Belagavi: ನೋಡುಗರ ಕಣ್ಮನ ಸೆಳೆಯುತ್ತಿವೆ ನಯನಮನೋಹರ ಜಲಪಾತಗಳು
• ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಧಾರಾಕಾರ ವರ್ಷಧಾರೆ
• ಮೈದುಂಬಿ ಧುಮ್ಮುಕ್ಕುತ್ತಿವೆ ಬೆಳಗಾವಿ ಸಮೀಪದ ಜಲಪಾತಗಳು
• ಪ್ರವಾಸಿಗರೇ ಎಚ್ಚರಿಕೆಯಿಂದಿರಿ... ಸ್ವಚ್ಛತೆ ಕಾಪಾಡಿ...!
ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ
ಬೆಳಗಾವಿ (ಜು.08): ಕಳೆದ ಹದಿನೈದು ದಿನಗಳಿಂದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಧಾರಾಕಾರ ಮಳೆ ಆಗುತ್ತಿದ್ದು ಬೆಳಗಾವಿ ನಗರ ಹಾಗೂ ಖಾನಾಪುರ ಸೇರಿ ಜಿಲ್ಲೆಯ ವಿವಿಧೆಡೆ ನಿರಂತರ ಮಳೆಯಾಗುತ್ತಿದೆ. ಇದರಿಂದಾಗಿ ಬೆಳಗಾವಿಗೆ ಸಮೀಪ ಇರುವಂತಹ ಜಲಪಾತಗಳು ಮೈದುಂಬಿ ಹರಿಯುತ್ತಿದ್ದು ನೋಡುಗರ ಕಣ್ಮನ ಸೆಳೆಯುತ್ತಿವೆ. ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕಣಕುಂಬಿ, ಜಾಂಬೋಟಿ, ಭೀಮಗಡ, ಲೋಂಡಾ, ನಾಗರಗಾಳಿ ಅರಣ್ಯಪ್ರದೇಶದ ವಿವಿಧೆಡೆ ಹತ್ತಾರು ಜಲಪಾತಗಳಿವೆ. ಎತ್ತರದ ಬೆಟ್ಟಗಳ ಮೇಲಿಂದ ಶುಭ್ರವಾದ ನೀರು ಪ್ರಪಾತಕ್ಕೆ ಧುಮ್ಮುಕ್ಕುವ ದೃಶ್ಯ ನೋಡಲು ಎರಡು ಕಣ್ಣುಗಳು ಸಾಲದು.
ಅದರಲ್ಲೂ ಕರ್ನಾಟಕ ಗೋವಾ ಗಡಿಯಲ್ಲಿ ಇರುವ ದೂಧ್‌ಸಾಗರ್ ಜಲಪಾತ, ಶಿಂಭೋಲಾ ಜಲಪಾತ, ಸಡಾ ಜಲಪಾತ, ವಜ್ರಾ ಜಲಪಾತಗಳು ಮೈದುಂಬಿ ಧುಮ್ಮುಕ್ಕುತ್ತಿವೆ. ಇನ್ನು ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಗೋಕಾಕ್ ಜಲಪಾತ ಹಾಗೂ ಗೊಡಚನಮಲ್ಕಿ ಜಲಪಾತಗಳು ಸಹ ಮೈದುಂಬಿ ಧುಮ್ಮುಕ್ಕುತ್ತಿವೆ. ಬೆಳಗಾವಿಗೆ ಸಮೀಪ ಇರುವ ಮಹಾರಾಷ್ಟ್ರದ ಅಂಬೋಲಿ ಫಾಲ್ಸ್‌ಗೂ ಸಹ ನಿತ್ಯ ನೂರಾರು ಪ್ರವಾಸಿಗರು ತೆರಳುತ್ತಿದ್ದಾರೆ.
ಬೆಳಗಾವಿ: ನಾನು ಬೇರೆಯವರನ್ನು ಕುಣಿಸುತ್ತೇನೆ ಅಂದಿದ್ದೇಕೆ ಲಕ್ಷ್ಮೀ ಹೆಬ್ಬಾಳ್ಕರ್?
ಪ್ರವಾಸಿಗರೇ ಎಚ್ಚರಿಕೆಯಿಂದಿರಿ: ಬೆಳಗಾವಿ ನಗರದಿಂದ 70 ಕಿಮೀ ಅಂತರದಲ್ಲಿ ಇರುವ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಅಂಬೋಲಿ ಜಲಪಾತಕ್ಕೆ ರಾಜ್ಯದ ವಿವಿಧೆಡೆಯಿಂದ ಪ್ರವಾಸಿಗರು ತೆರಳುತ್ತಿದ್ದಾರೆ. ಜಲಪಾತ ವೀಕ್ಷಣೆಗೆ ಹೋದ ಪ್ರವಾಸಿಗರು ಎಚ್ಚರಿಕೆ ವಹಿಸುವುದು ಅತ್ಯಗತ್ಯ. ಅಂಬೋಲಿ ಫಾಲ್ಸ್ ಬಳಿ ಇತ್ತೀಚೆಗಷ್ಟೇ ಪ್ರವಾಸಕ್ಕೆ ತೆರಳಿದ್ದ ಮಹಿಳೆಯೋರ್ವಳು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ಕಾಲು ಜಾರಿ ಬಿದ್ದು ಹಿರಣ್ಯಕೇಶಿ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದರು.
Chikkodi: ಹೆತ್ತ ಮಗಳನ್ನು ಕೊಲೆ ಮಾಡಿದ ತಂದೆಗೆ ಜೀವಾವಧಿ: ಕೋರ್ಟ್ನಿಂದ ಮಹತ್ವದ ತೀರ್ಪು!
ಸತತ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಸ್ಥಳೀಯರು ಹಾಗೂ ಸಾವಂತವಾಡಿ ಪೊಲೀಸರು ಮಹಿಳೆಯನ್ನು ರಕ್ಷಿಸಿದ್ದರು. ಇನ್ನು ಜಲಪಾತಗಳ ಬಳಿ ಪ್ರವಾಸಿಗರು ಪ್ಲಾಸ್ಟಿಕ್ ಸೇರಿ ಇತರ ತ್ಯಾಜ್ಯಗಳನ್ನು ಎಲ್ಲೆಡೆ ಬಿಸಾಡುತ್ತಿರೋದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಪ್ರವಾಸಿಗರು ತಮ್ಮ ಸುರಕ್ಷತೆ ಜೊತೆಗೆ ಸ್ವಚ್ಛತೆ ಬಗ್ಗೆಯೂ ಗಮನ ಹರಿಸಿ ಜವಾಬ್ದಾರಿಯುತವಾಗಿ ವರ್ತಿಸಿದರೆ ಒಳಿತು ಎಂಬುದು ನಮ್ಮ ಕಳಕಳಿ.