ಡ್ರಗ್ಸ್ ರುಚಿ ಹೇಗಿದೆ ಅಂತ ರಾಗಿಣಿನ ಕೇಳ್ತಿದ್ದಾರೆ ನೆಟಿಜನ್ಸ್!
ಯಾವಾಗ ಈ ತುಪ್ಪದ ಹುಡುಗಿ ನಶೆಯ ಬೆಡಗಿಯಾಗಿ ಸ್ಟೇಶನ್ ಮೆಟ್ಟಿಲು ಹತ್ತಿದಳೋ ಅಭಿಮಾನಿಗಳು ಸೈಡ್ ಲೈನ್ ಆಗಿ ಬೈಯ್ಯೋರು ಮೇನ್ ಸ್ಟ್ರೀಮ್ ಗೆ ಬಂದುಬಿಟ್ರು.
ಆರ್ ರಾಗಿಣಿ ದ್ವಿವೇದಿ ಅನ್ನೋದು ಡ್ರಗ್ ಮಾಫಿಯಾದಲ್ಲಿ ಸಿಕ್ಕಿಬಿದ್ದಿರೋ ಸ್ಯಾಂಡಲ್ ವುಡ್ ಸ್ಟಾರ್ ರಾಗಿಣಿಯ ಇನ್ ಸ್ಟಾಗ್ರಾಂ ಅಕೌಂಟ್. ಇದರಲ್ಲಿ ಆರ್ ಡಿ ಕಿಚನ್ ತುಂಬಾ ಫೇಮಸ್ಸು. ರಾಗಿಣಿ ಟೈಮ್ ಇದ್ದಾಗ ಈ ಆರ್ ಡಿ ಕಿಚನ್ ನಲ್ಲಿ ಒಂದಿಲ್ಲೊಂದು ರೆಸಿಪಿ ಹಾಕ್ತಾ ಇರ್ತಾಳೆ. ಅದನ್ನು ಲಕ್ಷಾಂತರ ಜನ ನೋಡಿ ಮೆಚ್ಕೊಳ್ತಾರೆ. ಕೇವಲ ಈಕೆ ಮಾಡೋ ರೆಸಿಪಿ ಮಾತ್ರ ಅಲ್ಲ, ಆಕೆ ಅಡುಗೆಗೆ ಬಳಸೋ ಕುಕ್ಕರ್, ಸ್ಟೌ ಇತ್ಯಾದಿಗಳನ್ನು ಗಮನಿಸಿಯೂ, 'ನಮ್ಮನೆಲೂ ಆ ಥರದ ಗ್ರೈಂಡರ್ ಇದೆ' ಅನ್ನೋ ಅಭಿಮಾನಿಗಳೂ ಈಕೆಗಿದ್ದಾರೆ. ಯಾವಾಗ ಈ ತುಪ್ಪದ ಹುಡುಗಿ ನಶೆಯ ಬೆಡಗಿಯಾಗಿ ಸ್ಟೇಶನ್ ಮೆಟ್ಟಿಲು ಹತ್ತಿದಳೋ ಅಭಿಮಾನಿಗಳು ಸೈಡ್ ಲೈನ್ ಆಗಿ ಬೈಯ್ಯೋರು ಮೇನ್ ಸ್ಟ್ರೀಮ್ ಗೆ ಬಂದುಬಿಟ್ರು.
ಇವತ್ತಿಗೆ ಕೇವಲ ನಾಲ್ಕು ದಿನದ ಹಿಂದೆ ರಾಗಿಣಿ ತನ್ನ ಇನ್ ಸ್ಟಾಗ್ರಾಮ್ ನಲ್ಲಿ ಪಂಜಾಬಿ ಸ್ಪೆಷಲ್ ರೆಸಿಪಿಯನ್ನು ಪೋಸ್ಟ್ ಮಾಡಿದ್ದಾಳೆ. ಹಾಗೆ ನೋಡಿದ್ರೆ ಈ ರಾಗಿಣಿ ಪಂಜಾಬಿನವಳೇ. ಆದರೆ ರಾಗಿಣಿ ಹುಟ್ಟಿದ್ದು, ಬೆಳೆದದ್ದೆಲ್ಲ ಬೆಂಗಳೂರಿನಲ್ಲೇ. ಈಕೆಯ ತಂದೆ ರಾಕೇಶ್ ಕುಮಾರ್ ದ್ವಿವೇದಿ ಭಾರತೀಯ ಸೈನ್ಯದಲ್ಲಿದ್ದವರು.
