Whistling Village: ಈ ಗ್ರಾಮದಲ್ಲಿರೋ ಜನರಿಗೆ ಹೆಸರೇ ಇರೋಲ್ಲ, ಹೇಗಪ್ಪಾ ಕರೆಯೋದು?

ಆಯಾ ದೇಶ, ಸಂಸ್ಕೃತಿ ಹಾಗೂ ಭೌಗೌಳಿಕ ಅಗತ್ಯಕ್ಕೆ ತಕ್ಕಂತೆ ಹೆಸರ ಬದಲಾಗುತ್ತವೆ. ಆದರೆ, ಹೆಸರೇ ಇಲ್ಲವೆಂದರೆ ಹೇಗಪ್ಪಾ ಜೀವನ ನಡೆಸೋದು?

Whistling Village Of India

ಪ್ರತಿಯೊಬ್ಬ ವ್ಯಕ್ತಿಯನ್ನು ಗುರುತಿಸೋದು ಆತನ ಹೆಸರಿನಿಂದಲೇ. ಹೆಸರಿನಲ್ಲಿ ಏನಿದೆ ಅಂತಾ ನಾವು ಪ್ರಶ್ನೆ ಕೇಳಿದ್ರೂ ಹೆಸರಿನಲ್ಲಿ ಬಹಳಷ್ಟಿದೆ ಎಂಬುದು ನಮಗೆ ಗೊತ್ತು. ಒಬ್ಬ ವ್ಯಕ್ತಿಗೆ ಮಾತ್ರವಲ್ಲ ವಸ್ತುವಿಗೆ ಹೆಸರಿಲ್ಲವೆಂದ್ರೂ ಅದನ್ನು ಪತ್ತೆ ಹಚ್ಚೋದು ಕಷ್ಟ. ನಿಮ್ಮನ್ನು ಯಾರಾದ್ರೂ ಕೂಗಬೇಕು ಅಥವಾ ನಿಮ್ಮ  ಬಗ್ಗೆ ಬರೆಯಬೇಕು, ನಿಮ್ಮ ಬಗ್ಗೆ ಮಾತನಾಡಬೇಕು ಅಂದ್ರೆ ನಿಮಗೆ ಹೆಸರಿರಬೇಕು. ಇದೇ ಕಾರಣಕ್ಕೆ ಮಗು ಹುಟ್ಟಿದ ಕೆಲವೇ ದಿನಗಳಲ್ಲಿ ನಾಮಕರಣ ಎಂಬ ಶಾಸ್ತ್ರ ನಡೆಯುತ್ತದೆ. ಅದನ್ನು ಕೆಲವರು ಸಂಪ್ರದಾಯದಂತೆ ಮಾಡಿದ್ರೆ ಮತ್ತೆ ಕೆಲವರು ಅದ್ಧೂರಿಯಾಗಿ ಮಾಡ್ತಾರೆ. ನೀವು ಹೆಸರಿಲ್ಲದ ವ್ಯಕ್ತಿಯನ್ನು ಹೇಗೆ ಕರೆಯುತ್ತೀರಿ? ಹೋಯ್, ರೀ, ಹಲ್ಲೋ ಹೀಗೆ ಚಿತ್ರವಿಚಿತ್ರವಾಗಿ ಕರೆಯೋಕೆ ಹೇಗೆ ಸಾಧ್ಯ? ಇದನ್ನು ಊಹಿಸಿಕೊಳ್ಳೋದು ನಮಗೆ ಕಷ್ಟ. ಆದ್ರೆ ಹೆಸರೇ ಇಲ್ಲದ ವ್ಯಕ್ತಿಗಳನ್ನು ಹೊಂದಿರುವ ಗ್ರಾಮವೊಂದು ನಮ್ಮ ಭಾರತದಲ್ಲಿದೆ ಅಂದ್ರೆ ನೀವು ನಂಬ್ಲೇಬೇಕು. 

ಭಾರತವು ವಿವಿಧ ಸಂಸ್ಕೃತಿ (Culture) ಗಳನ್ನು ಹೊಂದಿರುವ ದೇಶವಾಗಿದೆ. ಭಾರತದ ವಿವಿಧ ರಾಜ್ಯಗಳಿಗೆ ಪ್ರಯಾಣಿಸಿದರೆ  ಅಲ್ಲಿನ ವಿಶಿಷ್ಟತೆ ನಿಮ್ಮ ಅರಿವಿಗೆ ಬರುತ್ತದೆ. ಭಾರತದ ಪ್ರತಿಯೊಂದು ಸ್ಥಳ, ಜನರು ತಮ್ಮದೇ ಆದ ಸಂಸ್ಕೃತಿ, ಸಂಪ್ರದಾಯವನ್ನು ಅಳವಡಿಸಿಕೊಂಡಿದ್ದಾರೆ. ಭಾರತದ ಈ ಹಳ್ಳಿಯಲ್ಲಿರುವ ಜನರ ಪದ್ಧತಿ ವಿಚಿತ್ರವಾಗಿದೆ. ಇಲ್ಲಿನ ಜನರಿಗೆ ನಾಮಕರಣ ಮಾಡೋದೇ ಇಲ್ಲ. ಹೆಸರಿಲ್ಲದ ಜನರನ್ನು ಹೊಂದಿರುವ ಊರು ಯಾವುದು, ಅಲ್ಲಿನ ಜನರಿಗೆ ಯಾಕೆ ನಾಮಕರಣ ಮಾಡಿಲ್ಲ ಎಂಬುದನ್ನು ನಾವಿಂದು ಹೇಳ್ತೇವೆ.

INDIAN VILLAGE : ಬ್ರಹ್ಮಚಾರಿಗಳಿಂದ ತುಂಬಿ ಹೋಗಿದೆ ಈ ಹಳ್ಳಿ, ಇರೋದೆಲ್ಲಿ?

ಹೆಸರಿಲ್ಲದ ವ್ಯಕ್ತಿಗಳನ್ನು ಹೊಂದಿರುವ ಊರು ಯಾವುದು ಗೊತ್ತಾ? : ಹೆಸರಿಲ್ಲದ ವ್ಯಕ್ತಿಗಳನ್ನು ಹೊಂದಿರುವ ಗ್ರಾಮ ಮೇಘಾಲಯ (Meghalaya) ದ ಕೊಂಗ್‌ಥಾಂಗ್ ಗ್ರಾಮ. ಇದು ಸ್ವಲ್ಪ ವಿಶೇಷವಾಗಿದೆ. ಇದನ್ನು  ವಿಸ್ಲಿಂಗ್ (Whistling ) ವಿಲೇಜ್  ಎಂದು ಕರೆಯಲಾಗುತ್ತದೆ. ಇಲ್ಲಿ ವಾಸಿಸುವ ಜನರು ತಮ್ಮದೇ ಆದ ಹೆಸರನ್ನು ಹೊಂದಿಲ್ಲ. ಅವರನ್ನು ವಿವಿಧ ರಾಗಗಳಿಂದ ಕರೆಯುತ್ತಾರೆ. ರಾಗಗಳ ಮೂಲಕ ಅವರನ್ನು ಕರೆಯುವ ಕಾರಣ, ಅದು ಸೀಟಿಯಂತೆ ಕೇಳುವುದ್ರಿಂದ ಕಾಂಗ್‌ಥಾಂಗ್ ಗ್ರಾಮವನ್ನು ವಿಸ್ಲಿಂಗ್ ವಿಲೇಜ್ ಎಂದು ಕರೆಯಲಾಗುತ್ತದೆ.  ಈ ಗ್ರಾಮವು ಮೇಘಾಲಯದ ರಾಜಧಾನಿ ಶಿಲ್ಲಾಂಗ್‌ನಿಂದ 60 ಕಿಲೋಮೀಟರ್ ದೂರದಲ್ಲಿರುವ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯಲ್ಲಿದೆ.

ವಿಸ್ಲಿಂಗ್ ಗ್ರಾಮದ ಜನರಿಗೆ ಇರೋದು ಎರಡೇ ಹೆಸರು : ವಿಸ್ಲಿಂಗ್ ಗ್ರಾಮದಲ್ಲಿ ನಾವು ಬರಿ ಎರಡು ಹೆಸರನ್ನು ಕೇಳಬಹುದು. ಒಂದು  ಸಾಮಾನ್ಯ ಹೆಸರಾಗಿದ್ದರೆ ಮತ್ತೊಂದು ಹಾಡಿನ ಟ್ಯೂನ್‌ ನಲ್ಲಿರುತ್ತದೆ. ಹಾಡಿನ ರೂಪದಲ್ಲಿರುವ ಹೆಸರು ಕೂಡ ಎರಡು ಆವೃತ್ತಿಯನ್ನು ಹೊಂದಿರುತ್ತದೆ. ಒಂದು ತುಂಬಾ ಚಿಕ್ಕದು ಮತ್ತು ಇನ್ನೊಂದು ದೊಡ್ಡದು. ಚಿಕ್ಕ ಟ್ಯೂನ್ ಹೆಸರನ್ನು ಮನೆಯಲ್ಲಿ ಸಂಭಾಷಣೆಗಾಗಿ ಬಳಸಲಾಗುತ್ತದೆ. ದೀರ್ಘವಾದದ್ದು ಹೊರಗಿನವರು ಬಳಸ್ತಾರೆ.  

Travel Tips: ಟ್ರಿಪ್ ಹೋದಾಗ ಟೆಂಟಲ್ಲಿ ಮಲಗೋ ಮಜಾನೇ ಬೇರೆ, ಇರಲಿ ಈ ಎಚ್ಚರ

ಮಕ್ಕಳಿಗೆ ರಾಗ ನೀಡ್ತಾಳೆ ತಾಯಿ : ಈ ಗ್ರಾಮದಲ್ಲಿ 700 ವಿವಿಧ ಮಧುರ ಟ್ಯೂನ್ ನ ಹೆಸರಿದೆ. ಗ್ರಾಮದಲ್ಲಿ ಸುಮಾರು 700 ಗ್ರಾಮಸ್ಥರಿದ್ದಾರೆ. ಮಗು ಹೊಟ್ಟೆಯಲ್ಲಿರುವಾಗ್ಲೇ ಟ್ಯೂನ್ ರಚನೆಯಾಗಲು ಶುರುವಾಗುತ್ತದೆ. ಮಗು ಜನಿಸಿದ ನಂತರ ತಾಯಿ ತನ್ನ ಮಗುವಿಗೆ ರಾಗ ನೀಡ್ತಾಳೆ. ಈ ಗ್ರಾಮದಲ್ಲಿ ಯಾರಾದ್ರೂ ಸತ್ತರ ಅವರ ಜೊತೆಯೇ ಆ ರಾಗವೂ ಕೊನೆಯಾಗುತ್ತದೆ. ಈ ರಾಗವನ್ನು ಗಿಂಗರ್ವೈ ಲೋಬೆ ಎಂದು ಕರೆಯಲಾಗುತ್ತದೆ. ಈ ರಾಗವು ಅವರ ಜೀವನದ ಭಾಗವಾಗಿದೆ.  

ರಾಗದ ಹಿಂದಿದೆ ಈ ಕಾರಣ : ಹೆಸರಿನ ಬದಲು ರಾಗವಿಡಲು ಕಾರಣ ಜನರ ನಂಬಿಕೆ. ಕಾಡಿನಲ್ಲಿ ದೆವ್ವ, ಆತ್ಮಗಳು ನೆಲೆಸುತ್ತವೆ ಎಂದು ಅವರು ಭಾವಿಸಿದ್ದಾರೆ. ಹೆಸರು ಹಿಡಿದು ಕೂಗಿದ್ರೆ ಅದನ್ನು ಮಾಟ, ಮಂತ್ರಕ್ಕೆ ಬಳಸುವ ಸಾಧ್ಯತೆಯಿರುತ್ತದೆ. ಇದ್ರಿಂದ ಜೀವಕ್ಕೆ ಹಾನಿಯಾಗಬಹುದು ಎಂಬ ಕಾರಣಕ್ಕೆ ಹೆಸರಿನ ಬದಲು ರಾಗ ಬಳಸುತ್ತಾರೆ. ಪಶು – ಪಕ್ಷಿಗಳಿಂದ ಪ್ರೇರಿತರಾಗಿ ಇವರು ರಾಗ ರಚಿಸುತ್ತಾರೆ. 
 

Latest Videos
Follow Us:
Download App:
  • android
  • ios