Indian Railways: ತತ್ಕಾಲ್‌ನಲ್ಲಿ ಕನ್ಫರ್ಮ್ ಟಿಕೆಟ್ ಬುಕ್ ಆಗತ್ತಿಲ್ಲವೇ? ಹಾಗಾದ್ರೆ ಈ ಸಿಂಪಲ್ ಟ್ರಿಕ್ ಬಳಸಿ
ಹಬ್ಬದ ಸೀಸನ್‌ನಲ್ಲಿ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತದೆ. ಇದರಿಂದಾಗಿ ಕನ್ಫರ್ಮ್ ಟಿಕೆಟ್‌ಗಳನ್ನು ಪಡೆಯುವುದು ಕಷ್ಟಕರವಾಗುತ್ತದೆ. ತತ್ಕಾಲ್ ಬುಕಿಂಗ್‌ನಲ್ಲಿ ಕನ್ಫರ್ಮ್ ಟಿಕೆಟ್ ಪಡೆಯಬಹುದು. ಆದ್ರೆ ಟಿಕೆಟ್ ಕೌಂಟರ್ ಓಪನ್ ಆದ ಕೆಲವೇ ನಿಮಿಷಗಳಲ್ಲಿ ಟಿಕೆಟ್ ಖಾಲಿಯಾಗುತ್ತವೆ.
ರೈಲು ಪ್ರಯಾಣ
ಭಾರತದಲ್ಲಿ ರೈಲ್ವೆ ಅತ್ಯಂತ ಜನಪ್ರಿಯ ಸಾರಿಗೆ ವಿಧಾನಗಳಲ್ಲಿ ಒಂದಾಗಿದೆ. ಪ್ರತಿದಿನ ಲಕ್ಷಾಂತರ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಹಬ್ಬದ ಸೀಸನ್‌ನಲ್ಲಿ, ರೈಲಿನಲ್ಲಿ ಪ್ರಯಾಣಿಸುವ ಜನರ ಸಂಖ್ಯೆ ಹಲವಾರು ಪಟ್ಟು ಹೆಚ್ಚಾಗುತ್ತದೆ. ಅದಕ್ಕಾಗಿಯೇ ಈ ದಿನಗಳಲ್ಲಿ confirmed ಟಿಕೆಟ್ ಪಡೆಯುವುದು ಸವಾಲಿನ ಕೆಲಸ.
ಐಆರ್‌ಸಿಟಿಸಿ
confirmed ಟಿಕೆಟ್ ಪಡೆಯಲು ತತ್ಕಾಲ್ ಬುಕ್ ಮಾಡುವ ಆಯ್ಕೆ ಇದ್ದರೂ, ಪ್ರಕ್ರಿಯೆಯು ಸುಲಭವಲ್ಲ. ತತ್ಕಾಲ್ ಕೌಂಟರ್‌ನಲ್ಲಿ ಕನ್ಫರ್ಮ್ ರೈಲು ಟಿಕೆಟ್‌ಗಳನ್ನು ಸುಲಭವಾಗಿ ಪಡೆಯಲು ಏನು ಮಾಡಬೇಕು ಎಂಬುದರ ಸಲಹೆ ಇಲ್ಲಿದೆ. ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡುವ ಮೊದಲು, ನಿಮ್ಮ ಇಂಟರ್ನೆಟ್ ಸಂಪರ್ಕವನ್ನು ನೀವು ಪರಿಶೀಲಿಸಬೇಕು.
ಇಂಟರ್ನೆಟ್
ತತ್ಕಾಲ್ ಬುಕಿಂಗ್‌ನಲ್ಲಿ, ನಿಮಗೆ 1-2 ನಿಮಿಷಗಳ ವಿಂಡೋ ಸಿಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಇಂಟರ್ನೆಟ್ ಸಂಪರ್ಕ ಸ್ಲೋ ಆಗಿದ್ದರೆ ಪೇಜ್ ಲೋಡ್ ಆಗಲ್ಲ. ಮೊದಲೇ ಇಂಟರ್‌ನೆಟ್ ಚೆಕ್ ಮಾಡ್ಕೊಂಡು, ಲಾಗಿನ್ ಮಾಡಿಕೊಂಡಿರಬೇಕು.
ತತ್ಕಾಲ್ ಬುಕಿಂಗ್
ಎಸಿ ಬೋಗಿಗಳಿಗೆ ತತ್ಕಾಲ್ ಬುಕಿಂಗ್ ಪ್ರತಿದಿನ ಬೆಳಗ್ಗೆ 10 ಗಂಟೆಗೆ ಮತ್ತು ಸ್ಲೀಪರ್ ಬೋಗಿಗಳಿಗೆ ಬೆಳಗ್ಗೆ 11 ಗಂಟೆಗೆ ಪ್ರಾರಂಭವಾಗುತ್ತದೆ. ಲಾಗಿನ್ ಆಗಲು ಸರಿಯಾದ ಸಮಯವೆಂದರೆ ಬುಕಿಂಗ್ ಪ್ರಾರಂಭವಾಗುವ 2-3 ನಿಮಿಷಗಳ ಮೊದಲು. ಐಆರ್‌ಸಿಟಿಸಿ ತನ್ನ ಗ್ರಾಹಕರಿಗೆ ಮಾಸ್ಟರ್ ಪಟ್ಟಿ ಎಂಬ ವಿಶೇಷ ವೈಶಿಷ್ಟ್ಯವನ್ನು ನೀಡುತ್ತದೆ.
ಭಾರತೀಯ ರೈಲ್ವೆ
ಬುಕಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸುವ ಮೊದಲು ಪ್ರಯಾಣಿಕರ ಎಲ್ಲಾ ವಿವರಗಳನ್ನು ಭರ್ತಿ ಮಾಡಬಹುದು. ಇದು ಬುಕಿಂಗ್ ಮಾಡುವಾಗ ಸಾಕಷ್ಟು ಸಮಯವನ್ನು ಉಳಿಸುತ್ತದೆ. ತ್ವರಿತ ಬುಕಿಂಗ್ ಸಮಯದಲ್ಲಿ, ನೀವು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬದಲಿಗೆ ಯುಪಿಐ ಮೂಲಕವೂ ಪಾವತಿಸಬಹುದು. ಇದು ಸಮಯವನ್ನು ಉಳಿಸುತ್ತದೆ.