ಶಿವಗಂಗೆ ತೀರ್ಥ ಕಂಬದ ಬಳಿ ಶೂ ಧರಿಸಿ ನಟ-ನಟಿ ಫೋಟೋ: ಆಕ್ರೋಶ!
ದಾಬಸ್‌ಪೇಟೆ: ತೀರ್ಥ ಉದ್ಭವ ಅಗುವ ಜಾಗದಲ್ಲಿ ನಟ ಚಂದನ್, ನಟಿ ಕವಿತಾ ಶೂ ಧರಿಸಿ ಫೋಟೋ ಶೂಟ್ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಸೋಂಪುರ ಹೋಬಳಿಯ ಶಿವಗಂಗೆ ಬೆಟ್ಟದಲ್ಲಿ ನಟ ಚಂದನ್, ಕಿರುತೆರೆ ನಟಿ ಕವಿತಾ ಫೋಟೋ ಶೂಟ್ ಮಾಡಿದ್ದಾರೆ.
ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ.ದಕ್ಷಿಣಕಾಶಿ ಶಿವಗಂಗೆಯ ಪವಿತ್ರ ಬೆಟ್ಟದ ತುತ್ತತುದಿಯ ತೀರ್ಥ ಕಂಬದ ಪ್ರಾಂಗಣದಲ್ಲಿ ಶೂ ಧರಿಸಿಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ.
ಈ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.
ಶಿವಗಂಗೆಯ ಬೆಟ್ಟದ ತುತ್ತ ತುದಿಯಲ್ಲಿ ಧಾರಾವಾಹಿ ನಟರ ಮೋಜುಮಸ್ತಿ ಭಕ್ತರಿಗೆ ಬೇಸರ ಮೂಡಿಸಿದೆ.
ಪ್ರತಿವರ್ಷ ಮಕರ ಸಂಕ್ರಮಣ ಹಬ್ಬದಂದು ಈ ಕಂಬದಲ್ಲಿ ತೀರ್ಥೋದ್ಬವಾಗುತ್ತದೆ.
ದೇವರ ಕಂಬದಲ್ಲಿ ಉದ್ಭವಾದ ಜಲದಿಂದ ಹೊನ್ನಾದೇವಿ ಹಾಗೂ ಗಂಗಾಧರೇಶ್ವರ ಪ್ರಸಿದ್ಧ ಗಿರಿಜಾ ಕಲ್ಯಾಣವಾಗುತ್ತದೆ.
ಪವಾಡ ರೀತಿಯಲ್ಲಿ ಗಂಗೆ ಉತ್ಪತ್ತಿಯಾಗುವ ಅಂತಹ ಪವಿತ್ರ ಜಾಗದಲ್ಲಿ ಶೂ ಧರಿಸಿಕೊಂಡು ತೆರಳಿರುವುದಕ್ಕೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ದೇವರ ಮಹಿಮೆ ತಿಳಿಯದೆ ಶೂ ಧರಿಸಿ ಫೋಟೋ ತೆಗೆದುಕೊಂಡಿದ್ದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಸ್ಥಳೀಯ ದೇವಾಲಯದ ಆಡಳಿತ ಮಂಡಳಿ ಹಾಗೂ ಸಂಬಂಧಪಟ್ಟಇಲಾಖೆ ನಟ ನಟಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.