ಇತ್ತೀಚಿನ ದಿನಗಳಲ್ಲಿ ವಿಮಾನದಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಿದೆ. ಹಾಗೇ ವಿಮಾನ ಹಾರಾಟದಲ್ಲಿ ವ್ಯತ್ಯಯ ಪ್ರಕರಣವೂ ಜಾಸ್ತಿ ಆಗ್ತಿದೆ. ನಿಮ್ಮ ವಿಮಾನ ಹಾರಾಟದಲ್ಲಿ ವಿಳಂಬವಾದ್ರೆ ಇಲ್ಲ ಹಾರಾಟ ರದ್ದಾದ್ರೆ ಏನು ಮಾಡ್ಬೇಕು ಎಂಬುದನ್ನು ಮೊದಲು ತಿಳಿದಿರಿ.
ಅತ್ಯಂತ ಆರಾಮದಾಯಕ ಪ್ರಯಾಣವಾಗಿರುವ ವಿಮಾನದಲ್ಲಿ ಸಮಯವನ್ನು ಉಳಿಸ್ಬಹುದು. ಕಾರು ಅಥವಾ ಟ್ರೈನ್ ಪ್ರಯಾಣಕ್ಕಿಂತ ಬೇಗ ಗಮ್ಯ ಸ್ಥಾನವನ್ನು ತಲುಪಬಹುದು. ಕೆಲವೊಂದು ಜಾಗಕ್ಕೆ ಕಾರ್, ಬಸ್, ರೈಲಿನ ಸೌಲಭ್ಯವಿಲ್ಲ. ಅಂಥ ಜಾಗಕ್ಕೆ ವಿಮಾನ ಪ್ರಯಾಣ (Air travel) ಅನಿವಾರ್ಯ ಕೂಡ ಹೌದು. ಆದ್ರೆ ವಿಮಾನ ಪ್ರಯಾಣದಲ್ಲೂ ಕೆಲ ಸಮಸ್ಯೆಗಳಿವೆ. ಟೆಕ್ನಿಕಲ್ ಸಮಸ್ಯೆ ಅಥವಾ ಹವಾಮಾನ ವೈಪರಿತ್ಯದಿಂದ ವಿಮಾನ ಹಾರಾಟ ವಿಳಂಬವಾಗುತ್ತದೆ. ಇಲ್ಲವೇ ವಿಮಾನ ಹಾರಾಟ ರದ್ದಾಗಬಹುದು. ಇದ್ರಿಂದ ಪ್ರಯಾಣಿಕರು ತೊಂದರೆಗೀಡಾಗ್ತಾರೆ. ಸರ್ಕಾರಿ ಬಸ್ ಗಳಲ್ಲಿ ಪ್ರಯಾಣಿಸೋ ಹಾಗೆ, ಒಂದು ಮಿಸ್ ಆದ್ರೆ ಇನ್ನೊಂದು ಅಂತ ವಿಮಾನ ಹತ್ತಲು ಸಾಧ್ಯವಿಲ್ಲ. ನೀವು ಬುಕ್ ಮಾಡಿದ ವಿಮಾನ ಹಾರಾಟ ವಿಳಂಬವಾದ್ರೆ ಅಥವಾ ರದ್ದಾದ್ರೆ ಏನು ಮಾಡ್ಬೇಕು ಎನ್ನುವ ಮಾಹಿತಿ ಇಲ್ಲಿದೆ.
ವಿಮಾನ ಹಾರಾಟ ವಿಳಂಬವಾದ್ರೆ ಏನು ಮಾಡ್ಬೇಕು? :
ವಿಮಾನ ಪ್ರಯಾಣದ ಪ್ಲಾನ್ ಮಾಡಿದ್ರೆ ಟಿಕೆಟ್ ಬುಕ್ ಮಾಡುವ ಟೈಂನಲ್ಲೇ ನೀವು ಮರುಪಾವತಿ ನಿಯಮಗಳನ್ನು ತಿಳಿದ್ಕೊಳ್ಳಿ. ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಪ್ರಕಾರ, ಪ್ರಯಾಣ ಎರಡು ಗಂಟೆಗಳ ಅವಧಿಯಾಗಿದ್ದು, ಆ ವಿಮಾನ ಎರಡು ಗಂಟೆಗಳ ಕಾಲ ವಿಳಂಬವಾಗಿದ್ದರೆ, ಇಲ್ಲವೇ ವಿಮಾನ ಪ್ರಯಾಣ ಎರಡೂವರೆಯಿಂದ ಐದು ಗಂಟೆಗಳ ಅವಧಿಯಾಗಿದ್ದು, ಆ ವಿಮಾನ ಮೂರು ಗಂಟೆಗಳ ಕಾಲ ವಿಳಂಬವಾಗಿದ್ದರೆ, ಅಥವಾ ವಿಮಾನವು ನಾಲ್ಕು ಗಂಟೆ ಅಥವಾ ಅದಕ್ಕಿಂತ ಹೆಚ್ಚು ವಿಳಂಬವಾಗಿದ್ದರೆ, ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ಉಪಹಾರಗಳನ್ನು ಒದಗಿಸಬೇಕಾಗುತ್ತದೆ. ವಿಮಾನ ನಿಲ್ದಾಣದಲ್ಲಿ ಚೆಕ್ ಇನ್ ಮಾಡಿದ್ದರೆ, ನೀವು ನಿಮ್ಮ ಮುಂದಿನ ವಿಮಾನವನ್ನು ಹತ್ತುವವರೆಗೆ ವಿಮಾನಯಾನ ಸಂಸ್ಥೆಯು ಆಹಾರ ಮತ್ತು ಪಾನೀಯದ ವ್ಯವಸ್ಥೆ ಮಾಡಬೇಕಾಗುತ್ತದೆ.
