ನಟ, ನಿರ್ದೇಶಕ ಮಾಸ್ಟರ್‌ ಆನಂದ್‌ ಪತ್ನಿ ಯಶಸ್ವಿನಿ ಈಗ ಮಾಡರ್ನ್‌ ಆಗಿದ್ದಾರೆ, ಅವರ ಬಟ್ಟೆ ಬದಲಾಗಿದೆ ಎಂಬ ಮಾತು ಸೋಶಿಯಲ್‌ ಮೀಡಿಯಾದಲ್ಲಿ ವ್ಯಕ್ತವಾಗಿದೆ. ಈ ಬಗ್ಗೆ ಈ ದಂಪತಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದೆ. 

ನಟ ಮಾಸ್ಟರ್‌ ಆನಂದ್‌ ಅವರ ಪತ್ನಿ ಯಶಸ್ವಿನಿ ಅವರು ʼನನ್ನಮ್ಮ ಸೂಪರ್‌ ಸ್ಟಾರ್ʼ‌ ಶೋನಲ್ಲಿ ಭಾಗವಹಿಸಿದ ನಂತರ ಬದಲಾದ್ರು, ಬಟ್ಟೆ ಬದಲಾಯ್ತು ಅಂತ ಸೋಶಿಯಲ್‌ ಮೀಡಿಯಾದಲ್ಲಿ ಆಗಾಗ ಮಾತು ಕೇಳಿಬರುತ್ತಿರುತ್ತದೆ. ಈಗ ಬಟ್ಟೆ ವಿಚಾರವಾಗಿ ಮಾಸ್ಟರ್‌ ಆನಂದ್‌, ಯಶಸ್ವಿನಿ ಅವರು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

ಮಾಸ್ಟರ್‌ ಆನಂದ್‌ ಏನಂದ್ರು? 
“ಡ್ರೆಸ್‌ ನೋಡಿ ಬದಲಾದ್ರು ಅಂತ ಹೇಳೋಕೆ ಆಗಲ್ಲ, ನನ್ನ ಪತ್ನಿ ಯಶಸ್ವಿನಿ ಈ ಹಿಂದೆ ತಲೆ ಬಾಚಿಕೊಳ್ತಿದ್ರು, ಕುಂಕುಮ ಇಟ್ಟುಕೊಳ್ತಿದ್ರು” ಎಂದು ಮಾಸ್ಟರ್‌ ಆನಂದ್‌ ಅವರು ಹೇಳಿದ್ದಾರೆ.

ಯಶಸ್ವಿನಿ ಏನಂದ್ರು? 
“ಕಾಲೇಜಿನಲ್ಲಿ ಸ್ಕರ್ಟ್‌, ಜೀನ್ಸ್‌ ಹಾಕಿದೀನಿ, ಎಲ್ಲ ಥರದಲ್ಲೂ ನಾನು ಡ್ರೆಸ್‌ ಹಾಕಿದೀನಿ. ಮದುವೆಯಾಗಿ ಮಕ್ಕಳಾದಮೇಲೆ ದಪ್ಪ ಆಗ್ತೀವಿ. ಆ ಡ್ರೆಸ್‌ಗಳನ್ನು ನಾವು ಆಗ ಹಾಕೋಕೆ ಆಗಲಿಲ್ಲ” ಎಂದು ಯಶಸ್ವಿನಿ ಆನಂದ್‌ ಅವರು ಹೇಳಿದ್ದಾರೆ.

ಡಿವೋರ್ಸ್​ ಸುದ್ದಿ ಇಷ್ಟು ದೊಡ್ಡದಾಗಲು ಇವಳೇ ಕಾರಣ: ಪತ್ನಿ ಮೇಲೆ ಕೋಪಗೊಂಡ ಆನಂದ್​ ಹೇಳಿದ್ದೇನು?

ಮಾಸ್ಟರ್‌ ಆನಂದ್‌ ಏನಂದ್ರು? 
“ಇಷ್ಟ ಹಾಕೊಳೋಕೆ ಅಂತ ಹೇಳ್ತೀರಾ. ಡ್ರೆಸ್‌ ವಿಷಯಕ್ಕೆ ನಾನು ಸಾಕಷ್ಟು ಜನರ ಜೊತೆ ಜಗಳ ಆಡಿದ್ದೀನಿ. ಡ್ರೆಸ್‌ ನನಗೆ ಇಷ್ಟ ಅಂತ ಹೇಳಿಕೊಂಡ್ರೆ ಹಾಕಿಕೊಳ್ಳಿ. ಪ್ರೇಮಿಗಳ ದಿನದಂದು ರೆಡ್‌ ಕಲರ್ಸ್‌ ಬಟ್ಟೆ ಹಾಕಿಕೊಳ್ತೀರಿ. ಡ್ರೆಸ್‌ಗೆ ನಂಬಿಸುವ ತಾಕತ್ತು ಇದೆ, ಮೋಸ ಮಾಡುವ ತಾಕತ್ತು ಇದೆ. ಮಾಡರ್ನ್‌ ಆಗಿದ್ದು ಆಧ್ಯಾತ್ಮದ ಬಗ್ಗೆ ಮಾತನಾಡಿದ್ರೆ ಇವರು ಯಾಕೆ ಹೀಗೆ ಮಾಡ್ತಾರೆ ಅಂತ ಅಂದುಕೊಳ್ತಾರೆ. ವಿನಯ್‌ ಗುರುಜಿ ಬಗ್ಗೆಯೂ ಕೆಲವರು ಮಾತಾಡೋದುಂಟು. ಬಟ್ಟೆಯಿಂದ ಅವರನ್ನು ಜಡ್ಜ್‌ ಮಾಡೋಕೆ ಆಗೋದಿಲ್ಲ” ಎಂದು ಮಾಸ್ಟರ್‌ ಆನಂದ್‌ ಅವರು ಹೇಳಿದ್ದಾರೆ.

