'ಲಕ್ಷ್ಮೀ ಬಾರಮ್ಮಾ' ಅನ್ನೋ ಮೋಸ್ಟ್ ಬ್ಯೂಟಿಫುಲ್, ಮೋಸ್ಟ್ ಪಾಪ್ಯುಲರ್ ಸೀರಿಯಲ್ ಗೊತ್ತಿಲ್ದೇ ಇರೋರೇ ಇಲ್ವೇನೋ. ಈ ಸೀರಿಯಲ್ ನ ನಾಯಕಿ, ನಾಯಕಿ ಸಾಕಷ್ಟು ಸಲ ಬದಲಾಗಿದ್ದಾರೆ. ಆದರೆ ಜನರ ನೆನಪಲ್ಲುಳಿದಿರೋ ಜೋಡಿ ಕವಿತಾ ಗೌಡ, ಚಂದನ್ ಕುಮಾರ್. ಕವಿತಾ,  ಚಿನ್ನು ಪಾತ್ರದಲ್ಲಿ ಸಖತ್ ಇನ್ನೋಸೆಂಟ್ ಆಗಿ ಈ ಸೀರಿಯಲ್ ನಲ್ಲಿ ಕಾಣಿಸಿಕೊಂಡರು. ಚಂದನ್ ಸ್ಮಾರ್ಟ್ ಬಾಯ್ ಆಗಿ ಗಮನ ಸೆಳೆದಿದ್ರು. ಆಮೇಲೆ ಚಂದನ್ ಈ ಸೀರಿಯಲ್ ನಿಂದ ಹೊರಬಂದ್ರು. ಆಮೇಲೆ ಕೆಲವು ಸಮಯದ ಬಳಿಕ ಚಿನ್ನು ಆಲಿಯಾಸ್ ಕವಿತಾ ಗೌಡನೂ ಸೀರಿಯಲ್ ನಿಂದ ಬ್ರೇಕ್ ತಗೊಂಡ್ರು. 

ಸಾಮಾನ್ಯವಾಗಿ ಸೀರಿಯಲ್‌ ನಲ್ಲಿ ಇರುವಷ್ಟು ಹೊತ್ತು ಮಾತ್ರ ಪಾತ್ರಧಾರಿಗಳು ಜೊತೆಯಾಗಿರುತ್ತಾರೆ. ಆಮೇಲೆ ಅವರ್ಯಾರೋ, ಇವರ್ಯಾರೋ ಅನ್ನೋ ಸ್ಥಿತಿ ಇರುತ್ತೆ. ಆದರೆ ಈ 'ಲಕ್ಷ್ಮೀ ಬಾರಮ್ಮಾ' ಸೀರಿಯಲ್ ನಟ ನಟಿಯರ ಚಾಪ್ಟರ್ ಸೀರಿಯಲ್ ನಾಚೆಗೂ ಮುಂದುವರಿಯಿತು. ಇವತ್ತಿಗೂ ಅವರೆಲ್ಲ ಕ್ಲೋಸ್ ಫ್ರೆಂಡ್ಸ್ ಥರನೇ ಇದ್ದಾರೆ. ಸೀರಿಯಲ್ ನಲ್ಲಿ ಗೊಂಬೆ ಅಮ್ಮನಾಗಿ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಂಡ ಲಕ್ಷ್ಮೀ ಸಿದ್ಧಯ್ಯ ಸಹ ಈ ಗ್ರೂಪ್ ನಲ್ಲಿದ್ದಾರೆ. ಕೆಲವೊಮ್ಮೆ ಸೀರಿಯಲ್ ನಲ್ಲಿ ಚಂದನ್ ಅಮ್ಮನಾಗಿ ಕಾಣಿಸಿಕೊಂಡಿದ್ದ ದೀಪಾ ರವಿಶಂಕರ್ ಅವರೂ ಈ ಟೀಮ್ ಜೊತೆಗೆ ಓಡಾಡ್ತಾರೆ. ಹೀಗೆ ಸೀರಿಯಲ್ ಸ್ನೇಹಿತರ ಬಹಳ ಇತ್ತೀಚೆಗೆ ಶಿವಗಂಗೆ ಬೆಟ್ಟಕ್ಕೆ ಹೋಗಿತ್ತು. ಅಲ್ಲಿ ಪವಿತ್ರ ಜಾಗಗಳಲ್ಲೆಲ್ಲ ಕವಿತಾ ಗೌಡ ಶೂ ಹಾಕಿಕೊಂಡು ಓಡಾಡಿದ್ದಕ್ಕೆ ಸಾಕಷ್ಟು ಜನ ಇವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಆದರೆ ಸೊಕ್ಕಿನ ಹುಡುಗಿ ಅಂತಲೇ ಫೇಮಸ್ ಆಗಿರೋ ಕವಿತಾ ಇದಕ್ಕೆಲ್ಲ ತಲೆ ಕೆಡಿಸಿಕೊಂಡ ಹಾಗೆ ಕಾಣಲಿಲ್ಲ. ಅವರು ಮತ್ತೆ ಮತ್ತೆ ಈ ಜಾಗಗಳಲ್ಲಿ ಶೂ ಹಾಕಿಕೊಂಡ ಫೋಟೋ ಗಳನ್ನು ಪೋಸ್ಟ್ ಮಾಡೋದು ಜನರಿಂದ ಉಗಿಸಿಕೊಳ್ಳೋದೂ ನಡೀತನೇ ಇತ್ತು. 

