ಮೊದಲ 'ಕನ್ನಡ. ಟ್ರಾವೆಲ್' ಜಾಲತಾಣ ಅನಾವರಣ, ನಿಮ್ದು ಒಂದ್ ಇರ್ಲಿ

ಕನ್ನಡ ಮತ್ತು ಪ್ರವಾಸ ಇವೆರಡನ್ನೂ ಜತೆಯಲ್ಲಿಟ್ಟು ಜಾಲತಾಣವೊಂದು ಲೋಕಾರ್ಪಣೆಗೊಳ್ಳುತ್ತಿದೆ. ಆ ಹೆಜ್ಜೆಯೇ ಹೆಸರೇ ಕನ್ನಡ.ಟ್ರಾವೆಲ್. ಇದು ಕನ್ನಡದ ಮೊದಲ ಟ್ರಾವೆಲ್ ಜಾಲತಾಣ.ಈ ವೆಬ್‌ಸೈಟಲ್ಲಿ ಏನಿರುತ್ತೆ, ಏನಿರೋಲ್ಲ?

Vernacular Travelogue Kannada Travel To Go Live on Nov 29 rbj

ನಮ್ಮ ಕನ್ನಡದ ಬೈಕ್ ರೈಡ್ ಮೋಹಿಗಳು, ಟೆಕ್ಕಿಂಗ್ ಪ್ರೇಮಿಗಳು, ಪ್ರವಾಸ ಪ್ರಿಯರು ತುಂಬಾ ಮಂದಿ ಇದ್ದಾರೆ. ಆದರೆ ಅವರೆಲ್ಲರನ್ನೂ ಒಟ್ಟುಗೂಡಿಸುವ ಪ್ರಯತ್ನ ಮಾಡುವ ಮತ್ತು ಅವರಿಗೆಲ್ಲಾ ಕನ್ನಡದಲ್ಲಿ ಬರೆಯುವುದಕ್ಕೆ ಸೂಕ್ತ ವೇದಿಕೆ ಒದಗಿಸುವ ಆಸೆ ನಮ್ಮದು. ಕನ್ನಡದ ಬರಹಗಳ ಮೂಲಕ  ಜವಾಬ್ದಾರಿಯುತ ಪ್ರವಾಸಿಗರನ್ನು ಹುಟ್ಟು ಹಾಕುವ ಮತ್ತು ಇಂಟರ್ ನೆಟ್ ನಲ್ಲಿ ಕನ್ನಡದಲ್ಲಿ ಪ್ರವಾಸಿ ಬರಹ, ವಿಡಿಯೋ ವಿವರಣೆಗಳನ್ನು ದೊರಕುವಂತೆ ಮಾಡುವ ಪ್ರಯತ್ನ.

ಬೇರೆ ಪ್ರಾದೇಶಿಕ ಭಾಷೆಗಳೆಲ್ಲಾ ಇಂಟರ್ ನೆಟ್ ನಲ್ಲಿ ಪ್ರಾಬಲ್ಯ ಮೆರೆಯುತ್ತಿರುವ ಹೊತ್ತಿನಲ್ಲಿ ಕನ್ನಡದ ಕಂಟೆಂಟ್ ಗಳಿಗೂ ಪ್ರಾಮುಖ್ಯತೆ ಸಿಕ್ಕಿ, ಮುಂದಿನ ತಲೆಮಾರು ಕನ್ನಡದಲ್ಲೇ ವ್ಯವಹರಿಸುವಂತೆ ಮಾಡಬೇಕು ಅನ್ನುವುದು ನಮ್ಮ ಮತ್ತೊಂದು ಆಶಯ. ಅದಕ್ಕಾಗಿ ಯುವ ತಲೆಮಾರನ್ನು ಪ್ರಭಾವಿಸುವ ಪ್ರವಾಸ ಮತ್ತು ಕನ್ನಡವನ್ನು ಒಟ್ಟಿಗೆ ತಂದಿದ್ದೇವೆ.

ಸೆಲೆಬ್ರಿಟಿಗಳ್ಯಾಕೆ ಈ ಪರಿ ಮಾಲ್ಡೀವ್ಸ್‌ಗೆ ಮುಗಿ ಬೀಳ್ತಿದ್ದಾರೆ!

