Asianet Suvarna News Asianet Suvarna News

ಚೀನಾದಲ್ಲಿ ಪ್ರಸಿದ್ಧಿಯಾದ ಗ್ರಿಲ್ಡ್ ಐಸ್ ಕ್ಯೂಬ್ ಸ್ಟ್ರೀಟ್ ಫುಡ್, ಏನಪ್ಪಾ ಇದು?

ಆಹಾರ ಪ್ರೇಮಿಗಳು ಹೊಸ ಹೊಸ ಆಹಾರದ ಮೇಲೆ ಪ್ರಯೋಗ ಮಾಡ್ತಿರುತ್ತಾರೆ. ಆದ್ರೆ ಈ ಚೀನಾ ಜನರ ಆಹಾರ ವಿಚಿತ್ರದಲ್ಲಿ ವಿಚಿತ್ರವಾಗಿರುತ್ತೆ. ಹೀಗೂ ಮಾಡ್ಬಹುದಾ? ಇದನ್ನೂ ತಿನ್ಬಹುದಾ ಎಂಬ ಪ್ರಶ್ನೆ ಹುಟ್ಟುಹಾಕುತ್ತೆ. 
 

Grilled Ice Cubes Street Food In China getting popular roo
Author
First Published Dec 7, 2023, 2:52 PM IST

ಜಗತ್ತಿನ ಜನ ಏನು ತಿನ್ನುತ್ತಾರೆ, ಏನು ತಿನ್ನಲ್ಲ ಅಂತಾ ಹೇಳೋದು ಕಷ್ಟ. ನಮಗೆ ಇಷ್ಟವಿಲ್ಲದ ಅನೇಕ ವಸ್ತುಗಳನ್ನು ವಿದೇಶಿಗರು ತಿನ್ನುತ್ತಾರೆ. ಅದು ತಿನ್ನಲು ಯೋಗ್ಯವಲ್ಲ ಎಂದು ನಾವು ಭಾವಿಸಿದ್ದ ಆಹಾರವನ್ನು ಸೇವಿಸಿ ಹುಬ್ಬೇರಿಸುವಂತೆ ಮಾಡ್ತಾರೆ. ಹಾವು, ನಾಯಿ, ಜಿರಳೆ ಸೇರಿದಂತೆ ಮೈ ಜುಮ್ಮೆನ್ನಿಸುವ ಪ್ರಾಣಿಗಳನ್ನು ಚೀನಾ ಜನ ತಿನ್ನುತ್ತಾರೆ ಎಂಬುದು ನಿಮಗೆ ಗೊತ್ತು. 

ಸಾಮಾಜಿಕ ಜಾಲತಾಣ (Social Media ) ದಲ್ಲಿ ಈಗ ವಿಚಿತ್ರ ಕಾಂಬಿನೇಷನ್ ಆಹಾರ (Food) ಗಳು ಸದ್ದು ಮಾಡ್ತಿವೆ. ಕೆಲವೊಂದು ಕಾಂಬಿನೇಷನ್ ವಾಕರಿಕೆ ತರಿಸಿದ್ರೆ ಮತ್ತೆ ಕೆಲವೊಂದನ್ನು ಒಮ್ಮೆ ಟ್ರೈ ಮಾಡ್ಬಹುದು ಎನ್ನಿಸುತ್ತದೆ. ಅನೇಕರು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಆಹಾರವನ್ನು ಪ್ರಯೋಗ ಮಾಡಲು ಮುಂದಾಗ್ತಾರೆ. ನಾವಿಂದು ನಮ್ಮ ನೆರೆ ಚೀನಾದ ಮತ್ತೊಂದು ಆಹಾರ ಪದ್ಧತಿ ಬಗ್ಗೆ ನಿಮಗೆ ಹೇಳ್ತೇವೆ. ಅದನ್ನು ನೀವು ಟ್ರೈ ಮಾಡಿ ನೋಡ್ಬಹುದು. ಯಾಕೆಂದ್ರೆ ಇದು ವಾಕರಿಕೆ ತರಿಸೋವಷ್ಟು ಕೆಟ್ಟದಾಗಿಲ್ಲ.  

