Master Anand Wife Yashaswini: ನಿರೂಪಕ, ನಟ ಮಾಸ್ಟರ್‌ ಆನಂದ್‌ ಅವರ ಪತ್ನಿ ಕಾಲು ತುಂಬ ಗುಳ್ಳೆಗಳು. ಯಾಕೆ ಈ ರೀತಿ ಆಯ್ತು ಎಂದು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನನಗೆ ಯಾರ ದೃಷ್ಟಿ ಬಿತ್ತೋ ಏನೋ, ಆಗಿದ್ದೆಲ್ಲ ಒಳ್ಳೆಯದಕ್ಕೆ ಎಂದು ಅವರು ಹೇಳಿಕೊಂಡಿದ್ದಾರೆ. 

“ಕಳೆದ ಶನಿವಾರ ಎಲ್ಲರಿಗೂ ನಾರ್ಮಲ್‌ ಡೇ ಆದರೆ ನನಗೆ ಮಾತ್ರ ಬ್ಯಾಡ್‌ ಡೇ ಆಗಿತ್ತು” ಎಂದು ಯಶಸ್ವಿನಿ ಆನಂದ್‌ ಅವರು ಹೇಳಿದ್ದಾರೆ. ಹೌದು, ಒಂದು ವಿಡಿಯೋ ಮಾಡಿ, ಜೀವನದಲ್ಲಾದ ಈ ಅವಘಡದ ಬಗ್ಗೆ ಹೇಳಿಕೊಂಡಿದ್ದಾರೆ.

ನಿಜಕ್ಕೂ ಏನಾಯ್ತು? 
ಮಾಸ್ಟರ್‌ ಆನಂದ್‌ ಪತ್ನಿ ಯಶಸ್ವಿನಿ ಅವರು ಹಾಟ್‌ ವಾಟರ್‌ ಸ್ಟೀಮ್‌ ತಗೊಳ್ತಿದ್ದರು. ಈ ಸ್ಟೀಮ್‌ ತಗೊಳೋದಿಕ್ಕೆ ನೀರು ಸಿಕ್ಕಾಪಟ್ಟೆ ಬಿಸಿ ಇರಬೇಕು. ಈ ಬಿಸಿನೀರು ಕೈತಪ್ಪಿ ಕಾಲು ಮೇಲೆ ಬಿತ್ತು. ಅವರಿಗೋ ಉರಿಯೋ ಉರಿ. ಯಶಸ್ವಿನಿ ಪತಿ ಮಾಸ್ಟರ್‌ ಆನಂದ್‌ ಅವರು ಹಂಪಿ ಉತ್ಸವಕ್ಕೆ ತೆರಳಿದ್ದರು. ಹೀಗಾಗಿ ಸಂತು ಎನ್ನುವವರನ್ನು ಕರೆದುಕೊಂಡು ಯಶಸ್ವಿನಿ ಆಸ್ಪತ್ರೆಗೆ ತೆರಳಿದರು. ಅಲ್ಲಿ ಅವರಿಗೆ ಬ್ಯಾಂಡೇಜ್‌ ಹಾಕಲಾಯ್ತು. “ಏನೂ ತೊಂದರೆ ಇಲ್ಲ, ಕಡಿಮೆ ಆಗತ್ತೆ” ಅಂತ ಯಶಸ್ವಿನಿಗೆ ವೈದ್ಯರು ಭರವಸೆ ನೀಡಿದ್ದರು. ವೈದ್ಯರ ಮಾತು ಕೇಳಿ ಬ್ಯಾಂಡೇಜ್‌ ಹಾಕಿದ್ದಾರೆ, ಕಮ್ಮಿ ಆಗತ್ತೆ ಅಂತ ಯಶಸ್ವಿನಿ ಭಾವಿಸಿದ್ದರು. ಆದರೆ ಬೆಳಗಾಗುವುದರೊಳಗಡೆ ಆಗಿದ್ದೇ ಬೇರೆ.

‌ಅಬ್ಬಬ್ಬಾ..! ಎಲೆಮರಿ ಕಾಯಿಯಂತಿರೋ ಅದ್ಭುತ ಕಲಾವಿದ ಈ ʼರಾಮಾಚಾರಿʼ ನಟ ರವಿ ಸಾಲಿಯಾನ್

ಕಾಲು ತುಂಬ ಗುಳ್ಳೆಗಳು! 
ಯಶಸ್ವಿನಿ ಅವರ ಕಾಲುಗಳ ಮೇಲೆ ದೊಡ್ಡ ಗುಳ್ಳೆಗಳು ಆದಹಾಗೆ ಆಗಿತ್ತು. ಇನ್ನು ಮಾಸ್ಟರ್‌ ಆನಂದ್‌ ಮನೆಗೆ ಬರುತ್ತಿದ್ದಂತೆ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಕಾಲುಗಳ ಮೇಲೆ ಗುಳ್ಳೆಗಳು ಆಗಿವೆ, ಒಮ್ಮೆ ನೋಡಿ ಅಂತ ಯಶಸ್ವಿನಿ ವೈದ್ಯರಿಗೆ ಹೇಳಿದರು. ಆಗ ವೈದ್ಯರು ಬ್ಯಾಂಡೇಜ್‌ ಬಿಚ್ಚಿ ನೋಡಿದ್ರೆ ದೊಡ್ಡ ದೊಡ್ಡ ಗುಳ್ಳೆಗಳು. ಆ ಗುಳ್ಳೆಗಳನ್ನು ಒಡೆದು ಔಷಧಿ ಹಚ್ಚಲಾಯ್ತು. ಮತ್ತೆ ಆನಂದ್‌ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರು.

