ಸಿಸಿಎಲ್ ಪಂದ್ಯದಲ್ಲಿ ರಜತ್ ಕಿಶನ್, ಸುದೀಪ್ ಪುತ್ರಿ ಸಾನ್ವಿ ಜೊತೆ ತಮಾಷೆ ಮಾಡುವಾಗ ಅವರ ಅಸಮಾಧಾನಕ್ಕೆ ಕಾರಣರಾದರು. ಫೋಟೋ ತೆಗೆಯುವಾಗ ರಜತ್ ವರ್ತನೆ ಸಾನ್ವಿಗೆ ಬೇಸರ ತರಿಸಿತು. ನೆಟ್ಟಿಗರು ರಜತ್ ವರ್ತನೆಯನ್ನು ಟೀಕಿಸಿದರೆ, ಅದ್ವಿತಿ ಶೆಟ್ಟಿ ಇದು ಕೇವಲ ತಮಾಷೆ ಎಂದು ಸಮರ್ಥಿಸಿಕೊಂಡರು.

ಬಿಗ್ ಬಾಸ್ ಸೀಸನ್ 11ರ ವೈಲ್ಡ್‌ ಕಾರ್ಡ್‌ ಸ್ಪರ್ಧಿ ರಜತ್ ಕಿಶನ್ ಮತ್ತು ಕಿಚ್ಚ ಸುದೀಪ್ ಪುತ್ರಿ ನಡುವೆ ಬಿಸಿಬಿಸಿ ಮಾತುಕತೆ ಆಗಿದೆ. ಸಿಸಿಎಲ್ ಸಮಯದಲ್ಲಿ ಫೋಟೋ ಕ್ಲಿಕ್ ಮಾಡಿಕೊಳ್ಳುವಾಗ ರಜತ್ ಕೊಟ್ಟ ಕ್ವಾಟ್ಲೆಯಿಂದ ಸಾನ್ವಿ ಬೇಸರ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಾನ್ವಿ ಬೇಡ ಅಂತಿದ್ದರೂ ರಜತ್ ಕಿರಿಕಿರಿ ಮಾಡಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಅಷ್ಟಕ್ಕೂ ಅಲ್ಲಿಗೆ ಆಗಿದ್ದು ಏನು?

ಏನಿದು ಕಿರಿಕಿರಿ? 
ಸಿಸಿಎಲ್‌ ಈ ವರ್ಷ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದೆ. ಹೀಗಾಗಿ ಸುದೀಪ್ ಪುತ್ರಿ ಸಾನ್ವಿ ಸೇರಿದಂತೆ ಹಲವು ಸೆಲೆಬ್ರಿಟಿಯರು ಭಾಗಿಯಾಗಿದ್ದಾರೆ. ಆಗ ಬಿಗ್ ಬಾಸ್ ರಜತ್ ಕಿಶನ್ ಕೂಡ ಇದ್ದರು. ನಟಿ ದೀಪಿಕಾ ದಾಸ್, ಅದ್ವಿತಿ ಶೆಟ್ಟಿ, ಅಶ್ವಿತಿ ಶೆಟ್ಟಿ ಮತ್ತು ಸಾನ್ವಿ ಫೋಟೋ ಕ್ಲಿಕ್ ಮಾಡಿಕೊಳ್ಳುತ್ತಿದ್ದರು. ಆಗ ಹಿಂದಿನಿಂತ ರಜತ್ 'V' ಚಿನ್ನೆ ಹಿಡಿದು ಪೋಸ್ ಕೊಡುತ್ತಾರೆ. ಅದು ಸಾನ್ವಿ ಹಿಂದೆ ಚಿನ್ನೆ ಹಿಡಿದಿದ್ದ ಕಾರಣ ಕೊಂಚ ಬೇಸರ ಮಾಡಿಕೊಂಡು ಮಾತನಾಡುತ್ತಾರೆ. ಅಲ್ಲಿಂದ ಸೈಲೆಂಟ್ ಆಗಿ ಜಾಗ ಕಾಲಿ ಮಾಡುತ್ತಿದ್ದ ರಜತ್‌ಗೆ ಅಲ್ಲಿದ್ದ ಒಬ್ಬರು ಫೋಟೋಗೆ ಬರಲು ಹೇಳುತ್ತಾರೆ. ಇಲ್ಲ ನಾನು ಅಲ್ಲೇ ನಿಲ್ಲುವುದು ಎಂದು ಸಾನ್ವಿ ಪಕ್ಕದಲ್ಲಿ ರಜತ್ ಪೋಸ್ ಕೊಡುತ್ತಾರೆ. ಆಗ ಕೂಡ ಸಾನ್ವಿ ಮುಖದಲ್ಲಿ ಬೇಸರ ಕಾಣಬಹುದು.ಆದರೆ ರಜತ್ ಮಾತ್ರ ತಮಾಷೆಯಲ್ಲಿ ಓಡಾಡಿಕೊಂಡು ಇದ್ದರು.