ಚೀನಾದಲ್ಲಿ ಚಳಿಗಾಲದ ಫೇವರೇಟ್ ಫುಡ್ ಸ್ನೇಕ್ ಸೂಪ್, ಇದನ್ಯಾಕೆ ತಿನ್ನಲು ಇಷ್ಟಪಡ್ತಾರೆ?

ಐಸ್ ಕ್ಯೂಬ್ (Ice Cube) ತಿನ್ನುತ್ತಾರೆ ಜನ: ಬೇಸಿಗೆ ಬಂತೆಂದ್ರೆ ಐಸ್ ಕ್ಯೂಬ್ ಗೆ ಬೇಡಿಕೆ ಹೆಚ್ಚಾಗುತ್ತೆ. ನೀರಿನಿಂದ ಹಿಡಿದು ಜ್ಯೂಸ್ ವರೆಗೆ ಎಲ್ಲ ತಂಪು ಪಾನೀಯಕ್ಕೂ ಎಕ್ಸ್ಟ್ರಾ ಐಸ್ ಕ್ಯೂಬ್ ಹಾಕಿ ನಾವು ಸೇವನೆ ಮಾಡ್ತೇವೆ. ಈ ಐಸ್ ಕ್ಯೂಬ್ ಗಳನ್ನು ಚಿಕ್ಕ ಮಕ್ಕಳು ಆಗಾಗ ಹಾಗೆ ತಿನ್ನೋದನ್ನು ನೀವು ನೋಡಿರಬಹುದು. ಅದು ಸೆಪ್ಪೆ ಆಗಿರೋದ್ರಿಂದ ಹಾಗೆ ತಿನ್ನೋಕೆ ಜನರಿಗೆ ಮನಸ್ಸು ಬರೋದಿಲ್ಲ. ಹಾಗಾಗಿಯೇ ಅದನ್ನು ನಾವು ಆಹಾರವಾಗಿ ಯಾವಾಗ್ಲೂ ಸೇವನೆ ಮಾಡೋದಿಲ್ಲ. ಆದ್ರೆ ಚೀನಾ ಜನ ಇದನ್ನೂ ಬಿಟ್ಟಿಲ್ಲ. ಚೀನಾದವರ ಆಹಾರದಲ್ಲಿ ಐಸ್ ಕ್ಯೂಬ್ ಕೂಡ ಸೇರಿದೆ. ಇಲ್ಲಿನ ಜನರು ಇದನ್ನು ಹಾಗೆ ತಿನ್ನೋದಿಲ್ಲ. ಐಸ್ ಕ್ಯೂಬ್ ಗೆ ಮಸಾಲೆ ಬೆರೆಸಿ ತಿನ್ನುತ್ತಾರೆ. ಮೆಣಸಿನಕಾಯಿ ಮತ್ತು ಮಸಾಲೆಯನ್ನು ಹಾಕಿ ಅವರು ಗ್ರಿಲ್ಡ್ ಐಸ್ ಕ್ಯೂಬ್ ತಯಾರಿಸ್ತಾರೆ.