ಯೋಗರಾಜ್ ಭಟ್ಟರ ಈ ಲವ್​ ಟಿಪ್ಸ್​ ಫಾಲೋ ಮಾಡಿದ್ರೆ ಗರ್ಲ್​ಫ್ರೆಂಡೂ ಸಿಕ್ತಾಳೆ, ಹೆಂಡ್ತಿನೂ ಮಾತು ಕೇಳ್ತಾಳೆ!

ಡಿವೋರ್ಸ್‌ ಆಗೋದಿಲ್ಲ
ಮಾಸ್ಟರ್‌ ಆನಂದ್‌ ಅವರ ಪತ್ನಿ ಯಶಸ್ವಿನಿ ಅವರು ಮಾಡರ್ನ್‌ ಡ್ರೆಸ್‌ ಹಾಕಿಕೊಂಡು ರೀಲ್ಸ್‌ ಮಾಡುತ್ತಿರುತ್ತಾರೆ. ಇದನ್ನು ನೋಡಿದ ಕೆಲವರು ಡಿವೋರ್ಸ್‌ ಪಕ್ಕಾ ಎಂದು ಕಾಮೆಂಟ್‌ ಮಾಡಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಯಶಸ್ವಿನಿ ಅವರು “ಎಂದಿಗೂ ಡಿವೋರ್ಸ್‌ ಆಗೋಕೆ ಸಾಧ್ಯವಿಲ್ಲ. ನಾನು ನನ್ನ ಮಕ್ಕಳಿಗಿಂತಲೂ ಹೆಚ್ಚಾಗಿ ನನ್ನ ಪತಿಯನ್ನೇ ಪ್ರೀತಿ ಮಾಡ್ತೀನಿ. ಈ ರೀತಿ ಮಾತನ್ನು ದಯವಿಟ್ಟು ಹೇಳಲೇಬೇಡಿ. ಇಲ್ಲಸಲ್ಲದ ಗಾಸಿಪ್‌ ಹಬ್ಬಿಸಬೇಡಿ” ಎಂದು ಹೇಳಿದ್ದರು. 

ಡಿವೋರ್ಸ್‌ ಸುದ್ದಿ ನಡುವೆಯೇ 'ನನ್ನ ಮುದ್ದಿನ ಗಂಡ' ಎಂದ ಮಾಸ್ಟರ್‌ ಆನಂದ್‌ ಪತ್ನಿ- ವಿಡಿಯೋ ವೈರಲ್‌

ವಂಶಿಕಾ ಅಂಜನಿ ಕಶ್ಯಪ ಇಂದು ಜನರಿಗೆ ಹತ್ತಿರ ಆಗಿದ್ರೆ, ಪ್ರೇಕ್ಷಕರ ಪ್ರೀತಿ ಗಳಿಸಿದ್ದರೆ ಅದಕ್ಕೆಲ್ಲ ಅವಳ ತಾಯಿ ಯಶಸ್ವಿನಿ ಕಾರಣ ಎಂದು ಮಾಸ್ಟರ್‌ ಆನಂದ್‌ ಅವರು ಪತ್ನಿ ಯಶಸ್ವಿನಿ ಬಗ್ಗೆ ಈ ಹಿಂದಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. 

ಅಂದಹಾಗೆ ಯಶಸ್ವಿನಿ ಅವರು ರಿಯಾಲಿಟಿ ಶೋಗಳಲ್ಲಿ ಭಾಗವಹಿಸುತ್ತಿದ್ದಾರೆ, ವಂಶಿಕಾ ಸಿನಿಮಾ ಮಾಡುತ್ತಿದ್ದಾರೆ, ಇನ್ನು ಮಾಸ್ಟರ್‌ ಆನಂದ್‌ ಅವರು ನಿರೂಪಣೆಯಲ್ಲಿ ಬ್ಯುಸಿ ಇದ್ದಾರೆ. ಇದರ ಜೊತೆಗೆ ಆನಂದ್‌ ಅವರು ಧಾರಾವಾಹಿ ಸೇರಿದಂತೆ ಇನ್ನಿತರ ಶೋಗಳಲ್ಲಿ ತೆರೆ ಹಿಂದೆಯೂ ಕೆಲಸ ಮಾಡುತ್ತಾರೆ. ಒಟ್ಟಿನಲ್ಲಿ ಇಡೀ ಫ್ಯಾಮಿಲಿ ಚಿತ್ರರಂಗದಲ್ಲಿ ಆಕ್ಟಿವ್‌ ಆಗಿದೆ.