ಇವೆಲ್ಲದರ ಜತೆಗೆ ಜಗತ್ತಿನಾದ್ಯಂತ ಇರುವ ಕನ್ನಡಿಗರನ್ನು ಬೆಸೆಯುವ ಆಸೆ ಇದೆ. ತುಮಕೂರಿನ ಮಧುಗಿರಿಯ ವ್ಯಕ್ತಿಯೊಬ್ಬರಿಗೆ ತೈವಾನ್ ನಲ್ಲಿ ವಾಸವಿರುವ ಜೀವವೊಂದು ತಮ್ಮ ನಾಡಿನ ಬಗ್ಗೆ ಪೂರ್ತಿ ಮಾಹಿತಿ ನೀಡುವಂತಾದರೆ, ಮಧುಗಿರಿಯವ ಜೀವ ತೈವಾನ್ ಗೆ ಯಾವುದೇ ಭಯವಿಲ್ಲದೆ ಹೋಗುವಂತಾದರೆ ನಮ್ಮ ಪ್ರಯತ್ನ ಸಾರ್ಥಕವಾಗಲಿದೆ. ಅದೇ ಕೀನ್ಯಾದಲ್ಲಿರುವ ಮಂದಿಗೆ ಅವರ ಹುಟ್ಟೂರನ್ನು ಅಲ್ಲಿ ಕುಳಿತೇ ಈಗ ಹೇಗಿದೆ ಎಂದು ನೋಡುವ, ಕೇಳುವ ಅವಕಾಶ ಸಿಕ್ಕರೆ ಎಷ್ಟು ಖುಷಿಯಾಗಬಹುದು ಎಂದು ನೆನೆದಾಗ ಆಗುವ ಖುಷಿಯೇ ನಮ್ಮ ಈ ಪ್ರಯತ್ನಕ್ಕೆ ಸ್ಫೂರ್ತಿ.

ಈ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ಪ್ರೀತಿಯಿಂದ ಕೋರುತ್ತಿದ್ದೇವೆ. ನವೆಂಬರ್ 29 ಸಂಜೆ 6.30ಕ್ಕೆ ನಮ್ಮ ಕನ್ನಡ.ಟ್ರಾವೆಲ್ ಎಫ್ ಬಿ ಪುಟದಲ್ಲಿ ಅನಾವರಣಗೊಳ್ಳುತ್ತಿದೆ.

ಡೆಕ್ಕನ್ ಏವಿಯೇಷನ್ ಮತ್ತು ಏರ್ ಡೆಕ್ಕನ್ ಸ್ಥಾಪಕರಾದ ಕ್ಯಾ. ಗೋಪಿನಾಥ್, ಟ್ರಾವೆಲರ್, ಕತೆಗಾರ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಕತೆಗಾರ, ಕನ್ನಡಪ್ರಭ ಪ್ರಧಾನ ಪುರವಣಿ ಸಂಪಾದಕ ಜೋಗಿ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ.

ದಕ್ಷಿಣ ಆಫ್ರಿಕಾ ವಾಸಿ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ ಅರ್ಚನಾ ಶ್ರೀಧರ್, ತೈವಾನ್ ಕನ್ನಡ ಬಳಗ, ಸ್ಥಾಪಕ ಸದಸ್ಯ ಡಾ. ಶ್ರೀಶ ಎಸ್ ರಾವ್, ಕೆನಡಾ ಆಲ್ಬರ್ಟಾ ವಿವಿಯ ಇಂಗ್ಲಿಷ್, ಸಿನಿಮಾ ಅಧ್ಯಯನ ವಿಭಾಗದ ಶಶಿಕುಮಾರ್, ಕೀನ್ಯಾ ಕನ್ನಡ ಸಾಂಸ್ಕೃತಿಕ ಸಂಘದ ಅದ್ಯಕ್ಷ ರವಿಕಿರಣ್ ಬೆಳವಾಡಿ ನಮ್ಮೊಂದಿಗೆ ಇರುತ್ತಾರೆ.

ನಿಮ್ಮ ಪತ್ರಿಕೆಯಲ್ಲಿ ಪ್ರಕಟಿಸಿ ನಮಗೆ ಬೆನ್ನು ತಟ್ಟಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇವೆ. ಇದರೊಂದಿಗೆ ಆಹ್ವಾನ ಪತ್ರಿಕೆಯನ್ನು ಲಗತ್ತಿಸಿದ್ದೇವೆ.

ಇಂತಿ ನಿಮ್ಮ ವಿಶ್ವಾಸಿಗಳು
ಕನ್ನಡ.ಟ್ರಾವೆಲ್ ತಂಡ
www.kannada.travel
www.facebook.com/kannada.travel
www.instagram.com/kannada.travel
www.twitter.com/KannadaTravel

Vernacular Travelogue Kannada Travel To Go Live on Nov 29 rbj

Latest Videos
Follow Us:
Download App:
  • android
  • ios