ಶಿವಗಂಗೆ ತೀರ್ಥ ಕಂಬದ ಬಳಿ ಶೂ ಧರಿಸಿ ನಟ-ನಟಿ ಫೋಟೋ: ಆಕ್ರೋ​ಶ! 

ಇದೀಗ ಈ ಫ್ರೆಂಡ್ಸ್ ಮಂಗಳೂರು ಕಡೆ ಟ್ರೆಕ್ಕಿಂಗ್ ಮಾಡಿ ಬಂದಿದ್ದಾರೆ. ಬೀಚ್ ನಲ್ಲಿ ಬಿಂದಾಸ್ ಆಗಿ ಎನ್ ಜಾಯ್ ಮಾಡಿದ್ದಾರೆ. ಆದರೆ ಈ ಥರ ಸುತ್ತಾಟದ ವೇಳೆ ಜನರ ಕಣ್ಣಿಗೆ ರೊಮ್ಯಾಂಟಿಕ್ ಜೋಡಿಯಾಗಿ ಕಂಡಿದ್ದು ಕವಿತಾ ಗೌಡ, ಚಂದನ್ ಕುಮಾರ್. ಇವರ ಓಡಾಟ ಸೋಷಿಯಲ್ ಮೀಡಿಯಾಗಳಲ್ಲಿ ಇವರಿಬ್ಬರು ಪೋಸ್ಟ್ ಮಾಡೋ ಫೋಟೋ, ಕವಿತಾ ಬರ್ತ್ ಡೇ ಗೆ ಮಧ್ಯರಾತ್ರಿಯಲ್ಲಿ ಬಂದು ಸರ್ಪೈಸ್ ಕೊಡೋ ಚಂದನ್, ಎಲ್ಲೇ ಹೋದರೂ ಜೊತೆಯಾಗಿ ಕಾಣಿಸಿಕೊಳ್ಳೋ ಜೋಡಿನ ಕಂಡು ಎಲ್ರೂ ಯಾವಾಗ ಮದ್ವೆ ಅಂತ ಕೇಳ್ತಿದ್ದಾರೆ. 

 

 
 
 
 
 
 
 
 
 
 
 
 
 

First photoshoot with @iam.kavitha_official Goodnight..❣️

A post shared by CHANDAN KUMAR 🇮🇳 (@chandan_kumar_official) on Sep 4, 2020 at 10:22am PDT

ಮಧ್ಯರಾತ್ರಿ ಕವಿತಾ ಗೌಡ ಮನೆಗೆ ಹೋಗಿ ಸರ್‌ ಪ್ರೈಸ್ ನೀಡಿದ ಚಂದನ್ ಕುಮಾರ್! 