ಮೊದಲಿನಿಂದಲೂ ಫ್ಯಾಶನ್ ಬಗೆಗೆ ಆಸಕ್ತಿ ಇದ್ದ ಈಕೆಯನ್ನು ರ್ಯಾಂಪ್ ಮೇಲೆ ಕರೆತಂದವರು ಬೆಂಗಳೂರಿನ ಫೇಮಸ್ ಫ್ಯಾಶನ್ ಕೊರಿಯೊಗ್ರಾಫರ್ ಪ್ರಸಾದ್ ಬಿದ್ದಪ್ಪ. ಸಣ್ಣಗೆ ಬಳಕೋ ಬಳ್ಳಿಯಂಥಾ ಮೈ ಮಾಟ, ಉದ್ದನೆಯ ನಿಲುವು ಈಕೆ ಬಹುಬೇಗ ಫ್ಯಾಶನ್ ಇಂಡಸ್ಟ್ರಿಯಲ್ಲಿ ಹೆಸರು ಮಾಡೋ ಹಾಗೆ ಮಾಡಿತು. ಮಾಡೆಲ್ ಆಗಿ ಕೆರಿಯರ್ ಶುರು ಮಾಡಿದ ಸ್ಪಲ್ಪ ದಿನಕ್ಕೆಲ್ಲ ಈಕೆ ಪ್ರತಿಷ್ಠಿತ ಲಾಕ್ಮೆ ಫ್ಯಾಶನ್ ವೀಕ್ ನಲ್ಲೂ ರ್ಯಾಂಪ್ ಮೇಲೆ ಮಿಂಚಿದಳು. ಬಾಲಿವುಡ್ ನ ಸ್ಟಾರ್ ಫ್ಯಾಶನ್ ಡಿಸೈನರ್ ಗಳಾದ ಸಭ್ಯಸಾಚಿ, ಮನೀಷ್ ಮಲ್ಹೋತ್ರ ಉಡುಗೆಗಳಿಗೆಲ್ಲ ಈಕೆ ರೂಪದರ್ಶಿಯಾದಳು. ಅಷ್ಟೊತ್ತಿಗೆ ಸ್ಯಾಂಡಲ್ ವುಡ್ ಕೈಬೀಸಿ ಕರೆಯಿತು. ಸುದೀಪ್ ಅಭಿನಯದ ವೀರಮದಕರಿಯಲ್ಲಿ ನಾಯಕಿಯಾಗೋ ಮೂಲಕ ಸ್ಯಾಂಡಲ್ ವುಡ್ ಗೆ ಭರ್ಜರಿ ಎಂಟ್ರಿ ಕೊಟ್ಟಳು. ಸ್ಯಾಂಡಲ್ ವುಡ್ ಗೆ ಕಾಲಿಟ್ಟಾಗಿನಿಂದ ಅಂದರೆ 2009ರಿಂದ ಈವರೆಗೆ ಹನ್ನೊಂದು ವರ್ಷಗಳಲ್ಲಿ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾಳೆ.
ಆ ಕಡೆ ಸಿನಿಮಾ ಚಾನ್ಸ್ ಒಂಚೂರು ಕಡಿಮೆ ಆಗತೊಡಗಿದ್ದೇ ಈಕೆ ಸೋಷಿಯಲ್ಲಾಗಿ ಕಾಣಿಸಿಕೊಳ್ಳೋದು ಹೆಚ್ಚಾಯ್ತು. ಸೋಷಿಯಲ್ ಮೀಡಿಯಾಗಳಲ್ಲೂ ಆಕ್ಟಿವ್ ಆಗಿಬಿಟ್ಟಳು. ಇನ್ ಸ್ಟಾ ಗ್ರಾಂ ನಲ್ಲಿ ತನ್ನ ಫೋಟೋ, ಸಮಾಜ ಸೇವೆ ಫೋಟೋ ಗಳ ಜೊತೆಗೆ ತನಗೆ ಪ್ರಿಯವಾದ ರೆಸಿಪಿಗಳನ್ನೂ ಅಪ್ ಲೋಡ್ ಮಾಡ್ತಿದ್ದಳು. ಈಕೆ ನಾಲ್ಕು ದಿನಗಳ ಹಿಂದೆ ತನ್ನ ಆರ್ ಡಿ ಕಿಚನ್ ನಲ್ಲಿ ಪಂಜಾಬಿ ಸ್ಪೆಷಲ್ ಡಿಶ್ ಮಾಡೋದು ಹೇಗೆ ಅಂತ ತಾನೇ ಸ್ವತಃ ಹೇಳಿದ್ದಾಳೆ. 'ಶಾಹಿ ಪನೀರ್' ಅನ್ನೋ ಸಸ್ಯಾಹಾರಿ ರೆಸಿಪಿಯನ್ನು ಸ್ವತಃ ತಯಾರಿಸಿ ಅದರ ತಯಾರಿಯನ್ನು ವಿವರಿಸಿದ್ದಾಳೆ.
ಡ್ರಗ್ ಆರೋಪ ಸಾಬೀತಾದ್ರೆ ರಾಗಿಣಿ ಚಿತ್ರರಂಗದಿಂದ ಬ್ಯಾನ್ ; ತುಪ್ಪದ ಹುಡುಗಿ ಟೆನ್ಷನ್..!
