ಬಿಗ್ ಬಾಸ್ 11ರಲ್ಲಿ ತ್ರಿವಿಕ್ರಮ್ ಮತ್ತು ಭವ್ಯಾ ಗೌಡ ನಡುವಿನ ಸ್ನೇಹ ಪ್ರೀತಿಗೆ ತಿರುಗಿದೆಯೆಂಬ ಗುಸುಗುಸು ಹಬ್ಬಿದೆ. ತ್ರಿವಿಕ್ರಮ್ ಪ್ರೀತಿ ವ್ಯಕ್ತಪಡಿಸಿದ್ದಕ್ಕೆ ಭವ್ಯಾ ಮನೆಯಿಂದ ಹೊರಬಂದ ಮೇಲೆ ಉತ್ತರಿಸುವುದಾಗಿ ಹೇಳಿದ್ದಾರೆ. ಸ್ಪರ್ಧೆಯಲ್ಲಿದ್ದಾಗ ಉತ್ತರಿಸಲು ಸಾಧ್ಯವಿಲ್ಲ ಎಂದವರು ಹಳೆ ಸ್ಪರ್ಧಿಗಳ ಪ್ರಶ್ನೆಗಳಿಗೂ ಮೌನವಾಗಿದ್ದಾರೆ. ಇತ್ತೀಚೆಗೆ ಇಬ್ಬರ ನಡುವೆ ಸಣ್ಣಪುಟ್ಟ ಮನಸ್ತಾಪಗಳು ಕಂಡುಬಂದಿದ್ದು, ಪ್ರೇಕ್ಷಕರಿಗೆ ಲವ್ ಬ್ರೇಕಪ್ ಎನಿಸುತ್ತಿದೆ.
ಬಿಗ್ ಬಾಸ್ ಸೀಸನ್ 11 ಫಿನಾಲೆ ಹಂತ ತಲುಪಿತ್ತಿದೆ. ಈ ವಾರ ಡಬಲ್ ಎಲಿಮಿನೇಷನ್ ಮುಗಿದ ಮೇಲೆ ಉಳಿದ ಸ್ಪರ್ಧಿಗಳು ಸಖತ್ ಕೂಲ್ ಆಗಿ ಫಿನಾಲೆ ವಾರ ಎಂಜಾಯ್ ಮಾಡಬಹುದು. ಆರಂಭದಿಂದಲೂ ತ್ರಿವಿಕ್ರಮ್ ಮತ್ತು ಭವ್ಯಾ ಗೌಡ ಫ್ರೆಂಡ್‌ಶಿಪ್ ಜನರಿಗೆ ಇಷ್ಟವಾಗಿದೆ. ಸುಮಾರು 50 ದಿನಗಳ ಕಾಲ ಒಬ್ಬರನೊಬ್ಬರು ಬಿಟ್ಟಿರದಷ್ಟು ಒಟ್ಟಿಗೆ ಇದ್ದು. ಬಹುಷ ಇದೇ ಪ್ರೀತಿಗೆ ಕನ್‌ವರ್ಟ್ ಆಗಿರಬಹುದು ಎನ್ನಲಾಗಿದೆ.ಈ ಹಿಂದೆ ತಮ್ಮ ನೋವು ಹೇಳಿಕೊಳ್ಳುವಾಗ ತ್ರಿವಿಕ್ರಮ್ I really love you ಭವ್ಯಾ ಅಂತ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ಕೊಡದ ಸುಮ್ಮನಿದ್ದ ಭವ್ಯಾಳನ್ನು ನೋಡಿ ನೀನು ಒಂದು ವಾರ ಸಮಯ ತೆಗೆದುಕೋ ಎಂದು ಸುಮ್ಮನಾಗಿಬಿಟ್ಟರು. ಇದಾದ ಮೇಲೆ ಇಡೀ ರಾತ್ರಿ ಚೈತ್ರಾ ಕುಂದಾಪುರ ಜೊತೆ ಮಾತನಾಡಿದ್ದಾರೆ. ಈಗ ನನ್ನ ಮನಸ್ಸಿನಲ್ಲಿ ಇರುವುದು ನಾನು ಹೇಳಿಕೊಂಡಿಲ್ಲ ಅಂದ್ರೆ ಕಷ್ಟ ಆಗುತ್ತೆ ಅಕ್ಕ. ಇಷ್ಟು ದಿನ ಆಟಕ್ಕೆ ತೊಂದರೆ ಆಗಬಾರದು ಎಂದು ಸುಮ್ಮನಿದ್ದೆ ಎಂದು ತ್ರಿವಿಕ್ರಮ್ ಚೈತ್ರಾ ಬಳಿ ಹಂಚಿಕೊಂಡಿದ್ದಂತೆ.