ಗ್ರಿಲ್ಡ್ ಐಸ್ ತಯಾರಿಸುವ ವಿಧಾನ ಇಲ್ಲಿದೆ : ಚೀನಾದ ಸ್ಟ್ರೀಟ್ ಗಳಲ್ಲಿ ಈ ಗ್ರಿಲ್ಡ್ ಐಸ್ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ. ಮೊದಲು ದೊಡ್ಡ ಐಸ್ ಕ್ಯೂಬನ್ನು ಬಿಸಿ ಗ್ರಿಲ್ಡ್ ಮೇಲೆ ಹಾಕಿ ಬಿಸಿ ಮಾಡಲಾಗುತ್ತದೆ. ಐಸ್ ಬಿಸಿಯಾಗಿ ಕರಗಲು ಶುರುವಾಗ್ತಿದ್ದಂತೆ ಅದಕ್ಕೆ ಬ್ರೆಷ್ ಸಹಾಯದಿಂದ  ಎಣ್ಣೆ ಹಚ್ಚಲಾಗುತ್ತದೆ. ಅದಾದ್ಮೇಲೆ ಮೆಣಸಿನ ಪುಡಿ, ಜೀರಿಗೆ ಸೇರಿದಂತೆ ಮಸಾಲೆ ಪದಾರ್ಥವನ್ನು ಹಾಕಲಾಗುತ್ತದೆ. ನಂತ್ರ ಸಾಸ್ ಸೇರಿಸಿ, ಎಳ್ಳನ್ನು ಅದರ ಮೇಲೆ ಉದುರಿಸಿ ಸರ್ವ್ ಮಾಡಲಾಗುತ್ತದೆ. ನೀವು ನಿಮ್ಮಿಷ್ಟದ ಮಸಾಲೆಯನ್ನು ಅದಕ್ಕೆ ಬೆರೆಸಬಹುದು.  

ಗ್ರಿಲ್ಡ್ ಐಸ್ ಕ್ಯೂಬ್ ಇಷ್ಟಪಡ್ತಿರುವ ಚೈನೀಸ್ : ಚೀನಾದಲ್ಲಿ ಪ್ರಸಿದ್ಧಿಯಾಗಿರುವ ಈ ಗ್ರಿಲ್ಡ್ ಐಸ್ ಕ್ಯೂಬನ್ನು ಅನೇಕರು ಇಷ್ಟಪಡ್ತಿದ್ದಾರೆ. ಆರಂಭದಲ್ಲಿ ಬಿಸಿ, ಮಸಾಲೆಯಿಂದ ಕೂಡಿರುವ ಐಸ್ ಕೊನೆಯಲ್ಲಿ ತಣ್ಣಗಾಗುತ್ತದೆ. ಇದೊಂದು ರೀತಿ ರುಚಿ ನೀಡುತ್ತದೆ ಎನ್ನುತ್ತಾರೆ ಆಹಾರ ಪ್ರೇಮಿಗಳು.  ಗ್ರೀಲ್ಡ್ ಐಸ್ ಕ್ಯೂಬ್ ಬೆಲೆ ಎಷ್ಟು : ಗ್ರಿಲ್ಡ್ ಐಸ್ ಕ್ಯೂಬ್ ನ ಒಂದು ಬೌಲ್ ಗೆ 15 ಯವಾನ್. ಅಂದ್ರೆ ಸುಮಾರು 175 ರೂಪಾಯಿ. ಈಶಾನ್ಯ ಚೈನಾದಲ್ಲಿ ಇದು ಹೆಚ್ಚು ಪ್ರಸಿದ್ಧಿ ಪಡೆದಿದೆ. ಆಹಾರ ಪ್ರೇಮಿಗಳು ಇದನ್ನು ಸ್ನ್ಯಾಕ್ಸ್ ಎನ್ನಲು ಸಿದ್ಧರಿಲ್ಲ. ಹಾಗೆ ಇದನ್ನು ಅತಿಬೇಗ ತಿಂದು ಮುಗಿಸ್ಬೇಕು. ಇಲ್ಲವೆಂದ್ರೆ ಇದು ಕರಗಿ ನೀರಾಗುತ್ತೆ. ಜನರು ಟೇಸ್ಟ್ ನೋಡಲು ಇದನ್ನು ಸೇವನೆ ಮಾಡ್ತಿದ್ದಾರೆಯೇ ವಿನಃ ಇದ್ರಿಂದ ಹೊಟ್ಟೆ ತುಂಬೋದಿಲ್ಲ ಎನ್ನುವುದು ಕೆಲವರ ವಾದ. 

Health Tips: ರಾತ್ರಿ ನಿದ್ರೆಯೇ ಬರೋಲ್ವಾ? ಮಲಗೋ ಮುಂಚೆ ಈ ಹಣ್ಣು ತಿಂದ್ಬಿಡಿ ಸಾಕು

Follow Us:
Download App:
  • android
  • ios