ಡಿವೋರ್ಸ್ ಮಹಿಳೆಯರ ಮಾರ್ಕೆಟ್ನಲ್ಲಿ ಡಾ.ಬ್ರೋ ದಿಢೀರ್ ಪ್ರತ್ಯಕ್ಷ: ವಿಚಿತ್ರ ದೇಶದಲ್ಲಿ ಗಗನ್ ಅಬ್ಬಬ್ಬಾ ಇದೇನಿದು?
ಇನ್ನು ವಿಮಾನ ಆರು ಗಂಟೆ ಅಥವಾ ಅದಕ್ಕಿಂತ ಹೆಚ್ಚು ವಿಳಂಬವಾದರೆ ಡಿಜಿಸಿಎ (DGCA) ಸ್ಪಷ್ಟ ನಿಯಮಗಳನ್ನು ಹೊಂದಿದೆ. ಈ ನಿಯಮಗಳ ಪ್ರಕಾರ, ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ವಿಳಂಬದ ಬಗ್ಗೆ ತಿಳಿಸಬೇಕು. ಪ್ರಯಾಣಿಕರು ಬಯಸಿದರೆ ಮತ್ತೊಂದು ವಿಮಾನದಲ್ಲಿ ಸೀಟ್ ಬುಕ್ ಮಾಡ್ಬಹುದು. ಇಲ್ಲವೆ ಪೂರ್ಣ ಮರುಪಾವತಿಯನ್ನು ಪಡೆಯಬಹುದು. ವಿಮಾನ ವಿಳಂಬದಿಂದ ನಿಮ್ಮ ಪ್ರಯಾಣ ರದ್ದಾದರೆ ನಿಮಗೆ ಟಿಕೆಟ್ ನ ಪೂರ್ಣ ಹಣವನ್ನು ನೀಡಲಾಗುತ್ತದೆ.
ವಿಮಾನ ಟಿಕೆಟ್ ಬುಕ್ ಮಾಡಿದ 48 ಗಂಟೆ ಒಳಗೆ ಕ್ಯಾನ್ಸಲ್ ಮಾಡಿದ್ರೆ ಇನ್ಮುಂದೆ ಶುಲ್ಕವಿಲ್ಲ!
ವಿಮಾನ ಹಾರಾಟ ರದ್ದಾದಲ್ಲಿ ಏನು ಮಾಡಬೇಕು? :
ವಿಮಾನ ಹಾರಾಟ ರದ್ದಾಗಿದ್ದರೆ ಈ ಬಗ್ಗೆ ಕನಿಷ್ಠ 24 ಗಂಟೆಗಳ ಮೊದಲು ಪ್ರಯಾಣಿಕರಿಗೆ ತಿಳಿಸುವುದು ವಿಮಾನಯಾನ ಸಂಸ್ಥೆಗಳ ಜವಾಬ್ದಾರಿಯಾಗಿದೆ. ಒಂದ್ವೇಳೆ ವಿಮಾನ ಸಂಸ್ಥೆಗಳು, ಪ್ರಯಾಣಿಕರಿಗೆ ವಿಮಾನ ಹಾರಾಟ ರದ್ದಾದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ ಎಂದಾದ್ರೆ ಟಿಕೆಟ್ ನ ಪೂರ್ತಿ ಹಣವನ್ನು ಮರುಪಾವತಿ ಮಾಡಬೇಕು. ಈ ಮೊತ್ತ ಹಾರಾಟದ ಟೈಂಗೆ ತಕ್ಕಂತೆ ಬದಲಾಗುತ್ತದೆ. ಭಾರತ ಸರ್ಕಾರದ ನಾಗರಿಕ ವಿಮಾನಯಾನ ಸಚಿವಾಲಯ ಹೊರಡಿಸಿದ ಅಧಿಸೂಚನೆಯ ಪ್ರಕಾರ, ವಿಮಾನಯಾನ ಸಂಸ್ಥೆ ನಿಮ್ಮ ವಿಮಾನವನ್ನು ರದ್ದುಗೊಳಿಸಿದರೆ, ಅದು ನಿಮಗೆ ಪರ್ಯಾಯ ವಿಮಾನವನ್ನು ಒದಗಿಸಬೇಕು. ಇಲ್ಲವೇ ಟಿಕೆಟ್ನ ಪೂರ್ಣ ಮೊತ್ತವನ್ನು ಮರುಪಾವತಿಸಬೇಕು. ಟಿಕೆಟ್ ಮರುಪಾವತಿಗೆ ಸಂಬಂಧಿಸಿದಂತೆ ಡಿಜಿಸಿಎ ಸ್ಪಷ್ಟ ನಿಯಮಗಳನ್ನು ಹೊಂದಿದೆ. ಆದ್ರೆ ನಿಮಗೆ ಸರಿಯಾದ ಸಮಯಕ್ಕೆ ಮರುಪಾವತಿ ಆಗಿಲ್ಲ ಎಂದಾದ್ರೆ ಇಲ್ಲವೇ ವಿಮಾನಯಾನ ಸಂಸ್ಥೆಗಳು ನಿಮಗೆ ಕಿರುಕುಳ ನೀಡುತ್ತಿದ್ದರೆ ನೀವು ಡಿಜಿಸಿಎಗೆ ಆನ್ಲೈನ್ನಲ್ಲಿ ದೂರು ನೀಡಬಹುದು. ದೂರು ಸಲ್ಲಿಸಲು, ನೀವು ಡಿಜಿಸಿಎಯ ಅಧಿಕೃತ ವೆಬ್ಸೈಟ್ https://www.dgca.gov.in/digigov-portal/ ಗೆ ಭೇಟಿ ನೀಡಬಹುದು.