ಕೆಲವು ದಿನಗಳ ಹಿಂದೆ ಲೈಟ್ಸ್ ಆಫ್ ಆದ ಮೇಲೆ ಭವ್ಯಾ ಗೌಡ ಮತ್ತು ತ್ರಿವಿಕ್ರಮ್ ಮತ್ತೆ ಮಾತನಾಡುವಾಗ ಉತ್ತರ ಸಿಗಲಿಲ್ಲ ಎಂದು ತ್ರಿವಿಕ್ರಮ್ ಹೇಳುತ್ತಾರೆ. ಈಗ ಉತ್ತರ ಕೊಡಲು ಆಗಲ್ಲ ಹೊರ ಹೋದ ಮೇಲೆ ಹೇಳುತ್ತೀನಿ ಎಂದಿದ್ದಾರೆ ಭವ್ಯಾ. ಹಾಗಿದ್ರೆ ಆಗಲ್ವಾ ಎಂದು ತ್ರಿವಿಕ್ರಮ್ ಕೇಳಿದ್ದಕ್ಕೆ. ಮೇ ಬಿ ಮೇ ಬಿ ನಾಟ್ ಎಂದು ಭವ್ಯಾ ಉತ್ತರಿಸಿದ್ದಾರೆ. ಗೆದ್ದು ಬಂದಿದ್ರೆ ಒಪ್ಪಿಕೊಳ್ಳುತ್ತಿದ್ದೆ ಅಲ್ವಾ ಎನ್ನುತ್ತಾರೆ. ಅದಕ್ಕೆ ಹೌದು ಗೆದ್ದು ಬನ್ನಿ ಒಪ್ಪಿಕೊಳ್ಳುತ್ತೀನಿ ಅಂತಾಳೆ ಭವ್ಯಾ. ಈಗ ನಾನು ಗೆದ್ದಿಲ್ಲ ಭವ್ಯಾ ಎಂದು ತ್ರಿವಿಕ್ರಮ್ ಮತ್ತೆ ಹೇಳುತ್ತಾರೆ. ಈಗ ನಾನು ಉತ್ತರ ಕೊಡುವ ಪರಿಸ್ಥಿತಿಯಲ್ಲಿ ಇಲ್ಲ ಹೊರ ಬಂದ ಮೇಲೆ ಖಂಡಿತಾ ಉತ್ತರಿಸುತ್ತೀನಿ ಎಂದು ಅಲ್ಲಿಗೆ ವಿಚಾರ ತೇಲಿಸುತ್ತಾರೆ. ಭವ್ಯಾ ಮತ್ತು ತ್ರಿವಿಕ್ರಮ್ ನಡುವೆ ಏನಾಗುತ್ತಿದೆ ಎಂದು ತಿಳಿದುಕೊಳ್ಳಲು ಮನೆಯೊಳಗೆ ಬಂದ ಹಳೆ ಸ್ಪರ್ಧಿಗಳು ಪ್ರಶ್ನೆ ಮಾಡುತ್ತಾರೆ. ಆಗ ಒಬ್ಬರಲ್ಲೂ ಉತ್ತರವಿಲ್ಲ ಸೈಲೆಂಟ್ ಆಗಿ ನಿಲ್ಲುತ್ತಾರೆ.
ಬಿಗ್ ಬಾಸ್ ಭವ್ಯಾ ಗೌಡ ಹಳೆ ಫೋಟೋಗಳು ವೈರಲ್; ಹೇರ್‌ಸ್ಟೈಲ್ ಕರಾಬು ಎಂದು ಕಾಲೆಳೆದ ನೆಟ್ಟಿಗರು
ಕಳೆದ ಒಂದು ವಾರದಿಂದ ಭವ್ಯಾ ಮತ್ತು ತ್ರಿವಿಕ್ರಮ್ ನಡುವೆ ಸಣ್ಣ ಪುಟ್ಟ ವಿಚಾರಕ್ಕೆ ಮನಸ್ಥಾಪವಾಗುತ್ತಿದೆ. ಆಟವಾಡುವಾಗ ಒಬ್ಬರನ್ನೊಬ್ಬರು ಬೈಯುವುದು, ನಾಮಿನೇಟ್ ಮಾಡುವಾಗ ತಾವು ಇಷ್ಟ ಪಟ್ಟ ವ್ಯಕ್ತಿಯನ್ನೇ ನಾಮಿನೇಟ್ ಮಾಡುವುದು, ಸರಿ ಇಲ್ಲ ಅಂದಾಗ ನೇರವಾಗಿ ಸರಿ ಇಲ್ಲ ಎಂದು ಇಬ್ಬರು ಚರ್ಚೆ ಮಾಡುವುದು ನಡೆಯುತ್ತಿದೆ. ಆದರೆ ಇದನ್ನು ಹೊರಗಡೆಯಿಂದ ನೋಡುತ್ತಿರುವವರು ಲವ್ ಬ್ರೇಕಪ್ ಆನಿಸುತ್ತಿದೆ. ಆದರೆ ನಿನ್ನೆ ಮನೆಯೊಳಗೆ ಹಳೆ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು ಆಗ ಯಾರೇ ತಮ್ಮಿಬ್ಬರ ನಡುವೆ ನಡೆಯುತ್ತಿರುವ ಸಮ್‌ಥಿಂಗ್ ಸಮ್‌ಥಿಂಗ್ ವಿಚಾರವನ್ನು ಪ್ರಶ್ನೆ ಮಾಡಿದಾಗ ಸಖತ್ ಕೂಲ್ ಆಗಿ ಉತ್ತರಿಸಿದ್ದಾರೆ.
ಭವ್ಯಾಗಿಂತ ಅಕ್ಕ ದಿವ್ಯಾನೇ ಸೂಪರ್; ಬೇಕೆಂದು ಹೆಚ್ಚೊತ್ತು ಉಳಿಸಿಕೊಂಡ್ರಾ ಬಿಗ್ ಬಾಸ್?
