ಬಟ್ಟೆ ತೊಳಿತೀರಾ, ಅಡುಗೆ ಮಾಡ್ತೀರಾ?, KBC ಸ್ಪರ್ಧಿಯ ಪ್ರಶ್ನೆಗೆ ಅಮಿತಾಭ್ ಬಚ್ಚನ್ ಅಚ್ಚರಿ

ಕೆಬಿಸಿ ಸಂಚಿಕೆಯಲ್ಲಿ ಭಾಗಿಯಾಗಿದ್ದ ಸ್ಪರ್ಧಿಯೊಬ್ಬರು ಅಮಿತಾಭ್‌ಗೆ ಮನೆಯಲ್ಲಿ ಅಡುಗೆ ಮಾಡುತ್ತೀರಾ? ಬಟ್ಟೆ ತೊಳಿತೀರಾ? ಎಂದು ಪ್ರಶ್ನೆ ಮಾಡಿದ್ದಾರೆ. ಸ್ಪರ್ಧಿಯ ಪ್ರಶ್ನೆಗೆ ಬಿಗ್ ಬಿ ಅಚ್ಚರಿ ಪಟ್ಟರು. 

14KBC contestant asks Amitabh Bachchan if food is cooked at his home sgk

ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಸದ್ಯ ಹಿಂದಿ ಕಿರುತೆರೆಯ ಜನಪ್ರಿಯ ಶೋಗಳಲ್ಲಿ ಒಂದಾಗಿರುವ ಕೌನ್ ಬನೇಗ ಕರೋಡ್ ಪತಿ 14ನೇ ಸೀಸನ್ ನಡೆಸಿಕೊಡುತ್ತಿದ್ದಾರೆ.  ಈ ಶೋನಲ್ಲಿ ಭಾಗಿಯಾಗುವ ಸ್ಪರ್ಧಿಗಳು ಹಣ ಗೆಲ್ಲುವ ಜೊತೆಗೆ ಪ್ರೇಕ್ಷಕರಿಗೆ ಮನರಂಜನೆ ಹಾಗೂ ಇಂಟ್ರಸ್ಟಿಂಗ್ ಮಾಹಿತಿ ಕೂಡ ನೀಡುತ್ತಿದ್ದಾರೆ. ಬಿಗ್ ಬಿ ಅಮಿತಾಭ್ ಬಚ್ಚನ್ ಎದುರು ಹಾಟ್ ಸೀಟ್ ಏರುವ ಸ್ಪರ್ಧಿಗಳು ಅಮಿತಾಭ್‌ಗೆ ಒಂದಿಷ್ಟು ಪ್ರಶ್ನೆಗಳನ್ನು ಮಾಡುತ್ತಾರೆ. ಸ್ಪರ್ಧಿಗಳಿಗೆ ಬಿಗ್ ಬಿ ಪ್ರಶ್ನೆ ಕೇಳಿದ್ರೆ ಸ್ಪರ್ಧಿಗಳು ಬಾಲಿವುಡ್ ಸ್ಟಾರ್‌ಗೇ ಪ್ರಶ್ನೆ ಮಾಡುತ್ತಾರೆ. ಅಮಿತಾಭ್ ಬಗ್ಗೆ ತಿಳಿದುಕೊಳ್ಳುವ ಉದ್ದೇಶದಿಂದ ಕುತೂಹಲಕಾರಿ ಪ್ರಶ್ನೆ ಕೇಳುತ್ತಾರೆ. ಇತ್ತೀಚಿನ ಸಂಚಿಕೆಯಲ್ಲಿ ಭಾಗಿಯಾಗಿದ್ದ ಸ್ಪರ್ಧಿಯೊಬ್ಬರು ಅಮಿತಾಭ್‌ಗೆ ಮನೆಯಲ್ಲಿ ಅಡುಗೆ ಮಾಡುತ್ತೀರಾ? ಬಟ್ಟೆ ತೊಳಿತೀರಾ? ಎಂದು ಪ್ರಶ್ನೆ ಮಾಡಿದ್ದಾರೆ. ಸ್ಪರ್ಧಿಯ ಪ್ರಶ್ನೆಗೆ ಬಿಗ್ ಬಿ ಅಚ್ಚರಿ ಪಟ್ಟರು. 