ಫೇಮಸ್ ಆಗ್ತಿದ್ದಂತೆ ಕೂದಲು ತುಂಡು ಮಾಡಿಸಿಕೊಂಡ ಭವ್ಯಾ ಗೌಡ ಸಹೋದರಿ ದಿವ್ಯಾ ; ಫೋಟೋ ವೈರಲ್

ಅದ್ವಿತಿ ಸ್ಪಷ್ಟನೆ:

'ಎಲ್ಲರೂ ಚಿಲ್ ಮಾಡಿ ಇದು ತಮಾಷೆ ಮಾಡಿರುವುದು. ಸಾನ್ವಿ ಅವರು ಸುಮ್ಮನೆ ರಜತ್‌ಗೆ ರೇಗಿಸುತ್ತಾ ಇದ್ದರು ಅಷ್ಟೇ. ಏಕೆಂದರೆ ರಜತ್ ಕೂಡ ಅಷ್ಟೇ ತಮಾಷೆ ಮಾಡುತ್ತಾರೆ. ವಿಡಿಯೋ ನೋಡಿ ಒಬ್ಬ ವ್ಯಕ್ತಿಯನ್ನು ಅಳಿಯಬೇಡಿ. ಅವರೆಲ್ಲಾ ಒಂದು ಫ್ಯಾಮಿಲಿ ರೀತಿ ಇದ್ದಾರೆ. ಸಾನ್ವಿ ಮತ್ತು ರಜತ್ ಇಬ್ರು ತುಂಬಾ ಸ್ವೀಟ್' ಎಂದು ವೈರಲ್ ಅಗುತ್ತಿರುವ ಫೋಟೋ ಒಂದಕ್ಕೆ ನಟಿ ಅದ್ವಿತಿ ಶೆಟ್ಟಿ ಕಾಮೆಂಟ್ ಮಾಡಿದ್ದಾರೆ. 

ಸಖತ್ ದುಬಾರಿ ಕಣ್ಣಮ್ಮ ನೀನು....; ಅನುಷಾ ರೈ ಶಾಪಿಂಗ್‌ ನೋಡಿ ಫ್ಯಾನ್ಸ್ ಶಾಕ್

ನೆಟ್ಟಿಗರ ಕಾಮೆಂಟ್: 

'ರಜತ್ ಕಿಶನ್‌ಗೆ attention seeking syndrome' ಇದೆ ಅದಕ್ಕೆ ಎಲ್ಲಾ ಕಡೆ ಮಧ್ಯ ಬರ್ತಾರೆ', 'ಸಾನ್ವಿಗೆ ಬೇಸರ ಮಾಡಿದ್ದಕ್ಕೆ ಸಾರಿ ಕೇಳಬೇಕು', 'ಪಬ್ಲಿಕ್‌ನಲ್ಲಿ ಸಾನ್ವಿಗೆ ಸಾರಿ ಕೇಳಬೇಕು' , 'ಅತಿ ಮಾಡಿದರೆ ಯಾವುದೂ ತಮಾಷೆ ಅಲ್ಲ' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಒಟ್ಟಾರೆ ಇಲ್ಲಿ ನಡೆದಿರುವ ಸಣ್ಣ ಮಾತುಕತೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

ಅನುಪಮಾ ಗೌಡ ಹೊಸ ಫೋಟೋಗೆ 'ಮೂಳೆ ಕಾಣೋಷ್ಟು ಸಣ್ಣ ಆಗ್ಬೇಡಾ' ಎಂದ ನೆಟ್ಟಿಗರು!

View post on Instagram