ರಭಾಸ್ ಪರಿಸ್ಥಿತಿ ಹೀಗಿಲ್ಲ. ಕಾರಣ, ಬಾಹುಬಲಿ ಬಳಿಕ ಪ್ರಭಾಸ್ ನಟನೆಯ ಸಾಹೋ, ರಾಧೆ ಶ್ಯಾಮ್ ಮತ್ತು ಆದಿ ಪುರುಷ್ ಚಿತ್ರಗಳು ಸೋತು ಹೋಗಿವೆ. ಸತತ ಮೂರು ಚಿತ್ರಗಳ ಸೋಲು ಪ್ರಭಾಸ್ ಅವರಿಗೆ ತೀವ್ರ ಹಿನ್ನಡೆ ಉಂಟುಮಾಡಿವೆ. ಹೀಗಾಗಿ ಮುಂಬರುವ ಸಲಾರ್ ಚಿತ್ರದ ಗೆಲುವು ಸ್ವತಃ ಪ್ರಭಾಸ್ ಅವರಿಗೆ ತುಂಬಾ ಮುಖ್ಯವಾಗಿದೆ. ಪ್ರಭಾಸ್ ಅಭಿಮಾನಿಗಳು ಕೂಡ ಮುಂಬರುವ ಸಲಾರ್ ಚಿತ್ರವು ಸಕ್ಸಸ್ ಆಗಲೆಂದು ಹರಕೆ ಹೊರುತ್ತಿದ್ದಾರೆ. ಅದರಲ್ಲೂ ಈ ಸಲಾರ್ ಚಿತ್ರವನ್ನು ಹೊಂಬಾಳೆ ಸಂಸ್ಥೆ ನಿರ್ಮಾನ ಮಾಡಿರುವ ಕಾರಣಕ್ಕೆ ಸಕ್ಸಸ್ ಗ್ಯಾರಂಟಿ ಎನ್ನಲಾಗುತ್ತಿದೆ.

ಫ್ರೆಂಡ್ ಅಂದ್ರೆ ಕಾರ್ತಿಕ್ ಅಂದ್ರು ಸಂಗೀತಾ, ನಾಚಿ ನೀರಾದ್ರು ಬಿಗ್ ಬಾಸ್ ಮನೆ ಹ್ಯಾಂಡ್‌ಸಮ್ ಬಾಯ್!

ಒಟ್ಟಿನಲ್ಲಿ, ಸಲಾರ್ ಸಿನಿಮಾ ನಿರ್ಮಾಪಕರೇ ಈ ಚಿತ್ರವನ್ನು ವಿತರಣೆ ಕೂಡ ಮಾಡುತ್ತಿದ್ದಾರೆ ಎಂಬುದು ಅವರದೇ ಘೋಷಣೆ ಮೂಲಕ ಕನ್ಫರ್ಮ್ ಆಗಿದೆ.    'ಕರುನಾಡಿನಾದ್ಯಂತ ವಿತರಣೆಯ ಹೊಣೆ ನಮ್ಮದು. ಅತ್ಯಮೋಘ ಅನುಭವ ನೀಡುವ ಭರವಸೆಯೊಂದಿಗೆ ನಿಮ್ಮ ಮುಂದೆ ಬರುತ್ತಿದೆ ಸಲಾರ್‌' ಎಂದು ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಹೊಂಬಾಳೆ ಸಂಸ್ಥೆ ಬರೆದುಕೊಂಡಿದೆ. ಮುಂದಿನ ತಿಂಗಳು ಬಿಡುಗಡೆ, ಸಲಾರ್ ಚಿತ್ರದ ಫಲಿತಾಂಶಕ್ಕೆ ಇನ್ನೊಂದು ತಿಂಗಳು ಕಾಯಬೇಕಷ್ಟೇ. 

Follow Us:
Download App:
  • android
  • ios