ʼರಿಯಾಲಿಟಿ ಶೋ ನಂತ್ರ ಯಶಸ್ವಿನಿ ಬದಲಾದ್ರು, ಚಿಕ್ಕ ಬಟ್ಟೆ ಹಾಕ್ತಾರೆʼ; ಖಡಕ್‌ ಮಾತಾಡಿದ ಪತಿ ಮಾಸ್ಟರ್‌ ಆನಂದ್!

ಎಲ್ಲ ಕೆಲಸ ಮಾಡ್ತಿರುವ ಮಾಸ್ಟರ್ ಆನಂದ್!‌ 
ಇನ್ನು ಮನೆಯ ಎಲ್ಲ ಕೆಲಸಗಳನ್ನು ಕೂಡ ಅವರೇ ಮಾಡುತ್ತಿದ್ದಾರಂತೆ. ಯಶಸ್ವಿನಿಗೆ ಊಟ-ತಿಂಡಿ ಮಾಡಿಸೋದರಿಂದ ಹಿಡಿದು, ಎಲ್ಲ ಕೆಲಸ ಮಾಡುತ್ತಿರೋದು ಒಂದು ಲೆಕ್ಕದಲ್ಲಿ ಖುಷಿಯಾಗುತ್ತಿದೆ. ನನ್ನ ಗಂಡ ಇಷ್ಟು ಪ್ರೀತಿ ಮಾಡ್ತಾರೆ, ಕಾಳಜಿ ಮಾಡ್ತಾರೆ ಅಂತ., “ಇನ್ನೂ ನಾನು ಹುಷಾರಾಗಿಲ್ಲ. ಯಾರ ಕಣ್ಣು ಬಿತ್ತೋ ಏನೋ! ಈ ಥರ ಆಯ್ತು, ಆಗಿದ್ದೆಲ್ಲ ಒಳ್ಳೆಯದಕ್ಕೆ ಅಂತ ಭಾವಿಸ್ತೀನಿ. ನಾನು ಬೇಗ ಹುಷಾರ್‌ ಆಗ್ತೀನಿ ಅಲ್ವಾ?” ಎಂದು ಯಶಸ್ವಿನಿ ಆನಂದ್‌ ಅವರು ವಿಡಿಯೋ ಮಾಡಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ.

ಡಿವೋರ್ಸ್​ ಸುದ್ದಿ ಇಷ್ಟು ದೊಡ್ಡದಾಗಲು ಇವಳೇ ಕಾರಣ: ಪತ್ನಿ ಮೇಲೆ ಕೋಪಗೊಂಡ ಆನಂದ್​ ಹೇಳಿದ್ದೇನು?

ವೀಕ್ಷಕರು ಏನು ಹೇಳಿದ್ದಾರೆ?

  • ಬೇಗ ಚೇತರಿಸಿಕೊಳ್ಳಿ. ನಿಮ್ಮ ಅರೋಗ್ಯದ ಎಚ್ಚರ ಇರಲಿ. ಸ್ವಲ್ಪ ರೆಸ್ಟ್ ಮಾಡ್ರಿ‌, ಹುಷಾರು ಆಗುತ್ತೆ. ಬೇಗ ಪೂರ್ತಿ ವಾಸಿ ಆಗಲಿ. ಅಲ್ಲೀ ತನಕ ಸ್ವಲ್ಪ ಕೇರ್ ಇರಲಿ ತಾಯಿ.. ಬೇಜಾರ್ ಅನಿಸ್ತು.
  • ಬೇಗ ಗುಣ ಆಗಲಿ ಮೇಡಮ್..ಬಹಳ‌ ಕಷ್ಟ ಬೆಂಕಿಯ ಗಾಯ..ನನಗೆ ಕುದಿಯುವ ನೀರು ಹೊಟ್ಟೆ ಮೇಲೆ ಬಿದ್ದು ಒಂದು ತಿಂಗಳು ಕಷ್ಟ ಪಟ್ಟಿದ್ದೇನೆ.
  • ಯಾರ ಕಣ್ಣು ಬಿತ್ತೋ ಏನೋ ಮೇಡಂ. ಬೇಗ ಹುಷಾರಾಗಿ. ದೇವ್ರಿದ್ದಾನೆ ನಿಮಗೆ ಯಾರ ಕಣ್ಣು ಬಿದ್ರು ಕಾಪಾಡೋನು ಆ ಭಗವಂತ ಮಾತ್ರ. 
  • ನನಗೆ ಬಹಳ ಕಷ್ಟ ಆಗ್ತಿದೆ ನೋಡಲು.... ತುಂಬ ಗಾಯ ಆಗಿದೆ.
  • ಯಶು ಅವ್ರೆ.... ಈ ನಡುವೆ ಜಾಸ್ತಿ ಮಿಂಚ್ತಾ ಇದ್ರಲ್ಲ.... ಖಂಡಿತ ಯಾರದ್ದೋ ಕಣ್ಣು ದೃಷ್ಟಿ ಬಿದ್ದಿದೆ.....
  • ಆಯೋ ದೇವ್ರೇ. ಪ್ಲೀಸ್ ಟೇಕ್ ಕೇರ್. ತುಂಬಾ ಬೇಜಾರ್ ಆಯಿತು. ಬೇಗ ರಿಕವರಿ ಆಗಿ.
  • ಮಾಸ್ಟರ್‌ ಆನಂದ್‌ ಪತ್ನಿ ಯಶಸ್ವಿನಿ ಅವರು ʼನನ್ನಮ್ಮ ಸೂಪರ್‌ಸ್ಟಾರ್ʼ‌ ಹಾಗೂ ಡ್ಯಾನ್ಸ್‌ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ.