Asianet Suvarna News Asianet Suvarna News

ಒಮ್ಮೆ ಕೆಂಪು, ಮತ್ತೊಮ್ಮೆ ನೀಲಿ , ಹಸಿರು - ರೈಲುಗಳ ಬಣ್ಣದ ಹಿಂದಿನ ಅರ್ಥ ಏನು?

ಏಕೆ ಭಾರತೀಯ ರೈಲು ಕೋಚ್‌ಗಳು ವಿವಿಧ ಬಣ್ಣಗಳಲ್ಲಿ ಬರುತ್ತವೆ ಎಂದು ಎಂದಾದರೂ ಯೋಚಿಸಿದ್ದೀರಾ? ಕೆಂಪು, ನೀಲಿ ಮತ್ತು ಹಸಿರು ಬಣ್ಣಗಳ ಹಿಂದಿನ ರಹಸ್ಯವನ್ನು  ಕಂಡುಹಿಡಿಯಿರಿ. ಈ ಬಣ್ಣಗಳು ರೈಲಿನ ವೇಗ, ವಿನ್ಯಾಸ ಮತ್ತು ಉದ್ದೇಶದ ಬಗ್ಗೆ ಸುಳಿವು ನೀಡುತ್ತವೆ!

What is the secret behind the color of Indian Railways mrq
Author
First Published Aug 31, 2024, 3:11 PM IST | Last Updated Aug 31, 2024, 3:14 PM IST

ನವದೆಹಲಿ: ಭಾರತೀಯ ರೈಲ್ವೆ ವಿಶ್ವದ ಅತಿದೊಡ್ಡ ನಾಲ್ಕು ಸಾರಿಗೆಗಳಲ್ಲಿ ಒಂದಾಗಿದೆ. ಪ್ರತಿದಿನ  ಭಾರತದಲ್ಲಿ ಸಾವಿರಾರು ರೈಲುಗಳು ಸಂಚರಿಸಿದ್ರೆ ಲಕ್ಷಾಂತರ ಪ್ರಯಾಣಿಕರು ಇದರಲ್ಲಿ ಪ್ರಯಾಣಿಸುತ್ತಾರೆ. ರೈಲುಗಳಲ್ಲಿ ಒಂದೊಂದು ವಿನ್ಯಾಸವೂ ಹಲವು ಅರ್ಥಗಳನ್ನು ಹೊಂದಿದೆ. ರೈಲುಗಳ ಮೇಲಿನ ಸಂಖ್ಯೆಗಳು ಸೇರಿದಂತೆ ಎಲ್ಲದರ ಹಿಂದೆಯೂ ಒಂದು ವಿಶೇಷ ಅರ್ಥವಿದೆ. 80-90ರಶ ದಶಕದಲ್ಲಿ ರೈಲುಗಳೆಂದ್ರೆ ಕೆಂಪು ಬಣ್ಣ. ಆದ್ರೆ ಇಂದು ರೈಲುಗಳ ಬಣ್ಣ ಬೇರೆ ಬೇರೆಯಾಗಿದೆ. ಇಂದು ಸಾಮಾನ್ಯವಾಗಿ ಕೆಂಪು, ನೀಲಿ ಮತ್ತು ಹಸಿರು  ಬಣ್ಣದ ರೈಲುಗಳು ಹೆಚ್ಚಾಗಿದೆ ಕಂಡು ಬರುತ್ತವೆ. ವಂದೇ ಭಾರತ್ ರೈಲುಗಳ ಬಿಳಿ-ನೀಲಿ ಮತ್ತು ಬಿಳಿ-ಕೇಸರಿ ಸಂಯೋಜನೆಯಲ್ಲಿದ್ದು, ಇವುಗಳ ವಿನ್ಯಾಸವೂ ಸಹ ಭಿನ್ನವಾಗಿದೆ. 

ರೈಲುಗಳ ಕೋಚ್ ಬಣ್ಣ ಯಾಕೆ ಬೇರೆಯಾಗಿರುತ್ತೆ ಎಂಬುದರ  ಮಾಹಿತಿ. ರೈಲುಗಳ ಬಣ್ಣವನ್ನು ಮುಖ್ಯವಾಗಿ ಕೋಚ್‌ನ ವಿನ್ಯಾಸ ಮತ್ತು ವಿಶೇಷತೆಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಕೆಂಪು, ನೀಲಿ ಮತ್ತು ಹಸಿರು ಬಣ್ಣದ ಕೋಚ್‌ಗಳ ಬಗ್ಗೆ ನೋಡೋಣ ಬನ್ನಿ.

ರೈಲುಗಳು ರಾತ್ರಿ ಹೆಚ್ಚು ವೇಗವಾಗಿ ಹೋಗಲು ಕಾರಣವೇನು?

1.ಕೆಂಪು ಬಣ್ಣದ ಕೋಚ್
ಕೆಂಪು ಬಣ್ಣದ ಡಬ್ಬಿಗಳಿಗೆ ಲಿಂಕ್ ಹಾಫ್ಮೆನ್ ಕೋಚ್ ಎಂದು ಕರೆಯಲಾಗುತ್ತದೆ. ಕೆಂಪು ಕೋಚ್‌ಗಳ ನಿರ್ಮಾಣ ಜರ್ಮನಿಯಲ್ಲಾಗಿತ್ತು. 2000ರಲ್ಲಿ ಜರ್ಮನಿಯಿಂದ ಭಾರತಕ್ಕೆ ಕೆಂಪು ಬಣ್ಣದ ಕೋಚ್‌ಗಳನ್ನು ಆಮದು ಮಾಡಿಕೊಳ್ಳಲಾಗಿತ್ತು. ಸದ್ಯ ಈ ಕೋಚ್‌ಗಳ ನಿರ್ಮಾಣ ಪಂಜಾಬ್ ರಾಜ್ಯದ ಕಪೂರಥಲಾ ಎಂಬಲ್ಲಿ ಆಗುತ್ತಿದೆ. ಇವುಗಳು ಅಲ್ಯುಮಿನಿಯಿಂದ ನಿರ್ಮಾಣವಾಗಿರುವ ಕಾರಣ ತೂಕ ಕಡಿಮೆಯಾಗಿರುತ್ತದೆ. ಕೆಂಪು ಬಣ್ಣದ ಕೋಚ್‌ಗಳನ್ನು ರಾಜಧಾನಿ/ಶತಾಬ್ಧಿ ಸೇರಿದಂತೆ ದೂರ ಪ್ರಯಾಣದ ಪ್ರೀಮಿಯಂ ಎಕ್ಸ್‌ಪ್ರೆಸ್‌ಗಳಲ್ಲಿ ಬಳಕೆ ಮಾಡಲಾಗುತ್ತದೆ. 

2.ಹಸಿರು ಬಣ್ಣದ ಕೋಚ್
ಹಸಿರು ಬಣ್ಣದ ಕೋಚ್‌ಗಳನ್ನ ಗರೀಬ್ ರಥ್ ರೈಲುಗಳಿಗೆ ಬಳಕೆ ಮಾಡಲಾಗುತ್ತದೆ. ಈ ಬಣ್ಣಕ್ಕೆ ಯಾವುದೇ ವಿಶೇಷ ಮಹತ್ವವಿಲ್ಲ. ಬಿನ್ನವಾಗಿ ಕಾಣುವದಕ್ಕಾಗಿ ಮಾತ್ರ ಬೇರೆ ಬಣ್ಣ ಬಳಕೆ ಮಾಡಲಾಗಿದೆ. ಕೆಲವೊಮ್ಮೆ ನೀವು ಬಣ್ಣ ಬಣ್ಣದ ರೈಲುಗಳನ್ನು ಸಹ ನೋಡಿರಬಹುದು. ಇವುಗಳಿಗೆ ಯಾವುದೇ  ವಿಶೇಷ ಅರ್ಥ ಇರಲ್ಲ.

3.ನೀಲಿ ಬಣ್ಣದ ಕೋಚ್
ಭಾರತೀಯ ರೈಲ್ವೆ ಅತಿ ಹೆಚ್ಚು ನೀಲಿ ಬಣ್ಣದ ಕೋಚ್‌ಗಳನ್ನು ಹೊಂದಿದೆ. ಇವುಗಳು ಸಂಪೂರ್ಣ ಕಬ್ಬಿಣದಿಂದ ನಿರ್ಮಾಣವಾಗಿದ್ದು, ಗಂಟೆಗೆ 70-140 ಕಿ.ಮೀ. ವೇಗದಲ್ಲಿ ಚಲಿಸುವ ಸಾಮಾರ್ಥ್ಯವನ್ನು ಹೊಂದಿವೆ. ತಮಿಳುನಾಡಿನ ಇಂಟಿಗ್ರಲ್ ಕೋಚ್  ಫ್ಯಾಕ್ಟರಿಯಲ್ಲಿ ನೀಲಿ ಬಣ್ಣದ ಕೋಚ್‌ಗಳನ್ನು ನಿರ್ಮಿಸಲಾಗುತ್ತದೆ. ನೀಲಿ ಕೋಚ್‌ಗಳನ್ನು ಎಕ್ಸ್‌ಪ್ರೆಸ್, ಸೂಪರ್‌ಫಾಸ್ಟ್ ಟ್ರೈನ್‌ಗಳಲ್ಲಿ ಬಳಸಲಾಗುತ್ತದೆ.

Indian Railways: ತತ್ಕಾಲ್‌ನಲ್ಲಿ ಕನ್ಫರ್ಮ್ ಟಿಕೆಟ್‌ ಬುಕ್ ಆಗತ್ತಿಲ್ಲವೇ? ಹಾಗಾದ್ರೆ ಈ ಸಿಂಪಲ್ ಟ್ರಿಕ್‌ ಬಳಸಿ

Latest Videos
Follow Us:
Download App:
  • android
  • ios