ಕೆಬಿಸಿಯಲ್ಲಿ ಹಾಟ್ ಸೀಟ್ ಏರಿದ್ದ ಪಿಂಕಿ ಜವರಾಣಿ ಅವರು ಅಮಿತಭ್‌ಗೆ ನೀವು ಮನೆಯಲ್ಲಿ ಅಡುಗೆ ಮಾಡುತ್ತೀರಾ? ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಅಮಿತಾಭ್, 'ಖಂಡಿತವಾಯಿಗೂ ಹೌದು, ಏಕೆ ಮಾಡಲ್ಲ' ಎಂದು  ಹೇಳಿದರು. ಬಳಿಕ ಪಿಂಕಿ ಮತ್ತೊಂದು ಪ್ರಶ್ನೆ ಕೇಳಿದರು. ಸರ್ ನಿಮ್ಮ ಮನೆಯಲ್ಲಿ ನೀವು ನಿಮ್ಮ ಬಟ್ಟೆ ತೊಳೆಯುತ್ತೀರಾ? ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಬಿಗ್ ಬಿ, 'ಯಾಕೆ ಇಲ್ಲ, ನನ್ನ ಬಟ್ಟೆಗಳನ್ನು ನಾನೇ ತೊಳೆಯುತ್ತೇನೆ' ಎಂದು ಅಮಿತಭ್ ಹೇಳಿದರು. 

ಕೌನ್ ಬನೇಗ ಕರೋಡ್‌ಪತಿ; ಸೀಸನ್ 1 ರಿಂದ 13ರ ವರೆಗೂ ಅಮಿತಾಭ್ ಪಡೆದ ಸಂಭಾವನೆಯ ಸಂಪೂರ್ಣ ಮಾಹಿತಿ ಬಹಿರಂಗ

ಬಳಿಕ ಅಮಿತಾಭ್ ಸ್ಪರ್ಧಿ ಪಿಂಕಿಗೆ, ಇದು ತುಂಬಾ ಅನ್ಯಾಯ. ನೀವು ತೆರೆ ಎಳೆದು ಬಿಟ್ರಿ, ನೀವು ಬೇರೆ ನಾವು ಬೇರೆ ಅಂತ' ಎಂದರು. ಇದಕ್ಕೆ ಪಿಂಕಿ ಜೋರಾಗಿ ನಕ್ಕರು.  ಮಾತು ಮುಂದುವರೆಸಿದ ಅಮಿತಾಭ್, 'ನಮ್ಮ ನಮ್ಮ ಬಟ್ಟೆಗಳನ್ನು ತೊಳೆಯುವುದಿಲ್ಲ. ಬಟ್ಟೆ ಬಳಿಸಿದ ಬಳಿಕ ಎಸೆಯುತ್ತೀವಿ. ನೀವು ಏನು ಹೇಳ್ತೀರಿ' ಎಂದು  ಪಿಂಕಿಯ ಕಾಲೆಳೆದರು ಬಿಗ್ ಬಿ.

Kaun Banega Crorepati 7.5 ಕೋಟಿ ರೂ. ಪ್ರಶ್ನೆ ಎದುರಿಸಿದ ಮೊದಲ ಮಹಿಳೆ ಈಕೆ!

ಕೌನ್ ಬನೇಗ ಕರೌಡ್ ಪತಿ 2000 ಜುಲೈ 3ರಂದು ಮೊದಲ ಸಂಚಿಕೆ ಪ್ರಸರವಾಯಿತು. ರಾತ್ರಿ 9ಗಂಟೆಗೆ ಪ್ರಸಾರವಾಗುತ್ತಿದ್ದ ಈ ಶೋ ಭಾರತೀಯ ಕಿರುತೆರೆ ಲೋಕದಲ್ಲಿ ಸಂಚನ ಸೃಷ್ಟಿ ಮಾಡಿತ್ತು. ಅಲ್ಲಿಂದ ಅಮಿತಾಭ್ ಕಿರುತೆರೆ ಪ್ರೇಕ್ಷಕರ ಮನೆ ಮಾತಾದರು. ಈ ಶೋ ಇಷ್ಟು ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಾಣಲು ಬಹುಮುಖ್ಯವಾದ ಕಾರಣ ಅಮಿತಾಬ್ ಎಂದರೆ ತಪ್ಪಾಗಲ್ಲ. ಸದ್ಯ  ಈ ಶೋ 22ನೇ ವರ್ಷಕ್ಕೆ ಕಾಲಿಟ್ಟಿದೆ. ಅಂದಹಾಗೆ  ಸೀಸನ್ 2ನ್ನು ಶಾರುಖ್ ಖಾನ್ ಹೋಸ್ಟ್ ಮಾಡಿದ್ದರು. ಆ ಒಂದು ಸೀಸನ್ ಬಿಟ್ಟರೆ ಮಿಕ್ಕೆಲ್ಲ ಸೀಸನ್ ಅಮಿತಾಭ್ ನಡೆಸಿಕೊಟ್ಟಿದ್ದಾರೆ. 

 

Latest Videos
Follow Us:
Download App:
  • android
  • ios