ರಾಗಿಣಿ ಹೇಳಿದ ರೆಸಿಪಿ
ಮೊದಲಿಗೆ ಒಂದು ಕಡಾಯಿಗೆ ನಾಲ್ಕು ಸ್ಪೂನ್ ನಷ್ಟು ತುಪ್ಪ ಹಾಕಿ ಬಿಸಿಯಾದ ಮೇಲೆ ಚಕ್ಕೆ, ಲವಂಗ, ಜೀರಿಗೆ ಇತ್ಯಾದಿ ಹಾಕಬೇಕು. 2 ಈರುಳ್ಳಿ ಕಟ್ ಮಾಡಿ ಹಾಕಿ, ಗೋಡಂಬಿ ಸೇರಿಸಿ ಹುರಿಯಬೇಕು. ಕಂದು ಬಣ್ಣಕ್ಕೆ ತಿರುಗಿದ ಮೇಲೆ ಜಿಂಜರ್ ಗಾರ್ಲಿಕ್ ಮಿಕ್ಸ್ ಹಾಗೂ ಖಾರದ ಪುಡಿ ಹಾಕಬೇಕು. ಆಮೇಲೆ ಉಪ್ಪು, ಟೊಮ್ಯಾಟೋ ಸಾಸ್ ಸೇರಿಸಿ ಮತ್ತಷ್ಟು ಬಿಸಿ ಮಾಡಬೇಕು. ಬೇಯಲು ಬಿಡಬೇಕು. ಬಳಿಕ ನಾಲ್ಕು ಸ್ಪೂನ್ ಮೊಸರು, 2 ಸ್ಪೂನ್ ಕ್ರೀಮ್ ಸೇರಸಬೇಕು. ಚೆನ್ನಾಗಿ ಮಿಕ್ಸ್ ಮಾಡಬೇಕು. ಆಮೇಲೆ 250 ಎಂಎಲ್ ನಷ್ಟು ಚೀಸ್ ಸೇರಿಸಿ ಮಿಕ್ಸಿಂಗ್ ಮಾಡಬೇಕು. ಬಳಿಕ 1 ಕಪ್ ಹಾಲು ಹಾಕಿ 10 ನಿಮಿಷ ತಿರುವುತ್ತಾ ಇರಬೇಕು. ಆಮೇಲೆ ಏಳೆಂಟು ನಿಮಿಷ ಬೇಯಿಸಬೇಕು. ಇದನ್ನು ಅನ್ನ ಅಥವಾ ರೋಟಿ ಜೊತೆಗೆ ಸರ್ವ್ ಮಾಡಿದ್ರೆ ತಿನ್ನೋದಕ್ಕೆ ಸಖತ್ ಟೇಸ್ಟಿ ಆಗಿರುತ್ತೆ ಅನ್ನೋದು ತುಪ್ಪದ ಹುಡುಗಿ ಮಾತು.
ಸಿನಿಮಾದಲ್ಲಿ ಸಮಾಜಸೇವಕಿ, ರಿಯಲ್ ಲೈಫಲ್ಲಿ ಡ್ರಗ್ ಅಡಿಕ್ಟ್! ಡ್ರಗ್ಗಿಣಿ ಕಥೆ ಇದು...!
ಯಬ್ಬಾ, ಏನೆಲ್ಲ ಕಮೆಂಟ್ಸ್
ಈಕೆ ಡ್ರಗ್ಸ್ ಕೇಸ್ ನಲ್ಲಿ ಅರೆಸ್ಟ್ ಆಗಿದ್ದೇ ಆಗಿದ್ದು, ನೆಟಿಜನ್ಸ್ ರಾಗಿಣಿಯ ಈ ಪೋಸ್ಟ್ ಗೆ ಯದ್ವಾ ತದ್ವಾ ಕಮೆಂಟ್ ಹರಿಯಬಿಟ್ಟಿದ್ದಾರೆ. 'ಡ್ರಗ್ಸ್ ರುಚಿ ಹೇಗಿರುತ್ತಮ್ಮಾ' ಅಂತ ಒಬ್ಬ ಛೇಡಿಸಿದರೆ, "ನಿನ್ನಿಂದ ಚಿತ್ರರಂಗಕ್ಕೆ ಕೆಟ್ಟ ಹೆಸರು' ಅಂತ ಮತ್ತೊಬ್ಬರು ಝಾಡಿಸಿದ್ದಾರೆ. 'ತುಪ್ಪಾ ಬೇಕಾ ತುಪ್ಪಾ ಹೋಗಿ ಡ್ರಗ್ಸ್ ಬೇಕಾ ಡ್ರಗ್ಸ್ ಆಗಿದೆ', 'ಈಗ ಜೈಲ್ ನಲ್ಲಿ ಕೂತು ಶಾಹಿ ಪನೀರ್ ಮಾಡ್ತಿದ್ಯಾ?', 'ನಿಂಗೆ ಇದಕ್ಕೆಲ್ಲ ಟೈಮ್ ಇರುತ್ತೆ, ತನಿಖೆಗೆ ಕರೆದರೆ ಹೋಗೋದಕ್ಕೆ ಸಮಯ ಇರಲ್ವಾ' ಹೀಗೆಲ್ಲಾ ಖಾರವಾಗಿ ನೆಟಿಜನ್ಸ್ ರಾಗಿಣಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಗಿಣಿ ಮತ್ತು ಇತರ ಅಮಲಿನ ಕತೆಗಳು!ಮದ್ಯ ಹಳೇದು, ಮದ್ದು ಹೊಸದು