ಇನ್ನೊಂದು ವಿಶೇಷ ಅಂದರೆ ಈ ಜೋಡಿ ರೊಮ್ಯಾಂಟಿಕ್ ಆಗಿ ಫೋಟೋ ಶೂಟ್ ಸಹ ಮಾಡಿಸಿಕೊಂಡಿದ್ದಾರೆ. ಇದು ನಮ್ಮಿಬ್ಬರ ಮೊದಲ ಫೋಟೋ ಶೂಟ್ ಅಂತ ಸೋಷಿಯಲ್ ಮೀಡಿಯಾಗಳಲ್ಲಿ ರಿವೀಲ್ ಮಾಡಿದ್ದಾರೆ. ಇದಕ್ಕೂ ಮುನ್ನ ಧಾರಾವಾಹಿ ಶೂಟಿಂಗ್ ಗಾಗಿ ಹೈದ್ರಾಬಾದ್ ಗೆ ಹೊರಟಿದ್ದ ಚಂದನ್ ನ ಕವಿತಾ ಗೌಡ ಏರ್ ಪೋರ್ಟ್ ವರೆಗೂ ಡ್ರಾಪ್ ಮಾಡಿ ಬಂದಿದ್ದಾರೆ. ಇವರ ಯಾವ ಓಡಾಟವೂ ಗುಟ್ಟಾಗಿ ಉಳಿದಿಲ್ಲ. ಇವರಿಬ್ಬರೇ ಎಲ್ಲ ಫೋಟೋಗಳನ್ನು, ವಿಚಾರಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಅಪ್ ಡೇಟ್ ಮಾಡ್ತಿದ್ದಾರೆ. ಇದನ್ನೆಲ್ಲ ಕಂಡು ಹಲವರು ಯಾವಾಗ ಮದ್ವೆ ಅಂತ ನೇರವಾಗಿ ಪ್ರಶ್ನಿಸಿದರೆ, ಮತ್ತೆ ಕೆಲವರು ಬೇರೆಯವ್ರ ದೃಷ್ಟಿ ತಾಗೋ ಮುಂಚೆ ಮದ್ವೆ ಆಗಿಬಿಡಿ ಅಂತ ಅಮೂಲ್ಯ ಸಲಹೆ ನೀಡಿದ್ದಾರೆ. ನೂರಾರು ಮಂದಿ ಕ್ಯೂಟ್ ಜೋಡಿ ಅಂತ ಕಮೆಂಟ್ ಮಾಡಿದ್ದಾರೆ. 

ಡ್ರಗ್ಸ್ ರುಚಿ ಹೇಗಿದೆ ಅಂತ ರಾಗಿಣಿನ ಕೇಳ್ತಿದ್ದಾರೆ ನೆಟಿಜನ್ಸ್! 

ಇಷ್ಟೆಲ್ಲ ಆದ್ರೂ ಕವಿತಾ ಮತ್ತು ಚಂದನ್ ಸೋಷಿಯಲ್ ಮೀಡಿಯಾದಲ್ಲಿ ಕಾಲೆಳೆಯುತ್ತಾ, ಮೆಚ್ಚುಗೆಯ ಪೋಸ್ಟ್ ಹಾಕುತ್ತಾ, ತಮ್ಮಿಬ್ಬರ ಫೋಟೋ ಪೋಸ್ಟ್ ಮಾಡುತ್ತಾ ಇದ್ದಾರೆ. ಅಪ್ಪಿತಪ್ಪಿಯೂ ಪ್ರೀತಿಯ ವಿಷಯವಾಗಲೀ, ಮದ್ವೆ ವಿಚಾರವಾಗಿ ಬಾಯ್ಬಿಟ್ಟಿಲ್ಲ.